ವಾರಂಟಿ ಕಿಂಗ್..! Moto S50 Neo 4 ವರ್ಷಗಳ ವಾರಂಟಿಯೊಂದಿಗೆ ಗ್ರ್ಯಾಂಡ್ ಎಂಟ್ರಿ: ಬೆಚ್ಚಿಬಿದ್ದ ಎದುರಾಳಿಗಳು!
ವಾರಂಟಿ ಕಿಂಗ್ ಗ್ರ್ಯಾಂಡ್ ಎಂಟ್ರಿ..! Moto S50 Neo 4 ವರ್ಷಗಳ ವಾರಂಟಿಯೊಂದಿಗೆ ಬಿಡುಗಡೆ. ಹೌದು, Moto S50 Neo ಸ್ಮಾರ್ಟ್‌ಫೋನ್ ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದ್ದು, 4 ವರ್ಷಗಳ ವಾರಂಟಿ ನೀಡುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚೀನಾದಲ್ಲಿ ನಡೆದ ಸಮಾರಂಭದಲ್ಲಿ Motorola Razr 50 ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳೊಂದಿಗೆ S ಸರಣಿಯಲ್ಲಿ ಈ ಹೊಸ ಮೊಬೈಲ್ ಅನ್ನು ಲಾಂಚ್ ಮಾಡಲಾಯಿತು. ಈ ಮಧ್ಯಮ-ಶ್ರೇಣಿಯ ಫೋನ್ ಸ್ನಾಪ್‌ಡ್ರಾಗನ್ 6s Gen 3 ಚಿಪ್‌ಸೆಟ್, ಬಾಗಿದ 6.7-ಇಂಚಿನ pOLED ಡಿಸ್ಪ್ಲೇ (FHD+ 120Hz), ಮತ್ತು 30W ಚಾರ್ಜಿಂಗ್‌ನೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ಮೊಟೊ ಈಸ್ ಬ್ಯಾಕ್.. ಅಂಡ್ ಬ್ಯಾಂಗ್ ಬ್ಯಾಂಗ್..! ಬಿಡುಗಡೆಗೆ ಮುಂಚೆಯೇ, Moto S50 Neo ಸ್ಮಾರ್ಟ್‌ಫೋನ್ ಮಾರುಕಟ್ಟೆಗಳಲ್ಲಿ ಮತ್ತು ಪ್ರಪಂಚದಾದ್ಯಂತದ ಮೊಟೊ ಪ್ರಿಯರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿತ್ತು. ಕಾರಣ, ಮೊಟೊರೊಲಾ ಈ ಮೊಬೈಲ್ ಅನ್ನು ಚೀನಾದಲ್ಲಿ 4 ವರ್ಷಗಳ ವಾರಂಟಿಯೊಂದಿಗೆ ಬಿಡುಗಡೆ ಮಾಡುತ್ತದೆ ಎಂದು ಕಂಪನಿಯು ಈಗಾಗಲೇ ಖಚಿತಪಡಿಸಿದೆ. ಇಂಥ ವಾರಂಟಿ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಬೇರೆ ಯಾರೂ ನೀಡುವುದಿಲ್ಲ, ಹೀಗಾಗಿಯೇ Moto S50 Neo ಎಂಟ್ರಿ ಗಮನ ಸೆಳೆದಿತ್ತು.

Motorola S50 Neoನ ಪ್ರಮುಖ ವಿಶೇಷತೆಗಳು
- ಇದು 6.7-ಇಂಚಿನ PolLED ಡಿಸ್ಪ್ಲೇ (FHD+ 120Hz) ಹೊಂದಿದೆ.
- ಭದ್ರತೆಗಾಗಿ ಅಂಡರ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಅಳವಡಿಸಲಾಗಿದೆ.
- ಈ ಸ್ಮಾರ್ಟ್‌ಫೋನ್ Snapdragon 6s Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.
- ಸ್ಮಾರ್ಟ್‌ಫೊನ್ ಮೂರು ವಿಭಿನ್ನ RAM + ಇಂಟರ್ನಲ್ ಸ್ಟೋರೇಜ್ ವೇರಿಯಂಟ್‌ಗಳಲ್ಲಿ ಬರುತ್ತದೆ.
ಮೊಟೊರೊಲಾ S50 Neo ಚೀನಾದಲ್ಲಿ ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಾಂಚ್ ಆಗಿದೆ. ಬೂದು, ಆಲಿವೈನ್ ಮತ್ತು ಸರ್ಫ್ ಬಣ್ಣಗಳಲ್ಲಿ ಲಭ್ಯವಿದೆ. Pantone ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಚೀನಾದಲ್ಲಿ ಬಿಡುಗಡೆಯಾದ ನಂತರ, ಈ ಫೋನ್‌ನ ಜಾಗತಿಕ ಬಿಡುಗಡೆಯನ್ನು ಶೀಘ್ರದಲ್ಲೇ ನಿರೀಕ್ಷಿಸಬಹುದು. ಆದರೆ, ಈ ಮೊಟೊರೊಲಾ ಫೋನ್ Moto G85 ಹೆಸರಿನಲ್ಲಿ ಜಾಗತಿಕವಾಗಿ ಲಾಂಚ್ ಆಗಲಿದೆ.
32MP ಬೊಂಬಾಟ್ ಸೆಲ್ಫಿ ಕ್ಯಾಮೆರಾ
ಮೊಟೊ S50 Neo ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 50MP ಮುಖ್ಯ ಕ್ಯಾಮೆರಾವನ್ನು Sony IMX882 ಸಂವೇದಕದೊಂದಿಗೆ f/1.79 ಅಪರ್ಚರ್ ಮತ್ತು 4-ಟು-1 ಪಿಕ್ಸೆಲ್ ಬಿನ್ನಿಂಗ್ ಮತ್ತು 118-ಡಿಗ್ರಿ ಕ್ಷೇತ್ರವನ್ನು ಆವರಿಸುವ 8MP ಅಲ್ಟ್ರಾವೈಡ್ ಲೆನ್ಸ್ ಅನ್ನು ಹೊಂದಿದೆ. ಮುಂಭಾಗದಲ್ಲಿರುವ ಪಂಚ್ ಹೋಲ್ ಕಟೌಟ್‌ನಲ್ಲಿ 32MP ಸೆಲ್ಫಿ ಕ್ಯಾಮೆರಾ ಕೂಡ ಒಳಗೊಂಡಿದೆ.
5,000mAh ಸಾಮರ್ಥ್ಯದ ಮಸ್ತ್ ಬ್ಯಾಟರಿ
ಮೊಟೊರೊಲಾ S50 Neo ಫೋನ್ 8/12GB RAM ಮತ್ತು 256/512GB ಸ್ಟೋರೇಜ್‌ನೊಂದಿಗೆ ಲಭ್ಯವಿದೆ. ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್ ಅನ್ನು ವಿಸ್ತರಿಸುವ ಆಯ್ಕೆಯೂ ಇದೆ. ಈ ಫೋನ್ Android 14 ಆಧಾರಿತ OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 30W ವೇಗದ ಚಾರ್ಜಿಂಗ್‌ನೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿದೆ.

ಈ ಫೋನ್ ಎಷ್ಟು ಸ್ಟೋರೇಜ್‌ಗಳಲ್ಲಿ ಲಭ್ಯ?
ಮೊಟೊ S50 Neo ಚೀನಾದಲ್ಲಿ ಮೂರು ವೇರಿಯಂಟ್‌ಗಳಲ್ಲಿ ಮಾರಾಟವಾಗುತ್ತಿದೆ. 8/256GB ಮೂಲ ಮಾದರಿಯ ಬೆಲೆ ಸುಮಾರು 16,070 ರೂ. (1,399 ಯುವಾನ್). 12/256GB ಸ್ಟೋರೇಜ್ ವೇರಿಯಂಟ್ ಬೆಲೆ ಅಂದಾಜು 18,370 ರೂ. (1,599 ಯುವಾನ್) ಮತ್ತು 12/512GB ಟಾಪ್ ವೇರಿಯಂಟ್ ಬೆಲೆ ಸುಮಾರು 21,815 ರೂ. (1,899 ಯುವಾನ್) ಇರಲಿದೆ. ಚೀನಾದಲ್ಲಿ ಈ ಫೋನ್‌ನ ಮುಕ್ತ ಮಾರಾಟವು ಇದೇ ಜೂನ್ 28, ಶುಕ್ರವಾರ ಪ್ರಾರಂಭವಾಗಲಿದೆ.
ಭಾರತಕ್ಕೆ 4 ವರ್ಷಗಳ ವಾರಂಟಿಯೊಂದಿಗೆ ಬರುತ್ತಾ?
ಜಾಗತಿಕವಾಗಿ Moto G85 ಹೆಸರಿನಲ್ಲಿ ಬಿಡುಗಡೆಯಾದಾಗ ಈ ಫೋನ್ 4 ವರ್ಷಗಳ ವಾರಂಟಿಯೊಂದಿಗೆ ಬರುತ್ತದೆಯೇ? ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈಗ ಲಾಂಚ್ ಆಗಿರುವ ಮೊಬೈಲ್‌ಗಳು ಸಾಮಾನ್ಯವಾಗಿ ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತವೆ. ಈ ಹಿಂದೆ, Xiaomi, OnePlus ಮತ್ತು Lenovo ನಂತಹ ಬ್ರ್ಯಾಂಡ್‌ಗಳು ತಮ್ಮ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ 2 ವರ್ಷಗಳ ವಾರಂಟಿಯನ್ನು ನೀಡಿದ್ದವು.
ಸ್ಮಾರ್ಟ್‌ಫೋನ್‌ಗಳ ಇತಿಹಾಸದಲ್ಲಿ ಹೊಸ ಅಧ್ಯಾಯ
Meizuನ 20 ಮತ್ತು 21 ಸರಣಿಗಳಿಗೆ ವಿಶೇಷ ಪ್ರಚಾರದ ಭಾಗವಾಗಿ 3 ವರ್ಷಗಳ ವಾರಂಟಿಯನ್ನು ನೀಡಲಾಯಿತು. ಆದರೆ, ಈ ಸ್ಮಾರ್ಟ್‌ಫೋನ್ 4 ವರ್ಷಗಳ ವಾರಂಟಿಯೊಂದಿಗೆ ಬರುತ್ತಿರುವುದು ಇದೇ ಮೊದಲು. ಅದಕ್ಕಾಗಿಯೇ Motorola ಹೊಸ Moto S50 Neo ನೊಂದಿಗೆ ಸ್ಮಾರ್ಟ್‌ಫೋನ್‌ಗಳ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದೆ.

moto S50 ನಿಯೋ ಸಂಪೂರ್ಣ ಫೀಚರ್ಸ್
- ಡಿಸ್ಪ್ಲೇ: 6.7-ಇಂಚಿನ (2400×1080 ಪಿಕ್ಸೆಲ್‌ಗಳು) FHD+ 10-ಬಿಟ್ ಪೋಲ್ಡ್ ಡಿಸ್ಪ್ಲೇ ಜೊತೆಗೆ 1600 nits ವರೆಗೆ ಬ್ರೈಟ್‌ನೆಸ್
- ರಿಫ್ರೆಶ್ ರೇಟ್: 120Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್
- ಪ್ರೊಸೆಸರ್: Adreno 619 GPU ಜೊತೆಗೆ Qualcomm Snapdragon 6s Gen 3 6nm 5G SoC
- ಸ್ಟೋರೇಜ್: 8GFB / 12GB LPDDR4x RAM, 256GB / 512GB (UFS 2.2) ಸ್ಟೋರೇಜ್, ಮೈಕ್ರೊ SD ಜೊತೆಗೆ 1TB ವರೆಗೆ ವಿಸ್ತರಿಸಬಹುದಾದ ಮೆಮೊರಿ
- ಸಿಮ್: ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೊ ಎಸ್ಡಿ)
- OS: My UX ಜೊತೆಗೆ Android 14
- ಕ್ಯಾಮೆರಾ: 1/1.95″ ಸೋನಿ IMX882 ಸಂವೇದಕದೊಂದಿಗೆ 50MP ಹಿಂಬದಿಯ ಕ್ಯಾಮರಾ, f/1.8 ದ್ಯುತಿರಂಧ್ರ, OIS, LED ಫ್ಲ್ಯಾಷ್, 8MP ಅಲ್ಟ್ರಾ-ವೈಡ್ / ಮ್ಯಾಕ್ರೋ / ಡೆಪ್ತ್ ಕ್ಯಾಮರಾ ಜೊತೆಗೆ f/2.2 ಅಪರ್ಚರ್
- ಸೆಲ್ಫಿ ಸೂಟರ್: f/2.45 ದ್ಯುತಿರಂಧ್ರದೊಂದಿಗೆ 32MP ಫ್ರಂಟ್ ಕ್ಯಾಮೆರಾ, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ
- USB ಟೈಪ್-ಸಿ ಆಡಿಯೋ, ಸ್ಟೀರಿಯೋ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್, ಡ್ಯುಯಲ್ ಮೈಕ್ರೊಫೋನ್‌ಗಳು
- ಪ್ರೊಟೆಕ್ಷನ್: ನೀರು ನಿರೋಧಕ (IP54)
- ಅಳತೆ: 161.91 x 74.06 x 7.59mm, ತೂಕ: 171g (Vegan Leather) / 173g (PMMA)
- ಬ್ಯಾಟರಿ: 30W ಟರ್ಬೋ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿ
- ಕನೆಕ್ಟಿವಿಟಿ ಆಯ್ಕೆಗಳು: 5G SA/NSA, ಡ್ಯುಯಲ್ 4G VoLTE, Wi-Fi 802.11 ac (2.4GHz + 5GHz), ಬ್ಲೂಟೂತ್ 5.1, GPS/ GLONASS/ ಬೀಡೌ, USB ಟೈಪ್-C, NFC


Click it and Unblock the Notifications








