Subscribe to Gizbot

ಮೋಟೋರೋಲಾವನ್ನೂ ಫ್ಲಿಪ್‌ಕಾರ್ಟ್‌ನಲ್ಲಿ ಬದಲಾಯಿಸಿ

Posted By:

ಮೋಟೋರೋಲಾವು ಈಗಾಗಲೇ ಭಾರತೀಯ ಆನ್‌ಲೈನ್ ರೀಟೈಲ್ ತಾಣವಾದ ಫ್ಲಿಪ್‌ಕಾರ್ಟ್‌ನೊಂದಿಗೆ ತನ್ನ ಮೊಟೋ ಎಕ್ಸ್ ಅನ್ನು ಮಾರಾಟ ಮಾಡುತ್ತಿದೆ. ಇದರ ಬೆಲೆ ರೂ. 23,999 ಆಗಿದೆ.

ಇದರೊಂದಿಗೆ ಈ ಜಾಲತಾಣವು ವಿನಿಮಯ ಕೊಡುಗೆಯನ್ನು ನೀಡುತ್ತಿದ್ದು ಇದರ ಬೆಲೆಯನ್ನು ರೂ 19,999ಕ್ಕೆ ಕಡಿಮೆ ಮಾಡಿದೆ. ಗ್ರಾಹಕರು ತಮ್ಮ ಹಳೆಯ ಮೋಟೋ ಎಕ್ಸ್ ಪೋನ್ ಅನ್ನು ಈ ವಿನಿಯಮ ಕೊಡುಗೆಯೊಂದಿಗೆ ಬದಲಾಯಿಸಿ 4,000 ರೂಗಳ ಕಡಿತವನ್ನು ನೀಡುತ್ತಿದೆ. ಈ ವಿನಿಮಯ ಕೊಡುಗೆಯು ಸೀಮಿತ ಅವಧಿಯಲ್ಲಿ ಮಾತ್ರ ಲಭ್ಯವಿದ್ದು ಎಲ್ಲಿಯವರೆಗೆ ಈ ಸೌಲಭ್ಯ ದೊರಕುತ್ತದೆ ಎಂಬುದನ್ನು ಇದುವರೆಗೂ ಫ್ಲಿಪ್‌ಕಾರ್ಟ್ ತಿಳಿಸಿಲ್ಲ.

ಮೋಟೋರೋಲಾಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ ಆಕರ್ಷಕ ಕೊಡುಗೆ

ಮೋಟೋ ಎಕ್ಸ್ ವೈಶಿಷ್ಟ್ಯ ತುಂಬಾ ಆಕರ್ಷಕವಾಗಿದ್ದು ನೀವು ಅದು ಖರೀದಿಸುವಂತೆ ಮಾಡುತ್ತದೆ. ಇದು 4.7 ಇಂಚಿನ AMOLED ಟಚ್‌ಸ್ಕ್ರೀನ್‌ನೊಂದಿಗೆ 1280 x 720 ಪಿಕ್ಸೆಲ್‌ಗಳ ಎಚ್‌ಡಿ ರೆಸಲ್ಯೂಶನ್ ಅನ್ನು ನೀಡುತ್ತಿದೆ. 1.7 GHz ಡ್ಯುಯೆಲ್ ಕೋರ್ CPU ಹಾಗೂ ಆಂಡ್ರೆನೋ 320 ಕ್ವಾಡ್ ಕೋರ್ GPU 2 ಜಿಬಿ ರ್‌ಯಾಮ್‌ನೊಂದಿಗೆ ಬಂದಿದೆ. ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್) OS ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ. LED ಫ್ಲ್ಯಾಶ್ ಉಳ್ಳ 10ಎಂಪಿ ತ್ವರಿತ ಗೆಸ್ಚರ್ ಕ್ಯಾಮೆರಾ ಇದರಲ್ಲಿದ್ದು 2ಎಂಪಿ ಮುಂಭಾಗ ಶೂಟಿಂಗ್ ಕ್ಯಾಮೆರಾ ಇದರ ವಿಶೇಷತೆಯಾಗಿದೆ. ಇದು ಪೂರ್ಣ ಎಚ್‌ಡಿ ವೀಡಿಯೋವನ್ನು ಕೂಡ ಶೂಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಮೋಟೋ ಎಕ್ಸ್ 16 ಜಿಬಿ ಸ್ಥಳೀಯ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದ್ದು ಇದಕ್ಕೆ ಮೆಮೊರಿ ವಿಸ್ತರಣಾ ಸ್ಲಾಟ್ ಬೇಕಾಗಿರುವುದಿಲ್ಲ. 50 ಜಿಬಿ ಉಚಿತ ಸಂಗ್ರಹಣಾ ಸಾಮರ್ಥ್ಯವನ್ನು ಗೂಗಲ್ ಡ್ರೈವ್‌ನಲ್ಲಿ ಬಳಕೆದಾರರು ಎರಡು ವರ್ಷಗಳ ಕಾಲ ಮಾಡಬಹುದಾಗಿದೆ. ಇದು ಕಂಪೆನಿಯ ವಿಶೇಷ ಕೊಡುಗೆಯಾಗಿದೆ. NFC ಬೆಂಬಲ, ಮೈಕ್ರಾಕಾಸ್ಟ್ ವೈರ್‌ಲೆಸ್ ಡಿಸ್‌ಪ್ಲೇ, GPRS, ಎಡ್ಜ್, 3ಜಿ, ವೈಫೈ, USB, Glonass ಹಾಗೂ ಬ್ಲೂಟೂತ್ ಸೇರದಂತೆ ಹೆಚ್ಚಿನ ಸಂಪರ್ಕ ಆಯ್ಕೆಗಳನ್ನು ಫೋನ್ ಹೊಂದಿದೆ.

ಫ್ಲಿಪ್‌ಕಾರ್ಟ್ ಪ್ರಕಾರ ಈ ಫೋನ್ 2ಜಿ ನೆಟ್‌ವರ್ಕ್‌ನಲ್ಲಿ 13 ಗಂಟೆಗಳ ಟಾಕ್‌ಟೈಮ್ ಅವಧಿಯನ್ನು ನೀಡಲಿದ್ದು ಇದರೊಂದಿಗೆ ಧ್ವನಿಗೆ ಪ್ರತ್ಯುತ್ತರಿಸುವುದು, "OK Google Now" ಮೂಲಕ ಟಚ್‌ಲೆಸ್‌ ನಿಯಂತ್ರಣ ಹಾಗೂ ಫೋನ್ ಜಲ ನಿವಾರಕ ಕೋಟಿಂಗ್ ಅನ್ನು ಕೂಡ ಹೊಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot