Home
ಮೊಬೈಲ್

ಕೇವಲ 5.99mm ಸ್ಲಿಮ್ ಫೋನ್ Moto X70 Air ಪರಿಚಯ!..ಹೇಗಿದೆ ಗೊತ್ತಾ?

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಮೋಟೋರೋಲಾ ತನ್ನ ಹೊಸ ಅಲ್ಟ್ರಾ-ಸ್ಲಿಮ್ ಸ್ಮಾರ್ಟ್‌ಫೋನ್ Moto X70 Air ಅನ್ನು ಪರಿಚಯಿಸಿದೆ. ನಿರೀಕ್ಷೆಯಂತೆಯೇ, ಈ ಹೊಸ Moto X70 Air ಕೇವಲ 5.99mm ದಪ್ಪವಿದ್ದು, ಅತ್ಯಂತ ಸ್ಲಿಮ್ ಮತ್ತು ಸ್ಟೈಲಿಶ್ ಆಗಿ ಬಿಡುಗಡೆಯಾಗುವುದು ಖಚಿತವಾಗಿದೆ. ಹಲವಾರು ವದಂತಿಗಳು ಸೂಚಿಸಿದಂತೆಯೇ, ಸ್ಯಾಮ್‌ಸಂಗ್ ಮತ್ತು ಆ್ಯಪಲ್ ಕಂಪೆನಿಗಳ ಇತ್ತೀಚಿನ ಅಲ್ಟ್ರಾ-ಸ್ಲಿಮ್ ಫೋನ್‌ಗಳಿಗೆ ನೇರ ಪೈಪೋಟಿ ನೀಡುವಂತೆ ಈ ಫೋನ್ ವಿನ್ಯಾಸಗೊಂಡಿದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಶೀಘ್ರದಲ್ಲೇ ಈ ಫೋನ್ Motorola Edge 70 ಎಂಬ ಹೆಸರಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಹಾಗಾದರೆ, ಹೊಸ ಅಲ್ಟ್ರಾ-ಸ್ಲಿಮ್ Moto X70 Air ಸ್ಮಾರ್ಟ್‌ಫೋನ್ ಹೇಗಿದೆ?, iPhone 17 Air ಮತ್ತು Samsung Galaxy S25 Edge ಹೋಲಿಕೆ ಮಾಡಿದಾಗ ಈ ಫೋನ್ ವಿಶೇಷತೆಗಳೇನು ಎಂಬುದನ್ನು ನೋಡೋಣ ಬನ್ನಿ.

Moto X70 Air: ಪ್ರಮುಖ ವೈಶಿಷ್ಟ್ಯಗಳು
ಹೊಸ Moto X70 Air ಪ್ರೀಮಿಯಂ ವಿನ್ಯಾಸ ಮತ್ತು ಶಕ್ತಿಯುತ ವೈಶಿಷ್ಟ್ಯಗಳನ್ನು ಹೊಂದಿದೆ. ವಿನ್ಯಾಸದ ವಿಷಯಕ್ಕೆ ಬಂದರೆ, ಈ ಫೋನ್ 159.87 x 74.28 x 5.99mm ಅಳತೆಗಳನ್ನು ಹೊಂದಿದ್ದು, ಕೇವಲ 159 ಗ್ರಾಂ ತೂಗುತ್ತದೆ. ಡಿಸ್‌ಪ್ಲೇ ವಿಭಾಗದಲ್ಲಿ, ಇದು 6.7-ಇಂಚಿನ 1.5K (1,220 x 2,712 ಪಿಕ್ಸೆಲ್‌ಗಳು) pOLED ಪರದೆಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ನೊಂದಿಗೆ ಅತಿ ಹೆಚ್ಚಿನ 4,500 ನಿಟ್ಸ್ ಗರಿಷ್ಠ ಪ್ರಕಾಶಮಾನತೆಯನ್ನು ತಲುಪುತ್ತದೆ. ಈ ಪ್ಯಾನೆಲ್ Pantone-validated ಪ್ರಮಾಣೀಕರಣವನ್ನು ಪಡೆದಿದ್ದು, ಇದು SGS ಕಣ್ಣಿನ ರಕ್ಷಣೆ ವೈಶಿಷ್ಟ್ಯವನ್ನೂ ಒಳಗೊಂಡಿದೆ.

ಕಾರ್ಯಕ್ಷಮತೆಗಾಗಿ, Moto X70 Air ಪೋನಿನ ಹೃದಯ ಭಾಗದಲ್ಲಿ ಮಧ್ಯಮ ಶ್ರೇಣಿಯಲ್ಲಿ ಕಾಣಬಹುದಾದ Snapdragon 7 Gen 4 ಚಿಪ್‌ಸೆಟ್ ಇದೆ. ಇದು 12GB ವರೆಗೆ LPDDR5X RAM ಮತ್ತು 512GB ವರೆಗೆ UFS 3.1 ಸ್ಟೋರೇಜ್ ಸಾಮರ್ಥ್ಯಗಳಲ್ಲಿ ಲಭ್ಯವಿದೆ. ಅತ್ಯುತ್ತಮ ಶಾಖ ನಿರ್ವಹಣೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ 3D ವೇಪರ್ ಚೇಂಬರ್ ಮತ್ತು ಗ್ರಾಫಿಕ್ಸ್-ಇಂಟೆನ್ಸಿವ್ ಕಾರ್ಯಗಳನ್ನು ನಿಭಾಯಿಸಲು Adreno GPU ಅನ್ನು ಇದು ಹೊಂದಿದೆ. ಆಶ್ಚರ್ಯಕರ ವಿಷಯವೆಂದರೆ, ಈ ಫೋನ್ ಇತ್ತೀಚಿನ Android 16 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ಅಂಶವು ದೃಢಪಟ್ಟಿದೆ.

ಕೇವಲ 5.99mm ಸ್ಲಿಮ್ ಫೋನ್ Moto X70 Air ಪರಿಚಯ!..ಹೇಗಿದೆ ಗೊತ್ತಾ?

ಕ್ಯಾಮೆರಾ ವಿಭಾಗದಲ್ಲಿ, ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಪ್ರಮುಖವಾಗಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ (ಸ್ಯಾಮ್‌ಸಂಗ್ ಸೆನ್ಸರ್) ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಇವೆ. ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ, ಪ್ರಬಲವಾದ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಸಂಪರ್ಕ ಆಯ್ಕೆಗಳಲ್ಲಿ 5G, 4G LTE, Wi-Fi, NFC, GPS, Bluetooth, OTG, ಮತ್ತು USB Type-C ಪೋರ್ಟ್‌ಗಳಿವೆ. ಸುರಕ್ಷತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ರಕ್ಷಣೆಗಾಗಿ IP68 + IP69 ರೇಟಿಂಗ್ ಧೂಳು ಮತ್ತು ನೀರಿನ ಪ್ರತಿರೋಧವಿದೆ.

ಇನ್ನು ಎಲ್ಲರು ಎದುರುನೋಡುತ್ತಿರುವ ಬ್ಯಾಟರಿ ವಿಭಾಗದಲ್ಲಿ, Moto X70 Air ಫೋನ್ ತನ್ನ ಅತ್ಯಂತ ತೆಳುವಾದ ವಿನ್ಯಾಸದಲ್ಲೂ 4,800mAh ಬ್ಯಾಟರಿಯನ್ನು ಹೊಂದಿದೆ.! ಇದು 68W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು Lenovo ವೆಬ್‌ಸೈಟ್‌ನಲ್ಲಿ ಪೋನ್ ಅನ್ನು ಪಟ್ಟಿ ಮಾಡಲಾಗಿದ್ದರೂ ಸಹ, ಬೆಲೆಯನ್ನು ಇನ್ನೂ ಘೋಷಿಸಿಲ್ಲ. ಆದರೆ ಇದು 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ, Gadget Grey, Lily Pad, ಮತ್ತು Bronze Green ಎಂಬ ಮೂರು Pantone-validated ಬಣ್ಣಗಳಲ್ಲಿ ಲಭ್ಯವಿರುವುದು ಖಚಿತವಾಗಿದೆ.

ಫ್ಲ್ಯಾಗ್‌ಶಿಪ್ ಸ್ಪರ್ಧೆ: iPhone 17 Air ಮತ್ತು Samsung Galaxy S25 Edge ನಡುವೆ ಹೋಲಿಕೆ!
ಭಾರತದ ಮಾರುಕಟ್ಟೆಯಲ್ಲಿ ಉನ್ನತ ಮಟ್ಟದ ಅಲ್ಟ್ರಾ-ತೆಳುವಾದ ಫೋನ್‌ಗಳಾದ iPhone 17 Air ಮತ್ತು Samsung Galaxy S25 Edge ಫೋನ್‌ಗಳು ಇತ್ತೀಚಿಗಷ್ಟೇ ಬಿಡುಗಡೆಯಾಗಿ ಯಶಸ್ವಿಯಾಗಿವೆ. ಹಾಗಾಗಿ, ಮುಂಬರುವ Moto X70 Air ಅನ್ನು ಇವುಗಳ ಜೊತೆ ಹೋಲಿಸಿ ನೋಡಲು ಬಹುತೇಕರು ಇಚ್ಚಿಸುತ್ತಾರೆ. ಈ ಕಾರ್ಯವನ್ನು ಮಾಡುವುದು ನಮ್ಮ ಜವಬ್ದಾರಿ ಕೂಡ ಹೌದು. . ಈ ಫೋನ್ 5.99mm ದಪ್ಪದೊಂದಿಗೆ, iPhone 17 Air (5.64mm) ಮತ್ತು Galaxy S25 Edge (5.8mm) ಗಿಂತ ಸ್ವಲ್ಪ ದಪ್ಪವಾಗಿದೆ. ಆದರೆ, ಇದು iPhone 17 Air (3,149mAh) ಮತ್ತು Galaxy S25 Edge (3,900mAh) ಗಿಂತ ಗಮನಾರ್ಹವಾಗಿ ದೊಡ್ಡದಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ಹಾಗೆಯೇ, ಇದರ 50MP ಮುಖ್ಯ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಸೆಟಪ್ ಪ್ರಬಲವಾಗಿದ್ದರೂ, Galaxy S25 Edge ನ 200MP ಸಂವೇದಕ ಅಥವಾ iPhone 17 Air ನ ಪ್ರಬಲ A19 Pro ಚಿಪ್‌ಗೆ ಇದು ನೇರ ಸ್ಪರ್ಧಿಯಾಗಲಾರದು. ಆದರೆ, ಮೋಟೋ ತನ್ನ ಫೋನ್ ಅನ್ನು ಮಧ್ಯಮ-ಶ್ರೇಣಿಯ (Snapdragon 7 Gen 4 ) ವಿಭಾಗದಲ್ಲಿ ಇರಿಸುವುದರಿಂದ, ಇದು ವಿನ್ಯಾಸ, ಬ್ಯಾಟರಿ ಮತ್ತು ಕ್ಯಾಮೆರಾಗಳಲ್ಲಿ ಅತ್ಯುತ್ತಮ ಸಮತೋಲನವನ್ನು ಬಯಸುವ ಗ್ರಾಹಕರಿಗೆ ಅತ್ಯಂತ ಆಕರ್ಷಕವಾದ, ಮತ್ತು ಕೈಗೆಟುಕುವ ಬೆಲೆಯ ಆಯ್ಕೆಯಾಗಲಿದೆ ಎಂದು ಹೇಳಬಹುದು. iPhone 17 Air ಮತ್ತು Samsung Galaxy S25 Edge ಫೋನ್‌ಗಳಿಗೆ ಹೋಲಿಸಿದರೆ, Moto X70 Air ಬೆಲೆ ಕಡಿಮೆ ಇರುವ ಸೂಚನೆ ಇದೆ. ಆದರೆ, ಅಧಿಕೃತ ಬಿಡುಗಡೆಯಾದಾಗಲಷ್ಟೇ ಈ ಮಾಹಿತಿ ಖಚಿತವಾಗುತ್ತದೆ.

ಇನ್ನು ಈ Moto X70 Air ಪೋನ್ ಅಕ್ಟೋಬರ್ 31 ರಂದು ಚೀನಾದಲ್ಲಿ ಅಧಿಕೃವಾಗಿ ಬಿಡುಗಡೆಯಾಗಲಿದೆ. ಯುರೋಪಿಯನ್ ಮಾರುಕಟ್ಟೆಗೆ ಇದರ ಬಿಡುಗಡೆ ದಿನಾಂಕವನ್ನು ನವೆಂಬರ್ 5 ಕ್ಕೆ ನಿಗದಿಪಡಿಸಲಾಗಿದೆ, ಅಲ್ಲಿ ಇದನ್ನು Motorola Edge 70 ಎಂದು ಅನಾವರಣಗೊಳಿಸಲಾಗುತ್ತದೆ.

ಮೂಲ ಮಾಹಿತಿ: gadgets360

Best Mobiles in India

English summary
Moto X70 Air with Snapdragon 7 Gen 4 chipset, 4,800mAh battery, and a host of impressive features for a mid-range flagship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+