ಇದೇ ಆಗಸ್ಟ್ 2ಕ್ಕೆ ಚಿಕ್ಯಾಗೋದಲ್ಲಿ 5G ಸ್ಮಾರ್ಟ್‌ಫೋನ್ ಲಾಂಚ್..!
ಸ್ಮಾರ್ಟ್‌ಫೋನ್ ಲೋಕದಲ್ಲಿ ದಿನಕ್ಕೊಂದು ಮಾದರಿಯ ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿವೆ. 4G ತಂತ್ರಜ್ಞಾನದಿಂದ 5G ತಂತ್ರಜ್ಞಾನಕ್ಕೆ ಮುಂದುವರೆಯುತ್ತಿದ್ದೇವೆ. ಪ್ರಖ್ಯಾತ ಸ್ಮಾರ್ಟ್‌ಫೋನ್ ಕಂಪನಿಯಾದ ಮೊಟೋರೋಲಾ ಹೊಸ ಫ್ಲಾಗ್‌ಶಿಫ್ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ಈ ಫೋನ್ ವಿಶ್ವದಲ್ಲಿಯೇ ಮೊದಲ 5G ತಂತ್ರಜ್ಞಾನ ಹೊಂದಿದ ಸ್ಮಾರ್ಟ್‌ಫೋನ್ ಆಗಿರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಹೌದು, ಇದೇ ಆಗಸ್ಟ್ 2 ಗುರುವಾರದಂದು ಅಮೇರಿಕಾದ ಚಿಕ್ಯಾಗೋದಲ್ಲಿ ಕಾರ್ಯಕ್ರಮ ಆಯೋಜಿಸಿರುವ ಮೊಟೋರೋಲಾ ಸಂಸ್ಥೆ ತನ್ನ ಮೊಟೋ ಝೆಡ್ 3 ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಮುಂದಾಗಿದೆ. ಲೆನೋವೋ ಮಾಲೀಕತ್ವದ ಮೊಟೋರೋಲಾ ಸಂಸ್ಥೆ ಬಿಡುಗಡೆ ಮಾಡುತ್ತಿರುವ ಹೊಸ ಸ್ಮಾರ್ಟ್‌ಫೋನ್‌ನಲ್ಲಿ 5G ತಂತ್ರಜ್ಞಾನವಷ್ಟೇ ಅಲ್ಲದೇ ಮ್ಯಾಕ್ಸ್ ವಿಷನ್ ಡಿಸ್‌ಪ್ಲೇಯಂತಹ ಅನೇಕ ಹೈ ಎಂಡ್ ಫೀಚರ್‌ಗಳನ್ನು ಹೊಂದಿರಲಿದ್ದು, ಸ್ಮಾರ್ಟ್‌ಫೋನ್ ಪ್ರಿಯರ ಕಣ್ಣು ಆಗಸ್ಟ್ 2ರ ಚಿಕಾಗೋ ಇವೆಂಟ್ ಕಡೆ ನೆಟ್ಟಿದೆ. ಆಗಿದ್ರೇ ಹೊಸ ಸ್ಮಾರ್ಟ್‌ಫೋನ್ ಏನೆಲ್ಲಾ ವಿಶೇಷತೆ ಹೊಂದಿದೆ ನೋಡೋಣ ಬನ್ನಿ..

ಮೊದಲ 5G ಬೆಂಬಲಿತ ಸ್ಮಾರ್ಟ್‌ಫೋನ್
ಮೊಟೋ ಜಿ6 ಸರಣಿ ಮತ್ತು ಮೊಟೋ ಝೆಡ್ ಪ್ಲೇ ಸ್ಮಾರ್ಟ್‌ಫೋನ್‌ಗಳನ್ನು ಬ್ರೆಜಿಲ್‌ನಲ್ಲಿ ಲಾಂಚ್ ಮಾಡಲಾಗಿದೆ. ಮೊಟೋ ಝೆಡ್ 3ಯನ್ನು ಆರಂಭದಲ್ಲಿ ಅಮೇರಿಕಾದಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಇದರಿಂದ 5G ತಂತ್ರಜ್ಞಾನ ಹೊಂದಿದ ಮೊದಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಅಮೇರಿಕ ಭಾಜನವಾಗಲಿದೆ. ಮೊಟೋ ಝೆಡ್ 3 ಸ್ಮಾರ್ಟ್‌ಫೋನ್ ವೆರಿಝೋನ್ ಎಂಬ ನೆಟ್‌ವರ್ಕ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಲಭ್ಯವಿರಲಿದೆ ಎಂಬ ಮಾಹಿತಿಯಿದೆ. ಈ ವೆರಿಝೋನ್ ನೆಟ್‌ವರ್ಕ್ ಯುಎಸ್‌ನಲ್ಲಿ 5G ನೆಟ್‌ವರ್ಕ್‌ನ್ನು ಮೊದಲು ಸ್ಥಾಪಿಸುವ ನಿರೀಕ್ಷೆ ಇದೆ.

MOD ಸ್ಮಾರ್ಟ್‌ಫೋನ್
ಮೊಟೋ ಝೆಡ್3 ಸ್ಮಾರ್ಟ್‌ಫೋನ್ 4G LTE ಬೆಂಬಲಿಸಲಿದೆ ಹಾಗೂ 5G MODನಲ್ಲಿ ಲಭ್ಯವಾಗಲಿದೆ. ಮೊಡ್ ಎಂದರೆ ಇದೊಂದು ವಿಶಿಷ್ಟವಾದ ಫೀಚರ್ ಆಗಿದ್ದು, ಎಲ್ಲಾ ಮೊಟೋ ಝೆಡ್ ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ. ಇದರಿಂದ ಸ್ಮಾರ್ಟ್‌ಫೋನ್ ಮತ್ತೊಂದು ಫೀಚರ್ ಪಡೆಯಲಿದೆ. ಹೀಗಾಗಲೇ 5G MOD ಫೀಚರ್‌ನ್ನು ಮೊಟೋ ಝೆಡ್ ಸರಣಿ ಸ್ಮಾರ್ಟ್‌ಫೋನ್‌ಗಳಾದ ಮೊಟೋ ಝೆಡ್2 ಮತ್ತು ಮೊಟೋ ಝೆಡ್ 2 ಪ್ಲೇ ಸ್ಮಾರ್ಟ್‌ಫೋನ್‌ಗಳು ಹೊಂದಿದ್ದವು. ಕಂಪನಿಯು 5G ಮೊಟೋ ಮೋಡ್‌ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಬಹುದಾದ ಸಾಧ್ಯತೆಯಿದೆ. ಅಥವಾ ಮೊಟೋ ಝೆಡ್ 3 ಸ್ಮಾರ್ಟ್‌ಫೋನ್‌ನಲ್ಲಿ 5G ಮೊಟೋ ಮೋಡ್ ಸ್ಥಾಪಿಸಲು ಪ್ರತ್ಯೇಕ ಬಕ್‌ಗಳನ್ನು ಸ್ಥಾಪಿಸುವ ಆಯ್ಕೆ ಇದೆ.

ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ
ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಆಗಿರುವ ಮೊಟೋ ಝೆಡ್3 ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ ಹೊಂದಿದ್ದು, 18:9 ಆಸ್ಪೆಕ್ಟ್ ರೇಷಿಯೋ ಡಿಸ್‌ಪ್ಲೇ ಹೊಂದಿದೆ. ಕನಿಷ್ಟ ಬೆಜಲ್ ವಿನ್ಯಾಸ ಹೊಂದಿದ್ದು, ಸ್ಮಾರ್ಟ್‌ಫೋನ್‌ನ ಮೇಲೆ ಮತ್ತು ಕೆಳಗೆ ಬೆಜಲ್ ವಿನ್ಯಾಸ ಹೊಂದಿದೆ. QHD + OLED ಸ್ಕ್ರೀನ್ ಹೊಂದಿದೆ.

6GB RAM + 64GB ಮೆಮೊರಿ
ಮೊಟೋ ಝೆಡ್3 ಸ್ಮಾರ್ಟ್‌ಫೋನ್ 6GB RAM + 64GB ಮೆಮೊರಿ ಹೊಂದಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 845 ಒಕ್ಟಾಕೋರ್ ಚಿಪ್‌ಸೆಟ್ ಪ್ರೊಸೆಸರ್ ಹೊಂದಿರಲಿದ್ದು, ಉತ್ತಮ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸಬಹುದು. ಶಟ್ಟರ್‌ಪ್ರೂಪ್ ಡಿಸ್‌ಪ್ಲೇಯನ್ನು ಹೊಂದಿಲ್ಲ ಎನ್ನುವ ಗುಮಾನಿಗಳಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಭದ್ರತೆಯನ್ನು ಹೊಂದಿದೆ.

ಭಾರತದಲ್ಲಿ ಲಾಂಚ್..?
ಇದೇ ಆಗಸ್ಟ್‌ನಲ್ಲಿ ಮೊಟೊರೋಲಾ ತನ್ನ ಮೊಟೋ ಜಿ6 ಪ್ಲಸ್ ಸ್ಮಾರ್ಟ್‌ಫೋನ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು,5G ತಂತ್ರಜ್ಞಾನ ಹೊಂದಿದ ಮೊಟೋ ಝೆಡ್ 3 ಸ್ಮಾರ್ಟ್‌ಫೋನ್ ಬರುವುದು ಇನ್ನು ತಡವಾಗುತ್ತದೆ. ಕಾಯಲೇಬೇಕು. ಭವಿಷ್ಯದ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್‌ಫೋನ್ ಆಗಿರುವುದರಿಂದ ಬೆಲೆಯು ಸಹ ದುಬಾರಿಯಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications





