Motorola Edge 70 ಬಿಡುಗಡೆ: ಇದು ನಿಜವಾಗಿಯೂ ಪ್ರೀಮಿಯಂ ಕ್ಲಾಸ್ ಫೋನ್!
ನವೆಂಬರ್ 5, ಬುಧವಾರದಂದು ಮೋಟೊರೊಲಾ ಕಂಪನಿಯು ಭಾರತದಲ್ಲಿ Moto G67 Power 5G ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ. ಮತ್ತು ಇದೇ ವೇಳೆ ಜಾಗತಿಕವಾಗಿ ತನ್ನ ಫ್ಲಾಗ್‌ಶಿಪ್ Motorola Edge 70 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾದ್ದು, ಈ ಹೊಸ Edge ಸರಣಿಯ ಫೋನ್ ತನ್ನ ಸುಂದರ ಸ್ಲಿಮ್ ವಿನ್ಯಾಸ, ಶಕ್ತಿಯುತ ಚಿಪ್‌ಸೆಟ್, ಮತ್ತು ಪ್ರೀಮಿಯಂ ಕ್ಯಾಮೆರಾ ವೈಶಿಷ್ಟ್ಯಗಳಿಂದ ಗಮನ ಸೆಳೆಯುತ್ತಿದೆ. ಹಾಗಾದರೆ, ಹೊಸ Motorola Edge 70 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಮತ್ತು ಪ್ರಮುಖ ಫೀಚರ್ಸ್ ಯಾವುವು ಎಂಬುದನ್ನು ನೋಡೋಣ ಬನ್ನಿ.!
Motorola Edge 70: ಪ್ರಮುಖ ವೈಶಿಷ್ಟ್ಯಗಳು
ಹೊಸ Motorola Edge 70 ಸ್ಮಾರ್ಟ್‌ಫೋನ್ ಕೇವಲ 5.99 ಮಿಮೀ ದಪ್ಪ ಮತ್ತು 159 ಗ್ರಾಂ ತೂಕದೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಅತ್ಯಂತ ಹಗುರವಾದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ಪರಿಚಯಗೊಂಡಿದೆ. ಇದು ವಿಮಾನ-ದರ್ಜೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು ವಿಶಿಷ್ಟವಾದ ನೈಲಾನ್-ಟೆಕ್ಸ್ಚರ್ಡ್ ಹಿಂಭಾಗದ ಫಲಕವನ್ನು ಹೊಂದಿದ್ದು, ತೆಳುವಾದ ವಿನ್ಯಾಸದ ಹೊರತಾಗಿಯೂ ಗಟ್ಟಿಮುಟ್ಟಾದ ನಿರ್ಮಾಣವನ್ನು ಹೊಂದಿದೆ. ಹೋಲಿಕೆಗಾಗಿ ನೋಡುವುದಾದರೆ, ಐಫೋನ್ ಏರ್ ಮತ್ತು ಗ್ಯಾಲಕ್ಸಿ S25 ಎಡ್ಜ್‌ನಂತಹ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಬಹುದಾದ ಫೋನ್ ಇದಾಗಿದೆ.
ಡಿಸ್‌ಪ್ಲೇ ವಿಭಾಗದಲ್ಲಿ, ಈ Motorola Edge 70 ಫೋನಿನಲ್ಲಿ 6.67 ಇಂಚಿನ pOLED ಸೂಪರ್ HD ಡಿಸ್ಪ್ಲೇ ಇದೆ. ಇದು 120Hz ರಿಫ್ರೆಶ್ ರೇಟ್, HDR10+, ಮತ್ತು 4,500 ನಿಟ್ಸ್ ಬ್ರೈಟ್ನೆಸ್ ಸಪೋರ್ಟ್ ಮಾಡುತ್ತದೆ. ಜೊತೆಗೆ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಸಹ ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನಿನಲ್ಲಿ 12GB RAM, ಮತ್ತು 512GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಸಂಯೋಜಿಸಲಾಗಿರುವ Snapdragon 7 Gen 4 ಪ್ರೊಸೆಸರ್ ಇದೆ. Android 16 ಆಧಾರಿತ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸು ಈ ಫೋನನ್ ಜೂನ್ 2031ರವರೆಗೆ ಸುರಕ್ಷತಾ ಅಪ್ಡೇಟ್‌ಗಳನ್ನು ಪಡೆಯಲಿದೆ.

ಕ್ಯಾಮೆರಾ ವಿಭಾಗದಲ್ಲಿ, Motorola Edge 70 ಫೋನ್ ಹಿಂಭಾಗದಲ್ಲಿ (f/1.8) 50MP ಪ್ರೈಮರಿ ಕ್ಯಾಮೆರಾ (OIS ಸಹಿತ) ಮತ್ತು ಮೀಸಲಾದ 3-ಇನ್-1 ಲೈಟ್ ಸೆನ್ಸರ್‌ನೊಂದಿಗೆ (f/2.0) 50MP ಅಲ್ಟ್ರಾವೈಡ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ, 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನಿನಲ್ಲಿ 4,800mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದೆ. ಇದು 68W ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಕಂಪನಿ ಹೇಳುವಂತೆ, ಒಂದು ಚಾರ್ಜ್‌ನಲ್ಲಿ 29 ಗಂಟೆಗಳ ವೀಡಿಯೋ ಮತ್ತು 66 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಸಾಧ್ಯ.
ಸಂಪರ್ಕ ಆಯ್ಕೆಗಳಲ್ಲಿ, Motorola Edge 70 ಫೋನ್ 5G, ಬ್ಲೂಟೂತ್, GPS, A-GPS, GLONASS, LTEPP, ಗೆಲಿಲಿಯೋ, NFC, USB ಟೈಪ್-C ಪೋರ್ಟ್ ಮತ್ತು Wi-Fi 6E ಸೇರಿದಂತೆ ಎಲ್ಲಾ ಆಧುನಿಕ ಕನೆಕ್ಟಿವಿಟಿ ಆಯ್ಕೆಗಳೊಂದಿಗೆ ಬರುತ್ತದೆ. ಜೊತೆಗೆ ಡಾಲ್ಬಿ ಅಟ್ಮಾಸ್‌ಗೆ ಬೆಂಬಲದೊಂದಿಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, IP68 + IP69 ರೇಟಿಂಗ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಹಾಗೂ ThinkShield ಸುರಕ್ಷತಾ ವ್ಯವಸ್ಥೆ ಲಭ್ಯವಿದೆ. ಸೆನ್ಸರ್‌ಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಗೈರೊಸ್ಕೋಪ್, ಸಾಮೀಪ್ಯ ಮತ್ತು SAR ಸೆನ್ಸರ್ ಸೇರಿವೆ.
Motorola Edge 70: ಬೆಲೆ ಮತ್ತು ಲಭ್ಯತೆ
ಯುಕೆ ಮಾರುಕಟ್ಟೆಯಲ್ಲಿ Motorola Edge 70 ಫೋನ್ ಬೆಲೆ GBP 700 (ಸುಮಾರು ₹80,000) ರಿಂದ ಪ್ರಾರಂಭವಾಗುತ್ತದೆ. ಯುರೋಪ್‌ನಲ್ಲಿ ಇದರ ಬೆಲೆ EUR 799 (ಸುಮಾರು ₹81,000) ಆಗಿದ್ದು, ಇದು Pantone Bronze Green, Pantone Lily Pad, ಮತ್ತು Gadget Grey ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ಫೋನನ್ನು ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಪರಿಚಯಿಸುವ ಸಾಧ್ಯತೆ ಇದೆ. ಬಿಡುಗಡೆಯಾದರೆ, ಇದು iPhone Airಮತ್ತು Samsung Galaxy S25 Edge ಮುಂತಾದ ಪ್ರೀಮಿಯಂ ಫೋನ್‌ಗಳಿಗೆ ಬಲವಾದ ಸ್ಪರ್ಧಿಯಾಗಬಹುದು.


Click it and Unblock the Notifications








