AI ಡುಯಲ್ ಕ್ಯಾಮೆರಾದ ಮೊಟೋ Z3 ಮಾರ್ಕೆಟ್ ಗೆ ಬಂತು...ದಾರಿ ಬಿಡಿ..!

|

ಲೆನೋವೋ ಮಾಲೀಕತ್ವದ ಮೊಟೋರೋಲಾ ತನ್ನ z ಸಿರೀಸ್ ನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸುತ್ತಿದೆ. ಮೋಟೋ Z3 ಪ್ಲೇ ಬ್ರೆಝಿಲ್ ನಲ್ಲಿ ಬಿಡುಗಡೆಗೊಂಡಿದೆ. ಮಿಡ್ ರೇಂಜ್ ನ ಸ್ಮಾರ್ಟ್ ಫೋನ್ ಗಳು ಮೋಟೋರೋಲಾದ ಮಾಡ್ಯುಲರ್ ಸಿರೀಸ್ ನ ಸ್ಮಾರ್ಟ್ ಫೋನ್ ಗಳ ಒಂದು ಭಾಗವಾಗಿದೆ. ಈಗಾಗಲೇ ಮಾರ್ಕೆಟ್ ನಲ್ಲಿ ಲಭ್ಯವಿರುವ ಮೋಟೋ ಮೋಡ್ಸ್ ಗಳಲ್ಲಿಯೂ ಕೂಡ ಮೋಟೋ z3 ಪ್ಲೇ ಕೆಲಸ ಮಾಡುತ್ತೆ ಎಂಬ ವಿಚಾರವನ್ನು ಕಂಪೆನಿ ಪ್ರಕಟಪಡಿಸಿದೆ.

AI ಡುಯಲ್ ಕ್ಯಾಮೆರಾದ ಮೊಟೋ Z3 ಮಾರ್ಕೆಟ್ ಗೆ ಬಂತು...ದಾರಿ ಬಿಡಿ..!


ಬ್ರೆಝಿಲ್ ನ ರಿಟೈಲ್ ಸ್ಟೋರ್ ಗಳಿಗೆ ಈಗಾಗಲೇ ಲಗ್ಗೆ ಇಟ್ಟಿರುವ ಈ ಫೋನಿನ ಅಲ್ಲಿನ ಬೆಲೆ $601. ಇನ್ನು ಕೆಲವೇ ದಿನಗಳಲ್ಲಿ ವಿಶ್ವದ ಇತರೆ ಭಾಗಗಳಲ್ಲೂ ಕೂಡ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ..

ಇದರ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಮೋಟೋ Z3 6 ಇಂಚಿನ ಫುಲ್ HD+ ಡಿಸ್ಪ್ಲೇ ಜೊತೆಗೆ 1080 x 2160 ರೆಸೊಲ್ಯೂಷನ್ ಹೊಂದಿರುತ್ತದೆ. ಗೋರಿಲ್ಲಾ ಗ್ಲಾಸ್ ಗಳ ಕೋಟಿಂಗ್ ನಿಂದಾಗಿ ಫೋನಿಗೆ ಯಾವುದೇ ಸ್ಕ್ರ್ಯಾಚ್ ಗಳು ಆಗದಂತೆ ತಡೆಯಲಾಗುತ್ತೆ ಕೇವಲ ಮುಂಭಾಗದಲ್ಲಿ ಮಾತ್ರವಲ್ಲ ಬದಲಾಗಿ ಫೋನಿನ ಎರಡೂ ಭಾಗದಲ್ಲೂ ಕೂಡ ಇದನ್ನು ಅಳವಡಿಸಲಾಗಿದೆ. ಮೊದಲ ಬಾರಿಗೆ ಮೋಟೋರೋಲಾ ಫಿಂಗರ್ ಪ್ರಿಂಟ್ ಸೆನ್ಸರ್ ಗಳಿರುವ ಜಾಗವನ್ನು ಬದಲಾಯಿಸಿದೆ.

AI ಡುಯಲ್ ಕ್ಯಾಮೆರಾದ ಮೊಟೋ Z3 ಮಾರ್ಕೆಟ್ ಗೆ ಬಂತು...ದಾರಿ ಬಿಡಿ..!

ಫೋನಿನ ಬದಿಯ ಭಾಗದಲ್ಲಿ ಬೆರಳಚ್ಚು ತಂತ್ರಜ್ಞಾನವನ್ನು ಮೋಟೋ Z3 Play ನಲ್ಲಿ ಅಳವಡಿಸಲಾಗಿದೆ. ಗೆಶ್ಚರ್ ಬೇಸ್ ಆಗಿರುವ ಒಂದು ಬಟನ್ ನ ನೇವಿಕೇಷನ್ ಬಾರ್ ನ್ನು ಸ್ಕ್ರೀನಿನ ಕೆಳಭಾಗದಲ್ಲಿ ಈ ಸ್ಮಾರ್ಟ್ ಫೋನ್ ಹೊಂದಿದೆ.ಮೋಟೋ ಡಿಸ್ಪ್ಲೇ ಮತ್ತು ಮೋಟೋ ಆಕ್ಷನ್ ಗಳಿಗೆ ಈ ಸ್ಮಾರ್ಟ್ ಫೋನ್ ಬೆಂಬಲ ನೀಡುತ್ತೆ.

ಮೋಟೋ Z3 ಪ್ಲೇ 1.8GHz ಅಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್ ನ್ನು ಹೊಂದಿದೆ ಮತ್ತು ಇದು ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಂ ಮುಖಾಂತರ ರನ್ ಆಗುತ್ತೆ. ಈ ಡಿವೈಸ್ ನಲ್ಲಿ 4ಜಿಬಿ RAM ಮತ್ತು 32ಜಿಬಿ/64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇರಲಿದೆ ಮೈಕ್ರೋ ಎಸ್ ಡಿ ಕಾರ್ಡ್ ಮುಖಾಂತರ ಬಳಕೆದಾರರು ಇದನ್ನು 2TB ವರೆಗೂ ಹಿಗ್ಗಿಸಿಕೊಳ್ಳಬಹುದಾಗಿದೆ.

ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!ಪ್ರವಾಸದ ಸವಿ ಹೆಚ್ಚಿಸಲು 10 ಬೆಸ್ಟ್ ಟ್ರಾವೆಲಿಂಗ್ ಆ್ಯಪ್ಸ್..!

How to Sharing a Mobile Data Connection with Your PC (KANNADA)

ಈ ಡುಯಲ್ ಸಿಮ್ ಸ್ಮಾರ್ಟ್ ಫೋನ್ ನಲ್ಲಿ ಡುಯಲ್ ಕ್ಯಾಮರಾ ವ್ಯವಸ್ಥೆ ಇರಲಿದೆ. 12ಎಂಪಿ ಪ್ರೈಮರಿ ಸೆನ್ಸರ್ ಜೊತೆಗೆ ಡುಯಲ್ ಟೋನ್ ಎಲ್.ಇ.ಡಿ ಫ್ಲ್ಯಾಶ್ ಮತ್ತು f/1.7 ದ್ಯುತಿರಂದ್ರ ಮತ್ತು 5ಎಂಪಿ ಸೆಕೆಂಡರಿ ಕ್ಯಾಮರಾವು f/2.2 ದ್ಯುತಿರಂದ್ರವನ್ನು ಹೊಂದಿರುತ್ತದೆ. ಇನನು 8 ಎಂಪಿ ಸೆಲ್ಫೀ ಕ್ಯಾಮರಾ ವ್ಯವಸ್ಥೆಯೂ ಇದರಲ್ಲಿದ್ದು f/2.0 ದ್ಯುತಿರಂದ್ರವನ್ನು ಒಳಗೊಂಡಿದೆ. ಎಲ್ಲಕ್ಕಿಂತ ಪ್ರಮುಖವಾಗಿ ನಿಮ್ಮ ಈ ಫೋನ್ ನೀರಿಗೆ ಬಿದ್ರೂ ಏನೂ ಆಗುವುದಿಲ್ಲ ಯಾಕೆಂದರೆ water repellent ನ್ಯಾನೋ ಕೋಟಿಂಗ್ ಇದರಲ್ಲಿರುತ್ತೆ.

AI ಡುಯಲ್ ಕ್ಯಾಮೆರಾದ ಮೊಟೋ Z3 ಮಾರ್ಕೆಟ್ ಗೆ ಬಂತು...ದಾರಿ ಬಿಡಿ..!


ಇನ್ನು ಈ ಪೋನಿನ ಅಳತೆ 156.5 x 76.5 x 6.7ಎಂಎಂ, ಮತ್ತು ಮೋಟೋ Z3 ಪ್ಲೇಯಲ್ಲಿ 3,000 mAh ಬ್ಯಾಟರಿ ಇದ್ದು ಟರ್ಬೋ ಚಾರ್ಜಿಂಗ್ ಗೆ ಇದು ನೆರವು ನೀಡುತ್ತೆ.. ಕನೆಕ್ಟಿವಿಟಿ ಬಗ್ಗೆ ಮಾಹಿತಿ ನೀಡುವುದಾದರೆ 4G, VoLTE, 3G, ವೈ-ಫೈ, ಬ್ಲೂಟೂತ್, ಜಿಪಿಎಸ್, ಎನ್ ಎಫ್ ಸಿ ಮತ್ತು ಯು ಎಸ್ ಬಿ ಟೈಪ್ ಸಿ ಗೆ ಇದು ಸಹಕರಿಸುತ್ತೆ. ಈ ಎಲ್ಲಾ ವೈಶಿಷ್ಟ್ಯತೆಗಳಿರುವ ಫೋನ್ ನಿಮಗೂ ಬೇಕಾದಲ್ಲಿ ಇನ್ನು ಕೆಲವು ದಿನ ಕಾಯಬೇಕು.

Best Mobiles in India

English summary
Moto Z3 Play with Snapdragon 636, AI dual rear cameras launched. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X