Home
ಮೊಬೈಲ್

ವಾವ್..! ಒಂದೇ ದಿನ 3 ಸೊಗಸಾದ ಫೋನ್‌ ಲಾಂಚ್; 50MP + 50MP + 32MP ಕ್ಯಾಮೆರಾಗಳು.. ಬೆಲೆಯೂ ಲೀಕ್!

ವಾವ್..! ಒಂದೇ ದಿನ ಎರಡು ಸೊಗಸಾದ ಮೊಟೊರೊಲಾ ಫೋನ್‌ಗಳು ಬಿಡುಗಡೆ. ಇವುಗಳು ಅದ್ಭುತ ಕ್ಯಾಮೆರಾ ಮತ್ತು ಶಕ್ತಿಶಾಲಿ ಬ್ಯಾಟರಿಯೊಂದಿಗೆ ಬರಲಿವೆ. ಹೌದು, ಮೊಟೊರೊಲಾ ತನ್ನ ಅಭಿಮಾನಿಗಳಿಗೆ ಡಬಲ್ ಸಿಹಿಸುದ್ದಿ ನೀಡಿದೆ. ಕಂಪನಿಯು ಈ ತಿಂಗಳು ದೊಡ್ಡ ಲಾಂಚ್ ಈವೆಂಟ್ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ತನ್ನ ಹೊಸ ಮೊಬೈಲ್‌ಗಳನ್ನು ಅನಾವರಣಗೊಳಿಸಲಿದೆ. ವಿಶೇಷವೆಂದರೆ, ಕಂಪನಿಯು ಎರಡು ಫೋನ್‌ಗಳ ಜೊತೆಗೆ ಮತ್ತೊಂದು ಮೊಬೈಲ್‌ ಸಹ ರಿಲೀಸ್ ಮಾಡಲಿದೆ. ಬನ್ನಿ, ಈ ಫೋನ್‌ಗಳ ಬಿಡುಗಡೆ ದಿನಾಂಕ, ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಇತ್ತೀಚೆಗೆ ಮೊಟೊರೊಲಾ ರೇಜರ್ 60 ಅಲ್ಟ್ರಾ (Motorola Razr 60 Ultra), ಮೊಟೊರೊಲಾ ಎಡ್ಜ್ 60 (Motorola Edge 60) ಮತ್ತು ಮೊಟೊರೊಲಾ ಎಡ್ಜ್ 60 ಪ್ರೊ (Motorola Edge 60 Pro) ಬೆಲೆ, ಬಣ್ಣ ಮತ್ತು ಸ್ಟೋರೇಜ್ ಆಯ್ಕೆಗಳ ಬಗ್ಗೆ ಮಾಹಿತಿ ಬಹಿರಂಗವಾಗಿತ್ತು. ಇದೀಗ, ಈ ತಿಂಗಳು ನಡೆಯಲಿರುವ ಕಾರ್ಯಕ್ರಮದಲ್ಲಿ ಮೊಟೊರೊಲಾ ಎಡ್ಜ್ 60 ಪ್ರೊ, ಮೊಟೊರೊಲಾ ರೇಜರ್ 60 ಅಲ್ಟ್ರಾ ಎರಡನ್ನೂ ಲಾಂಚ್ ಮಾಡಲಾಗುವುದು ಎಂದು ದೃಢಪಡಿಸಿದೆ. ಈ ಎರಡು ಮೊಬೈಲ್‌ಗಳ ಜೊತೆಗೆ ವೆನಿಲ್ಲಾ ರೇಜರ್ 60 ಅನ್ನು ಸಹ ಬಿಡುಗಡೆ ಮಾಡಲಾಗುವುದು.

ವಾವ್..! ಒಂದೇ ದಿನ 3 ಫೋನ್‌ ಲಾಂಚ್; ಕ್ಯಾಮೆರಾ, ಬ್ಯಾಟರಿ ಸೂಪರ್.. ಬೆಲೆ ಲೀಕ್!

ಏ.24ಕ್ಕೆ ಬರಲಿವೆ ಹೊಸ ಮೊಬೈಲ್‌ಗಳು

ಮೊಟೊರೊಲಾ ತನ್ನ ಎಕ್ಸ್‌ ಖಾತೆಯಲ್ಲಿ ಕಂಪನಿಯ ಮುಂದಿನ ಬಿಡುಗಡೆ ಕಾರ್ಯಕ್ರಮ ಏಪ್ರಿಲ್ 24 ರಂದು ನಡೆಯಲಿದೆ ಎಂದು ತಿಳಿಸಿದೆ. ಇದಕ್ಕೆ ಸಂಬಂಧಿಸಿದ ಟೀಸರ್‌ಗಳನ್ನು ಕಂಪನಿಯು ಹಂಚಿಕೊಂಡಿದೆ. ಈಗಾಗಲೇ ಪೋಸ್ಟರ್ ಸಹ ವೈರಲ್ ಆಗಿದೆ. ಇದು ಕ್ಲಾಮ್‌ಶೆಲ್ ಶೈಲಿಯ ಮಡಿಸುವ ಫೋನನ್ನು ತೋರಿಸುತ್ತದೆ. ಇದು ಮೊಟೊರೊಲಾ ರೇಜರ್ 60 ಅಲ್ಟ್ರಾ ಆಗಿರಲಿದೆ. ಇನ್ನೊಂದು ಮೊಬೈಲ್ ಮೊಟೊರೊಲಾ ಎಡ್ಜ್ 60 ಪ್ರೊ ಆಗಿರುತ್ತದೆ.

ಮೊಟೊರೊಲಾ ಎಡ್ಜ್ 60 ಮತ್ತು ಎಡ್ಜ್ 60 ಪ್ರೊ ಬೆಲೆ (ಸೋರಿಕೆ)

ಮೊಟೊರೊಲಾ ಎಡ್ಜ್ 60 ಮತ್ತು ಎಡ್ಜ್ 60 ಪ್ರೊ ಪ್ರಮುಖ ವಿಶೇಷತೆಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ವರದಿಯ ಪ್ರಕಾರ, ವೆನಿಲ್ಲಾ ಮೊಟೊರೊಲಾ ಎಡ್ಜ್ 60 ಎರಡು ಬಣ್ಣಗಳಲ್ಲಿ ಬರುತ್ತದೆ. ನೀವು ಜಿಬ್ರಾಲ್ಟರ್ ಸೀ ಬ್ಲೂ ಮತ್ತು ಶ್ಯಾಮ್ರಾಕ್ ಗ್ರೀನ್ ಬಣ್ಣದಲ್ಲಿ ಖರೀದಿಸಬಹುದು. ಈ ಮೊಬೈಲ್ 8GB RAM + 256GB ಸ್ಟೋರೇಜ್ ಹೊಂದಿರಲಿದೆ. ಈ ಫೋನ್ 37,000 ರೂ. ಬೆಲೆಯನ್ನು ಹೊಂದಿರುತ್ತದೆ. ಮೊಟೊರೊಲಾ ಎಡ್ಜ್ 50 ಅನ್ನು ಭಾರತದಲ್ಲಿ 27,999 ರೂ.ಗೆ ಬಿಡುಗಡೆ ಮಾಡಲಾಗಿತ್ತು.

ಮೊಟೊರೊಲಾ ಎಡ್ಜ್ 60 ಪ್ರೊ

ಮೊಟೊರೊಲಾ ಎಡ್ಜ್ 60 ಪ್ರೊ ಫೋನ್ ನೀಲಿ ಮತ್ತು ಹಸಿರು (ವರ್ಡೆ) ಬಣ್ಣಗಳ ಆಯ್ಕೆಗಳನ್ನು ಹೊಂದಿರಲಿದೆ. ಇದಲ್ಲದೆ, ಇದು ನೇರಳೆ ಬಣ್ಣದ ಆಯ್ಕೆಯನ್ನು ಸಹ ಹೊಂದಿರಬಹುದು. ಇದು 12GB RAM + 512GB ಸ್ಟೋರೇಜ್ ಆಯ್ಕೆಯೊಂದಿಗೆ ಬರುತ್ತದೆ. ಮೊಟೊರೊಲಾ ಎಡ್ಜ್ 60 ಪ್ರೊ ಫೋನಿನ ಬೆಲೆ 60,200 ರೂ. ಎಂದು ಹೇಳಲಾಗಿದೆ. ಈ ಹಿಂದೆ ಇದರ ಬೆಲೆ 55,600 ರೂ. ಎಂದು ಹೇಳಲಾಗಿತ್ತು. ಮೊಟೊರೊಲಾ ಎಡ್ಜ್ 50 ಪ್ರೊ ಮೊಬೈಲ್ ಭಾರತದಲ್ಲಿ 31,999 ರೂ. ಬೆಲೆಗೆ ಬಿಡುಗಡೆಯಾಗಿತ್ತು.

ಮೊಟೊರೊಲಾ ರೇಜರ್ 60 ಅಲ್ಟ್ರಾ ಬೆಲೆ (ಸೋರಿಕೆ)

ಮೊಟೊರೊಲಾ ರೇಜರ್ 60 ಅಲ್ಟ್ರಾ ಫೋನಿನ ವಿವರಗಳನ್ನು ಸಹ ಬಹಿರಂಗಪಡಿಸಲಾಗಿದೆ. ಇದು ಕಂಪನಿಯ ಪ್ರೀಮಿಯಂ ಫೋಲ್ಡಬಲ್ ಫೋನ್ ಎಂದು ಹೇಳಲಾಗಿದೆ. ಮೊಟೊರೊಲಾ ರೇಜರ್ 60 ಅಲ್ಟ್ರಾವನ್ನು ಮೌಂಟೇನ್ ಟ್ರಯಲ್ ವುಡ್ ಮತ್ತು ಸ್ಕಾರಬ್ ಗ್ರೀನ್ (ವರ್ಡೆ) ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗುವುದು. ಈ ಫೋನಿನ ಬೆಲೆ 1,24,800 ರೂ. ಎಂದು ಹೇಳಲಾಗಿದೆ. ಇದು 12GB RAM + 512GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಇನ್ನು ಮೊಟೊರೊಲಾ ರೇಜರ್ 50 ಅಲ್ಟ್ರಾ ಮೊಬೈಲ್ ಭಾರತದಲ್ಲಿ 99,999 ರೂ. ಬೆಲೆಗೆ ಬಿಡುಗಡೆಯಾಗಿತ್ತು.

ವಾವ್..! ಒಂದೇ ದಿನ 3 ಫೋನ್‌ ಲಾಂಚ್; ಕ್ಯಾಮೆರಾ, ಬ್ಯಾಟರಿ ಸೂಪರ್.. ಬೆಲೆ ಲೀಕ್!

ಮೊಟೊರೊಲಾ ಎಡ್ಜ್ 60 ಪ್ರೊ ವೈಶಿಷ್ಟ್ಯಗಳು

ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್‌ನೊಂದಿಗೆ ಬರುತ್ತದೆ. ಇದು 6.67 ಇಂಚಿನ 1.5K pOLED ಡಿಸ್ಪ್ಲೇ ಹೊಂದಿದೆ. ಇದು 144Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಇದು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್, 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಮತ್ತು ಮ್ಯಾಕ್ರೋ ವೈಶಿಷ್ಟ್ಯವನ್ನು ಹೊಂದಿರಲಿದೆ. ಇನ್ನು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುತ್ತದೆ. ಹಾಗೆಯೇ 6000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೌಲಭ್ಯ ಇರುತ್ತದೆ.

ಮೊಟೊರೊಲಾ ರೇಜರ್ 60 ಅಲ್ಟ್ರಾ ವೈಶಿಷ್ಟ್ಯಗಳು

ಮೊಟೊರೊಲಾ ರೇಜರ್ 60 ಅಲ್ಟ್ರಾ ಮೊಬೈಲ್ 6.96 ಇಂಚಿನ ಡಿಸ್ಪ್ಲೇ ಮತ್ತು ಹೊರಭಾಗದಲ್ಲಿ 4 ಇಂಚಿನ ಡಿಸ್ಪ್ಲೇ ಹೊಂದಿರಲಿದೆ. ಈ ಡಿಸ್ಪ್ಲೇ ಡಾಲ್ಬಿ ವಿಷನ್ ಬೆಂಬಲ ಮತ್ತು 165Hz ರಿಫ್ರೆಶ್ ದರದೊಂದಿಗೆ ಬರಲಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜೆನ್ ಎಲೈಟ್ ಪ್ರೊಸೆಸರ್ ಹೊಂದಿರಲಿದೆ. ಈ ಮೊಬೈಲ್ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ (ಮುಖ್ಯ + ಟೆಲಿಫೋಟೋ), 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿರಲಿದೆ. ಇದು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಹೊಂದಿದೆ. ಈ ಫೋನ್ 4500mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ಸೌಲಭ್ಯ ಒಳಗೊಂಡಿರಲಿದೆ. ವಿಶೇಷವೆಂದರೆ ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 15 ಓಎಸ್‌ ಜೊತೆಗೆ ಕೆಲಸ ಮಾಡಲಿವೆ.

Best Mobiles in India

English summary
Motorola Edge 60 Pro and Motorola Razr 60 Ultra Launch Date Set for April 24: Expected price, specifications, Features and more Details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+