Home
ಮೊಬೈಲ್

Motorola: ಶೀಘ್ರದಲ್ಲೇ ಹೊಸ ಫೋನ್ ಎಂಟ್ರಿ: 50MP ಕ್ಯಾಮೆರಾ, 4,400mAh ಬ್ಯಾಟರಿ.. ಬೆಲೆ ಎಷ್ಟು?

ಭಾರತೀಯ ಮಾರುಕಟ್ಟೆಯಲ್ಲಿ ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳ ಹಾವಳಿ ಜೋರಾಗಿದೆ. ಇತ್ತೀಚೆಗೆ Motorola Edge 50 Pro, Edge 50 Ultra ಮತ್ತು Edge 50 Fusion ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ Motorola Edge 50 ಅನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸುವ ಸಾಧ್ಯತೆಯಿದೆ. TDRA, FCC, ಮತ್ತು EEC ಸೇರಿದಂತೆ ಹಲವಾರು ಪ್ರಮಾಣೀಕರಣ ಸೈಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್ ಕಾಣಿಸಿಕೊಂಡಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ವೆಬ್‌ಸೈಟ್‌ನಲ್ಲಿ ವರದಿಯಾಗಿರುವಂತೆ ಇದು ಆದಷ್ಟು ಬೇಗ ಭಾರತಕ್ಕೆ ಎಂಟ್ರಿ ಕೊಡಲಿದೆ. Motorola Edge 50 ಕಳೆದ ವರ್ಷ ರಿಲೀಸ್ ಆದ Motorola Edge 40ಗೆ ಉತ್ತರಾಧಿಕಾರಿಯಾಗಿ ಬರುವ ನಿರೀಕ್ಷೆಯಿದೆ.

Motorola Edge 50 ಮೊಬೈಲ್ MySmartPrice ಮಾದರಿ ಸಂಖ್ಯೆ XT2407-3 ನೊಂದಿಗೆ BIS ವೆಬ್‌ಸೈಟ್‌ನಲ್ಲಿ ಗುರುತಿಸಿಕೊಂಡಿದೆ. ಫೋನ್‌ನ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ ಮತ್ತು ಮುಂಬರುವ ವಾರದಲ್ಲಿ ಅಥವಾ ತಿಂಗಳಿನಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ ಎಂದು ಸೂಚಿಸುತ್ತದೆ. ಆದಾಗ್ಯೂ, ಮೊಟೊರೊಲಾ ಇನ್ನೂ ಅಧಿಕೃತವಾಗಿ ಈ ಫೋನ್‌ ಕುರಿತು ವಿವರಗಳನ್ನು ಬಹಿರಂಗಪಡಿಸಿಲ್ಲ. ಹಾಗಿದ್ರೆ, ಈ ಪೋನ್‌ ಏನೆಲ್ಲಾ ವಿಶೇಷತೆಗಳನ್ನು ಹೊಂದಿರಲಿದೆ? ಬೆಲೆ ಎಷ್ಟಿರಲಿದೆ? ಅನ್ನೋದನ್ನು ತಿಳಿಯೋಣ ಬನ್ನಿ.

Motorola Edge 50 ಫೀಚರ್ಸ್‌ ಲೀಕ್! ಯಾವಾಗ ಲಾಂಚ್?

Motorola Edge 50 ನಿರೀಕ್ಷಿತ ಫೀಚರ್ಸ್‌ಗಳೇನು?

US ಫೆಡರಲ್ ಕಮ್ಯುನಿಕೇಷನ್ಸ್ ಕಮಿಷನ್ (FCC) ವೆಬ್‌ಸೈಟ್‌ನಲ್ಲಿಯೂ ಕೂಡ ಇದೇ XT2407-3 ಮಾದರಿ ಸಂಖ್ಯೆಯೊಂದಿಗೆ ಕಾಣಿಸಿಕೊಂಡಿದೆ. ಅದರಂತೆ, ಇದು 68W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದು ಮೊಟೊರೊಲಾದ ಹಲೋ UI ಜೊತೆಗೆ ಆಂಡ್ರಾಯ್ಡ್ 14 ಅನ್ನು ಸಹ ರನ್ ಮಾಡುತ್ತದೆ. ಉಳಿದಂತೆ ಈ ಫೋನ್ 5G, ಬ್ಲೂಟೂತ್, GPS, NFC ಮತ್ತು Wi-Fi 6 ಸಂಪರ್ಕವನ್ನು ನೀಡುತ್ತದೆ ಎಂದು ಪಟ್ಟಿ ತೋರಿಸುತ್ತದೆ.

Motorola Edge 40ಗಿಂತ ಅಪ್ಡೇಟ್‌

ಇದು 6.55-ಇಂಚಿನ FHD+ 3D ಕರ್ವ್ಡ್ ಪೋಲೆಡ್ ಡಿಸ್ಪ್ಲೇ ಜೊತೆಗೆ 144Hz ರಿಫ್ರೆಶ್ ರೇಟ್ ಮತ್ತು 1,200 nitsನ ಗರಿಷ್ಠ ಬ್ರಟ್‌ನೆಸ್‌ ಅನ್ನು ಹೊಂದಿದೆ. Motorola Edge 50 ಈಗಾಗಲೇ ದೇಶದಲ್ಲಿ ಬಿಡುಗಡೆಯಾಗಿರುವ Motorola Edge 50 Pro, Edge 50 Ultra ಮತ್ತು Edge 50 Fusion ಮಾದರಿಗಳಿಗೆ ಸೇರುವ ಸಾಧ್ಯತೆಯಿದೆ. ಇದು ಕಳೆದ ವರ್ಷದ Motorola Edge 40 ಸ್ಮಾರ್ಟ್‌ಫೋನ್‌ಗಿಂತ ಅಪ್ಡೇಟ್‌ಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ.

50MP ಮುಖ್ಯ ಕ್ಯಾಮೆರಾ, 32MP ಸೆಲ್ಫಿ ಶೂಟರ್

ಈ ಮೊಬೈಲ್ MediaTek ಡೈಮೆನ್ಸಿಟಿ 8020 SoC ಪ್ರೊಸೆಸರ್ ಮೂಲಕ ಕೆಲಸ ನಿರ್ವಹಿಸಲಿದೆ. 8GB LPDDR4X RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಕ್ಯಾಮೆರಾ ಸೆಟಪ್‌ ಬಗ್ಗೆ ಹೇಳುವುದಾದರೆ, 50MP ಡ್ಯುಯಲ್-ಕ್ಯಾಮೆರಾ ಸೆಟಪ್ ಮತ್ತು 32MP ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಇದೆ. ಮೊದಲೇ ಹೇಳಿದಂತೆ, ಈ ಫೋನ್‌ 68W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 4,400 mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ.

Motorola Edge 40 ಬೆಲೆ ಎಷ್ಟು?

ಪ್ರಸ್ತುತ Motorola Edge 40 ದೇಶದಲ್ಲಿ 26,999 ರೂ. ಬೆಲೆಯನ್ನು ಹೊಂದಿದೆ. ಇದು 8GB RAM + 256GB ಸ್ಟೋರೇಜ್‌ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಇದು 144Hz ರಿಫ್ರೆಶ್ ರೇಟ್‌ನೊಂದಿಗೆ 6.55-ಇಂಚಿನ ಪೂರ್ಣ-HD+ (1,080 x 2,400 ಪಿಕ್ಸೆಲ್‌ಗಳು) ಪೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8020 5G ಪ್ರೊಸೆಸರ್ ಹೊಂದಿದೆ. 8GB LPDDR4x RAM ಮತ್ತು USF 253.GBಯ ಸ್ಟೋರೇಜ್‌ ಪಡೆದಿದೆ.

50MP ಕ್ಯಾಮೆರಾ, 4,400mAh ಬ್ಯಾಟರಿ ಬ್ಯಾಕಪ್

ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದಿಂದ ನೇತೃತ್ವದ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ. ಮತ್ತು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಮೊಟೊರೊಲಾ ಎಡ್ಜ್ 40 68W ಟರ್ಬೋಪವರ್ ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,400mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಒಟ್ಟಾರೆ, ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು ತನ್ನ ವಿಭಿನ್ನ ಹಾಗೂ ಹೊಸ ಫೀಚರ್ಸ್‌ನೊಂದಿಗೆ ಮೊಬೈಲ್ ಪ್ರಿಯರನ್ನು ಸೆಳೆಯುವಲ್ಲಿ ಸಕ್ಸಸ್ ಆಗಿವೆ. ಕಂಪನಿಯು ಈಗಾಗಲೇ Motorola Edge 50 ಪ್ರೊ, Edge 50 ಫ್ಯೂಷನ್ ಮತ್ತು Edge 50 ಅಲ್ಟ್ರಾವನ್ನು ಭಾರತೀಯ ಮಾರುಕಟ್ಟೆಗಳಲ್ಲಿ ಅನಾವರಣಗೊಳಿಸಿದೆ. ಇದೀಗ, ಶೀಘ್ರದಲ್ಲೇ 'Motorola Edge' ಸರಣಿಯ ಹೊಚ್ಚ ಹೊಸ Motorola Edge 50 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೆ ಸಜ್ಜಾಗಿದೆ.

Best Mobiles in India

English summary
Motorola Edge 50 specifications hinted by different certification sites:Launch Likely Soon, what to expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+