Motorola: ಏ.30ಕ್ಕೆ ಹೊಸ ಫೋನ್ ಲಾಂಚ್; ಯಾರೂ ನಿರೀಕ್ಷಿಸದ 5 ಫೀಚರ್‌ಗಳಿವು! ಬೆಲೆ ಎಷ್ಟು?
ಮೊಟೊ ಮ್ಯಾಜಿಕ್ ಶುರು..! 'ಮೊಟೊ ಮಯ'ವಾಗುತ್ತಿದೆ ಭಾರತೀಯ ಮೊಬೈಲ್ ಮಾರುಕಟ್ಟೆ. ಹೌದು, ಕಳೆದ ಎರಡು ವಾರಗಳಲ್ಲಿ, ಕಂಪನಿಯು ಭಾರತದಲ್ಲಿ ಎರಡು ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳೇ, ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮತ್ತು ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಫೋನ್‌ಗಳು. ಇದೀಗ ಮೂರನೇ ಸ್ಮಾರ್ಟ್‌ಫೋನ್ ಕೂಡ ಬರಲು ಸಿದ್ಧವಾಗಿದೆ. ಕಂಪನಿಯು ಮೊಟೊರೊಲಾ ಎಡ್ಜ್ 60 ಪ್ರೊ (Motorola Edge 60 Pro) ಫೋನಿನ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಮೊಟೊರೊಲಾ ಭಾರೀ ಸದ್ದು ಮಾಡುತ್ತಿದೆ. ಬನ್ನಿ, ಈ ಹೊಸ 5G ಫೋನಿನ ಬೆಲೆ, ವಿಶೇಷತೆಗಳು ಮತ್ತು ಬಿಡುಗಡೆ ದಿನಾಂಕವನ್ನು ತಿಳಿಯೋಣ.
ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ ಬಜೆಟ್ ಬೆಲೆಯಲ್ಲಿ ಬರುತ್ತದೆ. ಈ ಫೋನಿನ ವಿಶೇಷತೆಗಳೆಂದರೆ, ಇದು 6.7 ಇಂಚಿನ ಡಿಸ್ಪ್ಲೇ ಡಿಸ್ಪ್ಲೇಯೊಂದಿಗೆ ಬಿಡುಗಡೆಯಾಗಲಿದೆ. ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಎಕ್ಸ್‌ಟ್ರೀಮ್ ಪ್ರೊಸೆಸರ್ ಹೊಂದಿರಲಿದೆ. ಇದಕ್ಕೆ ಪೂರಕವಾಗಿ 12GB RAM + 256GB ಸ್ಟೋರೇಜ್ ಇರುತ್ತದೆ. ಈ ಫೋನಿನಲ್ಲಿ 50MP ಮುಖ್ಯ ಕ್ಯಾಮೆರಾ ಮತ್ತು 50MP ಸೆಲ್ಫಿ ಕ್ಯಾಮೆರಾ ಲಭ್ಯವಿರುತ್ತದೆ. ಇದರೊಂದಿಗೆ 6000mAh ಬ್ಯಾಟರಿ ಮತ್ತು 90W ವೇಗದ ಚಾರ್ಜಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಭಾರತಕ್ಕೆ ಬರಲು ಸಜ್ಜಾಗಿದೆ.

ಭಾರತದಲ್ಲಿ ಮೊಟೊರೊಲಾ ಎಡ್ಜ್ 60 ಪ್ರೊ ಬಿಡುಗಡೆ ಯಾವಾಗ?
ಮೊಟೊರೊಲಾ ತನ್ನ 'ಎಡ್ಜ್ 60' ಸರಣಿಯ ಮೂರನೇ ಫೋನನ್ನು ಈ ತಿಂಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಅದರಂತೆ, ಮೊಟೊರೊಲಾ ಎಡ್ಜ್ 60 ಪ್ರೊ 5G ಫೋನ್ ಏಪ್ರಿಲ್ 30 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಹೊಸ ಮೊಟೊರೊಲಾ 5G ಫೋನನ್ನು ಆನ್‌ಲೈನ್ ಶಾಪಿಂಗ್ ಸೈಟ್ ಫ್ಲಿಪ್‌ಕಾರ್ಟ್, ಆಫ್‌ಲೈನ್ ಮಾರುಕಟ್ಟೆಯಲ್ಲಿ ಚಿಲ್ಲರೆ ಅಂಗಡಿಗಳು ಮತ್ತು ಮೊಬೈಲ್ ಅಂಗಡಿಗಳಿಂದ ಖರೀದಿಸಬಹುದು. ಕಂಪನಿಯು ಏಪ್ರಿಲ್ 30 ರಂದು ಮೊಟೊರೊಲಾ ಎಡ್ಜ್ 60 ಪ್ರೊ ಬೆಲೆಯನ್ನು ಘೋಷಿಸಲಿದೆ ಮತ್ತು ಇದೇ ದಿನ ಈ ಫೋನ್ ಮಾರಾಟವೂ ಪ್ರಾರಂಭವಾಗಲಿದೆ.
ಮೊಟೊರೊಲಾ ಎಡ್ಜ್ 60 ಪ್ರೊ ಬೆಲೆ (ಸಂಭಾವ್ಯ)
ಇತ್ತೀಚೆಗೆ ಭಾರತದಲ್ಲಿ ಮೊಟೊರೊಲಾ ಎಡ್ಜ್ 60 ಫ್ಯೂಷನ್ ಮತ್ತು ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಫೋನ್‌ಗಳ ಬೆಲೆ ಶ್ರೇಣಿಯನ್ನು ನೋಡಿದರೆ, ಮೂಂಬರುವ ಮೊಟೊರೊಲಾ ಎಡ್ಜ್ 60 ಪ್ರೊ ಬೆಲೆ 30,000 ರೂ. ಆಗಿರುತ್ತದೆ. ಈ ಫೋನಿನ ಮೂಲ ರೂಪಾಂತರವನ್ನು ಭಾರತದಲ್ಲಿ 28,999 ರೂ. ಅಥವಾ 29,999 ರೂ.ಗೆ ಬಿಡುಗಡೆ ಮಾಡಲಾಗುವುದು. ಟಾಪ್ ರೂಪಾಂತರವು 32,000 ರೂ.ಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ನೀವು ಅಧಿಕೃತ ಬೆಲೆಗಾಗಿ ಏಪ್ರಿಲ್ 30 ರವರೆಗೆ ಕಾಯಬೇಕಿದೆ.
ಮೊಟೊರೊಲಾ ಎಡ್ಜ್ 60 ಪ್ರೊ ವೈಶಿಷ್ಟ್ಯಗಳು (ನಿರೀಕ್ಷಿತ)
ಡಿಸ್ಪ್ಲೇ ಮಾಹಿತಿ
ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ 6.67 ಇಂಚಿನ 1.5K POLED ಡಿಸ್ಪ್ಲೇ ಹೊಂದಿದೆ. ಇದು 2712 x 1220 ಪಿಕ್ಸೆಲ್‌ಗಳ ರೆಸಲ್ಯೂಶನ್ ಬೆಂಬಲ ಪಡೆದಿದೆ. ಇದರೊಂದಿಗೆ 120Hz ರಿಫ್ರೆಶ್ ದರ, 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಮೊಟೊರೊಲಾ ಎಡ್ಜ್ 60 ಪ್ರೊ 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಎಕ್ಸ್‌ಟ್ರೀಮ್ ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಮೇಲೆ ತಯಾರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್ ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಗ್ರಾಫಿಕ್ಸ್‌ಗಾಗಿ, ಇದು ಮಾಲಿ G615 MC6 ಜಿಪಿಯು ಅಳವಡಿಸಲಾಗಿದೆ. ಈ ಫೋನ್ 8GB, 12GB RAM ಮತ್ತು 256GB, 512GB ಸ್ಟೋರೇಜ್ ಹೊಂದಿದೆ.
ಕ್ಯಾಮೆರಾ ಸೆಟಪ್
ಮೊಟೊರೊಲಾ ಎಡ್ಜ್ 60 ಪ್ರೊ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ ಎಲ್‌ಇಡಿ ಫ್ಲ್ಯಾಷ್ ಲೈಟ್ ಜೊತೆಗೆ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾ ಲಭ್ಯವಿದೆ. ಇದರೊಂದಿಗೆ ದ್ವಿತೀಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ + ಮ್ಯಾಕ್ರೋ ಲೆನ್ಸ್ ಹೊಂದಿದೆ. ಜೊತೆಗೆ 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಲಭ್ಯವಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮೊಟೊರೊಲಾ ಎಡ್ಜ್ 60 ಪ್ರೊ 5G ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಫೋನ್ 90W ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನ ಹೊಂದಿದೆ. ಈ ಮೊಬೈಲ್ 15W ವೈರ್‌ಲೆಸ್ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದೆ.
ಇತರೆ ವೈಶಿಷ್ಟ್ಯಗಳು
ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನ್ ಮೋಟೋ ಎಐ (AI) ವೈಶಿಷ್ಟ್ಯಗಳನ್ನು ಹೊಂದಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಣೆಗಾಗಿ IP68 + IP69 ರೇಟಿಂಗ್ ಪಡೆದಿದೆ. ಹಾಗೆಯೇ MIL-STD-810H ಮಿಲಿಟರಿ ದರ್ಜೆಯ ಪ್ರಮಾಣೀಕರಣದೊಂದಿಗೆ ಬರುತ್ತದೆ. ಇದು ಯುಎಸ್‌ಬಿ ಟೈಪ್ ಸಿ ಆಡಿಯೋ, ಸ್ಟೀರಿಯೊ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮೋಸ್ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, ವೈ-ಫೈ 6E, ಬ್ಲೂಟೂತ್ 5.4, ಜಿಪಿಎಸ್, ಯುಎಸ್‌ಬಿ ಟೈಪ್ ಸಿ, ಎನ್‌ಎಫ್‌ಸಿ ಸೇರಿದಂತೆ ಹಲವು ಸೌಲಭ್ಯಗಳನ್ನು ಓಳಗೊಂಡಿದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ ಬೆಲೆ
ಮೊಟೊರೊಲಾ ಎಡ್ಜ್ 60 ಫ್ಯೂಷನ್ ಫೋನಿನ 8GB RAM ರೂಪಾಂತರದ ಬೆಲೆ 22,999 ರೂ. ಆಗಿದೆ. ಹಾಗೆಯೇ 12GB RAM ರೂಪಾಂತರವನ್ನು 24,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 5,500mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ಅನ್ನು ಅಳವಡಿಸಲಾಗಿದೆ. ಇದು 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಹೊಂದಿದೆ. ಈ ಫೋನ್ 6.7 ಇಂಚಿನ ಸೂಪರ್ ಎಚ್‌ಡಿ ಪ್ಲಸ್ 1.5K ಕರ್ವ್ಡ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ.
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಬೆಲೆ
ಮೊಟೊರೊಲಾ ಎಡ್ಜ್ 60 ಸ್ಟೈಲಸ್ ಮೊಬೈಲ್ 8GB RAM + 256GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಇದರ ಬೆಲೆ 22,999 ರೂ. ಆಗಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7s ಜೆನ್ 2 ಪ್ರೊಸೆಸರ್ ಹೊಂದಿದೆ. ಇದು 5,000mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ತಂತ್ರಜ್ಞಾನ ಸಹ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಲಭ್ಯವಿದೆ. ಈ ಫೋನ್ 6.7 ಇಂಚಿನ ಸೂಪರ್ ಎಚ್‌ಡಿ ಪ್ಲಸ್ 2.5D ಕರ್ವ್ಡ್ ಪೋಲೆಡ್ ಡಿಸ್ಪ್ಲೇ ಹೊಂದಿದೆ. ಇದರ ವಿಶೇಷತೆ ಎಂದರೆ, ಈ ಫೋನ್‌ನೊಂದಿಗೆ ಸ್ಮಾರ್ಟ್ ಪೆನ್ ಬರುತ್ತದೆ.


Click it and Unblock the Notifications








