ಮೋಡಿ ಮಾಡಲಿದೆ ಮೊಟೊರೊಲಾ ಡೆಫಿ ಮಿನಿ ಮೊಬೈಲ್

ಮೊಟೊರೊಲಾ ಕಂಪನಿ ಮೊಟೊರೊಲಾ ಡೆಫಿ ಮಿನಿ ಎಂಬ ವಿನೂತನ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವುದಾಗಿ ತಿಳಿಸಿದೆ. ಮೊಟೊರೊಲಾ XT320 ಎಂದೂ ಕರೆಯಲ್ಪಡುವ ಈ ಮೊಬೈಲ್ ವಿನ್ಯಾಸದಲ್ಲೊಂತೂ ಅತ್ಯಾಕರ್ಷಕವಾಗಿ ಮೂಡಿಬಂದಿದೆ. ಯುವ ಜನರಿಗಂತೂ ಈ ಮೊಬೈಲ್ ನೋಡಿದ ತಕ್ಷಣವೇ ಇಷ್ಟವಾಗುವುದರಲ್ಲಿ ಸಂಶಯವಿಲ್ಲ
ಆಂಡ್ರಾಯ್ಡ್ ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಟೊರೊಲಾ ಮೊಬೈಲ್ ಹಲವು ಆಯ್ಕೆಗಳು ಲಭ್ಯವಿದೆ. ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್ ನಂತೆ ಕಾಣುವ ಈ ಮೊಬೈಲ್ ಬಾರ್ ಫೋನ್ ಮಾದರಿಯಲ್ಲಿ ಮೂಡಿಬಂದಿದೆ. ಪೂರ್ಣ ಕಪ್ಪು ಬಣ್ಣದೊಂದಿಗೆ ಬೆಳ್ಳಿ ಬಣ್ಣದ ಮಿಶ್ರಣ ತುಂಬಾ ಸೊಗಲಾಗಿದೆ.
ಡೆಫಿ ಮಿನಿ ಮೊಬೈಲ್ ನಲ್ಲಿ ಸಂಪರ್ಕಕ್ಕೆಂದು ಅನೇಕ ಆಯ್ಕೆಗಳಿವೆ. GSM ಫ್ರಿಕ್ವೆನ್ಸಿ ಬ್ಯಾಂಡ್ ಗಳನ್ನು, 850 / 1900 ಮತ್ತು WCDMA ಬ್ಯಾಂಡ್ II ಮತ್ತು ಬ್ಯಾಂಡ್ IV ಬೆಂಬಲಿಸುತ್ತದೆ.
ಮೊಟೊರೊಲಾ ಡೆಫಿ ಮಿನಿ ಮೊಬೈಲ್ ವಿಶೇಷತೆ:
* 109ಎಂಎಂ x 58.5 ಎಂಎಂ x 12.6 ಎಂಎಂ ಸುತ್ತಳತೆ
* 107 ಗ್ರಾಂ ತೂಕ
* HVGA ಟಚ್ ಸ್ಕ್ರೀನ್, 480 x 320 ಪಿಕ್ಸಲ್ ರೆಸೊಲ್ಯೂಷನ್
* 512 ಎಂಬಿ RAM
* 5 ಮೆಗಾ ಪಿಕ್ಸಲ್ ಕ್ಯಾಮೆರಾ
* VGA ಫ್ರಂಟ್ ಕ್ಯಾಮೆರಾ
* LED ಫ್ಲಾಶ್
* GPS, ಬ್ಲೂಟೂಥ್, ವೈ-ಫೈ, GPRS
* EDGE, HSDPA
* USB, ಮೈಕ್ರೊ SD ಕಾರ್ಡ್ ಸ್ಲಾಟ್
ಈ ಮೊಟೊರೊಲಾ ಡೆಫಿ ಮಿನಿ ಮೊಬೈಲ್ ಮೊದಲು ಚೈನಾದಲ್ಲಿ ಬಿಡುಗಡೆಗೊಳ್ಳಲಿದೆ. ಈ ಮೊಬೈಲಿನ ಬೆಲೆ ಮತ್ತು ಇನ್ನಿತರ ಲಕ್ಷಣಗಳ ಕುರಿತು ನಿಖರ ಮಾಹಿತಿಯನ್ನು ಕಂಪನಿ ನೀಡಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಈ ಡೆಫಿ ಮೊಬೈಲ್ ಎಲ್ಲೆಡೆಯೂ ಲಭ್ಯವಾಗಲಿದೆ.


Click it and Unblock the Notifications