Home
ಮೊಬೈಲ್

ಮಾರುಕಟ್ಟೆಗೆ ಮತ್ತೊಂದು ಬೊಂಬಾಟ್ ಫೋನ್ ಬಿಡುಗಡೆ ಮಾಡಲಿರುವ ಮೊಟೊರೊಲಾ..!

By Lekhaka

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಮೊಟೊ G6 ಮತ್ತು ಮೊಟೊ G6 ಪ್ಲಸ್ ಸ್ಮಾರ್ಟ್ ಫೋನ್ ಅನ್ನು ಭಾರತದಲ್ಲಿ ಜೂನ್ 4 ರಂದು ಲಾಂಚ್ ಮಾಡಲು ಲಿನೊವೊ ಒಡೆತನದ ಮೊಟೊರೊಲಾ ಸಿದ್ಧತೆಯನ್ನು ನಡೆಸಿದೆ. ಇದೇ ಸಂದರ್ಭದಲ್ಲಿ ಮೊಟೊ ಟಾಪ್ ಎಂಡ್ ಸ್ಮಾರ್ಟ್ ಫೋನ್ ಮೊಟೊ Z3 ಸ್ಮಾರ್ಟ್ ಫೋನ್ ಪರಿಷ್ಕೃತ ಆವೃತ್ತಿ ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಮತ್ತೊಂದು ಬೊಂಬಾಟ್ ಫೋನ್ ಬಿಡುಗಡೆ ಮಾಡಲಿರುವ ಮೊಟೊರೊಲಾ..!

ಮೂಲಗಳ ಪ್ರಕಾರ ಜೂನ್ 5 ರಂದು ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಈಗಾಗಲೇ ಮಾಧ್ಯಮಗಳಿಗೆ ಆಹ್ವಾನವನ್ನು ಕಳುಹಿಸಿದ್ದಾರೆ ಎನ್ನಲಾಗಿದೆ. ಮೊಟೊ ಟಾಪ್ ಎಂಡ್ ಆವೃತ್ತ Z ಸರಣಿಯಲ್ಲಿ ಅತೀ ಕಡಿಮೆ ಬೆಲೆಗೆ ದೊರೆಯುವ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಲಿರುವ ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ಹಲವು ವಿಶೇಷತೆಗಳನ್ನು ಹೊಂದಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ವಿ಼ಶೇಷತೆಗಳ ಕುರಿತ ಪರಿಚಯವು ಮುಂದಿನಂತಿದೆ.

ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ವಿಶೇಷತೆಗಳು

ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ನಿನಲ್ಲಿ ಸ್ನಾಪ್ ಡ್ರಾಗನ್ ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 4GB RAM ಅನ್ನು ಕಾಣಬಹುದಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ 32 GB / 64 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ. ಇದಲ್ಲದೇ ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಸಹ ನೀಡಲಾಗಿದೆ. ಆದರೆ ಕ್ಯಾಮೆರಾ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ.

ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದ್ದು, ಇದರಲ್ಲಿ ಉತ್ತಮ ಸೆಲ್ಪಿಗಳನ್ನು ತೆಗೆಯಬಹುದಾಗಿದೆ. ಅಲ್ಲದೇ ಮೊಟೊ Z3 ಪ್ಲೇ ಸ್ಮಾರ್ಟ್ ಫೋನಿನಲ್ಲಿ 3000mAh ಬ್ಯಾಟರಿಯನ್ನು ನೀಡಲಾಗಿದ್ದು, ಇದರೊಂದಿಗೆ ಟರ್ಬೋ ಚಾರ್ಜರ್ ಅನ್ನು ನೀಡಲಿದ್ದು, ಇದರ ಸಹಾಯದಿಂದ ವೇಗವಾಗಿ ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಇದಲ್ಲದೇ ಆಂಡ್ರಾಯ್ಡ್ ಒರಿಯೊದಲ್ಲಿ ಮೊಟೊ Z3 ಪ್ಲೇ ಸ್ಮಾರ್ಟ್ ಫೋನ್ ಕಾರ್ಯನಿರ್ವಹಿಸಲಿದ್ದು, ಸ್ಟಾಕ್ ಆಂಡ್ರಾಯ್ಡ್ ಆಗಿರಲಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಪಿ ಆಪ್ ಡೇಟ್ ಸಹ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

English summary
Moto Z3 Play will launch on the 6th of June. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+