Home
ಮೊಬೈಲ್

ಭಾರತದಲ್ಲಿ Edge 70 ಲಾಂಚ್ ಡೇಟ್ ಫಿಕ್ಸ್: ಬಜೆಟ್ ಬೆಲೆಗೆ ಸ್ಟೈಲೀಶ್ ಕಿಂಗ್?!

Motorola ತನ್ನ ಹೊಸ ಪ್ರೀಮಿಯಂ-ಮಿಡ್‌ರೇಂಜ್ ಸ್ಮಾರ್ಟ್‌ಫೋನ್ Motorola Edge 70 ಅನ್ನು ಭಾರತದಲ್ಲಿ ಡಿಸೆಂಬರ್ 15ರಂದು ಅಧಿಕೃತವಾಗಿ ಲಾಂಚ್ ಮಾಡುವುದಾಗಿ ಘೋಷಿಸಿದೆ. Flipkart ಮತ್ತು Motorola India ವೆಬ್‌ಸೈಟ್ಗಳಲ್ಲಿ Motorola Edge 70 ಬಿಡುಗಡೆಗಾಗಿ ವಿಶೇಷ ಮೈಕ್ರೋಸೈಟ್ ಗಳನ್ನು ತೆರೆಯಲಾಗಿದ್ದು, ದೇಶದಲ್ಲಿ ಡಿಸೆಂಬರ್ 15 ರಂದು Motorola Edge 70 ಆಗಮನವನ್ನು ಮತ್ತು ಫೋನ್‌ನ ಬಹುತೇಕ ಪ್ರಮುಖ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಲಾಗಿದೆ. ಹಾಗಾದರೆ, ಮುಂಬರುವ ಬಹುನಿರೀಕ್ಷಿತ Motorola Edge 70 ಫೋನ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

Motorola Edge 70 ಆಗಮನ: ಲಭ್ಯವಾಗಿರುವ ಪ್ರಮುಖ ಮಾಹಿತಿಗಳು
ಭಾರತದಲ್ಲಿ Motorola Edge 70 ಸ್ಮಾರ್ಟ್‌ಫೋನ್ ಮೂರು ಪ್ಯಾಂಟೋನ್ ವಿಶೇಷ ಬಣ್ಣಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. Flipkart, Motorola India ಅಧಿಕೃತ ಆನ್‌ಲೈನ್ ಸ್ಟೋರ್ ಮತ್ತು ದೇಶಾದ್ಯಂತದ ಆಫ್‌ಲೈನ್ ರಿಟೇಲ್ ಅಂಗಡಿಗಳ ಮೂಲಕ ಇದನ್ನು ಮಾರಾಟ ಮಾಡುವುದಾಗಿ ಕಂಪನಿ ಎಕ್ಸ್‌‌ನಲ್ಲಿ ದೃಢಪಡಿಸಿದೆ. Pantone Bronze Green, Pantone Gadget Grey ಮತ್ತು Pantone Lily Pad ಎಂಬ ಮೂರು ವಿಶಿಷ್ಟ ಬಣ್ಣ ಆಯ್ಕೆಗಳೊಂದಿಗೆ ಇದು ಲಭ್ಯವಾಗಲಿದೆ. ಹಿಂಭಾಗದಲ್ಲಿ, ಈ ಫೋನ್‌ನಲ್ಲಿ 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹಾಗೂ LED ಫ್ಲ್ಯಾಶ್ ಒದಗಿಸಲಾಗಿದೆ.

ಕೇವಲ 5.99mm ದಪ್ಪ ಮತ್ತು 159 ಗ್ರಾಂ ತೂಕ ಹೊಂದಿರುವ Motorola Edge 70, ಮಾರುಕಟ್ಟೆಯಲ್ಲಿರುವ ಅತ್ಯಂತ ಸ್ಲಿಮ್ ಮತ್ತು ಲೈಟ್‌ವೇಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ಪ್ರವೇಶಿಸುತ್ತದೆ. ಗಟ್ಟಿತನದ ದೃಷ್ಟಿಯಿಂದ, ಇದು Aircraft-grade ಅಲ್ಯೂಮಿನಿಯಂ ಫ್ರೇಮ್ ಅನ್ನು ಒಳಗೊಂಡಿದ್ದು, ಫೋನ್‌ಗೆ ಹೆಚ್ಚುವರಿ ಗಟ್ಟಿ ಮತ್ತು ಪ್ರೀಮಿಯಂ ಸ್ಪರ್ಶ ನೀಡಲಿದೆ. ಕಾರ್ಯಕ್ಷಮತೆಯ ವಿಭಾಗದಲ್ಲಿ, Motorola Edge 70 ಅನ್ನು Qualcomm Snapdragon 7 Gen 4 ಚಿಪ್‌ಸೆಟ್ ಪವರ್ ಮಾಡಲಿದ್ದು, ಮಿಡ್-ಪ್ರೀಮಿಯಂ ವಿಭಾಗದಲ್ಲಿ ಇದು ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ ಗಳಲ್ಲೊಂದು.

ಡಿಸ್‌ಪ್ಲೇ ವಿಭಾಗದಲ್ಲಿ, Motorola Edge 70 ಫೋನ್ ಶಕ್ತಿಯುತ 6.7-ಇಂಚಿನ AMOLED ಪ್ಯಾನೆಲ್ ಅನ್ನು ಒಳಗೊಂಡಿರಲಿದೆ. ಇದು 1.5K ರೆಸಲ್ಯೂಶನ್ ಮತ್ತು ಗರಿಷ್ಠ 4,500 nits ಪೀಕ್ ಬ್ರೈಟ್‌ನೆಸ್ ಅನ್ನು ಬೆಂಬಲಿಸುತ್ತದೆ - ಪ್ರಖರ ಸೂರ್ಯಪ್ರಕಾಶದಲ್ಲೂ ಸ್ಪಷ್ಟ ಹಾಗೂ ಜೀವಂತ ದೃಶ್ಯಾನುಭವ ಒದಗಿಸುತ್ತದೆ. Gorilla Glass 7i ರಕ್ಷಣೆ ಮತ್ತು Dolby Atmos ಬೆಂಬಲದೊಂದಿಗೆ ವಿಡಿಯೋ ವೀಕ್ಷಣೆ ಮತ್ತು ಗೇಮಿಂಗ್ ಅನುಭವ ಮತ್ತಷ್ಟು ಸಮೃದ್ಧವಾಗಿರುವ ಭರವಸೆ ಮೂಡಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, Motorola Edge 70 ತನ್ನ ವಿಭಾಗದಲ್ಲಿ ಅತ್ಯುತ್ತಮ ಫೋಟೋ ಮತ್ತು ವಿಡಿಯೋ ಸಾಮರ್ಥ್ಯಗಳನ್ನು ಒದಗಿಸುವ ಭರವಸೆಯನ್ನು ಸಹ ತಂದಿದೆ. ಇದರಲ್ಲಿ 50MP ಪ್ರೈಮರಿ ಸೆನ್ಸರ್, 50MP ಅಲ್ಟ್ರಾವೈಡ್ + ಮ್ಯಾಕ್ರೋ Vision ಲೆನ್ಸ್‌ಗಳನ್ನು ಒಳಗೊಂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ನೀಡಲಾಗಿದೆ. ಈ ಕ್ಯಾಮೆರಾ 4K 60fps ವರೆಗಿನ ವಿಡಿಯೋ ರೆಕಾರ್ಡಿಂಗ್‌ಗೆ ಬೆಂಬಲಿಸುತ್ತದೆ. ಮುಂಭಾಗದಲ್ಲಿ 50MP Quad Pixel ಸೆಲ್ಫಿ ಕ್ಯಾಮೆರಾ ಇರಲಿದೆ.

ಭಾರತದಲ್ಲಿ Edge 70 ಲಾಂಚ್ ಡೇಟ್ ಫಿಕ್ಸ್: ಬಜೆಟ್ ಬೆಲೆಗೆ ಸ್ಟೈಲೀಶ್ ಕಿಂಗ್?!

ಬ್ಯಾಟರಿ ವಿಭಾಗದಲ್ಲಿ, Motorola Edge 70 ನಲ್ಲಿ 5,000mAh silicon-carbon battery ಬಳಸಲಾಗಿದೆ, ಇದು ಸಾಮಾನ್ಯ ಲಿಥಿಯಂ-ಐಯಾನ್ ಬ್ಯಾಟರಿಗಿಂತ ಹೆಚ್ಚು ದೀರ್ಘಕಾಲ ಶಕ್ತಿ ಸಂಗ್ರಹಣೆಯನ್ನು ಒದಗಿಸುತ್ತದೆ. ಜೊತೆಗೆ 68W ಫಾಸ್ಟ್ ವೈರ್ಡ್ ಚಾರ್ಜಿಂಗ್ ಮತ್ತು 15W ವೈರ್‌ಲೇಸ್ ಚಾರ್ಜಿಂಗ್ ಬೆಂಬಲವೂ ನೀಡಲಾಗಿದೆ. Vapor Cooling Chamber ಇರುವುದರಿಂದ ಗೇಮಿಂಗ್ ಅಥವಾ ಹೈ-ಪರ್ಫಾರ್ಮೆನ್ಸ್ ಬಳಕೆಯಲ್ಲಿಯೂ ಫೋನ್ ಹೆಚ್ಚು ಬಿಸಿಯಾಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಬಿಲ್ಡ್ ಮತ್ತು ದೀಕ್ಷೆ ದೃಷ್ಟಿಯಿಂದ, Motorola Edge 70 ಮಿಲಿಟರಿ-ಗ್ರೇಡ್ MIL-STD 810H ಪ್ರಮಾಣೀಕರಣದೊಂದಿಗೆ ಬರುತ್ತದೆ. ಜೊತೆಗೆ IP68 ಮತ್ತು IP69 ರೇಟಿಂಗ್‌ಗಳು ನೀರು ಮತ್ತು ಧೂಳಿನಿಂದ ರಕ್ಷಣೆ ನೀಡುತ್ತವೆ. ಭಾರತದಲ್ಲಿ Motorola Edge 70 ನ ಅಧಿಕೃತ ಬೆಲೆಯನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ವದಂತಿಗಳಂತತೆ ಇದರ ಬೇಸ್ ರೂಪಾಂತರಕ್ಕೆ ₹35,000 ಕ್ಕಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಒಟ್ಟಾರೆಯಾಗಿ, Motorola Edge 70 ತನ್ನ ಸ್ಲಿಮ್ ವಿನ್ಯಾಸ, ಶಕ್ತಿಶಾಲಿ Snapdragon 7 Gen 4 ಪ್ರೊಸೆಸರ್‌ನೊಂದಿಗೆ ಮಿಡ್-ಪ್ರೀಮಿಯಮ್ ಸೆಗ್ಮೆಂಟ್‌ನಲ್ಲಿ ಬಲವಾದ ಸ್ಪರ್ಧಿಯಾಗಿ ಹೊರಹೊಮ್ಮಬಹುದು. ಡಿಸೆಂಬರ್ 15ರ ಲಾಂಚ್‌ನಲ್ಲಿ ನಾವು ಈ ಕುರಿತು ಸಂಪೂರ್ಣವಾಗಿ ಚರ್ಚಿಸೋಣ.!

Best Mobiles in India

English summary
Motorola Edge 70 is launching in India with three exclusive Pantone colors — Bronze Green, Gadget Grey, and Lily Pad. It will be sold via Flipkart, Motorola India’s online store, and offline retailers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+