Home
ಮೊಬೈಲ್

ದೊಡ್ಡ ಬೆಲೆ ಕುಸಿತ! 4000 ಉಳಿತಾಯ.. 50MP ಕ್ಯಾಮೆರಾ, 5000mAh ಬ್ಯಾಟರಿ.. ಈ Motorola ಫೋನಿಗೆ ಭರ್ಜರಿ ಆಫರ್‌

ಮೊಟೊರೊಲಾ (Motorola) ಕಂಪನಿಯ ಎಡ್ಜ್ ಸರಣಿಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿವೆ. ಈ ಪೈಕಿ ಮೊಟೊರೊಲಾ ಎಡ್ಜ್‌ 50 (Motorola Edge 50) ಅತ್ಯುತ್ತಮ ವೈಶಿಷ್ಟ್ಯಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಈ ಮೊಬೈಲ್‌ ಸ್ನ್ಯಾಪ್‌ಡ್ರಾಗನ್‌ 7 ಜೆನ್‌ 1 ಪ್ರೊಸೆಸರ್‌ ಹೊಂದಿದೆ. ಕರ್ವ್ಡ್‌ ಡಿಸ್ಪ್ಲೇ ಪಡೆದಿದೆ. ಇದೀಗ, ಈ ಮೊಬೈಲ್‌ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಬೆಲೆ ಇಳಿಕೆ ಕಂಡಿದೆ. ಮೊಟೊರೊಲಾ ಪ್ರಿಯರು ಅಚ್ಚರಿ ಪಡುವಂತೆ ಆಗಿದೆ.

ಹೌದು, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಮೊಟೊರೊಲಾ ಎಡ್ಜ್‌ 50 ಫೋನ್ ಶೇ.27 ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಮಾರಾಟವಾಗುತ್ತಿದೆ. ಈ ಮೊಬೈಲ್‌ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ 32 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಇದೆ. ಹಾಗೆಯೇ 6.7 ಇಂಚಿನ ಡಿಸ್ಪ್ಲೇ, 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್‌ ಒಳಗೊಂಡಿದೆ. ಇನ್ನುಳಿದಂತೆ ಮೊಟೊರೊಲಾ ಎಡ್ಜ್‌ 50 ಫೋನಿನ ಹೊಸ ಬೆಲೆ ಮತ್ತು ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿ.

 4000 ಉಳಿತಾಯ! 50MP ಕ್ಯಾಮೆರಾ, 5000mAh ಬ್ಯಾಟರಿ.. ಅದೂ Motorola ಫೋನ್

ಮೊಟೊರೊಲಾ ಎಡ್ಜ್‌ 50 ರಿಯಾಯಿತಿ

ಮೊಟೊರೊಲಾ ಎಡ್ಜ್ 50 ಫೋನಿನ 8GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 27,999 ರೂ. ಆಗಿದೆ. ಪ್ರಸ್ತುತ, ನೀವು ಫ್ಲಿಪ್‌ಕಾರ್ಟ್‌ನಲ್ಲಿ ಈ ಮೊಬೈಲ್ ಅನ್ನು 23,999 ರೂ.ಗೆ ಖರೀದಿಸಬಹುದು. ಅಂದರೆ, ನೀವು 4,000 ರೂ.ಗಳ ರಿಯಾಯಿತಿಯ ಲಾಭವನ್ನು ಪಡೆಯಬಹುದು. ಬಿಡುಗಡೆಯಾದ ಕೇವಲ ಆರು ತಿಂಗಳಲ್ಲಿ ಈ ಫೋನಿನ ಬೆಲಕೆ ಇಳಿಕೆಯಾಗಿದೆ.

ಫ್ಲಿಪ್‌ಕಾರ್ಟ್ ಆಕ್ಸೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಖರೀದಿಸಿದರೆ, ನೀವು ಶೇ.5 ರಷ್ಟು ಕ್ಯಾಶ್‌ಬ್ಯಾಕ್ ಸಹ ಪಡೆಯಬಹುದು. ಇದರ ಜೊತೆಗೆ, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್‌ಗಳಲ್ಲಿ ಗರಿಷ್ಠ 1000 ರೂ.ಗಳ ಡಿಸ್ಕೌಂಟ್ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಜಂಗಲ್ ಗ್ರೀನ್, ಪ್ಯಾಂಟೋನ್ ಪೀಚ್ ಫಜ್ ಮತ್ತು ಕೋಲಾ ಗ್ರೇ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

ಮೊಟೊರೊಲಾ ಎಡ್ಜ್‌ 50 ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಮೊಟೊರೊಲಾ ಎಡ್ಜ್‌ 50 ಸ್ಮಾರ್ಟ್‌ಫೋನ್‌ 6.7 ಇಂಚಿನ ಪೂರ್ಣ ಎಚ್‌ಡಿ ಪ್ಲಸ್‌ ಬಾಗಿದ ಡಿಸ್ಪ್ಲೇ ಹೊಂದಿದೆ. ಇದು 1200 x 2780 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಈ ಡಿಸ್ಪ್ಲೇಯು 144 ಟ್ರೂ ಕಲರ್‌ ಸೌಲಭ್ಯ ಪಡೆದಿದೆ. ಜೊತೆಗೆ 120Hz ರಿಫ್ರೆಶ್ ದರ, 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 2500 ನಿಟ್ಸ್‌ ಬ್ರೈಟ್‌ನೆಸ್‌ ಬೆಂಬಲ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಮೊಟೊರೊಲಾ ಎಡ್ಜ್‌ 50 ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7 ಜೆನ್‌ 1 ಪ್ರೊಸೆಸರ್‌ ಹೊಂದಿದೆ. ಈ ಮೊಟೊರೊಲಾ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ಹಲೋ UI ಓಎಸ್‌ ಜೊತೆಗೆ ಕೆಲಸ ಮಾಡುತ್ತದೆ. ಇದು 8GB RAM + 256GB ಸ್ಟೋರೇಜ್‌ ಆಯ್ಕೆಯನ್ನು ಒಳಗೊಂಡಿದೆ.

ಕ್ಯಾಮೆರಾ ಸೆಟಪ್‌

ಮೊಟೊರೊಲಾ ಎಡ್ಜ್‌ 50 ಮೊಬೈಲ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 13 ಮೆಗಾಪಿಕ್ಸೆಲ್‌ ದ್ವಿತೀಯ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್‌ ತೃತೀಯ ಕ್ಯಾಮೆರಾ ಇವೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಸ್ಮಾರ್ಟ್‌ಫೊನ್ 32 ಮೆಗಾಪಿಕ್ಸೆಲ್‌ ಫ್ರಂಟ್ (ಸೆಲ್ಫಿ ಶೂಟರ್) ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್‌

ಮೊಟೊರೊಲಾ ಎಡ್ಜ್‌ 50 ಸ್ಮಾರ್ಟ್‌ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 68W ಫಾಸ್ಟ್‌ ಟರ್ಬೋ ಚಾರ್ಜಿಂಗ್‌ ಸೌಲಭ್ಯ ಒದಗಿಸಲಾಗಿದೆ. ಜೊತೆಗೆ 15W ವೈರ್‌ಲೆಸ್ ಮತ್ತು 5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ ಸೌಲಭ್ಯವೂ ಇದೆ.

Best Mobiles in India

English summary
Motorola Edge 50 Available With Rs 4000 discount on flipkart: check price, offer, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+