ಡೆಫಿ ಪ್ಲಸ್ ಬೇಕಾ? ಸೆನ್ಸೇಶನ್ ಬೇಕಾ? ನೀವೇ ಆರಿಸಿ

Posted By: Staff
ಡೆಫಿ ಪ್ಲಸ್ ಬೇಕಾ? ಸೆನ್ಸೇಶನ್ ಬೇಕಾ? ನೀವೇ ಆರಿಸಿ

ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಮೊಟೊರೊಲಾ ಮತ್ತು ಎಚ್ ಟಿಸಿ, ಎರಡೂ ಕಂಪನಿಗಳೂ ಮುನ್ನಡೆ ಸಾಧಿಸಿವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ನವನವೀನ ರೀತಿಯ ಅನೇಕ ಮೊಬೈಲ್ ಗಳನ್ನು ಬಿಡುಗಡೆಗೊಳಿಸಿರುವ ಈ ಕಂಪನಿಗಳು ಇದೀಗ ತಮ್ಮ ಮತ್ತೊಂದು ನೂತನ ಶೈಲಿಯ ಮೊಬೈಲ್ ಗಳನ್ನು ಪರಿಚಯಿಸಿವೆ.

ಮೊಟೊರೊಲಾ ಡೆಫಿ ಪ್ಲಸ್ ಮತ್ತು ಎಚ್ ಟಿಸಿ ಸೆನ್ಸೇಶನ್ XL ಎಂಬ ಮೊಬೈಲ್ ಗಳು ಬ್ಲಾಕ್ ಟೈಪ್ ಫಾರ್ಮ್ ಫ್ಯಾಕ್ಟರ್ ನಲ್ಲಿ ವಿನ್ಯಾಸಗೊಂಡಿದ್ದು ನೋಡಲು ಆಕರ್ಷಿತವಾಗಿದೆ.

ಮೊಟೊರೊಲಾ ಡೆಫಿ ಪ್ಲಸ್ ಮತ್ತು ಎಚ್ ಟಿಸಿ ಸೆನ್ಸೇಶನ್ XL ಎರಡೂ ಕೂಡ GSM ಬೆಂಬಲಿತ ಸಾಧನಗಳಾಗಿದ್ದು, ಎರಡರಲ್ಲು  3ಜಿ ಸಂಪರ್ಕ ಸಾಧ್ಯವಿದೆ. ಎಚ್ ಟಿಸಿ ಸೆನ್ಸೇಶನ್ XL ಮೊಬೈಲ್ 1.5GHz ವೇಗದ ಕ್ವಾಲ್ಕಂ MSM 8255 ಪ್ರೊಸೆಸರ್ ಹೊಂದಿದ್ದರೆ, ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್ 1 GHz ವೇಗದ TI OMAP 3620 ಪ್ರೊಸೆಸರ್ ಹೊಂದಿದೆ.

ಎಚ್ ಟಿಸಿ ಸೆನ್ಸೇಶನ್ XL ಮೊಬೈಲ್:

* 70.7 ಎಂಎಂ x 132.5 ಎಂಎಂ x 9.9 ಎಂಎಂ ಸುತ್ತಳತೆ

* 163 ಗ್ರಾಂ ತೂಕ

* 4.7 ಇಂಚಿನ ಡಿಸ್ಪ್ಲೇ, 480 x 800 ಪಿಕ್ಸಲ್ ರೆಸೊಲ್ಯೂಷನ್

* 16.8 ಮಿಲಿಯನ್ ಕಲರ್ ಬೆಂಬಲಿತ ಸ್ಕ್ರೀನ್

* ಎಲ್ ಸಿಡಿ ಟಚ್ ಸ್ಕ್ರೀನ್ ಡಿಸ್ಪ್ಲೇ

* 8 ಮೆಗಾ ಪಿಕ್ಸಲ್ ಕ್ಯಾಮೆರಾ, 3264 x 2448 ಪಿಕ್ಸಲ್ ರೆಸೊಲ್ಯೂಷನ್

* ಸೆಕೆಂಡರಿ ಕ್ಯಾಮೆರಾ, 280 x1024 ರೆಸೊಲ್ಯೂಷನ್

* 720 p ವಿಡಿಯೋ ರೆಕಾರ್ಡಿಂಗ್

* 16 ಜಿಬಿ ಮೆಮೊರಿ ಸಾಮರ್ಥ್ಯ, 768ಎಂಬಿ ಸಿಸ್ಟಮ್ ಮೆಮೊರಿ

ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್:

* 59 ಎಂಎಂ x 107 ಎಂಎಂ x 13.4 ಎಂಎಂ ಸುತ್ತಳತೆ

* 118 ಗ್ರಾಂ ತೂಕ

* 3.7 ಇಂಚಿನ ಡಿಸ್ಪ್ಲೇ , 484 x 854 ಪಿಕ್ಸಲ್ ರೆಸೊಲ್ಯೂಷನ್

* 16.8 ಮಿಲಿಯನ್ ಕಲರ್ ಬೆಂಬಲಿತ ಸ್ಕ್ರೀನ್

* TFT ಟಚ್ ಸ್ಕ್ರೀನ್ ಡಿಸ್ಪ್ಲೇ

* 5 ಮೆಗಾ ಪಿಕ್ಸಲ್ ಕ್ಯಾಮೆರಾ, 2592 x 1944 ಪಿಕ್ಸಲ್ ರೆಸೊಲ್ಯೂಷನ್

* 512ಎಂಬಿ RAM, 2 ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯ

* 32ಜಿಬಿವರೆಗೂ ಮೆಮೊರಿ ವಿಸ್ತರಣಗೆ ಅವಕಾಶ

ಎಚ್ ಟಿಸಿ ಸೆನ್ಸೇಶನ್  XL 1600mAh ಲೀಥಿಯಂ ಐಯಾನ್ ಬ್ಯಾಟರಿಯೊಂದಿಗೆ 295 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 8 ಗಂಟೆ ಟಾಕ್ ಟೈಂ ನೀಡುತ್ತದೆ. ಮೊಟೊರೊಲಾ ಡೆಫಿ ಪ್ಲಸ್ ಮೊಬೈಲ್ ನ 1700mAh ಲೀಥಿಯಂ ಪಾಲಿಮರ್ ಬ್ಯಾಟರಿ 384 ಗಂಟೆ ಸ್ಟ್ಯಾಂಡ್ ಬೈ ಟೈಂ ಮತ್ತು 7 ಗಂಟೆ ಟಾಕ್ ಟೈಂ ನೀಡುತ್ತದೆ.

ಆಂಡ್ರಾಯ್ಡ್ ಬೆಂಬಲಿತವಾದ ಈ ಎರಡೂ ಮೊಬೈಲ್ ಗಳೂ ಕೂಡ ಗ್ರಾಹಕರಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಎಚ್ ಟಿಸಿ ಸೆನ್ಸೇಶನ್ XL ಬೆಲೆ 30,000ರೂ ಎಂದು ಅಂದಾಜಿಸಲಾಗಿದ್ದು, ಮೊಟೊರೊಲಾ ಡೆಫಿ ಪ್ಲಸ್ ಬೆಲೆ ಸೆನ್ಸೇಶನ್ ಮೊಬೈಲ್ ಗಿಂತ ಅರ್ಧ ಪಟ್ಟು ಹೆಚ್ಚು ಬೆಲೆಯದ್ದಾಗಿದೆ ಎಂದು ತಿಳಿದುಬಂದಿದೆ.

Please Wait while comments are loading...
Opinion Poll

Social Counting