Home
ಮೊಬೈಲ್

5,999 ರೂ.ಗೆ Moto Watch ಬಿಡುಗಡೆ: ಈ ಬೆಲೆ ಇಷ್ಟು ಪ್ರೀಮಿಯಂ ಸಾಧ್ಯವೇ?!

ಮೋಟೋರೋಲಾ ಭಾರತದಲ್ಲಿ ತನ್ನ ಹೊಸ ಸ್ಮಾರ್ಟ್‌ವಾಚ್ Moto Watch ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಮುಂಬೈನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಈ ಸ್ಮಾರ್ಟ್‌ವಾಚ್ ಅನ್ನು ಕಂಪನಿಯ ಪ್ರೀಮಿಯಂ ಸ್ಮಾರ್ಟ್‌ಫೋನ್ Motorola Signature ಜೊತೆಗೆ ಪರಿಚಯಿಸಲಾಗಿದೆ. ಆರೋಗ್ಯ ಮತ್ತು ಫಿಟ್‌ನೆಸ್ ಮೇಲೆ ಗಮನಹರಿಸಿದ ಈ ಹೊಸ ವೆತಿಯರಬಲ್ ಸಾಧನವು, ಭಾರತೀಯ ಬಳಕೆದಾರರ ದಿನನಿತ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಿದಂತೆ ಕಾಣುತ್ತಿದೆ. ಹಾಗಾದರೆ, ಹೊಸ Moto Watch ಹೇಗಿದೆ?, ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Moto Watch: ಬೆಲೆ ಮತ್ತು ಲಭ್ಯತೆ ವಿವರ
ಭಾರತದಲ್ಲಿ Moto Watch ಬೆಲೆ ರೂ. 5,999 ರಿಂದ ಪ್ರಾರಂಭವಾಗುತ್ತದೆ. ಈ ದರದಲ್ಲಿ ಸಿಲಿಕೋನ್ ಮಾದರಿ ಲಭ್ಯವಿದೆ. ಲೆದರ್ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಹೊಂದಿರುವ ವೇರಿಯಂಟ್‌ಗಳ ಬೆಲೆ ರೂ. 6,999 ಆಗಿದೆ. ಈ ಸ್ಮಾರ್ಟ್‌ವಾಚ್ ಜನವರಿ 30ರಿಂದ ಮೋಟೋರೋಲಾ ಇಂಡಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಗೆ ಲಭ್ಯವಾಗಲಿದೆ.

ಬಣ್ಣಗಳ ಆಯ್ಕೆಯಲ್ಲಿ ಸಿಲಿಕೋನ್ ಮಾದರಿ Pantone Herbal Garden, Pantone Volcanic Ash ಮತ್ತು Pantone Parachute Purple ಬಣ್ಣಗಳಲ್ಲಿ ಲಭ್ಯವಿದೆ. ಲೆದರ್ ವೇರಿಯಂಟ್ Pantone Mocha Mousse ಷೇಡ್‌ನಲ್ಲಿ ಬರುತ್ತದೆ. ಮೆಟಲ್ ಬ್ಯಾಂಡ್ ಹೊಂದಿರುವ ಮಾದರಿ Matte Black ಹಾಗೂ Matte Silver ಬಣ್ಣಗಳಲ್ಲಿ ಮಾರಾಟವಾಗಲಿದೆ.

5,999 ರೂ.ಗೆ Moto Watch ಬಿಡುಗಡೆ: ಈ ಬೆಲೆ ಇಷ್ಟು ಪ್ರೀಮಿಯಂ ಸಾಧ್ಯವೇ?!

Moto Watch: ಪ್ರಮುಖ ವೈಶಿಷ್ಟ್ಯಗಳು
Moto Watch ಅನ್ನು ಹೆಸರಾಂತ ಹೆಲ್ತ್-ಟ್ರ್ಯಾಕಿಂಗ್ ಬ್ರ್ಯಾಂಡ್ Polar ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಸಹಕಾರದಿಂದ ಆರೋಗ್ಯ ಸಂಬಂಧಿತ ಡೇಟಾ ಹೆಚ್ಚು ನಿಖರವಾಗಿದ್ದು, ವೃತ್ತಿಪರ ಮಟ್ಟದ ಟ್ರ್ಯಾಕಿಂಗ್ ಅನುಭವ ದೊರೆಯುತ್ತದೆ ಎಂದು ಮೋಟೋರೋಲಾ ಹೇಳಿದೆ. ಹೃದಯ ಬಡಿತ, ರಕ್ತದ ಆಮ್ಲಜನಕ ಮಟ್ಟ (SpO2), ನಿದ್ರೆ ಮತ್ತು ರಿಕವರಿ ಮಾನಿಟರಿಂಗ್ ಮುಂತಾದ ಪ್ರಮುಖ ಆರೋಗ್ಯ ವೈಶಿಷ್ಟ್ಯಗಳು ಈ ವಾಚ್‌ನಲ್ಲಿ ಲಭ್ಯವಿವೆ.

ಡಿಸೈನ್ ಮತ್ತು ಡಿಸ್ಪ್ಲೇ
Moto Watch ರೌಂಡ್ ಡಯಲ್ ವಿನ್ಯಾಸವನ್ನು ಹೊಂದಿದ್ದು, 1.4 ಇಂಚಿನ OLED ಡಿಸ್ಪ್ಲೇ ನೀಡಲಾಗಿದೆ. Corning Gorilla Glass 3 ರಕ್ಷಣೆಯಿಂದ ಡಿಸ್ಪ್ಲೇ ಹೆಚ್ಚು ಬಲಿಷ್ಠವಾಗಿದೆ. ಕೇವಲ 35 ಗ್ರಾಂ ತೂಕ ಮತ್ತು 47x47x12 ಮಿಮೀ ಗಾತ್ರ ಹೊಂದಿರುವುದರಿಂದ, ದಿನಪೂರ್ತಿ ಧರಿಸಲು ಇದು ಹಗುರ ಮತ್ತು ಆರಾಮದಾಯಕವಾಗಿದೆ ಎಂದು ಕಂಪೆನಿ ಹೇಳಿದೆ.

5,999 ರೂ.ಗೆ Moto Watch ಬಿಡುಗಡೆ: ಈ ಬೆಲೆ ಇಷ್ಟು ಪ್ರೀಮಿಯಂ ಸಾಧ್ಯವೇ?!

ಆರೋಗ್ಯ ಮತ್ತು ಫಿಟ್‌ನೆಸ್ ಫೀಚರ್‌ಗಳು
ಈ ಸ್ಮಾರ್ಟ್‌ವಾಚ್‌ನಲ್ಲಿ ಹೃದಯ ಬಡಿತ ಮಾನಿಟರಿಂಗ್, SpO2 ಟ್ರ್ಯಾಕಿಂಗ್, ಸ್ಟೆಪ್ ಕೌಂಟರ್, ಕ್ಯಾಲೊರಿ ಕೌಂಟರ್, ಹೈಡ್ರೇಷನ್ ರಿಮೈಂಡರ್ ಹಾಗೂ ನಿದ್ರೆಯ ಗುಣಮಟ್ಟ ಆಧಾರಿತ ಸ್ಲೀಪ್ ಸ್ಕೋರ್ ನೀಡಲಾಗುತ್ತದೆ. ಜೊತೆಗೆ ದೇಹದ ಚೇತರಿಕೆಯನ್ನು ಅಳೆಯುವ ರಿಕವರಿ ಮಾನಿಟರಿಂಗ್ ವೈಶಿಷ್ಟ್ಯವು ಫಿಟ್‌ನೆಸ್ ಆಸಕ್ತರಿಗೆ ಉಪಯುಕ್ತವಾಗಿದೆ.

ಕಾರ್ಯಕ್ಷಮತೆ ಮತ್ತು ಸಂಪರ್ಕ ವ್ಯವಸ್ಥೆ
Moto Watch ನಲ್ಲಿ 4GB eMMC ಸ್ಟೋರೇಜ್, ಡ್ಯುಯಲ್-ಫ್ರೀಕ್ವೆನ್ಸಿ GPS ಮತ್ತು Bluetooth 5.3 ಬೆಂಬಲವಿದೆ. ಇದು Android 12 ಅಥವಾ ಅದಕ್ಕಿಂತ ಮೇಲಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಕ್ಸಿಲರೋಮೀಟರ್, ಜೈರೋಸ್ಕೋಪ್, PPG ಸೆನ್ಸರ್, SpO2 ಸೆನ್ಸರ್, ಆಂಬಿಯಂಟ್ ಲೈಟ್ ಸೆನ್ಸರ್ ಮತ್ತು ಇ-ಕಂಪಾಸ್ ಮುಂತಾದ ಸೆನ್ಸರ್‌ಗಳನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ನೀರು ನಿರೋಧಕತೆ
ಮೋಟೋರೋಲಾ ಪ್ರಕಾರ, Moto Watch ಒಂದೇ ಚಾರ್ಜ್‌ನಲ್ಲಿ ಗರಿಷ್ಠ 13 ದಿನಗಳ ಬ್ಯಾಟರಿ ಲೈಫ್ ನೀಡುತ್ತದೆ. ಕೇವಲ ಐದು ನಿಮಿಷಗಳ ಚಾರ್ಜ್ ಮಾಡಿದರೆ ಒಂದು ದಿನ ಬಳಸುವಷ್ಟು ಪವರ್ ಸಿಗುತ್ತದೆ ಎನ್ನುವುದು ಇದರ ಪ್ರಮುಖ ಆಕರ್ಷಣೆ. ಈ ವಾಚ್ IP68 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಜೊತೆಗೆ 1 ATM ವರೆಗೆ ನೀರು ನಿರೋಧಕವಾಗಿರುವುದರಿಂದ ದಿನನಿತ್ಯದ ಬಳಕೆಗೆ ಇದು ಸೂಕ್ತವಾದಂತಿದೆ.

Best Mobiles in India

English summary
Motorola has launched its new Moto Watch in India alongside the Signature smartphone. Focused on health and fitness tracking, the smartwatch is priced from ₹5,999 and will be available for purchase from January 30 via Motorola India’s official website.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+