Home
ಮೊಬೈಲ್

Motorola Edge 70 Fusion ವಿಮರ್ಶೆ: ಪ್ರಸ್ತುತ 30K ಒಳಗಿನ ಬೆಸ್ಟ್ ಪೋನ್?

ಭಾರತದಲ್ಲಿ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೆಚ್ಚು ಗಮನಸೆಳೆಯುತ್ತಿರುವುದು Motorola Edge 70 Fusion. ₹26,999 ಆರಂಭಿಕ ಬೆಲೆಯೊಂದಿಗೆ ಭಾರತದ ಮಾರುಕಟ್ಟೆಗೆ ಬಂದಿರುವ ಈ ಫೋನ್, ಪ್ರೀಮಿಯಂ ಲುಕ್ ಮತ್ತು ಅತ್ಯುತ್ತಮ ಫೀಚರ್‌ಗಳ ಸಮತೋಲನದಿಂದ ಬಳಕೆದಾರರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ದೊಡ್ಡ ಬ್ಯಾಟರಿ, ಕ್ಲೀನ್ ಸಾಫ್ಟ್‌ವೇರ್ ಅನುಭವ ಮತ್ತು ಭರವಸೆಯ ಕ್ಯಾಮೆರಾ ಸೆಟಪ್ ಇದನ್ನು ₹30,000 ಒಳಗಿನ ಫೋನ್‌ಗಳಲ್ಲಿ ಉತ್ತಮ ಆಯ್ಕೆಯಾಗಿ ಮಾಡುತ್ತದೆ. ಇಂದಿನ ಲೇಖನದಲ್ಲಿ ನಾವು ಈ ಹೊಸ Motorola Edge 70 Fusion ಪೋನ್ ಕುರಿತ ಒಂದು ಸಣ್ಣ ಆರಂಭಿಕ ವಿಮರ್ಶೆಯನ್ನು ಒದಗಿಸುತ್ತಿದ್ದೇವೆ. ನೀವು Motorola Edge 70 Fusion ಫೋನ್ ಖರೀದಿಸುವ ಮುನ್ನ ಗಮನಿಸಬಹುದಾದ ವಿಷಯಗಳು ಇವಾಗಿವೆ.

ಸ್ಲಿಮ್ ಮತ್ತು ಪ್ರೀಮಿಯಂ ವಿನ್ಯಾಸ
ವಿನ್ಯಾಸದ ವಿಚಾರಕ್ಕೆ ಬಂದರೆ, 7.99mm ಸ್ಲಿಮ್ ಬಾಡಿ ಮತ್ತು 193 ಗ್ರಾಂ ತೂಕದೊಂದಿಗೆ ಈ ಫೋನ್ ಹಿಡಿಯಲು ತುಂಬಾ ಆರಾಮಕರವಾಗಿದೆ. ದೀರ್ಘಕಾಲ ಬಳಸಿದರೂ ಕೈಗೆ ಬಾಧೆ ಆಗುವುದಿಲ್ಲ. ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಮತ್ತು ಹಿಂಭಾಗದ ಫ್ಯಾಬ್ರಿಕ್ ಫಿನಿಶ್ ಇದಕ್ಕೆ ವಿಭಿನ್ನ ಪ್ರೀಮಿಯಂ ಲುಕ್ ನೀಡುತ್ತದೆ. Blue Surf, Country Air ಮತ್ತು Silhouette ಎಂಬ Pantone ಬಣ್ಣಗಳಲ್ಲಿ ಇದು ಲಭ್ಯವಿದ್ದು, ಮಧ್ಯಮ ಬೆಲೆಯ ಫೋನ್‌ಗಳ ನಡುವೆ ವಿಶಿಷ್ಟವಾಗಿ ಕಾಣಿಸುತ್ತದೆ. 30,000 ಒಳಗಿನ ಫೋನ್‌ಗಳಲ್ಲಿ ಇಂತಹ ವೈಶಿಷ್ಟ್ಯದ ಮತ್ತೊಂದು ಫೋನಿನ ಅನುಭವ ಪ್ರಸ್ತುತ ಇಲ್ಲ ಎಂದೇ ನಮ್ಮ ಅಭಿಪ್ರಾಯ.

Motorola Edge 70 Fusion ವಿಮರ್ಶೆ: ಪ್ರಸ್ತುತ 30K ಒಳಗಿನ ಬೆಸ್ಟ್ ಪೋನ್?

ಕ್ಯಾಮೆರಾ ಗುಣಮಟ್ಟ: ಎಲ್ಲ ಪರಿಸ್ಥಿತಿಗೂ ಸರಿಹೊಂದುತ್ತದೆ
ಫೋಟೋಗ್ರಫಿ ಪ್ರಿಯರಿಗೆ, ಈ ಸ್ಮಾರ್ಟ್‌ಫೋನ್ ವಿಶ್ವಾಸಾರ್ಹ ಕ್ಯಾಮೆರಾ ಅನುಭವ ನೀಡುತ್ತದೆ. 50MP Sony LYT-710 ಮುಖ್ಯ ಸೆನ್ಸರ್ ಮತ್ತು 13MP ಅಲ್ಟ್ರಾ-ವೈಡ್ ಲೆನ್ಸ್ ಹೊಂದಿರುವ ಡ್ಯುಯಲ್ ಕ್ಯಾಮೆರಾ ಸೆಟಪ್, ವಿವಿಧ ಪರಿಸ್ಥಿತಿಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ. ದಿನದ ಬೆಳಕಿನಲ್ಲಿ ಚಿತ್ರಗಳು ಸ್ಪಷ್ಟವಾಗಿದ್ದು, ಬಣ್ಣಗಳು ಸಹ ನೈಸರ್ಗಿಕವಾಗಿ ಕಾಣಿಸುತ್ತವೆ. ಪೋರ್ಟ್ರೇಟ್ ಮೋಡ್‌ನಲ್ಲಿ ಉತ್ತಮ ಡೀಟೇಲ್ ಮತ್ತು ಬೋಕೇ ಪರಿಣಾಮ ದೊರೆಯುತ್ತದೆ. 32MP ಫ್ರಂಟ್ ಕ್ಯಾಮೆರಾ ಚಿತ್ರಗಳ ಆಕರ್ಷಿಸುತ್ತದೆ. ಕಡಿಮೆ ಬೆಳಕಿನಲ್ಲಿಯೂ ನೈಜ ಬಣ್ಣಗಳನ್ನು ಉಳಿಸುವ ಸಾಮರ್ಥ್ಯ ಈ ಫೋನ್‌ಗೆ ಇದೆ.

ದೀರ್ಘಕಾಲವಿರುವ ಬ್ಯಾಟರಿ ಸಾಮರ್ಥ್ಯ
Motorola Edge 70 Fusion ಫೋನ್‌ನ ಪ್ರಮುಖ ಹೈಲೈಟ್ ಎಂದರೆ ಇದರ 7,000mAh ಸಾಮರ್ಥ್ಯದ ಬ್ಯಾಟರಿ. ಈ ಬ್ಯಾಟರಿ, ಸಾಮಾನ್ಯ ಬಳಕೆಯಲ್ಲಿ ಸುಲಭವಾಗಿ ಎರಡು ದಿನಗಳವರೆಗೆ ಸಾಕಾಗುತ್ತದೆ. 5G ಸಂಪರ್ಕ, Always-On Display, ಹಾಟ್‌ಸ್ಪಾಟ್ ಬಳಕೆ ಮತ್ತು ಗರಿಷ್ಠ ರಿಫ್ರೆಶ್ ರೇಟ್ ಇಟ್ಟುಕೊಂಡರೂ ಬ್ಯಾಟರಿ ಪ್ರದರ್ಶನದಲ್ಲಿ ಕುಸಿತ ಕಾಣಿಸುವುದಿಲ್ಲ. ವೀಡಿಯೋ ಸ್ಟ್ರೀಮಿಂಗ್ ಅಥವಾ ಗೇಮಿಂಗ್ ನಂತರವೂ ಚಾರ್ಜ್ ಉಳಿಯುತ್ತದೆ. PCMark ಪರೀಕ್ಷೆಯಲ್ಲಿ 17 ಗಂಟೆ 34 ನಿಮಿಷಗಳ ಬ್ಯಾಟರಿ ಬ್ಯಾಕಪ್ ಸಿಕ್ಕಿರುವುದು ಇದರ ಸಾಮರ್ಥ್ಯವನ್ನು ಸ್ಪಷ್ಟಪಡಿಸುತ್ತದೆ.

Motorola Edge 70 Fusion ವಿಮರ್ಶೆ: ಪ್ರಸ್ತುತ 30K ಒಳಗಿನ ಬೆಸ್ಟ್ ಪೋನ್?

ಕಾರ್ಯಕ್ಷಮತೆ: ನಿತ್ಯ ಬಳಕೆಗೆ ಸೂಕ್ತ
ಕಾರ್ಯಕ್ಷಮತೆಯ ವಿಚಾರದಲ್ಲಿ, Qualcomm Snapdragon 7s Gen 4 ಪ್ರೊಸೆಸರ್ Motorola Edge 70 Fusion ಫೋನ್‌ಗೆ ಶಕ್ತಿಯನ್ನು ನೀಡುತ್ತದೆ. AnTuTu ನಲ್ಲಿ 11 ಲಕ್ಷಕ್ಕೂ ಹೆಚ್ಚು ಅಂಕ ಗಳಿಸಿರುವುದು ಇದರ ಸಾಮರ್ಥ್ಯವನ್ನು ತೋರಿಸುತ್ತದೆ. ದಿನನಿತ್ಯದ ಮಲ್ಟಿಟಾಸ್ಕಿಂಗ್, ವೀಡಿಯೋ ವೀಕ್ಷಣೆ, ಸಾಮಾಜಿಕ ಜಾಲತಾಣ ಬಳಕೆ ಮತ್ತು ಗೇಮಿಂಗ್ ಎಲ್ಲವೂ ಸ್ಮೂತ್ ಆಗಿ ನಡೆಯುತ್ತದೆ. ಕರ್ವ್ಡ್ ಡಿಸ್ಪ್ಲೇ ಗೇಮಿಂಗ್ ಅನುಭವವನ್ನು ಇನ್ನಷ್ಟು ಇಮರ್ಸಿವ್ ಆಗಿ ಮಾಡುತ್ತದೆ. ಒಟ್ಟಾರೆಯಾಗಿ, ಕಾರ್ಯಕ್ಷಮತೆ ವಿಭಾಗದಲ್ಲಿ ಈ ಫೋನ್ ರಾಜಿಯಾಗಿಲ್ಲ ಎಂದೇ ಹೇಳಬಹುದು.

ಗೇಮಿಂಗ್ ವೇಳೆ ತಾಪಮಾನ ಸಮಸ್ಯೆ ಇದೆ!
Motorola Edge 70 Fusion ಫೋನ್‌ನ ಕೆಲವು ದೋಷಗಳೂ ಗಮನಿಸಬೇಕಾಗಿದೆ. ವಿಶೇಷವಾಗಿ ಹೆವಿ ಗೇಮಿಂಗ್ ವೇಳೆ ಫೋನ್ ಬೇಗ ಬಿಸಿಯಾಗುವ ಸ್ವಭಾವ ಇದೆ. ಗೇಮಿಂಗ್ ವೇಳೆ ಕೆಲವೇ ನಿಮಿಷಗಳಲ್ಲಿ ತಾಪಮಾನ ಹೆಚ್ಚಾಗಿದ್ದನ್ನು ನೋಡಬಹುದು. ಆದರೆ, ಇದು ಮಿತಿಮೀರಿಲ್ಲ ಎಂಬುದನ್ನು ಗಮನಿಸಿದ್ದೇವೆ ಒಟ್ಟಾರೆಯಾಗಿ, Motorola Edge 70 Fusion ಸಮತೋಲನ ಹೊಂದಿದ ಸ್ಮಾರ್ಟ್‌ಫೋನ್ ಆಗಿದ್ದು, ಉತ್ತಮ ಬ್ಯಾಟರಿ, ಆಕರ್ಷಕ ವಿನ್ಯಾಸ, ನಂಬಿಕಾಸ್ಪದ ಕ್ಯಾಮೆರಾ ಮತ್ತು ಸ್ಥಿರ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ಅತ್ಯುತ್ತಮ ಟಾಪ್-ಎಂಡ್ ಪರ್ಫಾರ್ಮೆನ್ಸ್ ಬೇಕಿಲ್ಲದವರು, ಆದರೆ ದೈನಂದಿನ ಬಳಕೆ ಮತ್ತು ಗೇಮಿಂಗ್‌ಗಾಗಿ ವಿಶ್ವಾಸಾರ್ಹ ಸ್ಟೈಲೀಶ್ ಫೋನ್ ಹುಡುಕುತ್ತಿರುವವರಿಗೆ ಇದು ಖಂಡಿತವಾಗಿ ಪರಿಗಣಿಸಬಹುದಾದ ಆಯ್ಕೆ.

Best Mobiles in India

English summary
The Motorola Edge 70 Fusion stands out in the sub-₹30,000 segment with its slim premium design, clean Android experience, solid camera performance, and reliable battery—making it a strong all-rounder for everyday use.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+