Home
ಮೊಬೈಲ್

Motorola: ಬರ್ತಿದೆ ಹೊಸ ಫೋನ್! ಬಿಡುಗಡೆ ದಿನಾಂಕ ಘೋಷಣೆ; ವಿಶೇಷತೆಗಳೇನು?

ಮೊಟೊರೊಲಾ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಮೊಟೊರೊಲಾ ಮತ್ತೊಂದು ಎಡ್ಜ್ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದು ಮೊಟೊರೊಲಾ ಎಡ್ಜ್‌ 50 ನಿಯೋ (Motorola Edge 50 Neo) ಎಂಬ ಹೆಸರಿನೊಂದಿಗೆ ಲಾಂಚ್ ಆಗಲಿದೆ. ಈಗಾಗಲೇ ಎಡ್ಜ್‌ ಸರಣಿಯ ಅಡಿಯಲ್ಲಿ 4 ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದೀಗ, ಮೊಟೊರೊಲಾ ಎಡ್ಜ್‌ 50 ನಿಯೋಗೆ ಸಂಬಂಧಿಸಿದ ಮೈಕ್ರೋಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿದೆ. ಹೊಸ ಫೋನಿನ ಬಿಡುಗಡೆ ದಿನಾಂಕ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ.

ಮೊಟೊರೊಲಾ ಎಡ್ಜ್‌ 50 ನಿಯೋ ಬಿಡುಗಡೆಗೂ ಮೊದಲೇ ಕೆಲವು ಫೀಚರ್ಸ್‌ಗಳು ಲಭ್ಯವಾಗಿದೆ. ಈ ಫೋನ್ 6.4 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಇದು 8GB RAM + 256GB ಸ್ಟೋರೇಜ್‌ ಒಳಗೊಂಡಿರುತ್ತದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 68W ವೇಗದ ಚಾರ್ಜಿಂಗ್‌ ಸೌಲಭ್ಯದೊಂದಿಗೆ 4310mAh ಬ್ಯಾಟರಿ, IP68 ರೇಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ.

Motorola: ಬರ್ತಿದೆ ಹೊಸ ಫೋನ್! ಬಿಡುಗಡೆ ದಿನಾಂಕ ಘೋಷಣೆ; ವಿಶೇಷತೆಗಳೇನು?

ಮೊಟೊರೊಲಾ ಎಡ್ಜ್‌ 50 ನಿಯೋ ಭಾರತದ ಬಿಡುಗಡೆ ದಿನಾಂಕ

ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿನ ಟೀಸರ್ ಪ್ರಕಾರ, ಮೊಟೊರೊಲಾ ಎಡ್ಜ್ 50 ನಿಯೋ ಸೆಪ್ಟೆಂಬರ್ 16 ರಂದು ಬಿಡುಗಡೆಯಾಗಲಿದೆ. ಈ ಮೊಬೈಲ್ ಸಸ್ಯಾಹಾರಿ ಚರ್ಮದ ಮುಕ್ತಾಯದ ವಿನ್ಯಾಸವನ್ನು ಹೊಂದಿರುತ್ತದೆ ಎಂದು ಕಂಪನಿ ದೃಢಪಡಿಸಿದೆ. ಈ ಫೋನ್ IP68 MIL810H ಮಿಲಿಟರಿ ದರ್ಜೆಯ ಪ್ರಮಾಣೀಕೃತ ರೇಟಿಂಗ್‌ ಅನ್ನು ಹೊಂದಿದೆ. ಈ ಫೋನ್‌ ನಾಟಿಕಲ್ ಬ್ಲೂ, ಲ್ಯಾಟೆ, ಗ್ರಿಸೈಲ್ ಮತ್ತು ಪೊಯಿನ್ಸಿಯಾ ಬಣ್ಣಗಳ ಆಯ್ಕೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಮೊಟೊರೊಲಾ ಎಡ್ಜ್‌ 50 ನಿಯೋ ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಮೊಟೊರೊಲಾ ಎಡ್ಜ್‌ 50 ನಿಯೋ ಸ್ಮಾರ್ಟ್‌ಫೋನ್ 6.4 ಇಂಚಿನ ಸೂಪರ್ ಹೆಚ್‌ಡಿ LTPO ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120 Hz ರಿಫ್ರೆಶ್ ದರ, 3,000 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಹೊಂದಿರುತ್ತದೆ. ಈ ಮೊಬೈಲ್ ಡಿಸ್ಪ್ಲೇಯು ಸಮತಟ್ಟಾಗಿ ಇರುತ್ತದೆ ಮತ್ತು ಕನಿಷ್ಠ ಬೆಜೆಲ್‌ಗಳೊಂದಿಗೆ ಪಂಚ್ ಹೋಲ್ ಕಟೌಟ್ ಅನ್ನು ಹೊಂದಿರುತ್ತದೆ.

ಪ್ರೊಸೆಸರ್: ಕಂಪನಿಯು ಈ ಫೋನನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್‌ನೊಂದಿಗೆ ಬಿಡುಗಡೆ ಮಾಡಲಿದೆ. ಇದು ವಿವಿಧ ಕಾರ್ಯಗಳಿಗೆ ಸಮತೋಲಿತ ಕಾರ್ಯಕ್ಷಮತೆಯನ್ನು ಒದಗಿಸುವ ಸಮರ್ಥ ಪ್ರೊಸೆಸರ್ ಆಗಿದೆ. ಇದರ ಸಹಾಯದಿಂದ ಬಳಕೆದಾರರು ಸುಗಮ ಅನುಭವವನ್ನು ಪಡೆಯಬಹುದು.

ಸ್ಟೋರೇಜ್‌: ಮೊಟೊರೊಲಾ ಎಡ್ಜ್‌ 50 ನಿಯೋ ಫೋನ್ 8 GB LPDDR4X RAM ಮತ್ತು 256 GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಅನ್ನು ಒಳಗೊಂಡಿರಲಿದೆ. ಈ ಎಡ್ಜ್ 50 ನಿಯೋ ಮೊಬೈಲ್ ಆಂಡ್ರಾಯ್ಡ್ 14 ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ, 5 ವರ್ಷಗಳ ಭದ್ರತಾ ನವೀಕರಣಗಳು ಮತ್ತು 5 OS ನವೀಕರಣಗಳು ಸಹ ಲಭ್ಯವಿರುತ್ತವೆ.

ಕ್ಯಾಮೆರಾ: ಮೊಟೊರೊಲಾ ಎಡ್ಜ್‌ 50 ನಿಯೋ ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ ಹೊಂದಿರುತ್ತದೆ. ಇದು ಸೋನಿ LYTIA 700C ಸಂವೇದಕದೊಂದಿಗೆ 50 ಮೆಗಾಪಿಕ್ಸೆಲ್ MP ಅಲ್ಟ್ರಾ ಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲಿದೆ. ಜೊತೆಗೆ, 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ. ಇದಿಷ್ಟೇ ಅಲ್ಲ, ಫೋನ್ ಎಐ ಮ್ಯಾಜಿಕ್ ಎರೇಸರ್, ಎಐ ಫೋಟೋ ಅನ್‌ಬ್ಲರ್ ಮತ್ತು ಎಐ ಮ್ಯಾಜಿಕ್ ಎಡಿಟರ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಈ ಫೋನಿನಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 4K ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿರುವ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಬ್ಯಾಟರಿ: ಹೊಸ ಮೊಟೊರೊಲಾ ಮೊಬೈಲ್ 4310mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ. ಇದನ್ನು ಚಾರ್ಜ್ ಮಾಡಲು 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 68W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗುತ್ತದೆ.

ಇತರೆ ವೈಶಿಷ್ಟ್ಯಗಳು: ಈ ಫೋನ್‌ನಲ್ಲಿ ಎಐ ಸ್ಟೈಲ್ ಸಿಂಕ್ ಮತ್ತು ಎಐ ಮ್ಯಾಜಿಕ್ ಕ್ಯಾನ್ವಾಸ್‌ ವೈಶಿಷ್ಟ್ಯ ಇರುತ್ತದೆ. ಇದು ವಾಲ್‌ಪೇಪರ್‌ಗಳು ಮತ್ತು ಚಿತ್ರಗಳನ್ನು ರಚಿಸಲು ಸಹಾಯ ಮಾಡುತ್ತದೆ. ಈ ಫೋನ್ ಡ್ಯುಯಲ್ ಸಿಮ್ 5G, ವೈಫೈ 6E, ಬ್ಲೂಟೂತ್ 5.3 ಸೇರಿದಂತೆ ಮುಂತಾದ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಬರಲಿದೆ.

Best Mobiles in India

English summary
Motorola Edge 50 Neo india launch date confirmed: check Price, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+