Home
ಮೊಬೈಲ್

ಭಾರತದಲ್ಲಿ Motorola Edge 70 ಮೊದಲ ಮಾರಾಟ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ!

ಭಾರತದಲ್ಲಿ ಮೊಟೊರೊಲಾ ಬಿಡುಗಡೆಗೊಳಿಸಿರುವ ಬಹುನಿರೀಕ್ಷಿತ ಮಿಡ್‌ರೇಂಜ್-ಪ್ರೀಮಿಯಂ ಸ್ಲಿಮ್ 'Motorola Edge 70' ಸ್ಮಾರ್ಟ್‌ಫೋನ್ ಇಂದು (ಡಿ.23) ಮೊದಲ ಬಾರಿಗೆ ಮಾರಾಟಕ್ಕೆ ಬರುತ್ತಿದೆ. ಮೊಟೊರೊಲಾ ಈ Motorola Edge 70 ಸ್ಮಾರ್ಟ್‌ಫೋನ್ ಅನ್ನು ಕಳೆದ (ಡಿ.15) ಸೋಮವಾರದಂದು ಬಿಡುಗಡೆಗೊಳಿಸಿತ್ತು. ಇದು iphone Air, galaxy 25 edge ಫೋನ್‌ಗಳಂತೆಯೇ ಅಲ್ಟ್ರಾ-ಥಿನ್ ವಿನ್ಯಾಸವನ್ನು ಹೊಂದಿದೆ. ಹಾಗಾದರೆ, ಹೊಸ Motorola Edge 70 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಮತ್ತು ಫೀಚರ್ಸ್ ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.

Motorola Edge 70: ಭಾರತದಲ್ಲಿ ಮಾರಾಟ, ಬೆಲೆ, ಕೊಡುಗೆಗಳು
Motorola Edge 70 ಸ್ಮಾರ್ಟ್‌ಫೋನ್ ಇಂದು ಮಧ್ಯಾಹ್ನ 12:00 (IST) ಗಂಟೆಗೆ ಫ್ಲಿಪ್‌ಕಾರ್ಟ್ ಮತ್ತು ಮೊಟೊರೊಲಾ.ಕಾಮ್ ಮೂಲಕ ಮಾರಾಟಕ್ಕೆ ಬರಲಿದೆ. M. ಬಣ್ಣಗಳ ಆಯ್ಕೆಯಲ್ಲಿ Pantone Bronze Green, Pantone Gadget Grey ಮತ್ತು Pantone Lily Pad ಎಂಬ ಟ್ರೆಂಡಿ ಆಯ್ಕೆಗಳು ಲಭ್ಯವಿವೆ. ದೇಶದಲ್ಲಿ Motorola Edge 70 ಬೆಲೆಯನ್ನು 8GB/256GB ಮಾದರಿಗೆ ರೂ. 29,999 ಎಂದು ನಿಗದಿಪಡಿಸಲಾಗಿದೆದ್ದು, ಆಯ್ದ ಬ್ಯಾಂಕುಗಳಿಂದ ಕಾರ್ಡ್‌ಗಳನ್ನು ಬಳಸಿಕೊಂಡು ಗ್ರಾಹಕರು 1,000 ರೂ. ತ್ವರಿತ ರಿಯಾಯಿತಿಯನ್ನು ಪಡೆಯಬಹುದು.

ಭಾರತದಲ್ಲಿ Motorola Edge 70 ಮೊದಲ ಮಾರಾಟ ಆರಂಭ: ಇಲ್ಲಿದೆ ಸಂಪೂರ್ಣ ಮಾಹಿತಿ!

Motorola Edge 70: ಪ್ರಮುಖ ವೈಶಿಷ್ಟ್ಯಗಳು.
ಹೊಸ Motorola Edge 70 ಫೋನಿನಲ್ಲಿ 6.7 ಇಂಚಿನ 1.5K AMOLED ಡಿಸ್‌ಪ್ಲೇ ಇದೆ. ಇದು 120Hz ರಿಫ್ರೆಶ್ ರೇಟ್ ಮತ್ತು ಗರಿಷ್ಠ 4,500 ನಿಟ್ಸ್ ಬ್ರೈಟ್ನೆಸ್ ಅನ್ನು ಬೆಂಬಲಿಸುತ್ತದೆ. ಜೊತೆಗೆ Dolby Vision ಮತ್ತು HDR10+ ಬೆಂಬಲ ಇರುವುದರಿಂದ ಸ್ಟ್ರೀಮಿಂಗ್ ಹಾಗೂ ಗೇಮಿಂಗ್ ಅನುಭವ ಇನ್ನಷ್ಟು ಆಕರ್ಷಕವಾಗುತ್ತದೆ. ಈ ಡಿಸ್‌ಪ್ಲೇಯು Gorilla Glass 7i ರಕ್ಷಣೆ ಹೊಂದಿದ್ದರೆ, ಫೋನಿನಲ್ಲಿನ IP68 ಮತ್ತು IP69 ರೇಟಿಂಗ್‌ಗಳು ನೀರು ಹಾಗೂ ಧೂಳಿನಿಂದ ರಕ್ಷಣೆ ನೀಡುತ್ತವೆ. MIL-STD-810H ಮಿಲಿಟರಿ ಗ್ರೇಡ್ ಪ್ರಮಾಣೀಕರಣ ಈ ಫೋನ್‌ನ ಬಲಿಷ್ಠತೆಯನ್ನು ಇನ್ನಷ್ಟು ದೃಢಪಡಿಸುತ್ತದೆ.

ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್ ಅನುಭವ
Motorola Edge 70 ಸ್ಮಾರ್ಟ್‌ಫೋನ್‌ನಲ್ಲಿ Qualcomm Snapdragon 7 Gen 4 ಪ್ರೊಸೆಸರ್ ಬಳಸಲಾಗಿದ್ದು, Android 16 ಆಧಾರಿತ Hello UI ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಮಲ್ಟಿಟಾಸ್ಕಿಂಗ್ ಮತ್ತು ಗೇಮಿಂಗ್ ಎರಡಕ್ಕೂ ಸೂಕ್ತವಾದಂತಿದೆ. ಕಂಪನಿ ಇದಕ್ಕೆ ಮೂರು ಪ್ರಮುಖ Android ಅಪ್‌ಡೇಟ್‌ಗಳು ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್‌ಡೇಟ್‌ಗಳನ್ನು ಖಚಿತಪಡಿಸಿದೆ. Moto AI ಅಡಿಯಲ್ಲಿ Next Move, Catch Me Up 2.0, Pay Attention 2.0, Remember This + Recall ಮತ್ತು Co-pilot ಮುಂತಾದ ವೈಶಿಷ್ಟ್ಯಗಳು ಬಳಕೆಯನ್ನು ಇನ್ನಷ್ಟು ಸ್ಮಾರ್ಟ್ ಆಗಿ ಮಾಡುತ್ತವೆ.

ಕ್ಯಾಮೆರಾ ವೈಶಿಷ್ಟ್ಯಗಳು
ಫೋಟೋಗ್ರಫಿ ಪ್ರಿಯರಿಗಾಗಿ Motorola Edge 70 ಗಮನಾರ್ಹ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಫೋನಿನ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ OIS ಬೆಂಬಲಿತ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು ತ್ರಿ-ಇನ್-ಒನ್ ಲೈಟ್ ಸೆನ್ಸರ್ ಒಳಗೊಂಡ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇದೆ. ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. 4K ರೆಸಲ್ಯೂಷನ್‌ನಲ್ಲಿ 60fps ವೀಡಿಯೊ ರೆಕಾರ್ಡಿಂಗ್ ಸಾಧ್ಯವಾಗಿದ್ದು, AI Video Enhancement ಮತ್ತು AI Photo Enhancement ಫೀಚರ್‌ಗಳು ಉತ್ತಮ ಗುಣಮಟ್ಟದ ಫೋಟೋ ಹಾಗೂ ವೀಡಿಯೊಗಳಿಗೆ ಸಹಾಯ ಮಾಡುತ್ತವೆ.

ಬ್ಯಾಟರಿ, ಚಾರ್ಜಿಂಗ್ ಮತ್ತು ಡಿಸೈನ್
Motorola Edge 70 ಫೋನಿನಲ್ಲಿ 5,000mAh ಸಾಮರ್ಥ್ಯದ ಸಿಲಿಕಾನ್ ಕಾರ್ಬನ್ ಬ್ಯಾಟರಿ ಅಳವಡಿಸಲಾಗಿದ್ದು, ಒಂದು ದಿನಕ್ಕಿಂತ ಹೆಚ್ಚು ಬಳಕೆಗೆ ಸಾಕಾಗುತ್ತದೆ ಎಂದು ಕಂಪನಿ ಹೇಳಿದೆ. 68W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವೂ ಇದೆ. ಕೇವಲ 5.99mm ದಪ್ಪ ಮತ್ತು ಸುಮಾರು 159 ಗ್ರಾಂ ತೂಕ ಹೊಂದಿರುವ ಈ ಫೋನ್, ವಿಮಾನ ದರ್ಜೆಯ ಅಲ್ಯೂಮಿನಿಯಂ ಫ್ರೇಮ್‌ನೊಂದಿಗೆ ಸ್ಲಿಮ್ ಹಾಗೂ ಪ್ರೀಮಿಯಂ ಲುಕ್ ನೀಡುತ್ತದೆ.

ಒಟ್ಟಾರೆಯಾಗಿ, ನಿರೀಕ್ಷೆಯಂತೆಯೇ Motorola Edge 70 ತನ್ನ ಬೆಲೆಗೆ ತಕ್ಕಂತೆ ಪ್ರೀಮಿಯಂ ಡಿಸ್‌ಪ್ಲೇ, ಶಕ್ತಿಶಾಲಿ ಪ್ರೊಸೆಸರ್, ಎಐ ಆಧಾರಿತ ಸ್ಮಾರ್ಟ್ ಫೀಚರ್‌ಗಳು ಮತ್ತು ಉತ್ತಮ ಕ್ಯಾಮೆರಾ ಸೆಟ್‌ಅಪ್ ಹೊತ್ತು ಬಂದಿದೆ. ದೀರ್ಘಕಾಲದ ಸಾಫ್ಟ್‌ವೇರ್ ಅಪ್‌ಡೇಟ್‌ಗಳು, ಬಲಿಷ್ಠ ವಿನ್ಯಾಸ ಮತ್ತು ವೇಗದ ಚಾರ್ಜಿಂಗ್ ಅನ್ನು ಬಯಸುವ ಭಾರತೀಯ ಬಳಕೆದಾರರಿಗೆ ಇದು ಮಧ್ಯಮ ಬೆಲೆ ವಿಭಾಗದಲ್ಲಿ ಗಮನಿಸಬಹುದಾದ ಸ್ಮಾರ್ಟ್‌ಫೋನ್ ಆಗಿ ಕಾಣಿಸುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.

Best Mobiles in India

English summary
The Motorola Edge 70 has gone on its first sale in India today, starting at ₹29,999. Featuring an ultra-slim premium design inspired by flagship phones, it is available via Flipkart and Motorola.com with an instant ₹1,000 bank discount and stylish Pantone color options.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+