ಭಾರತದಲ್ಲಿ Motorola Edge 70 Fusion ಲಾಂಚ್ ಡೇಟ್ ಫಿಕ್ಸ್: ಮುಂದಿನ ವಾರ ಅಬ್ಬರ!
ಭಾರತದಲ್ಲಿ ಶೀಘ್ರವೇ Motorola ಕಂಪೆನಿಯ 2026ರ ಮೊದಲ Edge ಸ್ಮಾರ್ಟ್‌ಫೋನ್ ಬಿಡುಗಡೆಯಾಗುತ್ತರುವ ಸುದ್ದಿಯನ್ನು ನೀವು ಈಗಾಗಲೇ ತಿಳಿದಿರಬಹುದು. ಕಳೆದ ಎರಡು ವಾರಗಳಿಂದ ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿರುವ Motorola Edge 70 Fusion ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಈಗ ಅಧಿಕೃತವಾಗಿದೆ. ದೇಶದಲ್ಲಿ ಇದೇ ಮಾರ್ಚ್ 6ರಂದು Motorola Edge 70 Fusion ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆಗೊಳಿಸುವುದಾಗಿ ಕಂಪೆನಿಯು ತಿಳಿಸಿದ್ದು, ಈ ಮೂಲಕ ಭರ್ಜರಿ ಸಿಹಿಸುದ್ದಿಯೊಂದು ದೊರೆತಂತಾಗಿದೆ.
ಜನಪ್ರಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮುಂಬರುವ Motorola Edge 70 Fusion ಅನ್ನು ಮಾರ್ಚ್ 6 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು Motorola ದೃಢಪಡಿಸಿದೆ. ಬಿಡುಗಡೆ ದಿನಾಂಕ ಮಾತ್ರವಲ್ಲದೆ, ದೊಡ್ಡ ಬ್ಯಾಟರಿ, ಆಧುನಿಕ ವಿನ್ಯಾಸ ಮತ್ತು ಶಕ್ತಿಯುತ ಪ್ರೊಸೆಸರ್‌ನೊಂದಿಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆಯಾಗುದನ್ನು ಖಚಿತಪಡಿಸಲಾಗಿದೆ. ಬಹುತೇಕ ಯುವ ಬಳಕೆದಾರರು, ಗೇಮಿಂಗ್ ಆಸಕ್ತರು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ಫೋನ್ ಫೀಚರ್ಸ್ ಈಗ ಚರ್ಚೆಗೆ ಕಾರಣವಾಗಿದೆ.

Motorola Edge 70 Fusion ಸ್ಮಾರ್ಟ್‌ಫೋನ್ ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ 8GB + 128GB, 8GB + 256GB ಮತ್ತು 12GB + 256GB ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟಕ್ಕೆ ಬರಲಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಫೋನ್ Silhouette, Blue Surf ಮತ್ತು Country Air ಎಂಬ ಮೂರು ವಿಶಿಷ್ಟ Pantone ಬಣ್ಣಗಳಲ್ಲಿ ಲೆದರ್ ಪ್ರೇರಿತ ಫಿನಿಷ್ನೊಂದಿಗೆ ಲಭ್ಯವಾಗಲಿದೆ. ಮೊದಲ ನೋಟದಲ್ಲೇ ಸ್ಲಿಮ್ ವಿನ್ಯಾಸ ಹಾಗೂ ಕರ್ವ್ಡ್ ಎಡ್ಜ್ ಡಿಸ್‌ಪ್ಲೇ ಇರುವುದನ್ನು ನಾವು ನೋಡಬಹುದಾಗಿದ್ದು, ಇದು ಪ್ರೀಮಿಯಂ ಲುಕ್ ಅನ್ನು ಒದಗಿಸಿದೆ ಎನ್ನಬಹುದು.
ಕ್ಯಾಮೆರಾ ವಿಭಾಗದಲ್ಲಿ, Motorola Edge 70 Fusion ನಲ್ಲಿ 50 ಮೆಗಾಪಿಕ್ಸೆಲ್ Sony LYT-710 ಪ್ರೈಮರಿ ಸೆನ್ಸರ್ ಹೊಂದಿರುವ ಟ್ರಿಪಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ನೀಡಲಾಗಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು ಮ್ಯಾಕ್ರೋ ಲೆನ್ಸ್ ಸಹ ಸೇರಿವೆ. ಸೆಲ್ಫಿ ಮತ್ತು ವೀಡಿಯೋ ಕಾಲ್‌ಗಳಿಗೆ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಿದೆ. 4K ವೀಡಿಯೋ ರೆಕಾರ್ಡಿಂಗ್ ಬೆಂಬಲವು ಇರುವುದನ್ನು ಖಚಿತಪಡಿಸಲಾಗಿದೆ. ಕಾರ್ಯಕ್ಷಮತೆ ವಿಭಾಗದಲ್ಲಿ, ಈ ಫೋನ್ Qualcomm Snapdragon 7s Gen 4 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.
ಡಿಸ್‌ಪ್ಲೇ ವೈಶಿಷ್ಟ್ಯಗಳೂ ಗಮನಾರ್ಹವಾಗಿದ್ದು, Motorola Edge 70 Fusion ನಲ್ಲಿ 1.5K ರೆಸಲ್ಯೂಶನ್ ಹೊಂದಿರುವ ಕ್ವಾಡ್ ಕರ್ವ್ಡ್ ಪ್ಯಾನೆಲ್, 144Hz ರಿಫ್ರೆಶ್ ರೇಟ್ ಮತ್ತು 5,200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಬೆಂಬಲವಿರುವ ಡಿಸ್‌ಪ್ಲೇ ಇರುವುದು ಸ್ಪಷ್ಟವಾಗಿದೆ. ಈ ಡಿಸ್‌ಪ್ಲೆಯು HDR10+ ಬೆಂಬಲ ಹಾಗೂ SGS ಐ ಪ್ರೊಟೆಕ್ಷನ್ ವೈಶಿಷ್ಟ್ಯಗ ಳನ್ನು ಹೊಂದಿದೆ. ಆದರೆ, ಡಿಸ್‌ಪ್ಲೆ ಗಾತ್ರದ ಬಗ್ಗೆ ಕುತೂಹಲ ಕಾದಿರಿಸಲಾಗಿದೆ. ಇನ್ನು ಬ್ಯಾಟರಿ ವಿಭಾಗದಲ್ಲಿ, 7,000mAh ಸಾಮರ್ಥ್ಯದ ದೊಡ್ಡ ಸಿಲಿಕಾನ್ ಕಾರ್ಬನ್ ಬ್ಯಾಟರಿ ಇರಲಿದ್ದು, ಇದು 68W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿರುವಾಗ, ಹೊಸ ತಂತ್ರಜ್ಞಾನ ಮತ್ತು ದೊಡ್ಡ ಬ್ಯಾಟರಿ ಸಾಮರ್ಥ್ಯದೊಂದಿಗೆ ಗಮನ ಸೆಳೆಯುವ ಫೋನ್‌ಗಳ ಬೇಡಿಕೆ ಹೆಚ್ಚುತ್ತಿದೆ. ಇಂತಹ ಸಮಯದಲ್ಲಿ ದೊಡ್ಡ ಬ್ಯಾಟರಿ, ಪ್ರೀಮಿಯಂ ವಿನ್ಯಾಸ, ಶಕ್ತಿಯುತ ಪ್ರೊಸೆಸರ್ ಮತ್ತು ಉನ್ನತ ಕ್ಯಾಮೆರಾ ವ್ಯವಸ್ಥೆಯೊಂದಿಗೆ Motorola Edge 70 Fusion ಭಾರತೀಯ ಮಾರುಕಟ್ಟೆಯಲ್ಲಿ ಗಮನಾರ್ಹ ಸ್ಪರ್ಧೆ ನೀಡುವ ಸಾಧ್ಯತೆ ಇದೆ. ಬೆಲೆ ಘೋಷಣೆ ನಂತರ ಈ ಸಾಧನ ಮಧ್ಯಮ-ಶ್ರೇಣಿಯ ಸೆಗ್ಮೆಂಟ್‌ನಲ್ಲಿ ಹೇಗೆ ಸ್ಪರ್ಧಿಸುತ್ತದೆ ಎಂಬುದು ಸ್ಪಷ್ಟವಾಗಲಿದೆ.


Click it and Unblock the Notifications