Home
ಮೊಬೈಲ್

Flipkart ಮೈಕ್ರೋಸೈಟ್‌ನಲ್ಲಿ Motorola Edge 70 Fusion ಫೀಚರ್ಸ್ ಬಹಿರಂಗ!

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ Motorola ಕಂಪೆನಿಯ ಬಹುನಿರೀಕ್ಷಿತ Motorola Edge 70 Fusion ಶೀಘ್ರದಲ್ಲೇ ಬಿಡುಗಡೆಯಾಗುತ್ತಿರುವ ವಿಷಯವು ನಿಮಗೀಗಾಗಲೇ ತಿಳಿದಿರಬಹುದು. ಇದೀಗ ಈ ಸ್ಮಾರ್ಟ್‌ಫೋನಿನ ಕೆಲವು ಪ್ರಮುಖ ವೈಶಿಷ್ಟ್ಯಗಳ ವಿವರ ಬಹಿರಂಗವಾಗಿವೆ. ಫ್ಲಿಪ್‌ಕಾರ್ಟ್‌ನಲ್ಲಿ ತೆರೆದಿರುವ ಮೀಸಲಾದ ಮೈಕ್ರೋಸೈಟ್ ನಲ್ಲಿ, ಮುಂಬರುವ Motorola Edge 70 Fusion ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ, ಕ್ಯಾಮೆರಾ, ಬ್ಯಾಟರಿ ಹಾಗೂ ವಿನ್ಯಾಸದ ಬಗ್ಗೆ ಮಾಹಿತಿ ಒದಗಿಸಲಾಗಿದೆ. ಕಂಪೆನಿಯು ಹೇಳಿಕೊಂಡಿರುವಂತೆ, ಸೋನಿ LYT-710 ಹಿಂಬದಿಯ ಕ್ಯಾಮೆರಾವನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಇದಾಗಿದೆ. ಹಾಗಾದರೆ, ದೇಶದ ಮಾರುಕಟ್ಟೆಗೆ ಶೀಘ್ರದಲ್ಲೇ ಎಂಟ್ರಿ ನೀಡಲಿರುವ Motorola Edge 70 Fusion ಸ್ಮಾರ್ಟ್‌ಫೋನ್ ಹೇಗಿರಲಿದೆ ಎಂಬುದನ್ನು ನೋಡೋಣ ಬನ್ನಿ.

ಭಾರತದಲ್ಲಿ Motorola Edge 70 Fusion ಸ್ಮಾರ್ಟ್‌ಫೋನ್ Silhouette, Blue Surf ಮತ್ತು Country Air ಎಂಬ ಮೂರು ಪ್ಯಾಂಟೋನ್-ಕ್ಯುರೇಟೆಡ್ ಬಣ್ಣಗಳಲ್ಲಿ ಬರುತ್ತಿರುವುದನ್ನು ಎಂದು ದೃಢಪಡಿಸಲಾಗಿದೆ. ಈ ಮೂರು ಬಣ್ಣಗಳಲ್ಲೂ ಹಿಂಭಾಗ ಲೆದರ್ ಸ್ಪರ್ಶದ ಟೆಕ್ಸ್ಚರ್ ಹೊಂದಿದ್ದು, ಕೈಗೆ ಹಿಡಿದಾಗ ಪ್ರೀಮಿಯಂ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಈ ಫೋನ್ ಕೇವಲ 7.99 ಮಿಮೀ ದಪ್ಪ ಇದ್ದು ಸ್ಲಿಮ್ ಹಾಗೂ ಸ್ಟೈಲಿಷ್ ಲುಕ್‌ನೊಂದಿಗೆ ಯುವ ಬಳಕೆದಾರರನ್ನು ಸೆಳೆಯುವಂತಹ ವಿನ್ಯಾಸ ಹೊಂದಿದೆ.

ಡಿಸ್‌ಪ್ಲೇ ವಿಭಾಗದಲ್ಲಿ, Motorola Edge 70 Fusion 96.2% ಸ್ಕ್ರೀನ್-ಟು-ಬಾಡಿ ಅನುಪಾತ ಮತ್ತು 1.5K ರೆಸಲ್ಯೂಷನ್ ಹೊಂದಿರುವ ಕ್ವಾಡ್-ಕರ್ವ್ಡ್ ಸ್ಕ್ರೀನ್, 144Hz ರಿಫ್ರೆಶ್ ರೇಟ್ ಹಾಗೂ ಗರಿಷ್ಠ 5,200 ನಿಟ್ಸ್ ಬ್ರೈಟ್‌ನೆಸ್ ಸಪೋರ್ಟ್ ನೀಡುತ್ತದೆ. HDR10+ ಸಪೋರ್ಟ್ ಹಾಗೂ SGS ಐ ಪ್ರೊಟೆಕ್ಷನ್ ತಂತ್ರಜ್ಞಾನದಿಂದ ವಿಡಿಯೋ ವೀಕ್ಷಣೆ ಮತ್ತು ಗೇಮಿಂಗ್ ಇನ್ನಷ್ಟು ಮೃದುವಾಗುವ ನಿರೀಕ್ಷೆ ಇದೆ. ಜೊತೆಗೆ Smart Water Touch 3.0 ವೈಶಿಷ್ಟ್ಯದಿಂದ ತೇವವಾದ ಕೈಗಳಿಂದಲೂ ಫೋನ್ ಬಳಸಲು ಸಾಧ್ಯವಾಗುತ್ತದೆ ಎಂದು ಕಂಪೆನಿ ತಿಳಿಸಿದೆ.

Flipkart ಮೈಕ್ರೋಸೈಟ್‌ನಲ್ಲಿ Motorola Edge 70 Fusion ಫೀಚರ್ಸ್ ಬಹಿರಂಗ!

ಕ್ಯಾಮೆರಾ ವಿಭಾಗದಲ್ಲೂ Motorola Edge 70 Fusion ಫೋನ್ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಕಂಪನಿಯ ಪ್ರಕಾರ, 50 ಮೆಗಾಪಿಕ್ಸೆಲ್ Sony LYT-710 ಪ್ರಾಥಮಿಕ ಸೆನ್ಸರ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಇದಾಗಿದೆ. ಇದರೊಂದಿಗೆ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಮ್ಯಾಕ್ರೋ ಲೆನ್ಸ್ ನೀಡಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಲಭ್ಯವಿದ್ದು, 4K ವಿಡಿಯೋ ಚಿತ್ರೀಕರಣಕ್ಕೆ ಸಹಕಾರ ನೀಡುತ್ತದೆ. ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಫೋಟೋಗ್ರಫಿ ಪ್ರಿಯರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು.

ಕಾರ್ಯಕ್ಷಮತೆ ದೃಷ್ಟಿಯಿಂದ, ಈ ಸ್ಮಾರ್ಟ್‌ಫೋನ್‌ನ್ನು ‌ಅನ್ನು Snapdragon 7s Gen 4 ಪ್ರೊಸೆಸರ್ ಚಾಲಿತಗೊಳಿಸಲಿದೆ. ಬ್ಯಾಟರಿ ವಿಭಾಗದಲ್ಲಿ Motorola Edge 70 Fusion 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿಯನ್ನು ಹೊಂದಿದ್ದು, ಇದು 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಿದೆ. ಧೂಳು ಮತ್ತು ನೀರಿನ ವಿರುದ್ಧ ರಕ್ಷಣೆಗಾಗಿ, IP68 ಮತ್ತು IP69 ರೇಟಿಂಗ್‌ಗಳು ಇದ್ದು, ಉತ್ತಮ ರಕ್ಷಣೆ ಲಭ್ಯವಾಗಲಿದೆ ಎನ್ನಬಹುದು. ಇನ್ನು ಬೆಲೆಯ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ಮಾರುಕಟ್ಟೆಯು ₹24,999 ಆರಂಭಿಕ ಬೆಲೆಯನ್ನು ನಿರೀಕ್ಷಿಸಿದೆ.

ಒಟ್ಟಾರೆಯಾಗಿ, Motorola Edge 70 Fusion ಪ್ರೀಮಿಯಂ ವಿನ್ಯಾಸ, ಉನ್ನತ ಕ್ಯಾಮೆರಾ ತಂತ್ರಜ್ಞಾನ, ಶಕ್ತಿಶಾಲಿ ಬ್ಯಾಟರಿ ಮತ್ತು ಸ್ಮೂತ್ ಡಿಸ್‌ಪ್ಲೇ ವೈಶಿಷ್ಟ್ಯಗಳೊಂದಿಗೆ ಮಧ್ಯಮ-ಪ್ರೀಮಿಯಂ ವಿಭಾಗದಲ್ಲಿ ಸ್ಪರ್ಧೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಅಧಿಕೃತ ಬಿಡುಗಡೆ ದಿನಾಂಕ ಮತ್ತು ಬೆಲೆ ವಿವರಗಳು ಶೀಘ್ರದಲ್ಲೇ ಪ್ರಕಟವಾಗಲಿವೆ. ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿರುವವರು ಈ ಮಾದರಿಯನ್ನು ಗಮನದಲ್ಲಿಟ್ಟುಕೊಳ್ಳಬಹುದು. ನೀವು ಕೂಡ ಈ ಬಗ್ಗೆ ಕುತೂಹಲ ಹೊಂದಿದ್ದೀರಾ?..ಹಾಗಾದರೆ, ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
Motorola Edge 70 Fusion is set to launch soon in India with a slim 7.99mm design, Pantone-curated colours, and a premium leather-finish back. The smartphone is confirmed to feature the world’s first Sony LYT-710 rear camera, along with upgraded display, battery, and performance features, as revealed on Flipkart’s dedicated microsite.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+