ಭಾರತಕ್ಕೆ ಬರುತ್ತಿರುವ 2026ರ ಮೊದಲ Motorola Edge ಸರಣಿ ಫೋನ್ ಇದು!
2026ರ ಮೊದಲ Motorola Edge ಸರಣಿಯ ಸ್ಮಾರ್ಟ್‌ಫೋನ್ ಶೀಘ್ರವೇ ಭಾರತದ ಮಾರುಕಟ್ಟೆಗೆ ಆಗಮಿಸಲು ಸಜ್ಜಾಗುತ್ತಿದೆ. Motorola Edge 70 Fusion ಹೆಸರಿನ ಹೊಸ ಸ್ಮಾರ್ಟ್‌ಫೋನ್ ದೇಶದ ಮಾರುಕಟ್ಟೆಗೆ ಪರಿಚಯವಾಗುತ್ತಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿದ ಟೀಸರ್‌ನಿಂದ ಈ ಫೋನಿನ ಹೆಸರು ಮತ್ತು ಬಣ್ಣ ಆಯ್ಕೆಗಳನ್ನು ದೃಢವಾಗಿವೆ. ಈ ಬೆಳವಣಿಗೆಯು ದೇಶದಲ್ಲಿ ಶೀಘ್ರವೇ Motorola Edge 70 Fusion ಆಗಮನವನ್ನು ಖಚಿತಪಡಿಸಿದೆ. ಜೊತೆಗೆ ಇದೇ ಫೆಬ್ರವರಿ 23ರಂದು ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ ಎಂದು ಟೀಸರ್ ಸೂಚಿಸಿದ್ದು, ಟೆಕ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
Motorola Edge 70 Fusion : ಬಣ್ಣ ಆಯ್ಕೆಗಳು, ವೈಶಿಷ್ಟ್ಯಗಳು (ನಿರೀಕ್ಷಿತವೂ ಸೇರಿದಂತೆ)
ಫ್ಲಿಪ್‌ಕಾರ್ಟ್‌ನಲ್ಲಿ ಪ್ರಕಟಿಸಲಾಗಿರುವ ಹೊಸ ಟೀಸರ್‌ನಲ್ಲಿ ಮುಂಬರುವ Motorola Edge 70 Fusion ಕಾಣಿಸಿಕೊಂಡಿದೆ. ಈ ಬಾರಿ ಮೊಟೊರೊಲಾ ವಿನ್ಯಾಸಕ್ಕೆ ವಿಶೇಷ ಒತ್ತು ನೀಡಿರುವುದು ಟೀಸರ್‌ನಲ್ಇಮ ಚಿತ್ರಗಳಿಂದ ಸ್ಪಷ್ಟವಾಗುತ್ತದೆ. Motorola Edge 70 Fusion ಲೆದರ್ ಫಿನಿಷ್‌ನೊಂದಿಗೆ Pantone ಆಯ್ಕೆ ಮಾಡಿದ Blue Surf, Country Air ಮತ್ತು Silhouette ಬಣ್ಣಗಳು ಗಮನ ಸೆಳೆಯುತ್ತಿವೆ. ಸ್ಟೈಲಿಷ್ ಲುಕ್ ಬಯಸುವ ಯುವ ಬಳಕೆದಾರರನ್ನು ಗುರಿಯಾಗಿಸಿಕೊಂಡು ಈ ಬಣ್ಣ ಆಯ್ಕೆಗಳು ರೂಪುಗೊಂಡಿರುವ ಸಾಧ್ಯತೆ ಇದೆ.

ಈ ಬಾರಿ ಕ್ಯಾಮೆರಾ ವಿಭಾಗದಲ್ಲಿಯೂ ಸಹ Motorola Edge 70 Fusion ಗಮನಾರ್ಹವಾಗಬಹುದು. "ಇತರರು ಗಮನಿಸದ ಕ್ಷಣಗಳನ್ನೂ ಸೆರೆಹಿಡಿಯುವ ಲೆನ್ಸ್" ಎಂಬ ಟ್ಯಾಗ್‌ಲೈನ್ ಅನ್ನು Motorola ನೀಡಿದೆ. ಇದು 50 ಮೆಗಾಪಿಕ್ಸೆಲ್ Sony Lytia ಪ್ರೈಮರಿ ಕ್ಯಾಮೆರಾದ ಮೇಲೆ ಒತ್ತು ನೀಡುತ್ತದೆ ಎಂದು ಹೇಳಬಹುದು. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಚಿತ್ರ ಗುಣಮಟ್ಟ ನೀಡುವ ಸಾಮರ್ಥ್ಯ ಇದರಲ್ಲಿ ಇರಬಹುದೆಂದು ಅಂದಾಜಿಸಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕಾಲ್‌ಗಾಗಿ 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಲಭ್ಯವಾಗುವ ಸಾಧ್ಯತೆಯೂ ಇದೆ.
ಬ್ಯಾಟರಿ ಸಾಮರ್ಥ್ಯವೇ ಈ ಫೋನ್‌ನ ಪ್ರಮುಖ ಆಕರ್ಷಣೆಯಾಗಬಹುದು, Motorola Edge 70 Fusion ನಲ್ಲಿ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಮತ್ತು 68W ಫಾಸ್ಟ್ ಚಾರ್ಜಿಂಗ್ ಬೆಂಬಲವಿರುವ ಸಾಧ್ಯತೆ ಇದೆ. ಧೂಳು ಹಾಗೂ ನೀರಿನಿಂದ ರಕ್ಷಣೆಗಾಗಿ IP68 ಮತ್ತು IP69 ರೇಟಿಂಗ್ ಇರುವ ಸಾಧ್ಯತೆ ಇದೆ. ಡಿಸ್‌ಪ್ಲೆ ವಿಭಾಗದಲ್ಲಿ, ಈ ಫೋನ್ 6.78 ಇಂಚಿನ ಕ್ವಾಡ್-ಕರ್ವ್ಡ್ OLED ಡಿಸ್ಪ್ಲೇ ಹೊಂದಿರಬಹುದು. ಇದು 144Hz ರಿಫ್ರೆಶ್ ರೇಟ್ ಹೊಂದಿರಬಹುದು ಹಾಗೂ ಡಿಸ್‌ಪ್ಲೆಗೆ Corning Gorilla Glass 7i ರಕ್ಷಣೆಯೂ ಇರಬಹುದೆಂದು ಲೀಕ್‌ಗಳು ಸೂಚಿಸಿವೆ.
ಇನ್ನು ಟೀಸರ್‌ನಲ್ಲಿ ಸೂಚಿಸಿರುವಂತೆ, ಫೆಬ್ರವರಿ 23ರಂದು Motorola Edge 70 Fusion ಕುರಿತು ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ. ಅದಕ್ಕೂ ಮೊದಲೇ, Motorola Edge 70 Fusion ಭಾರತ ಮಾರುಕಟ್ಟೆಯಲ್ಲಿ ಮಿಡ್-ರೇಂಜ್ ವಿಭಾಗದಲ್ಲಿ ಹೊಸ ಸ್ಪರ್ಧೆಯನ್ನು ಸೃಷ್ಟಿಸಬಹುದಾದ ಸ್ಮಾರ್ಟ್‌ಫೋನ್ ಆಗಿ ಕಾಣುತ್ತಿದೆ. ಅಧಿಕೃತ ಲಾಂಚ್ ನಂತರ ಬೆಲೆ ಮತ್ತು ಸಂಪೂರ್ಣ ವೈಶಿಷ್ಟ್ಯಗಳ ಬಗ್ಗೆ ಸ್ಪಷ್ಟತೆ ಸಿಗಲಿದ್ದು, ಪ್ರೀಮಿಯಂ ಫೀಚರ್‌ಗಳನ್ನು ಸಮತೋಲನ ಬೆಲೆಗೆ ನೀಡುವ ಪ್ರಯತ್ನವಾಗಿ ಇದು ಗಮನ ಸೆಳೆಯಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications