Home
ಮೊಬೈಲ್

ಇಂದು Motorola G04s ಗ್ರ್ಯಾಂಡ್ ಲಾಂಚ್: ನಿರೀಕ್ಷಿತ ಬೆಲೆ, ಫೀಚರ್ಸ್ ಏನಿರಲಿದೆ?

ದಿ ವೇಟ್ ಈಸ್ ಓವರ್. ಸ್ಮಾರ್ಟ್‌ಫೋನ್‌ (smartphone) ಪ್ರಿಯರು ಬಹಳ ಕುತೂಹಲದಿಂದ ಕಾಯುತ್ತಿರುವ Motorola G04s ಮೊಬೈಲ್ ಇಂದು (ಮೇ 30, ಮಧ್ಯಾಹ್ನ 12) ಅದ್ದೂರಿಯಾಗಿ ಲಾಂಚ್ ಆಗುತ್ತಿದೆ. ಮೊಟೊರೊಲಾ (Motorola) ಸಂಸ್ಥೆಯ ಈ ಮೊಬೈಲ್‌ ಈಗಾಗಲೇ ಗೆಸ್ಚರ್ ಫೀಚರ್ಸ್‌ನಿಂದಾಗಿ ಬಿಡುಗಡೆಗೂ ಮುನ್ನವೇ ಗ್ರಾಹಕರ ಗಮನ ಸೆಳೆದಿದೆ.

ಹೌದು, Motorola G04s ಸ್ಮಾರ್ಟ್‌ಫೋನ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಕಳೆದ ಏಪ್ರಿಲ್ (2024) ತಿಂಗಳಿನಲ್ಲಿ ಮೊಟೊರೊಲಾ ಯುರೋಪಿಯನ್ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ Moto G04s ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿತ್ತು. ಇದು ಮೊಟೊರೊಲಾದ ವಿನೂತನ ಸ್ಮಾರ್ಟ್‌ಫೋನ್ ಆಗಿತ್ತು. ಇದೀಗ, ತನ್ನ ಸರಣಿಯ Motorola G04s ಸ್ಮಾರ್ಟ್‌ಫೋನ್ ಭಾರತಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿದೆ.

ಇಂದು Motorola G04s ಗ್ರ್ಯಾಂಡ್ ಲಾಂಚ್: ಬೆಲೆ, ಫೀಚರ್ಸ್ ತಿಳಿಯಿರಿ

Motorola G04s ಸ್ಮಾರ್ಟ್‌ಫೋನ್‌ ಯುನಿಸೊಕ್ T606 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇತ್ತೀಚಿನ ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ Motorola G04s ಯಾವ ಆನ್‌ಲೈನ್ ಪ್ಲಾಟ್‌ಫಾರ್ಮ್ ಲಭ್ಯವಿರಲಿದೆ? ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ? ಗ್ರಾಹಕರು ಏನೆಲ್ಲವನ್ನು ನಿರೀಕ್ಷೆ ಮಾಡಬಹುದು? ಎಂಬಿತ್ಯಾದಿಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಮುಂದೆ ಓದಿ.

5,000mAh ಅಧ್ಬುತ ಬ್ಯಾಟರಿ ಬ್ಯಾಕಪ್‌

Motorola G04s ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ ಬ್ಯಾಕಪ್‌ ಒಳಗೊಂಡಿದೆ. 50MP ಕ್ಯಾಮೆರಾ ಮತ್ತು 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. 8GB RAMವರೆಗೆ ವರ್ಚುಮ್ RAM ವಿಸ್ತರಣೆಯನ್ನು ನೀಡುತ್ತದೆ. ಯುರೋಪ್‌ನಲ್ಲಿ G04s ಅನ್ನು 6.56-ಇಂಚಿನ IPS LCD ಪ್ಯಾನೆಲ್‌ನೊಂದಿಗೆ ಘೋಷಿಸಲಾಯಿತು. ಅದು HD+ ರೆಸಲ್ಯೂಶನ್, 90Hz ರಿಫ್ರೆಶ್ ದರ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಮತ್ತು ಸೆಂಟರ್ ಅಲೈನ್ ಪಂಚ್ ಹೋಲ್ ಕಟೌಟ್ ಹೊಂದಿದೆ.

ಫ್ಲಿಪ್‌ಕಾರ್ಟ್ ಮೂಲಕ Moto G04s ಮಾರಾಟ

ಈ ಸ್ಮಾರ್ಟ್‌ಫೋನ್‌ (Motorola G04s) UNISOC T606 ಪ್ರೊಸೆಸರ್ ಹೊಂದಿದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಬಳಕೆದಾರರು ಸ್ಟೋರೇಜ್ ವಿಸ್ತರಣೆ ಮಾಡಬಹುದು. ಇದು 8GB RAMವರೆಗೆ ವರ್ಚುಮ್ RAM ವಿಸ್ತರಣೆ ಸೌಲಭ್ಯ ಒಳಗೊಂಡಿದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ, ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ (ಸೆಲ್ಫಿ ಶೂಟರ್) ಕ್ಯಾಮೆರಾ ಒಳಗೊಂಡಿದೆ. 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಒಳಗೊಂಡಿದೆ. Moto G04s ಅನ್ನು ಭಾರತದಲ್ಲಿನ ಜನಪ್ರಿಯ ಇ-ರೀಟೇಲರ್ ಫ್ಲಿಪ್‌ಕಾರ್ಟ್ ಮೂಲಕ (ಆನ್‌ಲೈನ್) ಮಾರಾಟ ಮಾಡಲಾಗುತ್ತದೆ.

4 ಬಣ್ಣ, 10,000 ರೂ.ಗಿಂತ ಕಡಿಮೆ ದರ

Moto G04s ನಾಲ್ಕು ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಕಾನ್ಕಾರ್ಡ್ ಬ್ಲಾಕ್ (Concord Black), ಸೀ ಗ್ರೀನ್ (Sea Green), ಸ್ಯಾಟಿನ್ ಬ್ಲೂ (Satin Blue) ಮತ್ತು ಸನ್ರೈಸ್ ಆರೆಂಜ್ (Sunrise Orange) ಬಣ್ಣದ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿರುತ್ತದೆ. ಇನ್ನೂ Motorola G04s ಸ್ಮಾರ್ಟ್‌ಫೋನ್‌ನ ಮತ್ತೊಂದು ವಿಶೇಷತೆ ಎಂದರೆ, 5,000mAh ಬ್ಯಾಟರಿ ಬ್ಯಾಕಪ್‌ ಜೊತೆಗೆ 15W ವೈರ್ಡ್ ಫಾಸ್ಟ್ ಚಾರ್ಜಿಂಗ್ ಒಳಗೊಂಡಿದೆ. ಭಾರತದಲ್ಲಿ 10,000 ರೂ.ಗಿಂತ ಕಡಿಮೆ ದರದಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಒಟ್ಟಾರೆ, ಈ ಹಿಂದೆ ಮೊಟೊರೊಲಾ ಪರಿಚಯಿಸಿದ್ದ ಮೊಬೈಲ್‌ಗಳು, ಸ್ಮಾರ್ಟ್‌ಫೋನ್‌ ಪ್ರಿಯರಿಂದ ಮೆಚ್ಚುಗೆ ಪಡೆದಿದ್ದವು.ಬಳಿಕ, ಯುರೋಪಿಯನ್ ಮಾರುಕಟ್ಟೆಯಲ್ಲಿ ಈ ಹೊಚ್ಚ ಹೊಸ Moto G04s ಸ್ಮಾರ್ಟ್‌ಫೋನ್ ಮಾದರಿಯನ್ನು ಪರಿಚಯಿಸಲಾಗಿತ್ತು. ಅಲ್ಲಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದೀಗ ಭಾರತದಲ್ಲಿನ ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡುತ್ತಿದೆ. ಇಂದು Motorola G04s ಲಾಂಚ್ ಆದ ಬಳಿಕ, ಈ ಸ್ಮಾರ್ಟ್‌ಫೋನ್‌ನ ಮತ್ತಷ್ಟು ವಿಶೇಷತೆಗಳು ತಿಳಿಯಲಿದೆ.

Best Mobiles in India

English summary
Motorola will officially launch a new budget smartphone, G04s, in India today. Price, sale date and offer details for the Moto G04s will be announced at noon via Flipkart
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+