Motorola Edge 60 Pro: 6000mAh ಬ್ಯಾಟರಿ ಖಚಿತ.. ಎಲ್ಲಾ ಫೀಚರ್ಸ್ ಬಹಿರಂಗ.. ಬಿಡುಗಡೆ ಯಾವಾಗ?
ಮೊಟೊರೊಲಾ ತನ್ನ ಅಭಿಮಾನಿಗಳಿಗೆ ಮೂರು ಸಿಹಿಸುದ್ದಿ ನೀಡಿದೆ. ಈಗಾಗಲೇ ಮೊಟೊರೊಲಾ ಎಡ್ಜ್ 60 ಫ್ಯೂಷನ್ (Motorola Edge 60 Fusion) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಮೊಟೊರೊಲಾ ಎಡ್ಜ್ 60 (Motorola Edge 60) ಫೋನಿನ ಬಿಡುಗಡೆ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಇದೀಗ ಮತ್ತೊಂದು ಮೊಬೈಲ್ ಕುರಿತ ಮಾಹಿತಿ ಸೋರಿಕೆಯಾಗಿದೆ. ಹೌದು, ಮೊಟೊರೊಲಾ ತನ್ನ 'Edge 60' ಸರಣಿಯನ್ನು ವಿಸ್ತರಿಸಲು ಸಜ್ಜಾಗಿದೆ. ಈ ಸರಣಿಯ 'ಪ್ರೊ' ಮಾದರಿಯಾದ ಮೊಟೊರೊಲಾ ಎಡ್ಜ್ 60 ಪ್ರೊ (Motorola Edge 60 Pro) ಮೊಬೈಲ್‌ನ ವಿವರಗಳನ್ನು ಸಹ ಬಹಿರಂಗಪಡಿಸಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನ್ ಅನ್ನು ಚೀನಾದ ಪ್ರಮಾಣೀಕರಣ ಸೈಟ್ TENAA ನಲ್ಲಿ ಪಟ್ಟಿ ಮಾಡಲಾಗಿದೆ. ಇಲ್ಲಿ ಈ ಫೋನ್ ಫೋಟೋ ಮತ್ತು ಪ್ರಮುಖ ವಿಶೇಷತೆಗಳನ್ನು ಬಹಿರಂಗಪಡಿಸಲಾಗಿದೆ. ಅದರಂತೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್ ಹೊಂದಿರುತ್ತದೆ. ಈ ಫೋನಿನಲ್ಲಿ 32MP ಸೆಲ್ಫಿ ಕ್ಯಾಮೆರಾ ಮತ್ತು 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಈ ಮೊಬೈಲ್ 6000mAh ಬ್ಯಾಟರಿ, 90W ವೇಗದ ಚಾರ್ಜಿಂಗ್, 6.67 ಇಂಚಿನ ಡಿಸ್ಪ್ಲೇ, 16GB RAM ಮತ್ತು 1TB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೊಟೊರೊಲಾ ಎಡ್ಜ್ 60 ಫ್ಯೂಷನ್ ಬೆಲೆ ಮತ್ತು ವೈಶಿಷ್ಟ್ಯಗಳು
ಮೊಟೊರೊಲಾ ಎಡ್ಜ್ 60 ಫ್ಯೂಷನ್ ಭಾರತದಲ್ಲಿ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 8GB RAM + 256GB ಸ್ಟೋರೇಜ್ ಬೆಲೆ 22,999 ರೂ. ಮತ್ತು 12GB RAM + 256GB ಸ್ಟೋರೇಜ್ ರೂಪಾಂತರದ ಬೆಲೆ 24,999 ರೂ. ಆಗಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7400 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಈ ಮೊಬೈಲ್ 50MP ಮುಖ್ಯ ಮತ್ತು 32MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಮೊಟೊರೊಲಾ ಫೋನ್ 6.7 ಇಂಚಿನ 1.5K ಡಿಸ್ಪ್ಲೇ ಹೊಂದಿದೆ. ಹಾಗೆಯೇ ಇದು 5,500mAh ಬ್ಯಾಟರಿ ಮತ್ತು 68W ಚಾರ್ಜಿಂಗ್‌ನೊಂದಿಗೆ ಬರುತ್ತದೆ.
ಮೊಟೊರೊಲಾ ಎಡ್ಜ್ 60 ಪ್ರೊ ವೈಶಿಷ್ಟ್ಯಗಳು (ಸೋರಿಕೆ)
ಡಿಸ್ಪ್ಲೇ ವಿವರ
ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ 6.67 ಇಂಚಿನ ಡಿಸ್‌ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ OLED ಡಿಸ್ಪ್ಲೇ ಆಗಿರಲಿದೆ. 1.5K ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಇದು ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಹೊಂದಿರಲಿದೆ.
ಪ್ರೊಸೆಸರ್ ಸಾಮರ್ಥ್ಯ
ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್‌ನ ಡೈಮೆನ್ಸಿಟಿ 8350 ಆಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ. ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ.
ಸ್ಟೋರೇಜ್ ಆಯ್ಕೆ
ಮೊಟೊರೊಲಾ ಎಡ್ಜ್ 60 ಪ್ರೊ ಫೋನ್ ಮೂರು RAM ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ. ಈ ಫೋನ್ 8GB, 12GB ಮತ್ತು 16GB RAM ಹೊಂದಿರಲಿದೆ. ಇದಕ್ಕೆ ಪೂರಕವಾಗಿ 128GB, 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆ ಲಭ್ಯವಿರುತ್ತದೆ. ಈ ಫೊನಿನ ಮೂಲ ರೂಪಾಂತರವು 8GB RAM + 128GB ಸ್ಟೋರೇಜ್ ಮತ್ತು ಟಾಪ್ ವೇರಿಯಂಟ್ 16GB RAM + 1TB ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕ್ಯಾಮೆರಾ ಸೆಟಪ್
ಮೊಟೊರೊಲಾ ಎಡ್ಜ್ 60 ಪ್ರೊ ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿರುತ್ತದೆ. ಹಾಗೆಯೇ 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಮತ್ತು 3x ಆಪ್ಟಿಕಲ್ ಜೂಮ್ ಸಾಮರ್ಥ್ಯವನ್ನು ಹೊಂದಿರುವ ಟೆಲಿಫೋಟೋ ಅಥವಾ ಪೆರಿಸ್ಕೋಪ್ ಲೆನ್ಸ್ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದೆ. ಇದು ಐಫೋನ್ 16 ನಂತೆಯೇ ಮೀಸಲಾದ ಕ್ಯಾಮೆರಾ ಬಟನ್ ಹೊಂದಿರಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಮೊಟೊರೊಲಾ ಎಡ್ಜ್ 60 ಪ್ರೊ ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ವರದಿಯ ಪ್ರಕಾರ, ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, ಈ ಮೊಬೈಲ್ 90W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿರಲಿದೆ. ಈ ಫೋನಿನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಸಹ ಇರುವ ಸಾಧ್ಯತೆಯಿದೆ.


Click it and Unblock the Notifications








