Home
ಮೊಬೈಲ್

ಆಪಲ್‌ನಲ್ಲೂ ಇಲ್ಲದ ಫೀಚರ್: ಮೊಟೊ ಹೊಸ ಫೋನ್‌ ಖರೀದಿಸಲು ಇದೊಂದೆ ಆಯ್ಕೆ ಸಾಕು..!

By Srinidhi

ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊಟೊರೊಲಾ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಲಿನೊವೊ ಒಡೆತನಕ್ಕೆ ಸೇರಿದ ನಂತರದಲ್ಲಿ ಸಾಕಷ್ಟು ಬದಲಾವಣೆಯನ್ನು ಹೊಂದಿದ್ದು, ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಮೊಟೊ ಮೊಡ್ ಗಳನ್ನು ಹಾಕಿಕೊಳ್ಳುವಂತಹ ಸ್ಮಾರ್ಟ್‌ಫೋನ್‌ವೊಂದನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ.

ಆಪಲ್‌ನಲ್ಲೂ ಇಲ್ಲದ ಫೀಚರ್: ಮೊಟೊ ಹೊಸ ಫೋನ್‌ ಖರೀದಿಸಲು ಇದೊಂದೆ ಆಯ್ಕೆ ಸಾಕು..!

ಶೀಘ್ರವೇ ಮಾರುಕಟ್ಟೆಗೆ ಪ್ರವೇಶಿಸಲಿರುವ ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನಿನ ಫೋಟೋಗಳು ಸದ್ಯ ವೈರಲ್ ಆಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊ Z ಸ್ಮಾರ್ಟ್‌ಫೋನ್ ಟಾಪ್ ಎಂಡ್ ಆವೃತ್ತಿಯಾಗಿದ್ದು, ಇದು ಮಾತ್ರವೇ ಮೊಟೊ ಮೊಡ್ ಗಳಿಗೆ ಸಪೋರ್ಟ್ ಮಾಡಲಿದೆ. ಈ ಹಿನ್ನಲೆಯಲ್ಲಿ ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನ್:

ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನ್:

ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊ G6 ಸ್ಮಾರ್ಟ್‌ಫೋನ್ ಜಾಗತಿಕವಾಗಿ ಲಾಂಚ್ ಎನ್ನಲಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರವೇ ಲಾಂಚ್ ಆಗಲಿದೆ. ಇದರ ಬೆನ್ನಲೇ ಮೊಟೊ ತನ್ನ ಹೊಸ ಮೊಬೈಲ್​ನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನ್ ಶೀಘ್ರವೇ ಲಾಂಚ್ ಆಗಲಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್​ ಕ್ಯಾಮೆರಾ ಕಾಣಬಹುದಾಗಿದೆ. ಈ ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿಯ ಫಿಂಗರ್​ ಪ್ರಿಂಟ್ ಅ​ನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿಯೂ ಉತ್ತಮವಾದ ಕ್ಯಾಮೆರಾವನ್ನು ನೀಡಲಾಗಿದೆ.

4 GB RAM:

4 GB RAM:

ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನ್ 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 636ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ವಿಭಿನ್ನ ಡಿಸೈಸ್:

ವಿಭಿನ್ನ ಡಿಸೈಸ್:

ಸದ್ಯ ಮಾರುಕಟ್ಟೆಯಲ್ಲಿ ಎಲ್ಲಾ ಸ್ಮಾರ್ಟ್‌ಫೋನ್‌ಗಳು ನೋಚ್ ವಿನ್ಯಾಸವನ್ನು ಹೊಂದಿರುತ್ತಾರೆ. ಆದರೆ ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನಿನಲ್ಲಿ ಈ ಮಾದರಿಯ ವಿನ್ಯಾಸವನ್ನು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ. ಅಲ್ಲದೇ ಹೋಮ್ ಬಟನ್ ಸೈಡ್‌ಗೆ ನೀಡಲಾಗಿದೆ.

How to send WhatsApp Payments invitation to others - GIZBOT KANNADA
ಬೆಲೆ ಕಡಿಮೆ:

ಬೆಲೆ ಕಡಿಮೆ:

ಇದಲ್ಲದೇ ಮೊಟೊ Z 3 ಪ್ಲೇ ಸ್ಮಾರ್ಟ್‌ಫೋನ್ ಕಡಿಮೆ ಬೆಲೆಗೆ ದೊರೆಯಲಿದೆ. ಕಾರಣ ಇದು ಪ್ಲೇ ಮಾದರಿಯಾದ್ದಾಗಿದ್ದು, ಇದರಿಂದಾಗಿ ಬೆಲೆ ಕಡಿಮೆ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ನಿಖರವಾಗಿ ಬೆಲೆಯ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ.

Best Mobiles in India

English summary
Moto Z3 Play kicks the home button to the curb
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+