Subscribe to Gizbot

ಅಮೆಜಾನ್‌ನಲ್ಲಿ ಮೊಟೊ ಹಬ್ಬ: ಮೊಟೊ ಸ್ಮಾರ್ಟ್‌ಫೋನ್‌ ಖರೀದಿಗೆ ಸುಸಮಯ..!

Written By:

ಮೊಟೊರೊಲಾ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡು 45 ವರ್ಷಗಳಾದ ಹಿನ್ನಲೆಯಲ್ಲಿ, ತನ್ನ ಬಳಕೆದಾರರಿಗೆ ಹೊಸ ಆಫರ್ ಗಳನ್ನು ಘೊಷಣೆ ಮಾಡಿದೆ. ಅಮೆಜಾನ್‌ನಲ್ಲಿ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿಯನ್ನು ನೀಡಿದೆ. ಅಮೆಜಾನ್‌ನಲ್ಲಿ 45ನೇ ಮೊಟೊ ವಾರ್ಷಿಕೋತ್ಸವ ಏಪ್ರಿಲ್ 11ರ ವರೆಗೆ ನಡೆಯಲಿದ್ದು, ಸಂದರ್ಭದಲ್ಲಿ ಮೊಟೊ ಸ್ಮಾರ್ಟ್‌ಫೋನ್‌ಗಳನ್ನು ಅತೀ ಕಡಿಮೆಗೆ ಖರೀದಿ ಮಾಡಬಹುದಾಗಿದೆ.

ಅಮೆಜಾನ್‌ನಲ್ಲಿ ಮೊಟೊ ಹಬ್ಬ: ಮೊಟೊ ಸ್ಮಾರ್ಟ್‌ಫೋನ್‌ ಖರೀದಿಗೆ ಸುಸಮಯ..!

ಅಮೆಜಾನ್‌ನಲ್ಲಿ ನಡೆಯುತ್ತಿರುವ 45ನೇ ಮೊಟೊ ವಾರ್ಷಿಕೋತ್ಸವದಲ್ಲಿ ಮೊಟೊ G5, ಮೊಟೊ G5S, ಮೊಟೊ G5 ಪ್ಲಸ್, ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ಎಕ್ಸ್‌ಚೇಂಜ್ ಮತ್ತು EMI ಆಯ್ಕೆಯನ್ನು ಅಮೆಜಾನ್ ನೀಡುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಟೊ G5

ಮೊಟೊ G5

ರೂ 11,999ಕ್ಕೆ ಬಿಡುಗಡೆಯಾಗಿದ್ದ ಮೊಟೊ G5 ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತವನ್ನು ಕಾಣಬಹುದಾಗಿದೆ. ಮೊಟೊ 45 ನೇ ವಾರ್ಷಿಕೋತ್ಸವದ ಅಂಗವಾಗಿ ಈ ಸ್ಮಾರ್ಟ್‌ಫೋನ್‌ ಅನ್ನು ರೂ. 8,388ಕ್ಕೆ ಮಾರಾಟ ಮಾಡಲಾಗುತ್ತಿದೆ. ಮೊಟೊ G5 ಸ್ಮಾರ್ಟ್‌ಫೋನ್ ನಲ್ಲಿ 5 ಇಂಚಿನ 1920x1080p ಗುಣಮಟ್ಟದ ಡಿಸ್‌ಪ್ಲೇ, 13MP ಹಿಂಬದಿಯ ಕ್ಯಾಮೆರಾ. 5 MP ಮುಂಭಾಗದ ಕ್ಯಾಮೆರಾವನ್ನು ಕಾಣಬಹುದಾಗಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 430 ಆಕ್ಟಾ ಕೋರ್ ಪ್ರೊಸೆಸರ್ 3GB RAM, 16GB ಆಂತರಿಕ ಮೆಮೊರಿ, 128 GB ವರೆಗೆ ವಿಸ್ತರಿಸಬಹುದಾದ ಅವಕಾಶವನ್ನು ಹೊಂದಿದೆ.

ಮೊಟೊ G5 ಪ್ಲಸ್:

ಮೊಟೊ G5 ಪ್ಲಸ್:

ಮೊಟೊ G5 ಪ್ಲಸ್ ಸ್ಮಾರ್ಟ್‌ಫೋನ್ ಉತ್ತಮ ಬೇಡಿಕೆಯನ್ನು ಹೊಂದಿದ್ದು, 16 GB ಆವೃತ್ತಿಯನ್ನು ರೂ.9,990ಕ್ಕೆ ಮಾರಾಟ ಮಾಡಲಾಗುತ್ತಿದೆ. ಮೊಟೊ G5 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ FHD ಡಿಸ್‌ಪ್ಲೇ, ಸ್ನಾಪ್ಡ್ರಾಗನ್ 625 ಪ್ರೊಸೆಸರ್, 3 3GB RAM/16GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಫೋನಿನ ಹಿಂಭಾಗದಲ್ಲಿ 12MP ಕ್ಯಾಮೆರಾ ಮತ್ತು 5 MP ಮುಂಭಾಗದ ಕ್ಯಾಮೆರಾವನ್ನು ನೋಡಬಹುದಾಗಿದೆ.

ಮೊಟೊ G5S:

ಮೊಟೊ G5S:

ಮೊಟೊ G5S ಸ್ಮಾರ್ಟ್‌ಫೋನ್‌ 4 GB RAM ಮತ್ತು 32GB ಇಂಟರ್ನಲ್‌ಮೆಮೊರಿಯ ಆವೃತ್ತಿಯೂ ರೂ. 9,999ಕ್ಕೆ ಮಾರಾಟವಾಗುತ್ತಿದೆ. ಮೊಟೊ G5S ಸ್ಮಾರ್ಟ್‌ಫೋನಿನಲ್ಲಿ 5.2 ಇಂಚಿನ FHD ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಸ್ನಾಪ್ಡ್ರಾಗನ್ 430 ಆಕ್ಟಾ ಕೋರ್ ಪ್ರೋಸೆಸರ್, 4 GB RAM ಮತ್ತು 32 GB ಇಂಟರ್ನಲ್ ಮೆಮೊರಿಯನ್ನು, 16 MP ಹಿಂಬದಿಯ ಕ್ಯಾಮರಾದೊಂದಿಗೆ 5 MP ಮುಂಭಾಗದ ಕ್ಯಾಮರಾ ಹೊಂದಿದೆ.

ಮೊಟೊ G5S ಪ್ಲಸ್:

ಮೊಟೊ G5S ಪ್ಲಸ್:

ಮೊಟೊ G5S ಪ್ಲಸ್ ಸ್ಮಾರ್ಟ್‌ಫೋನ್ ರೂ.14,449ಕ್ಕೆ ಲಭ್ಯವಿದೆ, ಈ ಸ್ಮಾರ್ಟ್‌ಫೋಣ್ ಹಿಂಭಾಗದಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾವನ್ನು ಕಾಣಬಹುದಾಗಿದೆ. 13MP + 13MP ಕ್ಯಾಮೆರಾ ಇದಾಗಿದೆ. 8 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. 5.5 ಇಂಚಿನ FHD ಗುಣಮಟ್ಟದ ಡಿಸ್‌ಪ್ಲೇಯನ್ನು ಹೊಂದಿದೆ. ಸ್ನಾಪ್ಡ್ರಾಗನ್ 625 ಎಕ್ಟಾ ಕೋರ್ ಪ್ರೊಸೆಸರ್ ನೊಂದಿಗೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Motorola 45th Anniversary Sale on Amazon India. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot