6GB RAM, 128GB ಸಾಮರ್ಥ್ಯದ ಮೊಟೋ Z3 ಪ್ಲೇ ಲಾಂಚ್..!
ಮೋಟರೋಲಾ ಸಂಸ್ಥೆ ಇತ್ತೀಚೆಗಷ್ಟೇ ಬ್ರೆಝಿಲ್ ನಲ್ಲಿ ತನ್ನ ಮೋಟೋ Z3 ಪ್ಲೇ ಡಿವೈಸ್ ನ್ನು ಬಿಡುಗಡೆ ಮಾಡಿದೆ ಮತ್ತು ಇದು 3 ನೇ ಜನರೇಷನ್ನಿನ ಮೊದಲ ಮೋಟೋ MOD ಬೆಂಬಲಿಸುವ ಡಿವೈಸ್ ಆಗಿದೆ.
ಇದೀಗ, ಕಂಪೆನಿಯು ಇದರ ಅಪ್ ಗ್ರೇಡೆಡ್ ವರ್ಷನ್ ನ್ನು ಬಿಡುಗಡೆಗೊಳಿಸಿದ್ದು ಅದು 6ಜಿಬಿ ಯ LPDDR4x RAM ಮತ್ತು 128 ಜಿಬಿ ಸ್ಟೋರೇಜ್ ಅವಕಾಶ ಹೊಂದಿದ್ದು ಬೆಲೆ BLR 2,699( ಸುಮಾರು 48,585 ರುಪಾಯಿಗಳು). ಸದ್ಯದ ಮಟ್ಟಿಗೆ ಹೇಳುವುದಾದರೆ ಇದು ದುಬಾರಿ ಮೋಟೋ z3 ಪ್ಲೇ ಸ್ಮಾರ್ಟ್ ಫೋನ್ ಆಗಿರುತ್ತದೆ. ಎರಡು ರೀತಿಯ ವಿಭಿನ್ನ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದ್ದು ಒಂದು Onyx ಮತ್ತೊಂದು ಕಡು ನೀಲಿ ಬಣ್ಣವಾಗಿದೆ.

ಈಗಾಗಲೇ ಬ್ರೆಝಿಲ್ ನಲ್ಲಿ ಬಿಡುಗಡೆಗೊಂಡಿರುವ ಮೋಟೋ Z3 ಪ್ಲೇ ಯ 6ಜಿಬಿ RAM ವರ್ಷನ್ ಅಲ್ಲಿನ ಆಫ್ ಲೈನ್ ಮತ್ತು ಆನ್ ಲೈನ್ ಅಂಗಡಿಗಳಲ್ಲಿ ಬಿಡುಗಡೆಗೊಂಡ ದಿನದಿಂದಲೂ ಲಭ್ಯವಿದೆ. ಸದ್ಯಕ್ಕೆ ಭಾರತದಲ್ಲಿ ಈ ಫೋನ್ ಬಿಡುಗಡೆಗೊಳ್ಳುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಬೆಲೆಗೆ ಒನ್ ಪ್ಲಸ್ 6 ನ ಪ್ರೀಮಿಯಂ ವೇರಿಯಂಟ್ ನ 8 ಜಿಬಿ RAM ಮತ್ತು 256 GB ಸ್ಟೋರೇಜ್ ನ ಮೊಬೈಲ್ ಗಿಂತ ಇದು ಹೆಚ್ಚು ದುಬಾರಿಯಾಗುತ್ತದೆ.
ಮೋಟೋ Z3 ಪ್ಲೇ ವೈಶಿಷ್ಟ್ಯತೆಗಳು

ಸೂಪರ್ AMOLED ಡಿಸ್ಪ್ಲೇ
ಮೋಟೋ Z3 ಪ್ಲೇ ಲೇಟೆಸ್ಟ್ ಡಿಸ್ಪ್ಲೇ ಟ್ರೆಂಡನ್ನು ಹೊಂದಿದೆ ಅಂದರೆ 6-ಇಂಚಿನ 18:9 ಅನುಪಾತದ ಫುಲ್ HD+ ರೆಸಲ್ಯೂಷನ್, ಸೂಪರ್ AMOLED ಡಿಸ್ಪ್ಲೇ ಹೊಂದಿದೆ. ಕುತೂಹಲಕಾರಿಯೆಂದರೆ ಮತ್ತು ನಿರೀಕ್ಷೆ ಮಾಡಿರುವಂತೆ ಮೋಟೋ Z3 ಪ್ಲೇ ನಲ್ಲಿ ಫಿಂಗರ್ ಪ್ರಿಂಟ್ ಫೋನಿನ ಬದಿಯಲ್ಲಿ ಇರುವುದರಿಂದಾಗಿ ಡಿಸ್ಪ್ಲೇಗೆ ಹೆಚ್ಚು ಜಾಗ ಲಭಿಸಿದಂತಿದೆ. ಗೋರಿಲ್ಲಾ ಗ್ಲಾಸ್ ನ್ನು ಇದು ಒಳಗೊಂಡಿದ್ದು, ಕಡಿಮೆ ತೂಕದ ಮತ್ತು ಹೆಚ್ಚು ಕಾಲ ಬಾಳಿಕೆ ಬರುವುದರ ಬಗ್ಗೆ ಖಾತ್ರಿ ನೀಡಲಾಗಿದೆ.

128 ಜಿಬಿವರೆಗೂ ಮೆಮೊರಿ ವಿಸ್ತರಣೆ
ಮೋಟೋ Z3 ಪ್ಲೇ, ಸ್ನ್ಯಾಪ್ ಡ್ರ್ಯಾಗನ್ 636 ಚಿಪ್ ಸೆಟ್ ಹೊಂದಿದ್ದು ಇದು 4GB RAMನೊಂದಿಗೆ ಹೊಂದಿಕೊಂಡಿರುತ್ತದೆ.. ಎರಡು ರೀತಿಯ ಸ್ಟೋರೇಜ್ ವೇರಿಯಂಟ್ ನಲ್ಲಿ ಈ ಫೋನ್ ಮಾರ್ಕೆಟ್ ನಲ್ಲಿ ಲಭ್ಯವಿದೆ. 32GB ಮತ್ತು 64GB ವೇರಿಯಂಟ್ ಗಳಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯವಿದೆ . ನಿಮ್ಮ ಅಗತ್ಯತೆಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು. ಇಂಟರ್ನಲ್ ಸ್ಟೋರೇಜ್ ನ್ನು ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ 128 ಜಿಬಿ ವರೆಗೂ ಹಿಗ್ಗಿಸಿಕೊಳ್ಳಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ
ಫೋಟೋ ತೆಗೆಯಲು ಮೋಟೋ Z3 ಪ್ಲೇ ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಇದೆ. ಹಿಂಭಾಗದ ಕ್ಯಾಮರಾದಲ್ಲಿ 12ಎಂಪಿ ಪ್ರೈಮರಿ ಸೆನ್ಸರ್ ಇದ್ದು ಅದರ ದ್ಯುತಿರಂಧ್ರ f/1.7 ಆಗಿದೆ , ಇದರ ಜೊತೆಗೆ ಸೆಕೆಂಡರಿ ಕ್ಯಾಮರಾ 5MP ಸೆನ್ಸರ್ ಹೊಂದಿದ್ದು ಫೋಟೋ ತೆಗೆಯಲು ಉತ್ತಮವಾಗಿದೆ. ಮೋಟೋ Z 3 ಪ್ಲೇ ನಲ್ಲಿ ಮುಂಭಾಗದ ಕ್ಯಾಮರಾವು ಸೆಲ್ಫಿಗೆ ಅನುಕೂಲಕರವಾಗಿದ್ದು 8ಎಂಪಿ ಸಾಮರ್ಥ್ಯ ಹೊಂದಿದೆ. ಆದರೆ ಫ್ರಂಟ್ ಫ್ಲ್ಯಾಶ್ ಆಯ್ಕೆ ಇದರಲ್ಲಿ ಇಲ್ಲ.

3000 mAh ಬ್ಯಾಟರಿ
ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಟೈಪ್ C USB ಪೋರ್ಟ್ ಚಾರ್ಜಿಂಗ್ ಗೆ ಅನುಕೂಲಕರವಾಗಿದೆ. ಕಂಪನಿಯು 3.5 ಎಂಎಂ ನ ಆಡಿಯೊ ಜ್ಯಾಕ್ ಅನ್ನು ಡಿಚ್ ಮಾಡಲು ನಿರ್ಧರಿಸಿದೆಮತ್ತು ಸಾಧನದಿಂದ ಜ್ಯಾಕ್ ಕಾಣೆಯಾಗಿದೆ. 3,000 mAh ಬ್ಯಾಟರಿಯನ್ನು ಈ ಮೊಬೈಲ್ ಹೊಂದಿದ್ದು, 100 ಪರ್ಸೆಂಟ್ ಮೊಬೈಲ್ ಚಾರ್ಜ್ ಆದರೆ ಒಂದು ದಿನ ಪೂರ್ತಿ ಬಳಸಲು ತೊಂದರೆ ಇಲ್ಲ. ಹಿಂದಿನ ಎಲ್ಲಾ ಮೋಟೋ ಮೋಡ್ ಗಳನ್ನು ಇದು ಕೂಡ ಬೆಂಬಲಿಸುತ್ತದೆ.


ಆಂಡ್ರಾಯ್ಡ್ 8.1 ಓರಿಯೋ
ಈ ಡಿವೈಸ್ ನ ಯುಐ ಸ್ಟಾಕ್ ಆಂಡ್ರಾಯ್ಡ್ ನಂತೆಯೇ ಗೋಚರಿಸುತ್ತದೆ ಮತ್ತು ಇದು ಯಾರು ಸ್ಟಾಕ್ ಆಂಡ್ರಾಯ್ಡ್ ಇಂಟರ್ ಫೇಸ್ ನ್ನು ಇಚ್ಛಿಸುತ್ತಾರೋ ಅವರಿಗೆ ಬಹಳ ಹಿಡಿಸಲಿದೆ.ಈಗಾಗಲೇ ತಿಳಿಸಿರುವಂತೆ, ಈ ಡಿವೈಸ್ 8.1 ಓರಿಯೋ ಮೂಲಕ ರನ್ ಆಗುತ್ತದೆ ಮತ್ತು ಹೆಚ್ಚು ಕಡಿಮೆ ಸ್ಟಾಕ್ ಆಂಡ್ರಾಯ್ಡ್ ನ್ನೇ ಹೋಲುತ್ತದೆ. ನಿಮಗೂ ಈ ಫೋನ್ ಇಷ್ಟವಾದರೆ, ಇನ್ನು ಕೆಲವು ದಿನ ಕಾಯಬೇಕಾಗಬಹುದು.


Click it and Unblock the Notifications
