Home
ಮೊಬೈಲ್

ಭಾರತಕ್ಕೆ Motorola Edge 70 ಆಗಮನದ ಸುಳಿವು: ಸ್ಲಿಮ್ ಅಂಡ್ ಪ್ರೀಮಿಯಂ ನಿರೀಕ್ಷೆ!

ಕಳೆದ ನವೆಂಬರ್ 5ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಫ್ಲಾಗ್‌ಶಿಪ್ Motorola Edge 70 ಸ್ಮಾರ್ಟ್‌ಫೋನ್ ಇದೀಗ ಬಹಳ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ. ಜನಪ್ರಿಯ ಟೆಕ್ ಟಿಪ್‌ಸ್ಟರ್ ಒಬ್ಬರು ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಅವರ ಹೇಳಿಕೆಯ ಪ್ರಕಾರ ಈ ಫೋನ್ ಡಿಸೆಂಬರ್ ಮಧ್ಯಭಾಗದಲ್ಲಿ ಭಾರತೀಯ ಮಾರುಕಟ್ಟೆಗೆ ಬರಬಹುದು. Moto X70 Air ವಿನ್ಯಾಸದಿಂದ ಪ್ರೇರಿತವಾದ ಈ ಅಲ್ಟ್ರಾ-ಸ್ಲಿಮ್ ಹ್ಯಾಂಡ್‌ಸೆಟ್ ಈಗಾಗಲೇ ತಂತ್ರಜ್ಞಾನ ಪ್ರಿಯರ ಗಮನವನ್ನು ಸೆಳೆದಿದ್ದು, ಭಾರತೀಯರು ಈಗ ಈ ಸ್ಮಾರ್ಟ್‌ಫೋನ್ ಅನ್ನು ಹೊಂದುವ ನಿರೀಕ್ಷೆ ಹೆಚ್ಚಾಗಿದೆ.

ಟಿಪ್‌ಸ್ಟರ್ ಮುಕುಲ್ ಶರ್ಮಾ (@stufflistings) ಅವರ ಪ್ರಕಾರ, Motorola Edge 70 ಸ್ಮಾರ್ಟ್‌ಫೋನ್ ಇದೇ ಡಿಸೆಂಬರ್ 15ರಂದು ಭಾರತೀಯ ಮಾರುಕಟ್ಟೆಗೆ ಬರಲಿದೆ. ಜಾಗತಿಕ ಮಾದರಿಗೆ ಹೋಲಿಸಿದರೆ, ಭಾರತೀಯ ಮಾದರಿಯು ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಬರಬಹುದು. ವಿಶೇಷವಾಗಿ ಇದು ದೊಡ್ಡ ಬ್ಯಾಟರಿ, ಹೊಸ refresh ವಿನ್ಯಾಸ, ಮತ್ತು ಅಲ್ಟ್ರಾ-ತೆಳುವಾದ ಬಾಡಿ ಹೊಂದಿರಬಹುದು ಎಂದು ಮುಕುಲ್ ಶರ್ಮಾ ಅವರು ಹೇಳಿದ್ದಾರೆ. ಜಾಗತಿಕ ಆವೃತ್ತಿಗಿಂತ ಹೆಚ್ಚಿದ ಬ್ಯಾಟರಿ ಸಾಮರ್ಥ್ಯ ಇರಬಹುದು ಎಂದು ಇವರು ಹೇಳಿರುವುದು, ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ.

ಈಗಾಗಲೇ ಜಾಗತಿಕವಾಗಿರುವ ಲಾಂಚ್ ಆಗಿರುವ Motorola Edge 70 ತನ್ನ ಸ್ಲಿಮ್ ಪ್ರೀಮಿಯಂ ವಿನ್ಯಾಸ, ಶಕ್ತಿಯುತ ಪ್ರೊಸೆಸರ್, ಮತ್ತು ಪ್ರೀಮಿಯಂ ಕ್ಯಾಮೆರಾ ವೈಶಿಷ್ಟ್ಯಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಆದ್ದರಿಂದ, ಈ ಫೋನ್ ಭಾರತದ ಮಾರುಕಟ್ಟೆಯಲ್ಲಿ ಯಾವ ಬೆಲೆಗೆ ಬರುತ್ತದೆ, ಮತ್ತು ಯಾವ ಸ್ಪೆಕ್ಸ್‌ಗಳನ್ನು ಒಳಗೊಂಡಿರುತ್ತದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ ಮತ್ತು ಅಧಿಕೃತ ಮಾಹಿತಿಗಳಿಗಾಗಿ ಕಾಯುವಂತಾಗಿದೆ. ಹಾಗಾದರೆ, ಜಾಗತಿಕ ಮಾದರಿಯ Motorola Edge 70 ಸ್ಮಾರ್ಟ್‌ಫೋನ್ ಹೇಗಿದೆ?, ಬೆಲೆ ಎಷ್ಟು ಮತ್ತು ಪ್ರಮುಖ ಫೀಚರ್ಸ್ ಯಾವುವು ಎಂಬುದನ್ನು ಸಹ ನೋಡೋಣ ಬನ್ನಿ.!

ಭಾರತಕ್ಕೆ Motorola Edge 70 ಆಗಮನದ ಸುಳಿವು: ಸ್ಲಿಮ್ ಅಂಡ್ ಪ್ರೀಮಿಯಂ ನಿರೀಕ್ಷೆ!

Motorola Edge 70: ಪ್ರಮುಖ ವೈಶಿಷ್ಟ್ಯಗಳು
ಹೊಸ Motorola Edge 70 ಸ್ಮಾರ್ಟ್‌ಫೋನ್ ಕೇವಲ 5.99 ಮಿಮೀ ದಪ್ಪ ಮತ್ತು 159 ಗ್ರಾಂ ತೂಕದೊಂದಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ಅತ್ಯಂತ ಹಗುರವಾದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿ ಪರಿಚಯಗೊಂಡಿದೆ. ಇದು ವಿಮಾನ-ದರ್ಜೆಯ ಅಲ್ಯೂಮಿನಿಯಂ ಫ್ರೇಮ್ ಮತ್ತು ವಿಶಿಷ್ಟವಾದ ನೈಲಾನ್-ಟೆಕ್ಸ್ಚರ್ಡ್ ಹಿಂಭಾಗದ ಫಲಕವನ್ನು ಹೊಂದಿದ್ದು, ತೆಳುವಾದ ವಿನ್ಯಾಸದ ಹೊರತಾಗಿಯೂ ಗಟ್ಟಿಮುಟ್ಟಾದ ನಿರ್ಮಾಣವನ್ನು ಹೊಂದಿದೆ. ಹೋಲಿಕೆಗಾಗಿ ನೋಡುವುದಾದರೆ, ಐಫೋನ್ ಏರ್ ಮತ್ತು ಗ್ಯಾಲಕ್ಸಿ S25 ಎಡ್ಜ್‌ನಂತಹ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಬಹುದಾದ ಫೋನ್ ಇದಾಗಿದೆ.

ಡಿಸ್‌ಪ್ಲೇ ವಿಭಾಗದಲ್ಲಿ, ಈ Motorola Edge 70 ಫೋನಿನಲ್ಲಿ 6.67 ಇಂಚಿನ pOLED ಸೂಪರ್ HD ಡಿಸ್ಪ್ಲೇ ಇದೆ. ಇದು 120Hz ರಿಫ್ರೆಶ್ ರೇಟ್, HDR10+, ಮತ್ತು 4,500 ನಿಟ್ಸ್ ಬ್ರೈಟ್ನೆಸ್ ಸಪೋರ್ಟ್ ಮಾಡುತ್ತದೆ. ಜೊತೆಗೆ ಗೊರಿಲ್ಲಾ ಗ್ಲಾಸ್ 7i ರಕ್ಷಣೆಯನ್ನು ಸಹ ಹೊಂದಿದೆ. ಕಾರ್ಯಕ್ಷಮತೆಗಾಗಿ, ಈ ಫೋನಿನಲ್ಲಿ 12GB RAM, ಮತ್ತು 512GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಸಂಯೋಜಿಸಲಾಗಿರುವ Snapdragon 7 Gen 4 ಪ್ರೊಸೆಸರ್ ಇದೆ. Android 16 ಆಧಾರಿತ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸು ಈ ಫೋನನ್ ಜೂನ್ 2031ರವರೆಗೆ ಸುರಕ್ಷತಾ ಅಪ್ಡೇಟ್‌ಗಳನ್ನು ಪಡೆಯಲಿದೆ.

ಕ್ಯಾಮೆರಾ ವಿಭಾಗದಲ್ಲಿ, Motorola Edge 70 ಫೋನ್ ಹಿಂಭಾಗದಲ್ಲಿ (f/1.8) 50MP ಪ್ರೈಮರಿ ಕ್ಯಾಮೆರಾ (OIS ಸಹಿತ) ಮತ್ತು ಮೀಸಲಾದ 3-ಇನ್-1 ಲೈಟ್ ಸೆನ್ಸರ್‌ನೊಂದಿಗೆ (f/2.0) 50MP ಅಲ್ಟ್ರಾವೈಡ್ ಲೆನ್ಸ್ ಹೊಂದಿದೆ. ಸೆಲ್ಫಿಗಾಗಿ, 50-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ. ಬ್ಯಾಟರಿ ವಿಭಾಗದಲ್ಲಿ, ಈ ಫೋನಿನಲ್ಲಿ 4,800mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಇದೆ. ಇದು 68W ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಕಂಪನಿ ಹೇಳುವಂತೆ, ಒಂದು ಚಾರ್ಜ್‌ನಲ್ಲಿ 29 ಗಂಟೆಗಳ ವೀಡಿಯೋ ಮತ್ತು 66 ಗಂಟೆಗಳ ಆಡಿಯೊ ಪ್ಲೇಬ್ಯಾಕ್ ಸಾಧ್ಯ.

ಸಂಪರ್ಕ ಆಯ್ಕೆಗಳಲ್ಲಿ, Motorola Edge 70 ಫೋನ್ 5G, ಬ್ಲೂಟೂತ್, GPS, A-GPS, GLONASS, LTEPP, ಗೆಲಿಲಿಯೋ, NFC, USB ಟೈಪ್-C ಪೋರ್ಟ್ ಮತ್ತು Wi-Fi 6E ಸೇರಿದಂತೆ ಎಲ್ಲಾ ಆಧುನಿಕ ಕನೆಕ್ಟಿವಿಟಿ ಆಯ್ಕೆಗಳೊಂದಿಗೆ ಬರುತ್ತದೆ. ಜೊತೆಗೆ ಡಾಲ್ಬಿ ಅಟ್ಮಾಸ್‌ಗೆ ಬೆಂಬಲದೊಂದಿಗೆ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, IP68 + IP69 ರೇಟಿಂಗ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್, ಹಾಗೂ ThinkShield ಸುರಕ್ಷತಾ ವ್ಯವಸ್ಥೆ ಲಭ್ಯವಿದೆ. ಸೆನ್ಸರ್‌ಗಳಲ್ಲಿ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಇ-ದಿಕ್ಸೂಚಿ, ಗೈರೊಸ್ಕೋಪ್, ಸಾಮೀಪ್ಯ ಮತ್ತು SAR ಸೆನ್ಸರ್ ಸೇರಿವೆ.

Motorola Edge 70: ಬೆಲೆ ಮತ್ತು ಲಭ್ಯತೆ
ಯುಕೆ ಮಾರುಕಟ್ಟೆಯಲ್ಲಿ Motorola Edge 70 ಫೋನ್ ಬೆಲೆ GBP 700 (ಸುಮಾರು ₹80,000) ರಿಂದ ಪ್ರಾರಂಭವಾಗುತ್ತದೆ. ಯುರೋಪ್‌ನಲ್ಲಿ ಇದರ ಬೆಲೆ EUR 799 (ಸುಮಾರು ₹81,000) ಆಗಿದ್ದು, ಇದು Pantone Bronze Green, Pantone Lily Pad, ಮತ್ತು Gadget Grey ಬಣ್ಣಗಳಲ್ಲಿ ಲಭ್ಯವಿರುತ್ತದೆ. ಭಾರತದ ಮಾರುಕಟ್ಟೆಗೆ ಈ ಫೋನ್ ಶೀಘ್ರದಲ್ಲೇ ಬಿಡುಗಡೆಯಾದರೆ, ಇದು iPhone Airಮತ್ತು Samsung Galaxy S25 Edge ಮುಂತಾದ ಪ್ರೀಮಿಯಂ ಫೋನ್‌ಗಳಿಗೆ ಬಲವಾದ ಸ್ಪರ್ಧಿಯಾಗಬಹುದು.

Best Mobiles in India

English summary
According to tipster Mukul Sharma (@stufflistings), the Motorola Edge 70 smartphone will be launching in the Indian market on December 15. Compared to the global model, the Indian model could come with some major changes. Mukul Sharma said that it could feature a larger battery, a new refreshed design, and an ultra-thin body.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+