ಮೊಟೊದಿಂದ ಮತ್ತೇ ಮೂರು ಮೋಡ್ ಗಳ ಬಿಡುಗಡೆ..!

By Lekhaka
|

ಲಿನೋವೊ ಒಡೆತನಕ್ಕೆ ಸೇರಿಕೊಂಡಿರುವ ಮೊಟೊರೊಲಾ ತನ್ನ ಮೊಟೊ Z ಸ್ಮಾರ್ಟ್ ಫೋನ್ ಗಳಿಗಾಗಿ ಬಿಡುಗಡೆ ಮಾಡುತ್ತಿರುವ ಮೋಡ್ ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಭಾರತೀಯ ಮಾರುಕಟ್ಟೆಗೆ ಮತ್ತೇ ಮೂರು ಮೋಡ್ ಗಳನ್ನು ಪರಿಚಯ ಮಾಡಲು ಮೊಟೊ ಮುಂದಾಗಿದೆ.

ಮೊಟೊದಿಂದ ಮತ್ತೇ ಮೂರು ಮೋಡ್ ಗಳ ಬಿಡುಗಡೆ..!

ಜೆಬಿಲ್ ಸೌಂಡ್ ಬೂಸ್ಟ್ 2 ಸ್ಪೀಕರ್ ಮೋಡ್, ಮೋಟೊ ಟರ್ಬೋ ಪವರ್ ಪ್ಯಾಕ್ ಬ್ಯಾಟರಿ ಮೋಡ್ ಮತ್ತು ಗೇಮ್ ಮೋಡ್ ಗಳನ್ನು ಬಿಡುಗಡೆ ಮಾಡಿದೆ. ಈ ಮೋಡ್ ಗಳು ಮೊಟೊ Z, ಮೊಟೊ Z ಪ್ಲೇ ಮತ್ತು ಮೊಟೊ Z2 ಪ್ಲೇ ಸ್ಮಾರ್ಟ್ ಫೋನ್ ನೊಂದಿಗೆ ಕನೆಕ್ಟ್ ಆಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಮೊಟೊ ಗೇಮ್ ಪ್ಯಾಡ್ ಮೋಡ್:

ಮೊಟೊ ಗೇಮ್ ಪ್ಯಾಡ್ ಮೋಡ್:

ಮೊಟೊ Z ಸ್ಮಾರ್ಟ್ ಫೋನ್ ನಲ್ಲಿ ಹೊಸ ಮಾದರಿಯ ಗೇಮಿಂಗ್ ಅನುಭವನ್ನು ನೀಡಲು ಈ ಮೋಡ್ ಸಹಾಯಕಾರಿಯಾಗಲಿದೆ. ಇದರಲ್ಲಿ 1035 mAh ಇನ್ ಬಿಲ್ಟ್ ಬ್ಯಾಟರಿಯನ್ನು ಕಾಣಬಹುದಾಗಿದೆ. ಈ ಮೋಡ್ ಬೆಲೆ ರೂ.6,999 ಆಗಲಿದೆ.

ಮೊಟೊ ಜೆಬಿಲ್ ಸೌಂಡ್ ಬೂಸ್ಟ್2:

ಮೊಟೊ ಜೆಬಿಲ್ ಸೌಂಡ್ ಬೂಸ್ಟ್2:

ಹೊಸದಾಗಿ ಆಪ್ ಗ್ರೇಡ್ ಮಾಡಿರುವ ಮೊಟೊ ಜೆಬಿಲ್ ಸೌಂಡ್ ಬೂಸ್ಟ್2 ಮೋಡ್ ಮೊಟೊ Z ಫೋನಿನಲ್ಲಿ ಸಂಗೀತವನ್ನು ಆಲಿಸುವ ವಿಧಾನವನ್ನೇ ಬದಲಾಯಿಸಲಿದೆ ಎನ್ನಲಾಗಿದೆ. ಅಲ್ಲದೇ ಈ ಸೌಂಡ್ ಮೋಡ್ ನಲ್ಲಿ ಸ್ಟಾಂಡ್ ಸಹ ಕಾಣಬಹುದಾಗಿದೆ. ಬೆಲೆ ರೂ.6,999 ಆಗಲಿದೆ

ಐಡಿಯಾ ಗ್ರಾಹಕರಿಗೆ ಬಿಟ್ಟರೇ ಬೇರೆಯಾರಿಗೂ ಇಲ್ಲ ಈ ಮಾದರಿಯ ಆಫರ್..!ಐಡಿಯಾ ಗ್ರಾಹಕರಿಗೆ ಬಿಟ್ಟರೇ ಬೇರೆಯಾರಿಗೂ ಇಲ್ಲ ಈ ಮಾದರಿಯ ಆಫರ್..!

ಮೊಟೊ ಟರ್ಬೋ ಪವರ್ ಪ್ಯಾಕ್ ಮೋಡ್:

ಮೊಟೊ ಟರ್ಬೋ ಪವರ್ ಪ್ಯಾಕ್ ಮೋಡ್:

ಮೊಟೊ Z ಸ್ಮಾರ್ಟ್ ಫೋನ್ ನ ಬ್ಯಾಟರಿ ಬ್ಯಾಕಪ್ ಅನ್ನು ಹೆಚ್ಚಿಸು ಸಲುವಾಗಿ ಮೊಟೊ ಟರ್ಬೋ ಪವರ್ ಪ್ಯಾಕ್ ಮೋಡ್ ಸಹಾಯ ಮಾಡಲಿದೆ. ಇದರ ಬೆಲೆ ರೂ. 7,999 ಆಗಿದ್ದು, 20 ನಿಮಿಷದಲ್ಲಿ 50% ಚಾರ್ಜ್ ಆಗಲಿದೆ. ಈ ಮೂರು ಮೊಟೊ ಮೋಡ್ ಗಳು ಡಿಸೆಂಬರ್ 17 ರಿಂದ ಫ್ಲಿಪ್ ಕಾರ್ಟಿನಲ್ಲಿ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Motorola has now announced three new Moto Mods for its premium flagship Moto Z franchise in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X