ಮೋಟೋರೋಲಾ ಕೀಲಿಂಕ್ ಕರಾಮತ್ತು ಗೊತ್ತೇ?

By Shwetha
|

ನಿಮ್ಮ ವಾಹನದ ಕೀಗಳನ್ನು ಹುಡುಕಲು ಮೋಟೋರೋಲಾ ಸಾಧ್ಯವಾದುದನ್ನು ಮಾಡುತ್ತಿದೆ. ಕೀ ಲಿಂಕ್, ಮೋಟೋರೋಲಾ ಸಂಪರ್ಕದ ಅಪ್ಲಿಕೇಶನ್‌ನೊಂದಿಗೆ ಇದು ಹೊಂದಿಕೆಯಾಗುತ್ತಿದ್ದು, ಬ್ಲ್ಯೂಟೂತ್ ಅನ್ನು ಈ ಡಿವೈಸ್‌ನಲ್ಲಿ ಸಕ್ರಿಯಗೊಳಿಸಬೇಕಾಗುತ್ತದೆ. ಇದು ನಿಮ್ಮ ಕಳೆದು ಹೋಗಿರುವ ಕೀಯನ್ನು ಟ್ರ್ಯಾಕ್ ಮಾಡಿ ನಿಮಗದನ್ನು ಹುಡುಕಿ ಕೊಡುತ್ತದೆ. ಅಪ್ಲಿಕೇಶನ್‌ನಿಂದ (ನಿಮ್ಮ ಕಳೆದು ಹೋಗಿರುವ ಕೀ 100 ಮೀಟರ್ ಅಂತರದಲ್ಲಿರಬೇಕು) ಕೀ ಲಿಂಕ್ ರಿಂಗ್ ಅನ್ನು ಸಕ್ರಿಯಗೊಳಿಸುವ ಮೂಲಕ ನಿಮಗಿದನ್ನು ಬಳಸಬಹುದು.

ಬುಧವಾರವಷ್ಟೇ ಮೋಟೋರೋಲಾ ಡಿವೈಸ್ ಅನ್ನು ಲಾಂಚ್ ಮಾಡಿದೆ. ಇದು ಕಳೆದು ಹೋಗಿರುವ ಕೀಯನ್ನು ಮಾತ್ರ ಹುಡುಕಿ ಕೊಡದೇ, ನಿಮ್ಮ ಕಳೆದು ಹೋದ ಫೋನ್ ಅನ್ನು ಕೂಡ ಹುಡುಕಿ ಕೊಡುತ್ತದೆ. ನೀವು ಸೆಕೆಂಡ್ ಜನರೇಶನ್ ಮೋಟೋ ಎಕ್ಸ್, ಡ್ರೊಯ್ಡ್ ಟರ್ಬೊ, ಆಂಡ್ರಾಯ್ಡ್ ಲಾಲಿಪಪ್ ಚಾಲನೆಯಲ್ಲಿರುವ ಫೋನ್ ಅನ್ನು ಹೊಂದಿದ್ದರೆ ಸಾಕು, ಈ ಕೀಲಿಂಕ್ ದೃಢೀಕರಣ ಡಿವೈಸ್‌ನಂತೆ ಕೆಲಸ ಮಾಡುತ್ತದೆ ಮತ್ತು ಇದಕ್ಕೆ ಪಾಸ್‌ವರ್ಡ್ ಅಗತ್ಯವಿರುವುದಿಲ್ಲ.

ಮೋಟೋರೋಲಾ ಕೀಲಿಂಕ್ ಮಾಡುವ ಮೋಡಿ ನೋಡಿ

ಕೋಯಿನ್ ಸೆಲ್ ಬ್ಯಾಟರಿಯು ಕೀಲಿಂಕ್ ಅನ್ನು ಬೆಂಬಲಿಸುತ್ತಿದ್ದು, ಇದು ವರ್ಷದವರೆಗೆ ಬಾಳಿಕೆ ಬರಲಿದೆ. ಮೋಟೋರೋಲಾದ ವೆಬ್‌ಸೈಟ್ ಅಥವಾ ಟಿಮೊಬೈಲ್‌ನಿಂದ ನೀವಿದನ್ನು ಪಡೆದುಕೊಳ್ಳಬಹುದಾಗಿದೆ. ಐಓಎಸ್ ಮತ್ತು ಆಂಡ್ರಾಯ್ಡ್ ಇವೆರಡಕ್ಕೂ ಕೀಲಿಂಕ್ ಅಪ್ಲಿಕೇಶನ್ ಲಭ್ಯವಿದೆ.

Best Mobiles in India

English summary
This article tells about Motorola Keylink helps track down your lost keys (or lost phone).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X