Home
ಮೊಬೈಲ್

ಭಾರತದಲ್ಲಿ Motorola Edge 70 Fusion ಲಾಂಚ್: 25K ಒಳಗೆ ಪ್ರೀಮಿಯಂ ಫೋನ್!

Motorola ಕಂಪೆನಿಯ ಬಹುನಿರೀಕ್ಷಿತ Motorola Edge 70 Fusion ಸ್ಮಾರ್ಟ್‌ಫೋನ್‌ ಇಂದು (ಮಾರ್ಚ್ 6, ಶುಕ್ರವಾರ) ಭಾರತದಲ್ಲಿ ಭರ್ಜರಿಯಾಗಿ ಬಿಡುಗಡೆಗೊಂಡಿದೆ. ನಿರೀಕ್ಷೆಯಂತೆಯೇ, ಈ ಫೋನ್‌ Qualcomm Snapdragon 7s Gen 4 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತಿದ್ದು, 144Hz ರಿಫ್ರೆಶ್ ರೇಟ್ ಹೊಂದಿರುವ 1.5K AMOLED ಡಿಸ್‌ಪ್ಲೇ ಮತ್ತು ಶಕ್ತಿಶಾಲಿ ಕ್ಯಾಮೆರಾ ವ್ಯವಸ್ಥೆಯೊಂದಿಗೆ ಬರುತ್ತದೆ. ಪ್ರಮುಖವಾಗಿ, ಈ ಸ್ಮಾರ್ಟ್‌ಫೋನ್ ಮಧ್ಯಮ ಬೆಲೆ ವಿಭಾಗದಲ್ಲೇ ಲಭ್ಯವಾಗುತ್ತಿದ್ದು, ಪ್ರೀಮಿಯಂ ಮಟ್ಟದ ವೈಶಿಷ್ಟ್ಯಗಳನ್ನು ನೀಡುವ ಮೂಲಕ ಬಳಕೆದಾರರ ಗಮನ ಸೆಳೆಯುತ್ತಿದೆ. ಹಾಗಾದರೆ, ಹೊಸ Motorola Edge 70 Fusion ಸ್ಮಾರ್ಟ್‌ಫೋನ್‌ ಹೇಗಿದೆ?, ಬೆಲೆ ಎಷ್ಟು ಮತ್ತು ಸಂಪೂರ್ಣ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.

Motorola Edge 70 Fusion:ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ Motorola Edge 70 Fusion ಬೆಲೆ ₹26,999 ರಿಂದ ಆರಂಭವಾಗುತ್ತದೆ. ಈ ಬೆಲೆಗೆ 8GB RAM ಮತ್ತು 128GB ಸ್ಟೋರೇಜ್ ವೇರಿಯಂಟ್ ಪರಿಚಯವಾಗಿದೆ. ಇದರ 8GB + 256GB ಮಾದರಿಯ ಬೆಲೆ ₹29,999 ಆಗಿದ್ದು, 12GB + 256GB ವೇರಿಯಂಟ್ ₹32,999ಕ್ಕೆ ಲಭ್ಯವಾಗುತ್ತದೆ. ಆದರೆ, HDFC ಮತ್ತು Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ₹2,000 ತಕ್ಷಣದ ರಿಯಾಯಿತಿ ಮತ್ತು ಅರ್ಹ ಸಾಧನವನ್ನು ವಿನಿಮಯ ಮಾಡಿದರೆ ₹2,000 ಎಕ್ಸ್‌ಚೇಂಜ್ ಬೋನಸ್ ಕೂಡ ಲಭ್ಯ. ಈ ಆಫರ್‌ಗಳೊಂದಿಗೆ ಫೋನ್‌ನ ಪ್ರಭಾವಿ ಆರಂಭಿಕ ಬೆಲೆ ₹24,999ಕ್ಕೆ ಇಳಿಯುತ್ತದೆ.

ಭಾರತದಲ್ಲಿ Motorola Edge 70 Fusion ಲಾಂಚ್: 25K ಒಳಗೆ ಪ್ರೀಮಿಯಂ ಫೋನ್!

ಲಭ್ಯತೆಯ ಕುರಿತು ನೋಡುವುದಾದರೆ, ಈ Motorola Edge 70 Fusion ಸ್ಮಾರ್ಟ್‌ಫೋನ್ Pantone Blue Surf, Pantone Country Air ಮತ್ತು Pantone Silhouette ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ. ಫೋನ್ ಮಾರ್ಚ್ 6ರಂದು ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ವಿಶೇಷ ಅರ್ಲಿ ಬರ್ಡ್ ಸೇಲ್ ಮೂಲಕ ನಲ್ಲಿ ಖರೀದಿಗೆ ಲಭ್ಯವಾಗಲಿದೆ. ಸಾಮಾನ್ಯ ಮಾರಾಟವು ಮಾರ್ಚ್ 12ರಿಂದ ಆರಂಭವಾಗಲಿದ್ದು, Flipkart ಜೊತೆಗೆ Motorola ಇಂಡಿಯಾ ವೆಬ್‌ಸೈಟ್ ಮತ್ತು ದೇಶದ ವಿವಿಧ ರಿಟೇಲ್ ಅಂಗಡಿಗಳಲ್ಲೂ ಈ ಫೋನ್ ದೊರೆಯಲಿದೆ ಎಂದು ಕಂಪೆನಿಯು ತಿಳಿಸಿದೆ

Motorola Edge 70 Fusion: ಪ್ರಮುಖ ವೈಶಿಷ್ಟ್ಯಗಳು
Motorola Edge 70 Fusion ನಲ್ಲಿ 6.78 ಇಂಚಿನ Super HD 1.5K Extreme AMOLED ಡಿಸ್‌ಪ್ಲೇ ನೀಡಲಾಗಿದೆ. ಈ ಡಿಸ್‌ಪ್ಲೇ 1,272 × 2,772 ಪಿಕ್ಸೆಲ್ ರೆಸಲ್ಯೂಶನ್, 144Hz ರಿಫ್ರೆಶ್ ರೇಟ್ ಮತ್ತು HDR10+ ಬೆಂಬಲವನ್ನು ಹೊಂದಿದೆ. ಗರಿಷ್ಠ 5,200 ನಿಟ್ಸ್ ಬ್ರೈಟ್‌ನೆಸ್ ಇರುವುದರಿಂದ ಸೂರ್ಯನ ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸುತ್ತದೆ. ಜೊತೆಗೆ 10-ಬಿಟ್ ಕಲರ್ ಮತ್ತು 100 ಶೇಕಡಾ DCI-P3 ಕಲರ್ ಗ್ಯಾಮಟ್ ಬೆಂಬಲ ಇದೆ. ಡಿಸ್‌ಪ್ಲೇ ರಕ್ಷಣೆಗೆ Corning Gorilla Glass 7i ಬಳಕೆ ಮಾಡಲಾಗಿದೆ.

ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಗೆ Snapdragon 7s Gen 4 ಚಿಪ್‌ಸೆಟ್ ಶಕ್ತಿ ನೀಡುತ್ತದೆ. ಇದು 12GB ವರೆಗೆ RAM ಮತ್ತು 256GB ವರೆಗೆ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಸಂಯೋಜನೆಗೊಂಡಿದೆ. ಸಾಫ್ಟ್‌ವೇರ್ ವಿಭಾಗದಲ್ಲಿ Android 16 ಆಧಾರಿತ Hello UI ಇದೆ. ಕಂಪನಿ ಈ ಫೋನ್‌ಗೆ ಮೂರು ಪ್ರಮುಖ Android ಅಪ್ಡೇಟ್‌ಗಳು ಮತ್ತು ಐದು ವರ್ಷಗಳ ಭದ್ರತಾ ಅಪ್ಡೇಟ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.

ಭಾರತದಲ್ಲಿ Motorola Edge 70 Fusion ಲಾಂಚ್: 25K ಒಳಗೆ ಪ್ರೀಮಿಯಂ ಫೋನ್!

ಫೋಟೋಗ್ರಫಿ ವಿಭಾಗದಲ್ಲಿ Motorola Edge 70 Fusion ಡ್ಯುಯಲ್ ರಿಯರ್ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. ಇದರ ಪ್ರಮುಖ ಕ್ಯಾಮೆರಾ 50 ಮೆಗಾಪಿಕ್ಸೆಲ್Sony LYTIA 710 sensor ಆಗಿದ್ದು, f/1.8 ಅಪರ್ಚರ್ ಮತ್ತು Optical Image Stabilisation (OIS) ಬೆಂಬಲ ಹೊಂದಿದೆ. ಜೊತೆಗೆ 120 ಡಿಗ್ರಿ ಫೀಲ್ಡ್ ಆಫ್ ವ್ಯೂ ಇರುವ 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ನೀಡಲಾಗಿದೆ, ಇದು ಮ್ಯಾಕ್ರೋ ಫೋಟೋಗ್ರಫಿಗೂ ಸಹಕಾರಿಯಾಗಿದೆ. ಫೋನ್‌ನಲ್ಲಿ 3-in-1 ಲೈಟ್ ಸೆನ್ಸರ್ ಕೂಡ ಸೇರಿಸಲಾಗಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗಾಗಿ 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 30fps ನಲ್ಲಿ 4K ವಿಡಿಯೋ ರೆಕಾರ್ಡಿಂಗ್ ಬೆಂಬಲಿಸುತ್ತದೆ.

ಸ್ಮಾರ್ಟ್‌ಫೋನ್‌ನಲ್ಲಿ ಪ್ರಾಕ್ಸಿಮಿಟಿ ಸೆನ್ಸರ್, ಆಂಬಿಯಂಟ್ ಲೈಟ್ ಸೆನ್ಸರ್, ಆಕ್ಸಿಲೆರೋಮೀಟರ್, ಜೈರೋಸ್ಕೋಪ್, SAR ಸೆನ್ಸರ್, ಮ್ಯಾಗ್ನೆಟೋಮೀಟರ್ ಮತ್ತು ಸೆನ್ಸರ್ ಹಬ್ ಸೇರಿದಂತೆ ಹಲವು ಸೆನ್ಸರ್‌ಗಳನ್ನು ಒಳಗೊಂಡಿದೆ. ಭದ್ರತೆಗಾಗಿ ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ವ್ಯವಸ್ಥೆ ಲಭ್ಯ. ಜೊತೆಗೆ Dolby Atmos ಬೆಂಬಲ ಇರುವ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು ಉತ್ತಮ ಆಡಿಯೋ ಅನುಭವ ನೀಡುತ್ತವೆ.

Motorola Edge 70 Fusion ನಲ್ಲಿ 7,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಇದೆ. ಇದು 68W TurboPower ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, 3G, 2G, Wi-Fi 6E, Bluetooth 6.0, NFC, GPS, A-GPS, GLONASS ಮತ್ತು Galileo ಸೇರಿವೆ.ಫೋನ್‌ಗೆ IP68 ಮತ್ತು IP69 ರೇಟಿಂಗ್ ಇದ್ದು ಧೂಳು ಮತ್ತು ನೀರಿನ ವಿರುದ್ಧ ಉತ್ತಮ ರಕ್ಷಣೆಯನ್ನು ಒದಗಿಸುತ್ತದೆ. ಜೊತೆಗೆ MIL-STD-810H ಗ್ರೇಡ್ ಪ್ರಮಾಣಪತ್ರವೂ ಇದೆ. ಸಾಧನದ ಗಾತ್ರ 162.76 × 75.60 × 7.99 ಮಿಮೀ ಆಗಿದ್ದು, ತೂಕ ಸುಮಾರು 193 ಗ್ರಾಂ ಇದೆ.

Best Mobiles in India

English summary
Motorola has launched the new Motorola Edge 70 Fusion smartphone in India featuring the Snapdragon 7s Gen 4 chipset, a 144Hz 1.5K AMOLED display, and a powerful camera setup. With premium features offered at a mid-range price, the phone aims to stand out in the competitive smartphone market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+