Home
ಮೊಬೈಲ್

ಇಂದಿನಿಂದ Motorola Edge 70 Fusion ಸೇಲ್: ಬೆಲೆ, ಆಫರ್ಸ್ ಮತ್ತು ಎಲ್ಲಾ ಮಾಹಿತಿ!

25 ಸಾವಿರಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ, ಭಾರತದ ಮಾರುಕಟ್ಟೆಗೆ ಕಳೆದ ವಾರವಷ್ಟೇ ಭರ್ಜರಿ ಎಂಟ್ರಿ ನೀಡಿರುವ ಮಿಡ್‌-ರೇಂಜ್ ಪ್ರೀಮಿಯಂ Motorola Edge 70 Fusion ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 12ರಿಂದ) ಸಾಮಾನ್ಯ ಮಾರಾಟಕ್ಕೆ ಬಂದಿದೆ. ಕಳೆದ ಮಾರ್ಚ್ 6ರಂದು ಅರ್ಲಿ ಬರ್ಡ್ ಸೇಲ್ನಲ್ಲಿ ಖರೀದಿಸಲು ಸಾಧ್ಯವಾಗದ ಗ್ರಾಹಕರು, ಇಂದು ಮಧ್ಯಾಹ್ನ 12 ಗಂಟೆಯಿಂದ ಫೋನ್ ಅನ್ನು ಅನ್ನು ಖರೀದಿಸಬಹುದಾಗಿದ್ದು, Flipkart ಜೊತೆಗೆ Motorola ಇಂಡಿಯಾ ವೆಬ್‌ಸೈಟ್ ಮತ್ತು ದೇಶದ ವಿವಿಧ ರಿಟೇಲ್ ಅಂಗಡಿಗಳಲ್ಲೂ ಈ ಫೋನ್ ದೊರೆಯಲಿದೆ ಎಂದು ಕಂಪೆನಿಯು ತಿಳಿಸಿದೆ.

ಈಗಾಗಲೇ ನಾವು ತಿಳಿದಿರುವಂತೆ, ಫೋನ್‌ Qualcomm Snapdragon 7s Gen 4 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, 144Hz ರಿಫ್ರೆಶ್ ರೇಟ್ ಹೊಂದಿರುವ 1.5K AMOLED ಡಿಸ್‌ಪ್ಲೇ ಮತ್ತು ಶಕ್ತಿಶಾಲಿ ಕ್ಯಾಮೆರಾ ವ್ಯವಸ್ಥೆಯೊಂದಿಗೆ ಬಂದಿದೆ. ಪ್ರಮುಖವಾಗಿ, ಈ ಸ್ಮಾರ್ಟ್‌ಫೋನ್ ಮಧ್ಯಮ ಬೆಲೆ ವಿಭಾಗದಲ್ಲೇ ಲಭ್ಯವಾಗಿ, ಪ್ರೀಮಿಯಂ ಮಟ್ಟದ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಬಳಕೆದಾರರ ಗಮನ ಸೆಳೆಯುತ್ತಿದೆ. ಹಾಗಾದರೆ, ಹೊಸ Motorola Edge 70 Fusion ಸ್ಮಾರ್ಟ್‌ಫೋನ್‌ ಬೆಲೆ ಮತ್ತು ಆಫರ್‌ಗಳು ಏನಿವೆ ಮತ್ತು ಫೋನಿನ ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

ಇಂದಿನಿಂದ Motorola Edge 70 Fusion ಸೇಲ್: ಬೆಲೆ, ಆಫರ್ಸ್ ಮತ್ತು ಎಲ್ಲಾ ಮಾಹಿತಿ

Motorola Edge 70 Fusion:ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Motorola Edge 70 Fusion ಬೆಲೆ ₹26,999 ರಿಂದ ಆರಂಭವಾಗುತ್ತದೆ. ಈ ಬೆಲೆಗೆ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಪರಿಚಯವಾಗಿದೆ. ಇದರ 8GB + 256GB ಮಾದರಿಯ ಬೆಲೆ ₹29,999 ಆಗಿದ್ದು, 12GB + 256GB ವೇರಿಯಂಟ್ ₹32,999ಕ್ಕೆ ಲಭ್ಯವಾಗುತ್ತದೆ. ಆದರೆ, HDFC ಮತ್ತು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ₹2,000 ತಕ್ಷಣದ ರಿಯಾಯಿತಿ ಮತ್ತು ಅರ್ಹ ಸಾಧನವನ್ನು ವಿನಿಮಯ ಮಾಡಿದರೆ ₹2,000 ಎಕ್ಸ್‌ಚೇಂಜ್ ಬೋನಸ್ ಲಭ್ಯವಾಗುತ್ತದೆ.

ಈ ಆಫರ್‌ಗಳೊಂದಿಗೆ Motorola Edge 70 Fusion ಫೋನ್‌ನ ಆರಂಭಿಕ ಬೆಲೆ ₹24,999ಕ್ಕೆ ಇಳಿಯುತ್ತದೆ. ಇಷ್ಟೇ ಅಲ್ಲದೆ, ಈ ಪೋನ್ ಖರೀದಿಯ ಮೇಲೆ ಕಂಪೆನಿಯು 35,100 ರೂ. ಮೌಲ್ಯದ ಗೂಗಲ್ ಜೆಮಿನಿ ಪ್ರೊ ಪ್ಲಾನ್‌ಗೆ 18 ತಿಂಗಳವರೆಗೆ ಉಚಿತ ಪ್ರವೇಶವನ್ನು ಸಹ ಮೊಟೊರೊಲಾ ಒದಗಿಸಿದೆ. ಇನ್ನು ಗ್ರಾಹಕರು Pantone Blue Surf, Pantone Country Air ಮತ್ತು Pantone Silhouette ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ Motorola Edge 70 Fusion ಫೋನ್ ಅನ್ನು ಖರೀದಿಸಬಹುದು.

ಇಂದಿನಿಂದ Motorola Edge 70 Fusion ಸೇಲ್: ಬೆಲೆ, ಆಫರ್ಸ್ ಮತ್ತು ಎಲ್ಲಾ ಮಾಹಿತಿ

Motorola Edge 70 Fusion: ಪ್ರಮುಖ ವೈಶಿಷ್ಟ್ಯಗಳು
Motorola Edge 70 Fusion ನಲ್ಲಿ 6.78 ಇಂಚಿನ Super HD 1.5K Extreme AMOLED ಡಿಸ್‌ಪ್ಲೇ ನೀಡಲಾಗಿದೆ. ಈ ಡಿಸ್‌ಪ್ಲೇ 1,272 × 2,772 ಪಿಕ್ಸೆಲ್ ರೆಸಲ್ಯೂಶನ್, 144Hz ರಿಫ್ರೆಶ್ ರೇಟ್ ಮತ್ತು HDR10+ ಬೆಂಬಲವನ್ನು ಹೊಂದಿದೆ. ಗರಿಷ್ಠ 5,200 ನಿಟ್ಸ್ ಬ್ರೈಟ್‌ನೆಸ್ ಇರುವುದರಿಂದ ಸೂರ್ಯನ ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸುತ್ತದೆ. ಜೊತೆಗೆ 10-ಬಿಟ್ ಕಲರ್ ಮತ್ತು 100 ಶೇಕಡಾ DCI-P3 ಕಲರ್ ಗ್ಯಾಮಟ್ ಬೆಂಬಲ ಇದೆ. ಡಿಸ್‌ಪ್ಲೇ ರಕ್ಷಣೆಗೆ Corning Gorilla Glass 7i ಬಳಕೆ ಮಾಡಲಾಗಿದೆ.

ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಗೆ Snapdragon 7s Gen 4 ಚಿಪ್‌ಸೆಟ್ ಶಕ್ತಿ ನೀಡುತ್ತದೆ. ಇದು 12GB ವರೆಗೆ RAM ಮತ್ತು 256GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಸಂಯೋಜನೆಗೊಂಡಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ Android 16 ಆಧಾರಿತ Hello UI ಇದೆ. ಕಂಪನಿ ಈ ಫೋನ್‌ಗೆ ಮೂರು ಪ್ರಮುಖ Android ಅಪ್ಡೇಟ್‌ಗಳು ಮತ್ತು ಐದು ವರ್ಷಗಳ ಭದ್ರತಾ ಅಪ್ಡೇಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.

ಫೋಟೋಗ್ರಫಿ ವಿಭಾಗದಲ್ಲಿ Motorola Edge 70 Fusion ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದರ ಪ್ರಮುಖ ಕ್ಯಾಮೆರಾ 50 ಮೆಗಾಪಿಕ್ಸೆಲ್Sony LYTIA 710 sensor ಆಗಿದ್ದು, f/1.8 ಅಪರ್ಚರ್ ಮತ್ತು Optical Image Stabilisation (OIS) ಬೆಂಬಲ ಹೊಂದಿದೆ. ಜೊತೆಗೆ 120 ಡಿಗ್ರಿ ಫೀಲ್ಡ್ ಆಫ್ ವ್ಯೂ ಇರುವ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ನೀಡಲಾಗಿದೆ, ಇದು ಮ್ಯಾಕ್ರೋ ಫೋಟೋಗ್ರಫಿಗೂ ಸಹಕಾರಿಯಾಗಿದೆ. ಫೋನ್‌ನಲ್ಲಿ 3-in-1 ಲೈಟ್ ಸೆನ್ಸರ್ ಕೂಡ ಸೇರಿಸಲಾಗಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 30fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ಪ್ರಾಕ್ಸಿಮಿಟಿ ಸೆನ್ಸರ್, ಆಂಬಿಯಂಟ್ ಲೈಟ್ ಸೆನ್ಸರ್, ಆಕ್ಸಿಲೆರೋಮೀಟರ್, ಜೈರೋಸ್ಕೋಪ್, SAR ಸೆನ್ಸರ್, ಮ್ಯಾಗ್ನೆಟೋಮೀಟರ್ ಮತ್ತು ಸೆನ್ಸರ್ ಹಬ್ ಸೇರಿದಂತೆ ಹಲವು ಸೆನ್ಸರ್‌ಗಳನ್ನು ಒಳಗೊಂಡಿದೆ. ಭದ್ರತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ವ್ಯವಸ್ಥೆ ಲಭ್ಯ. ಜೊತೆಗೆ Dolby Atmos ಬೆಂಬಲ ಇರುವ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಉತ್ತಮ ಆಡಿಯೋ ಅನುಭವ ನೀಡುತ್ತವೆ.

Motorola Edge 70 Fusion ನಲ್ಲಿ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದೆ. ಇದು 68W TurboPower ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, 3G, 2G, Wi-Fi 6E, Bluetooth 6.0, NFC, GPS, A-GPS, GLONASS ಮತ್ತು Galileo ಸೇರಿವೆ.ಫೋನ್‌ಗೆ IP68 ಮತ್ತು IP69 ರೇಟಿಂಗ್ ಇದ್ದು ಧೂಳು ಮತ್ತು ನೀರಿನ ವಿರುದ್ಧ ಉತ್ತಮ ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ MIL-STD-810H ಗ್ರೇಡ್ ಪ್ರಮಾಣಪತ್ರವೂ ಇದೆ. ಸಾಧನದ ಗಾತ್ರ 162.76 × 75.60 × 7.99 ಮಿಮೀ ಆಗಿದ್ದು, ತೂಕ ಸುಮಾರು 193 ಗ್ರಾಂ ಇದೆ.

Best Mobiles in India

English summary
The mid-range premium Motorola Edge 70 Fusion has gone on open sale in India starting today (March 12). Powered by the Qualcomm Snapdragon 7s Gen 4 chipset, the smartphone features a 1.5K AMOLED display with a 144Hz refresh rate, a powerful camera system, and is available for purchase via Flipkart, the Motorola India website, and retail stores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+