Home
ಮೊಬೈಲ್

ಫ್ರೆಂಡ್ಸ್‌..! ನಿಮ್ಮ ಗೆಳತಿಗೆ ಕೊಡಿಸಬಹುದು; ಇಂದು ಹೊಸ Motorola ಫೋನ್ ಬಿಡುಗಡೆ.. ಬಜೆಟ್ ಬೆಲೆ, ವಿಶೇಷತೆಗಳೇನು?

ಇಲ್ಲಿ ಕೇಳಿ ಫ್ರೆಂಡ್ಸ್‌..! ನಿಮ್ಮ ಗೆಳತಿಗೆ ಈ ಹೊಸ ಮೊಟೊರೊಲಾ ಕೊಡಿಸಬಹುದು. ಇಂದು ಭಾರತಕ್ಕೆ ಬರುತ್ತಿದೆ 50MP ಸೆಲ್ಫಿ ಕ್ಯಾಮೆರಾ ಹೊಂದಿರುವ ಸೊಗಸಾದ 5G ಫೋನ್! ಹೌದು, ಬಹುನಿರೀಕ್ಷಿತ ಮೊಟೊರೊಲಾ ಎಡ್ಜ್ 60 ಪ್ರೊ (Motorola Edge 60 Pro) ಸ್ಮಾರ್ಟ್‌ಫೋನ್ ಇಂದು (ಏಪ್ರಿಲ್ 30) ಅಧಿಕೃತವಾಗಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಈ ಫೋನ್ ಬಜೆಟ್ ಶ್ರೇಣಿಯಲ್ಲಿ ರಿಲೀಸ್ ಆಗುವುದು ಖಚಿತವಾಗಿದೆ. ಬಿಡುಗಡೆ ಬಳಿಕ ನೀವು, ಫ್ಲಿಪ್‌ಕಾರ್ಟ್‌ ಮೂಲಕ ಖರೀದಿಸಬಹುದು. ಬನ್ನಿ, ನೂತನ ಮೊಟೊರೊಲಾ ಎಡ್ಜ್ 60 ಪ್ರೊ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಮೊಟೊರೊಲಾ ತನ್ನ 'ಎಡ್ಜ್ 60' ಸರಣಿಯಲ್ಲಿ ಮೊಟೊರೊಲಾ ಎಡ್ಜ್ 60 ಪ್ರೊ ಅನ್ನು ಬಿಡುಗಡೆ ಮಾಡುತ್ತಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಎಕ್ಸ್‌ಟ್ರೀಮ್ ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50MP + 50MP + 50MP ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಮೊಬೈಲ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರೊಂದಿಗೆ 6000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್, 12GB RAM + 256GB ಸ್ಟೋರೇಜ್ ಸೇರಿದಂತೆ ಹಲವು ಅತ್ಯುತ್ತಮ ವೈಶಿಷ್ಟ್ಯಗಳಿವೆ.

ಇಂದು ಭಾರತದಲ್ಲಿ Motorola Edge 60 Pro ಬಿಡುಗಡೆ; ಬಜೆಟ್ ಬೆಲೆ, ವಿಶೇಷತೆಗಳೇನು?

ಭಾರತದಲ್ಲಿ ಮೂರನೇ ಫೋನ್ ಬಿಡುಗಡೆ ವಿವರ

ಕಂಪನಿಯು ತನ್ನ 'ಎಡ್ಜ್ 60' ಸರಣಿಯಲ್ಲಿ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದೀಗ, ಈ ಮೂರನೇ ಫೋನನ್ನು ರಿಲೀಸ್ ಮಾಡಲು ಸಿದ್ಧವಾಗಿದೆ. ಹೌದು, ಈಗಾಗಲೇ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮತ್ತು ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಮೊಟೊರೊಲಾ ಎಡ್ಜ್ 60 ಪ್ರೊ ಸಹ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಈ ಫೋನ್ ಸ್ಪಾರ್ಕ್ಲಿಂಗ್ ಗ್ರೇಪ್, ಶ್ಯಾಡೋ ಗ್ರೀನ್ ಮತ್ತು ಡ್ಯಾಜ್ಲಿಂಗ್ ಬ್ಲೂ ಬಣ್ಣಗಳಲ್ಲಿ ಬರುತ್ತದೆ.

ಮೊಟೊರೊಲಾ ಎಡ್ಜ್ 60 ಪ್ರೊ ಫೋನ್ ಇಂದು (ಏಪ್ರಿಲ್ 30) ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಕಂಪನಿಯು ಇದರ ಬೆಲೆ ಮತ್ತು ವಿಶೇಷತೆಗಳನ್ನು ಬಹಿರಂಗಪಡಿಸಲಿದೆ. ವಿಶೇಷವೆಂದರೆ, ಇಂದಿನಿಂದಲೇ ಈ ಫೋನ್ ತನ್ನ ಮಾರಾಟ ಶುರು ಮಾಡಲಿದೆ. ನೀವು, ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್‌, ಆಫ್‌ಲೈನ್ ಮಾರುಕಟ್ಟೆಯಲ್ಲಿ ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳ ಮೂಲಕ ಖರೀದಿಸಬಹುದು.

ಇಂದು ಭಾರತದಲ್ಲಿ Motorola Edge 60 Pro ಬಿಡುಗಡೆ; ಬಜೆಟ್ ಬೆಲೆ, ವಿಶೇಷತೆಗಳೇನು?

ಮೊಟೊರೊಲಾ ಎಡ್ಜ್ 60 ಪ್ರೊ: ಟಾಪ್ 5 ವೈಶಿಷ್ಟ್ಯಗಳು

1. ಮೊಟೊರೊಲಾ ಎಡ್ಜ್ 60 ಪ್ರೊ ಡಿಸ್ಪ್ಲೇ

ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 2712 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.

2. ಮೊಟೊರೊಲಾ ಎಡ್ಜ್ 60 ಪ್ರೊ ಪ್ರೊಸೆಸರ್

ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಎಕ್ಸ್‌ಟ್ರೀಮ್ ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಮೊಬೈಲ್ ಆಂಡ್ರಾಯ್ಡ್ 15 ಓಎಸ್ ನೊಂದಿಗೆ ಕೆಲಸ ಮಾಡುತ್ತದೆ. ಗ್ರಾಫಿಕ್ಸ್‌ಗಾಗಿ ಇದು, ಮಾಲಿ G615 MC6 ಜಿಪಿಯು ಸಹ ಹೊಂದಿದೆ.

3. ಮೊಟೊರೊಲಾ ಎಡ್ಜ್ 60 ಪ್ರೊ ಕ್ಯಾಮೆರಾ

ಮೊಟೊರೊಲಾ ಎಡ್ಜ್ 60 ಪ್ರೊ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ 50 ಮೆಗಾಪಿಕ್ಸೆಲ್ ಎರಡನೇ ಕ್ಯಾಮೆರಾ, 10 ಮೆಗಾಪಿಕ್ಸೆಲ್ ತೃತೀಯ ಕ್ಯಾಮೆರಾ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.

4. ಮೊಟೊರೊಲಾ ಎಡ್ಜ್ 60 ಪ್ರೊ ಬ್ಯಾಟರಿ

ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 90W ಟರ್ಬೋ ಪವರ್ ಫಾಸ್ಟ್ ಚಾರ್ಜಿಂಗ್‌ ತಂತ್ರಜ್ಞಾನ ಹೊಂದಿದೆ. ಇದರ ಜೊತೆಗೆ 15W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನವೂ ಲಭ್ಯವಿದೆ.

5. ಇತರೆ ವೈಶಿಷ್ಟ್ಯಗಳು

ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನ್‌ ಹಲವು ಮೊಟೊ AI ವೈಶಿಷ್ಟ್ಯಗಳನ್ನು ಹೊಂದಿದೆ. ಇದು MIL-STD-810H ಮಿಲಿಟರಿ ದರ್ಜೆಯ ಪ್ರಮಾಣೀಕರಣದೊಂದಿಗೆ ಬರುತ್ತದೆ. ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 + IP69 ರೇಟಿಂಗ್ ಪಡೆದಿದೆ. ಇದರಲ್ಲಿ ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮೋಸ್ ಒಳಗೊಂಡಿದೆ. ಈ ಫೋನ್ 5G SA/NSA, ಡ್ಯುಯಲ್ 4G VoLTE, ವೈ-ಫೈ 6E, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ, ಎನ್‌ಎಫ್‌ಸಿ ಸೇರಿದಂತೆ ಮುಂತಾದ ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದೆ.

ಇಂದು ಭಾರತದಲ್ಲಿ Motorola Edge 60 Pro ಬಿಡುಗಡೆ; ಬಜೆಟ್ ಬೆಲೆ, ವಿಶೇಷತೆಗಳೇನು?

ಮೊಟೊರೊಲಾ ಎಡ್ಜ್ 60 ಪ್ರೊ ಬೆಲೆ

8GB RAM + 256GB ಸ್ಟೋರೇಜ್ = 28,999 ರೂ.
12GB RAM + 512GB ಸ್ಟೋರೇಜ್ = 32,000 ರೂ.

ಮೊಟೊರೊಲಾ ಎಡ್ಜ್ 60 ಪ್ರೊ ಫೋನನ್ನು ಭಾರತದಲ್ಲಿ 30,000 ರೂ.ಗಿಂತಲೂ ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗುವುದು. ವರದಿಯ ಪ್ರಕಾರ, 8GB RAM + 256GB ಸ್ಟೋರೇಜ್ ರೂಪಾಂತರದ ಮೊಬೈಲ್ ಬೆಲೆ 28,999 ರೂ.ಗೆ ಬರಲಿದೆ. 12GB RAM + 512GB ಸ್ಟೋರೇಜ್ ಹೊಂದಿರುವ ಫೋನನ್ನು 32,000 ರೂ.ಗೆ ಬಿಡುಗಡೆ ಮಾಡಲಾಗುವುದು. ಇತ್ತೀಚೆಗೆ ಬಿಡುಗಡೆಯಾದ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮತ್ತು ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಫೋನ್ ಸಹ ಇದೇ ಬೆಲೆ ಶ್ರೇಣಿಯನ್ನು ಹೊಂದಿವೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ ಬೆಲೆ

8GB RAM ರೂಪಾಂತರದ ಬೆಲೆ = 22,999 ರೂ.
12GB RAM ರೂಪಾಂತರದ ಬೆಲೆ = 24,999 ರೂ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ ಫೋನಿನ 8GB RAM ರೂಪಾಂತರದ ಬೆಲೆ 22,999 ರೂ. ಆಗಿದೆ. ಹಾಗೆಯೇ 12GB RAM ರೂಪಾಂತರವನ್ನು 24,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 5,500mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ಅನ್ನು ಅಳವಡಿಸಲಾಗಿದೆ. ಇದು 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಹೊಂದಿದೆ. ಈ ಫೋನ್ 6.7 ಇಂಚಿನ ಸೂಪರ್‌ ಎಚ್‌ಡಿ ಪ್ಲಸ್ 1.5K ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ.

ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಬೆಲೆ

8GB RAM + 256GB ಸ್ಟೋರೇಜ್ = 22,999 ರೂ.

ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಮೊಬೈಲ್‌ 8GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 22,999 ರೂ. ಆಗಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಇದು 5,000mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಫೋನ್ 6.7 ಇಂಚಿನ ಸೂಪರ್ ಎಚ್‌ಡಿ ಪ್ಲಸ್ 2.5D ಕರ್ವ್ಡ್ ಪೋಲೆಡ್ ಡಿಸ್ಪ್ಲೇ ಹೊಂದಿದೆ. ಇದರ ವಿಶೇಷತೆ ಎಂದರೆ, ಈ ಫೋನ್‌ನೊಂದಿಗೆ ಸ್ಮಾರ್ಟ್ ಪೆನ್ ಬರುತ್ತದೆ.

Best Mobiles in India

English summary
Motorola Edge 60 Pro Launching in India at 12 noon Today via Flipkart: Check Expected Price, Specifications and Features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+