ಭಾರತಕ್ಕೆ Motorola Edge 70 Fusion ಎಂಟ್ರಿ ಸಮೀಪ: ಚಿಪ್‌ಸೆಟ್, ಡಿಸೈನ್ ಹೈಲೈಟ್!
2026ರ ಆರಂಭದಲ್ಲೇ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಚರ್ಚೆಗೆ ಕಾರಣವಾಗಿರುವುದು Motorola Edge 70 Fusion ಸ್ಮಾರ್ಟ್‌ಫೋನ್ ಆಗಮನದ ಸುಳಿವು. Motorola Edge ಸರಣಿಯ ಈ ಹೊಸ ಮಾದರಿ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬ ಸುಳಿವುಗಳು ದೊರಕಿವೆ. ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡಿರುವ ಅಧಿಕೃತ ಟೀಸರ್ ಮೂಲಕ ಫೋನ್ ಹೆಸರು ದೃಢಪಟ್ಟಿದ್ದು, ಲಾಂಚ್ ದಿನಾಂಕವೂ ಸಮೀಪದಲ್ಲಿದೆ ಎನ್ನುವ ಸೂಚನೆ ಸಿಕ್ಕಿದೆ. ಫೆಬ್ರವರಿ 23ರಂದು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ ಎಂದು ಟೀಸರ್ ತಿಳಿಸಿದೆ.
Motorola ಕಂಪೆನಿಯು ಈ Edge 70 Fusion ಸ್ಮಾರ್ಟ್‌ಫೋನಿನ ವಿನ್ಯಾಸಕ್ಕೆ ವಿಶೇಷ ಆದ್ಯತೆ ನೀಡಿರುವುದು ಸ್ಪಷ್ಟವಾಗಿದೆ. ಟೀಸರ್‌ನಲ್ಲಿ ಕಾಣಿಸಿದಂತೆ, Motorola Edge 70 Fusion ಪ್ಯಾಂಟೋನ್ ಆಯ್ಕೆ ಮಾಡಿದ Blue Surf, Country Air ಮತ್ತು Silhouette ಸೇರಿದಂತೆ ಹಲವು ಆಕರ್ಷಕ ಬಣ್ಣಗಳಲ್ಲಿ ಲೆದರ್-ಪ್ರೇರಿತ ಫಿನಿಷ್ ನೀಡಲಾಗುವ ಸಾಧ್ಯತೆ ಇದೆ. ಹಿಂಭಾಗದಲ್ಲಿ ಟೆಕ್ಸ್ಚರ್ ಫಿನಿಷ್ ಹಾಗೂ ಮಧ್ಯದಲ್ಲಿ ಮೋಟೊರೋಲಾ ಲೋಗೋ ಹೊಂದಿರುವ ವಿನ್ಯಾಸ ಪ್ರೀಮಿಯಂ ಅನುಭವ ನೀಡುವಂತಿದೆ. ಸ್ಲಿಮ್ ಪ್ರೊಫೈಲ್ ಮತ್ತು ಕರ್ವ್ಡ್ ಎಡ್ಜ್‌ಗಳು ಇದನ್ನು ಕೈಯಲ್ಲಿ ಹಿಡಿದಾಗ ಸುಲಭವಾಗಿ ಬಳಸುವಂತಿರಬಹುದು.
ಕ್ಯಾಮೆರಾ ವಿಭಾಗದಲ್ಲೂ ಈ Motorola Edge 70 Fusion ಫೋನ್ ವಿಶೇಷ ಗಮನ ಸೆಳೆಯುತ್ತಿದೆ. "ಇತರರು ಗಮನಿಸದ ಕ್ಷಣಗಳನ್ನು ಹಿಡಿಯುವ ಲೆನ್ಸ್" ಎಂಬ ಟ್ಯಾಗ್‌ಲೈನ್ 50 ಮೆಗಾಪಿಕ್ಸೆಲ್ Sony Lytia ಪ್ರೈಮರಿ ಸೆನ್ಸರ್ ಬಗ್ಗೆ ಸೂಚಿಸುತ್ತದೆ. ಉತ್ತಮ ಡೀಟೈಲ್, ನೈಟ್ ಫೋಟೋಗ್ರಫಿ ಹಾಗೂ ನೈಸರ್ಗಿಕ ಬಣ್ಣಗಳೊಂದಿಗೆ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಇದರಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಮೂವರು ಕ್ಯಾಮೆರಾ ಕಟ್‌ಔಟ್‌ಗಳೊಂದಿಗೆ ಸ್ವಲ್ಪ ಮೇಲೇಳಿರುವ ಚೌಕಾಕಾರದ ಕ್ಯಾಮೆರಾ ಮೋಡ್ಯೂಲ್ ಹಿಂಭಾಗದ ಎಡ ಮೇಲ್ಭಾಗದಲ್ಲಿ ಇರಬಹುದು. ಇದ ಹಿಂಭಾಗದಲ್ಲಿ ಪ್ರೀಮಿಯಂ ಲುಕ್ ನೀಡುತ್ತದೆ.

ಕಾರ್ಯಕ್ಷಮತೆಯ ವಿಭಾಗದಲ್ಲಿ, Motorola Edge 70 Fusion ನಲ್ಲಿ Snapdragon 7s Gen 4 ಪ್ರೊಸೆಸರ್ ಇರುವ ಸಾಧ್ಯತೆ ಇದೆ. 8GB ಮತ್ತು 12GB RAM ಆಯ್ಕೆಗಳು ಲಭ್ಯವಾಗಬಹುದು ಎಂದು ವರದಿಗಳು ಸೂಚಿಸುತ್ತವೆ. ಇದರಿಂದ ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್ ಗುಣಮಟ್ಟದ ನಿರೀಕ್ಷೆಯಿದೆ. ಬ್ಯಾಟರಿ ಸಾಮರ್ಥ್ಯವು ಕೂಡ ಈ ಫೋನಿನ ಪ್ರಮುಖ ಆಕರ್ಷಣೆಯಾಗಬಹುದು. ಟೀಸರ್‌ನಲ್ಲಿ ದೊಡ್ಡ ಬ್ಯಾಟರಿ ಬಗ್ಗೆ ಸುಳಿವು ನೀಡಿರುವುದರಿಂದ ದೀರ್ಘಕಾಲ ಬಳಕೆ ಸಾಧ್ಯವಾಗಬಹುದು. ಜೊತೆಗೆ IP68 ಮತ್ತು IP69 ರೇಟಿಂಗ್‌ಗಳೊಂದಿಗೆ ಧೂಳು ಮತ್ತು ನೀರಿನ ವಿರುದ್ಧ ಹೆಚ್ಚುವರಿ ರಕ್ಷಣೆ ಸಿಗುವ ಸಾಧ್ಯತೆ ಇದೆ.
ಪ್ರಸ್ತುತ ಇಷ್ಟು ಮಾಹತಿಗಳು ದೊರೆತಿದ್ದರೆ, ಈ ಫೋನಿನ ಮುಂಭಾಗದಲ್ಲಿ ಕರ್ವ್ಡ್ ಡಿಸ್ಪ್ಲೇ, ಸ್ಲಿಮ್ ಬೆಜೆಲ್‌ಗಳು ಮತ್ತು ಸೆಂಟರ್ ಹೋಲ್-ಪಂಚ್ ಸೆಲ್ಫಿ ಕ್ಯಾಮೆರಾ ಹೊಂದಿರುವ ವಿನ್ಯಾಸವನ್ನು ನಾವು ಎದುರುನೋಡಬಹುದು. ಒಟ್ಟಾರೆಯಾಗಿ, ಸ್ಟೈಲ್, ಕ್ಯಾಮೆರಾ ಸಾಮರ್ಥ್ಯ, ಬ್ಯಾಟರಿ ಶಕ್ತಿ ಮತ್ತು ಕಾರ್ಯಕ್ಷಮತೆಯ ಸಮತೋಲನದೊಂದಿಗೆ Motorola Edge 70 Fusion ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಸಿದ್ಧವಾಗುತ್ತಿದೆ. ಅಧಿಕೃತ ಬೆಲೆ ಮತ್ತು ಲಭ್ಯತೆ ಘೋಷಣೆ ಬಳಿಕ ಈ ಫೋನ್ ಯಾವ ವಿಭಾಗದಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ ಎಂಬುದು ತಿಳಿಯುತ್ತದೆ. ಫೆಬ್ರವರಿ 23ರಂದು ನಮಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ.


Click it and Unblock the Notifications








