ಭಾರತಕ್ಕೆ ಬರಲಿರುವ ಮೊಟೊರೊಲಾ ಮೊಬೈಲ್ ಯಾವುದು?

Posted By: Staff
ಭಾರತಕ್ಕೆ ಬರಲಿರುವ ಮೊಟೊರೊಲಾ ಮೊಬೈಲ್ ಯಾವುದು?

ಮೊಟೊರೊಲಾ ಕಂಪನಿ ಭಾರತದಲ್ಲಿ ಮೊಟೊರೊಲಾ EX245 ಎಂಬ ಮೊಬೈಲನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ. ಈ ಹ್ಯಾಂಡ್ ಸೆಟ್ ನಲ್ಲಿ ಹಲವು ಆಯ್ಕೆಗಳಿದ್ದು, ಸ್ಪರ್ಧಾತ್ಮಕ ವಾಗಿ ಬೆಲೆಯನ್ನು ನಿಗದಿ ಪಡಿಸಿರುವುದಾಗಿ ತಿಳಿದುಬಂದಿದೆ.

ಬಾರ್ ಫೋನ್ ಮಾದರಿಯಲ್ಲಿ ಮುಡಿಬಂದಿರುವ ಈ GSM ಬೆಂಬಲಿತ ಫೋನ್ ಡ್ಯೂಯಲ್ ಟೋನ್ ಕಲರ್ ಫಿನಿಶಿಂಗ್ ಪಡೆದುಕೊಂಡಿದೆ.

ಮೊಟೊರೊಲಾ EX245 ಮೊಬೈಲ್ ವಿಶೇಷತೆ:

*  108 ಎಂಎಂ x 58 ಎಂಎಂ x 12 ಎಂಎಂ ಸುತ್ತಳತೆ

* TFT ಟಚ್ ಸ್ಕ್ರೀನ್ ಡಿಸ್ಪ್ಲೇ

* 3.2 ಮೆಗಾ ಪಿಕ್ಸಲ್ ಕ್ಯಾಮೆರಾ, 2048 x 1536 ಪಿಕ್ಸಲ್ ರೆಸೊಲ್ಯೂಷನ್

* ಫೇಸ್ ಡಿಟೆಕ್ಷನ್, ಜಿಯೋ ಟ್ಯಾಗಿಂಗ್

* 2.0 ಬ್ಲೂಟೂಥ್, USB, EDGE, GPRS

* JAVA ಬೆಂಬಲಿತ

* ಅಕ್ಸೆಲೆರೊಮೀಟರ್ ಸೆನ್ಸಾರ್

* ಮೆಮೊರಿ ವಿಸ್ತರಣೆಗೆ ಮೈಕ್ರೊ SD ಆಯ್ಕೆ

* ಮಲ್ಟಿ ಮೀಡಿಯಾ ಬೆಂಬಲಿತ

ಈ ಮೊಟೊರೊಲಾ EX245 ನಿಖರ ಬೆಲೆ ಇನ್ನೂ ತಿಳಿದುಬಂದಿಲ್ಲ. ಆದರೆ ಸ್ಪರ್ಧೆ ಹೆಚ್ಚಿರುವುದರಿಂದ ಕೈಗೆಟುಕುವ ದರದಲ್ಲಿಯೇ ಗ್ರಾಹಕರಿಗೆ ಮೊಬೈಲ್ ಲಭಿಸಲಿದೆ ಎಂದು ಅಂದಾಜಿಸಲಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot