Subscribe to Gizbot

2012ಕ್ಕೆ ಮೊಟೊರೊಲಾ ಕೊಡುಗೆಯ ಫೋನ್ ಯಾವುದು?

Posted By: Super
2012ಕ್ಕೆ ಮೊಟೊರೊಲಾ ಕೊಡುಗೆಯ ಫೋನ್ ಯಾವುದು?

ಹೆಚ್ಚು ಹೆಸರು ಮಾಡಿರುವ ಮೊಟೊರೊಲಾ ಕಂಪನಿಯ ಡ್ರಾಯ್ಡ್ ಮೊಬೈಲ್ ಗಳ ಪಟ್ಟಿಗೆ ಇದೀಗ ಇನ್ನೊಂದು ಮೊಬೈಲ್ ಮೊಬೈಲ್ ಸೇರ್ಪಡೆಯಾಗುತ್ತಿರುವುದಾಗಿ ತಿಳಿದುಬಂದಿದೆ.

ಮೊಟೊರೊಲಾ ಡ್ರಾಯ್ಡ್ 4 ಎಂಬ ಮೊಬೈಲ್ 2012ರ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ. 2012 ರ ಜನವರಿ 10-13ಕ್ಕೆ ಈ ಮೊಟೊರೊಲಾ ಡ್ರಾಯ್ಡ್ 4 ಮೊಬೈಲ್ ಬಿಡುಗಡೆಗೊಳ್ಳಲಿದೆ. ಈ ಮೊಟೊರೊಲಾ ಫೋನ್ ಸ್ಲೈಡಿಂಗ್ ಫೋನ್ ಮಾದರಿಯಲ್ಲಿದ್ದು, 1.2 GHz ಡ್ಯೂಯಲ್ ಕೋರ್ ಪ್ರೊಸೆಸರ್ ನಿಂದ ಕಾರ್ಯ ನಿರ್ವಹಿಸಲಿದೆ.

ಮೊಟೊರೊಲಾ ಡ್ರಾಯ್ಡ್ 4 ಮೊಬೈಲ್ ವಿಶೇಷತೆ:

* 4 ಇಂಚಿನ ಡಿಸ್ಪ್ಲೇ, qHD ಡಿಸ್ಪ್ಲೇ ರೆಸೊಲ್ಯೂಷನ್

* ಪೂರ್ಣ ಕ್ವೆರ್ಟಿ ಕೀ ಬೋರ್ಡ್

* 1 ಜಿಬಿ ಸಿಸ್ಟಮ್ ಮೆಮೊರಿ

* 16 ಜಿಬಿ ಶೇಖರಣಾ ಮೆಮೊರಿ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

ಮೊಟೊರೊಲಾ ಡ್ರಾಯ್ಡ್ ಮೊಬೈಲ್ ಗಳು ದೊಡ್ಡ ಸ್ಕ್ರೀನ್ ಹೊಂದಿರುವುದಕ್ಕೆ ವಿಶೇಷವೆನಿಸಿದ್ದು, ಈ ಮೊಬೈಲ್ ಕೂಡ ಈ ಅದರಿಂದ ಹೊರತಾಗಿಲ್ಲ. ಅಮೊಲೆಡ್ ಸ್ಕ್ರೀನ್ ನೊಂದಿಗೆ ಪೂರ್ಣ ಕ್ವೆರ್ಟಿ ಕೀ ಪ್ಯಾಡ್ ಉತ್ತಮ ಟೈಪಿಂಗ್ ಅನುಭವವನ್ನು ಬಳಕೆದಾರರಿಗೆ ನೀಡುತ್ತದೆ.

ಮೊಟೊರೊಲಾ ಡ್ರಾಯ್ಡ್ 4 ಬೆಲೆಯನ್ನೂ ಕಂಪನಿ ಇನ್ನೂ ನಿಗದಿ ಪಡಿಸಿಲ್ಲ. ಮುಂದಿನ ವರ್ಷದ ಆರಂಭದಲ್ಲಿ ಈ ಮೊಬೈಲಿನ ಬೆಲೆ ಮತ್ತು ಇನ್ನಿತರ ವಿವರಗಳು ನಿಮಗೆ ದೊರೆಯಲಿವೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot