Home
ಮೊಬೈಲ್

ಬಿಡುಗಡೆಗೂ ಎರಡು ದಿನ ಮೊದಲು 'ಮೊಟೊರೊಲಾ ಎಡ್ಜ್ 60' ಫೀಚರ್ಸ್ ಬಹಿರಂಗ!

ಜನಪ್ರಿಯ ಮೊಬೈಲ್ ಬ್ರ್ಯಾಂಡ್ ಮೊಟೊರೊಲಾ ತನ್ನ ಮುಂದಿನ ಬಿಡುಗಡೆ ಸಮಾರಂಭದಲ್ಲಿ ಹೊಸ ಮೊಟೊರೊಲಾ ಎಡ್ಜ್ 60 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಇದೇ ಏಪ್ರಿಲ್ 24 ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮೊಟೊರೊಲಾ ರೇಜರ್ 60 ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳು ಬರಲು ಸಜ್ಜಾಗಿವೆ. ಇದಕ್ಕೂ ಮೊದಲು ಮೊಟೊರೊಲಾ ಎಡ್ಜ್ 60 ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು ಯಾವುವು ಎಂಬುದನ್ನು ಜನಪ್ರಿಯ ಟಿಪ್‌ಸ್ಟಾರ್ ಒಬ್ಬರು ಬಹಿರಂಗಪಡಿಸಿದ್ದಾರೆ.! ಹೌದು, ಹೆಸರಾಂತ ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು ಮುಂಬರುವ ಮೊಟೊರೊಲಾ ಎಡ್ಜ್ 60 ರ ಪ್ರಮುಖ ವೈಶಿಷ್ಟ್ಯಗಳನ್ನು ಅದರ ಮಾರ್ಕೆಟಿಂಗ್ ವೈಶಿಷ್ಟ್ಯಗಳೊಂದಿಗೆ ಬಹಿರಂಗಪಡಿಸಿದ್ದು, ಇದು ಮೊಟೊರೊಲಾ ಎಡ್ಜ್ 60 ಸ್ಮಾರ್ಟ್‌ಫೋನ್ ಉತ್ಸಾಹಿಗಳಲ್ಲಿ ಕುತೂಹಲವನ್ನು ಕೆರಳಿಸಿದೆ.

ಸೋರಿಕೆಯಾದ ಮಾಹಿತಿಯ ಪ್ರಕಾರ, ಮೊಟೊರೊಲಾ ಎಡ್ಜ್ 60 ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ pOLED ಡಿಸ್ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಇದರೊಂದಿಗೆ, ಇದು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ, ಮತ್ತು ಬಳಕೆದಾರರಿಗೆ ಅತ್ಯಾಧುನಿಕ ಸಾಫ್ಟ್‌ವೇರ್ ಅನುಭವವನ್ನು ನೀಡುತ್ತದೆ. ಕ್ಯಾಮೆರಾ ವಿಭಾಗದಲ್ಲಿ, ಈ ಮೊಟೊರೊಲಾ ಎಡ್ಜ್ 60 ಸ್ಮಾರ್ಟ್‌ಫೋನ್ 50-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಒಳಗೊಂಡಿರಬಹುದು, ಜೊತೆಗೆ ಉತ್ತಮ ಗುಣಮಟ್ಟದ ಸೆಲ್ಫಿಗಳಿಗಾಗಿ 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ದೀರ್ಘಕಾಲದ ಬ್ಯಾಟರಿ ಬಾಳಿಕೆಗಾಗಿ, ಈ ಸ್ಮಾರ್ಟ್‌ಫೋನ್ 5,200mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ.

ಬಿಡುಗಡೆಗೂ ಎರಡು ದಿನ ಮೊದಲು 'ಮೊಟೊರೊಲಾ ಎಡ್ಜ್ 60' ಫೀಚರ್ಸ್ ಬಹಿರಂಗ!

ಟಿಪ್‌ಸ್ಟರ್ ಇವಾನ್ ಬ್ಲಾಸ್ ಅವರು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿರುವ ಚಿತ್ರಗಳು, ಮೊಟೊರೊಲಾ ಎಡ್ಜ್ 60 ಅದರ ಹಿಂದಿನ ಮಾದರಿಯಾದ ಮೊಟೊರೊಲಾ ಎಡ್ಜ್ 50 ಅನ್ನು ಹೋಲುವ ವಿನ್ಯಾಸವನ್ನು ಹೊಂದಿರಬಹುದು ಎಂದು ಸೂಚಿಸುತ್ತವೆ. ಹಿಂಭಾಗದಲ್ಲಿರುವ ಕ್ಯಾಮೆರಾ ಮಾಡ್ಯೂಲ್‌ಗಳು ಒಂದೇ ಗಾತ್ರವನ್ನು ಹೊಂದಿದ್ದು, ವಿನ್ಯಾಸದಲ್ಲಿ ಸ್ಥಿರತೆ ಇದೆ. ಸೋರಿಕೆಯಾದ ಚಿತ್ರಗಳ ಪ್ರಕಾರ, ಈ ಫೋನ್ ಬಾಕ್ಸ್‌ನಲ್ಲಿ 68W ಚಾರ್ಜರ್, USB ಕೇಬಲ್ ಮತ್ತು ಫೋನ್ ಕವರ್‌ನೊಂದಿಗೆ ಬರಬಹುದು. ಇನ್ನು ಈ ಸ್ಮಾರ್ಟ್‌ಫೋನ್ ಮೇ 2024 ರಲ್ಲಿ MediaTek ಪರಿಚಯಿಸಿದ Dimensity 7300 SoC (ಸಿಸ್ಟಮ್ ಆನ್ ಎ ಚಿಪ್) ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಇದರೊಂದಿಗೆ 12GB RAM ಮತ್ತು 512GB ವರೆಗಿನ ಆಂತರಿಕ ಸಂಗ್ರಹಣೆಯ ಆಯ್ಕೆಗಳು ಇರಬಹುದು ಎನ್ನಲಾಗಿದೆ.

ಮೊಟೊರೊಲಾ ಎಡ್ಜ್ 60 ಸ್ಮಾರ್ಟ್‌ಫೋನ್ 6.7-ಇಂಚಿನ 1.5K (2,712x1,220 ಪಿಕ್ಸೆಲ್‌ಗಳು) pOLED ಪರದೆಯನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಟಿಪ್‌ಸ್ಟರ್ ಹಂಚಿಕೊಂಡಿರುವ ರೆಂಡರ್‌ಗಳು ಈ ಹ್ಯಾಂಡ್‌ಸೆಟ್ ಬಾಗಿದ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಸೂಚಿಸುತ್ತವೆ, ಇದು ವೀಕ್ಷಣೆಯ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ. ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 15 ನೊಂದಿಗೆ ನೇರವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮೊಟೊರೊಲಾ ಎಡ್ಜ್ 60 ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರಲಿದೆ, ಇದು Sony Lytia 700C ಸಂವೇದಕವನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ. ಹಿಂಭಾಗದ ಇತರ ಕ್ಯಾಮೆರಾಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಿಲ್ಲ.

ಮುಂಭಾಗದಲ್ಲಿ, ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗುವುದು ಎಂದು ಹೇಳಲಾಗಿದೆ. ಬ್ಯಾಟರಿ ಕಾರ್ಯಕ್ಷಮತೆಯ ಬಗ್ಗೆ ಮಾತನಾಡುವುದಾದರೆ, ಮೊಟೊರೊಲಾ ತನ್ನ ಮುಂಬರುವ ಎಡ್ಜ್ 60 ಹ್ಯಾಂಡ್‌ಸೆಟ್ ಅನ್ನು 5,200mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಸಜ್ಜುಗೊಳಿಸುವ ನಿರೀಕ್ಷೆಯಿದೆ. ಫೋನ್ ಅನ್ನು 68W ವೇಗದ ಚಾರ್ಜರ್‌ನೊಂದಿಗೆ ತೋರಿಸಲಾಗಿದೆ, ಇದು ತ್ವರಿತವಾಗಿ ಬ್ಯಾಟರಿಯನ್ನು ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ಸೋರಿಕೆಯಾದ ಚಿತ್ರಗಳು ಈ ಫೋನ್ ಬಾಳಿಕೆಗಾಗಿ MIL-STD 810H ಪ್ರಮಾಣೀಕರಣವನ್ನು ಸಹ ಹೊಂದಿರುತ್ತದೆ ಎಂದು ಸೂಚಿಸುತ್ತವೆ, ಅಂದರೆ ಇದು ಧೂಳು, ನೀರು ಮತ್ತು ಇತರ ಹಾನಿಗಳಿಂದ ರಕ್ಷಣೆ ಪಡೆಯುತ್ತದೆ. ಈ ಹ್ಯಾಂಡ್‌ಸೆಟ್‌ಗಳ ಕುರಿತು ಇನ್ನಷ್ಟು ಅಧಿಕೃತ ಮಾಹಿತಿಗಾಗಿ ನಾವು ಏಪ್ರಿಲ್ 24 ರ ವರೆಗೆ ಕಾಯಬೇಕು.

Best Mobiles in India

English summary
Motorola Edge 60 is expected to feature a MediaTek Dimensity 7300 processor and a 5,200mAh battery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+