Motorola Edge 50 ಲಾಂಚ್‌ಗೆ ಡೇಟ್ ಫಿಕ್ಸ್.. ವಿನ್ಯಾಸ, ಫೀಚರ್ಸ್ ಲೀಕ್: ಬೆಲೆ ಎಷ್ಟು?
Motorola Edge 50 India Launch: ಮೊಟೊರೊಲಾ ತನ್ನ ಎಡ್ಜ್ ಸರಣಿಯಲ್ಲಿ ನಾಲ್ಕನೇ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇತ್ತೀಚೆಗೆ Motorola Edge 50 Pro, Edge 50 Ultra ಮತ್ತು Edge 50 Fusion ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದೀಗ, Motorola Edge 50 ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಿದೆ. ಇದು ಕಳೆದ ವರ್ಷದ Motorola Edge 40 ಫೋನಿಗೆ ಉತ್ತರಾಧಿಕಾರಿಯಾಗಿ ಬರುವ ನಿರೀಕ್ಷೆಯಿದೆ. ಈ ಪೋನಿನ ಬೆಲೆ ಎಷ್ಟಿರಲಿದೆ? ಯಾವೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ? ಬಿಡುಗಡೆ ಯಾವಾಗ? ಎನ್ನುವುದನ್ನು ತಿಳಿಯೋಣ ಬನ್ನಿ.
ಮೊಟೊರೊಲಾ ಎಡ್ಜ್ 50 ಫೋನ್ TDRA, FCC, ಮತ್ತು EEC ಸೇರಿದಂತೆ ಹಲವಾರು ಪ್ರಮಾಣೀಕರಣ ಸೈಟ್‌ಗಳಲ್ಲಿ ಕಾಣಿಸಿಕೊಂಡಿತ್ತು. MySmartPrice ಮಾದರಿ ಸಂಖ್ಯೆ XT2407-3 ನೊಂದಿಗೆ BIS ವೆಬ್‌ಸೈಟ್‌ನಲ್ಲಿ ಗುರುತಿಸಿಕೊಂಡಿತ್ತು. ಇದೀಗ ಮೊಟೊರೊಲಾ ಕಂಪನಿಯೇ ಅಧಿಕೃತವಾಗಿ ಈ ಫೋನಿನ ಬಿಡುಗಡೆ ದಿನಾಂಕ ಮತ್ತು ವೈಶಿಷ್ಟ್ಯಗಳನ್ನು ದೃಢಪಡಿಸಿದೆ. ಇದು 68W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿರಲಿದೆ. ಮೊಟೊರೊಲಾದ ಹಲೋ UI ಜೊತೆಗೆ ಆಂಡ್ರಾಯ್ಡ್ 14 ಅನ್ನು ರನ್ ಮಾಡುತ್ತದೆ.

Motorola Edge 50 ಬಿಡುಗಡೆ ಮತ್ತು ಲಭ್ಯತೆ
ಮೊಟೊರೊಲಾ ಎಡ್ಜ್ 50 ಭಾರತದಲ್ಲಿ ಆಗಸ್ಟ್ 1 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. Flipkart, Motorola India ವೆಬ್‌ಸೈಟ್ ಮತ್ತು ಪ್ರಮುಖ ಆಫ್‌ಲೈನ್ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪನಿಯು ಎಕ್ಸ್ ಖಾತೆಯ ಪೋಸ್ಟ್‌ನಲ್ಲಿ ದೃಢಪಡಿಸಿದೆ.
ಫೋನಿನ ವಿನ್ಯಾಸ, ಬಣ್ಣಗಳ ಆಯ್ಕೆ ಮತ್ತು ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸುವ ಫ್ಲಿಪ್‌ಕಾರ್ಟ್ ಮೈಕ್ರೋಸೈಟ್ ಸಹ ಲೈವ್ ಆಗಿದೆ. ಇದು ಮೊಟೊರೊಲಾ ಎಡ್ಜ್ 50 ಪ್ರೊಗೆ ಹೋಲುವ ವಿನ್ಯಾಸವನ್ನು ಹೊಂದಿದೆ. ಮೊಟೊರೊಲಾ ಎಡ್ಜ್ 50 ಟ್ರಿಪಲ್ ಕ್ಯಾಮೆರಾ ಘಟಕದೊಂದಿಗೆ ಕಂಡುಬರುತ್ತದೆ. ಇದು ಜಂಗಲ್ ಗ್ರೀನ್ ಮತ್ತು ಪ್ಯಾಂಟೋನ್ ಪೀಚ್ ಫಜ್ ಮತ್ತು ಕೋಲಾ ಗ್ರೀನ್ ಎಂಬ ಮೂರು ಬಣ್ಣಗಳಲ್ಲಿ ಲಾಂಚ್ ಆಗಲಿದೆ ಎಂದು ಖಚಿತಪಡಿಸಲಾಗಿದೆ.
Motorola Edge 50 ನಿರೀಕ್ಷಿತ ಫೀಚರ್ಸ್‌ಗಳೇನು?
ಡಿಸ್ಪ್ಲೇ: ಇದು 6.55-ಇಂಚಿನ FHD+ 3D ಕರ್ವ್ಡ್ ಪೋಲೆಡ್ ಡಿಸ್ಪ್ಲೇ ಹೊಂದಿರಲಿದೆ. ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು 1,200nits ಗರಿಷ್ಠ ಬ್ರಟ್‌ನೆಸ್ ಒಳಗೊಂಡಿದೆ. ಈ ಫೋನ್ ಈಗಾಗಲೇ ಬಿಡುಗಡೆಯಾಗಿರುವ Motorola Edge 50 Pro, Edge 50 Ultra ಮತ್ತು Edge 50 Fusion ಮಾದರಿಗಳಿಗೆ ಸೇರುವ ಸಾಧ್ಯತೆಯಿದೆ. ಇದು ಕಳೆದ ವರ್ಷದ Motorola Edge 40 ಸ್ಮಾರ್ಟ್‌ಫೋನ್‌ಗಿಂತ ಅಪ್ಡೇಟ್‌ಗಳನ್ನು ಒಳಗೊಂಡಿರುವ ಸಾಧ್ಯತೆಯಿದೆ.
ಪ್ರೊಸೆಸರ್: ಈ ಫೋನ್ 4nm ಸ್ನಾಪ್‌ಡ್ರಾಗನ್ 7 Gen 1 SoC ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. 8GB LPDDR4X RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಫೋನ್ ಮೂರು ವರ್ಷಗಳ OS ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳ ಭದ್ರತಾ ನವೀಕರಣಗಳನ್ನು ಬೆಂಬಲಿಸುತ್ತದೆ.

ಕ್ಯಾಮೆರಾ: ಇದು Moto AI ವೈಶಿಷ್ಟ್ಯಗಳ ಬೆಂಬಲದೊಂದಿಗೆ 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಕ್ಯಾಮೆರಾ ಘಟಕವು 10-ಮೆಗಾಪಿಕ್ಸೆಲ್ ಟೆಲಿಫೋಟೋ ಶೂಟರ್ ಮತ್ತು ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಜೋಡಿಸಲಾದ 13-ಮೆಗಾಪಿಕ್ಸೆಲ್ ಸಂವೇದಕವನ್ನು ಸಹ ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 32MP ಸೆಲ್ಫಿ ಕ್ಯಾಮೆರಾ ಇರಲಿದೆ.
ಬ್ಯಾಟರಿ: ಮೊಟೊರೊಲಾ ಎಡ್ಜ್ 50 5,000mAh ಬ್ಯಾಟರಿ ಬ್ಯಾಕಪ್ ಹೊಂದಿರುವ ನಿರೀಕ್ಷೆಯಿದೆ. 68W ವೈರ್ಡ್ ಟರ್ಬೋಪವರ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಇರಲಿದೆ. ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಮತ್ತು MIL-810H ಪ್ರಮಾಣೀಕರಣದೊಂದಿಗೆ ಬರುತ್ತದೆ. ಇದು ಇನ್-ಡಿಸ್ಪ್ಲೇ ಫಿಂಗಪ್ರಿಂಟ್ ಸಂವೇದಕವನ್ನು ಹೊಂದಿರುತ್ತದೆ.


Click it and Unblock the Notifications








