Home
ಮೊಬೈಲ್

ಶೀಘ್ರದಲ್ಲೇ ಭಾರತದಲ್ಲಿ Motorola Edge 50 Ultra ಸ್ಮಾರ್ಟ್‌ಫೋನ್ ಲಾಂಚ್ ! ಫೀಚರ್ಸ್‌ ಏನಿರಲಿವೆ ?

ಮೊಟೊರೊಲಾ (Motorola) ಮೊಬೈಲ್‌ಗಳು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿವೆ. ವಿಭಿನ್ನ ಶೈಲಿಯ ಫೀಚರ್ಸ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಬಹಳ ದೊಡ್ಡ ಬೇಡಿಕೆ ಇದೆ. ಜನರು ಕೂಡ ಈ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುವುದನ್ನೇ ಕಾದು ಕುಳಿತು ಖರೀದಿಸಲು ಮುಗಿಬೀಳುವುದನ್ನು ನಾವು ನೋಡಿದ್ದೇವೆ. ಇದೀಗ ಮೊಟೊರೊಲಾ ಸಂಸ್ಥೆ ಭಾರತದಲ್ಲಿ ಮೊಟೊರೊಲಾ ಎಡ್ಜ್‌ 50 ಅಲ್ಟ್ರಾ (Motorola Edge 50 Ultra) ಸ್ಮಾರ್ಟ್‌ಫೋನ್‌ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದೆ.

ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಬಹಳ ದಿನಗಳ ನಿರೀಕ್ಷೆಯ ಬಳಿಕೆ ಅಂತಿಮವಾಗಿ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಬರಲಿರುವ ಪ್ರಮುಖ ಫೋನ್ ಕುರಿತು ಈಗಾಗಲೇ ಹಲವು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ Motorola Edge 50 Ultra ಮೊಬೈಲ್‌ನಿಂದ ಗ್ರಾಹಕರು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶೀಘ್ರದಲ್ಲೇ ಭಾರತದಲ್ಲಿ Motorola Edge 50 Ultra ಸ್ಮಾರ್ಟ್‌ಫೋನ್ ಲಾಂಚ್ !

ಭಾರತದಲ್ಲಿMotorola Edge 50 Ultra ಶೀಘ್ರದಲ್ಲೇ ಬಿಡುಗಡೆ:

ಈ ಸ್ಮಾರ್ಟ್‌ಫೋನ್‌ ಕುರಿತು ಸಂಸ್ಥೆ ಟೀಸರ್ ಅನ್ನು ಹಂಚಿಕೊಂಡಿದ್ದು, ಬಿಡುಗಡೆಗೆ ಸಿದ್ವಾಗಿರುವ ಈ ಫೋನ್ ಬ್ಯಾಕ್‌ ಕ್ಯಾಮೆರಾ ವಿನ್ಯಾಸವನ್ನು ತೋರಿಸಿದೆ. ಈ ಟೀಸರ್ ಸ್ಮಾರ್ಟ್‌ಫೋನ್‌ನ ಹೆಸರನ್ನು ಬಹಿರಂಗಪಡಿಸದಿದ್ದರೂ ಹಿಂಭಾಗದ ವಿನ್ಯಾಸ ಗಮನಿಸಿದರೆ ಅದು ಈ ಹಿಂದೆ ಅನಾವರಣಗೊಳಿಸಿರುವ ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಎಂದು ಖಚಿತಪಡಿಸಿದೆ.

Motorola Edge 50 Ultra ಸ್ಮಾರ್ಟ್‌ಫೋನ್‌ ನಿರೀಕ್ಷೆಗಳೇನು?:

ಮೊಟೊರೊಲಾ ಎಡ್ಜ್ 50 ಅಲ್ಟ್ರಾದ ಭಾರತೀಯ ಮಾದರಿಯು ಜಾಗತಿಕವಾಗಿ ಈಗಾಗಲೇ ಲಭ್ಯವಿರುವ ರೂಪಾಂತರದ ಮಾದರಿಯಲ್ಲೇ, ಅದೇ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂದು ಊಹಿಸಬಹುದು. ಎಡ್ಜ್ 50 ಅಲ್ಟ್ರಾ 1.5K (2,712 x 1,220 ಪಿಕ್ಸೆಲ್‌) ರೆಸಲ್ಯೂಶನ್, 144Hz ರಿಫ್ರೆಶ್ ರೇಟ್ ಮತ್ತು 2,500 nits ಗಳ ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ 6.7 ಇಂಚಿನ P-OLED ಡಿಸ್‌ಪ್ಲೇ ಹೊಂದಿದೆ. ಇದು 16GB ವರೆಗಿನ LPDDR5X RAM ಮತ್ತು 1TB ವರೆಗಿನ UFS 4.0 ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8s Gen 3 SoC ನಿಂದ ಕಾರ್ಯ ನಿರ್ವಹಿಸಲಿದೆ.

ಇದರ ಹೊರತಾಗಿಯೂ Motorola Edge 50 Ultra ಫೋನ್ 125W ವೈಯರ್ಡ್ ಮತ್ತು 50W ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಬೆಂಬಲದ ಜೊತೆಗೆ 4,500 mAh ಬ್ಯಾಟರಿ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ Hello UX ಅನ್ನು ಹೊಂದಿದೆ. ಕ್ಯಾಮೆರಾ ನೋಡುವುದಾದರೆ ಇದು, ಹಿಂಭಾಗದಲ್ಲಿ ಟ್ರಪಲ್ ರಿಯರ್‌ ಕ್ಯಾಮರಾ ಸೆಟಪ್ ಹೊಂದಿದೆ. OIS ಬೆಂಬಲದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ, 3x ಆಪ್ಟಿಕಲ್ ಜೂಮ್‌ನೊಂದಿಗೆ 64MP ಟೆಲಿಫೋಟೋ ಪೆರಿಸ್ಕೋಪ್ ಲೆನ್ಸ್ ಮತ್ತು 122° ಫೀಲ್ಡ್‌ ವೀವ್ ಜೊತೆಗೆ 50MP ಅಲ್ಟ್ರಾವೈಡ್ ಶೂಟರ್ ಸೇರಿದಂತೆ ಟ್ರಿಪಲ್-ಕ್ಯಾಮೆರಾ ಸೆಟಪ್ ಹೊಂದಿದೆ. ಮುಂಭಾಗದಲ್ಲಿ ಈ ಫೋನ್ ಆಟೋಫೋಕಸ್‌ ಜೊತೆಗೆ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ನಿಖರವಾದ ಲಾಂಚ್ ಸಮಯವನ್ನು ಸಂಸ್ಥೆ ಇನ್ನೂ ಬಹಿರಂಗಪಡಿಸಿಲ್ಲ. ಮುಂಬರುವ ದಿನಗಳಲ್ಲಿ ಸಂಸ್ಥೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಯ ಜೊತೆಗೆ ಮೊಬೈಲ್‌ ಅನ್ನು ಬಹಿರಂಗಪಡಿಸಬಹುದು ಎಂದು ನಿರೀಕ್ಷಿಸಬಹುದಾಗಿದೆ. ಬಿಡುಗಡೆಯ ನಂತರ Motorola Edge 50 Ultra ಫೋನ್ ಇತರ ಎಡ್ಜ್ ಸರಣಿಯ ಫೋನ್‌ಗಳಂತೆ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗುವ ಸಾಧ್ಯತೆಗಳಿವೆ ಎಂದು ಊಹಿಸಲಾಗಿದೆ.

Best Mobiles in India

English summary
The company has made it clear that the Motorola Edge 50 Ultra will finally hit the Indian market after a long wait. The upcoming flagship phone has already raised many expectations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+