ಮೋಟೋರೋಲಾ ಮೋಟೋ ಇ ರೂ. 6,999 ಕ್ಕೆ

By Shwetha
|

ಮೋಟೋರಾಲಾ ತನ್ನ ಡ್ಯುಯೆಲ್ ಸಿಮ್ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ರೂ. 6,999 ಕ್ಕೆ ಭಾರತದಲ್ಲಿ ಲಾಂಚ್ ಮಾಡುತ್ತಿದ್ದು ಇದು ಆನ್‌ಲೈನ್ ರಿಟೈಲ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ.
ಬಳಕೆದಾರರಿಗೆ ಉತ್ತಮ ಸಂಗಾತಿಯಾಗಲಿರುವ ಈ ಫೋನ್ ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು ಮಾರುಕಟ್ಟೆಯಲ್ಲಿ ತನ್ನ ಅಬ್ಬರದ ಪ್ರಚಾರವನ್ನು ಮಾಡಲಿದೆ. ಮೋಟೋರೋಲಾದ ಇನ್ನಷ್ಟು ವೈವಿಧ್ಯಮಯ ಫೀಚರ್‌ಗಳನ್ನು ನೋಡಲು ಮುಂದೆ ಓದಿ.

#1

#1

ಇದು 4.3 ಇಂಚಿನ ಕ್ಯೂ ಎಚ್‌ಡಿ (540x960 pixel) ರೆಸಲ್ಯೂಶನ್‌ನೊಂದಿಗೆ ಬಂದಿದ್ದು 256ppi ಪಿಕ್ಸೆಲ್ ಡೆನ್ಸಿಟಿ ಇದರಲ್ಲಿದೆ. ಇದು ಗೋರಿಲ್ಲಾ ಗ್ಲಾಸ್ 3 ಅನ್ನು ಕೂಡ ಒಳಗೊಂಡಿದ್ದು ತನ್ನ ವಾಟರ್ - ನ್ಯಾನೋ ಕೋಟಿಂಗ್‌ನಿಂದ ಹೆಚ್ಚು ಪ್ರಸಿದ್ಧವಾಗಿದೆ.

#2

#2

ಇದು 1.2 ಜಿಎಚ್‌ಝೆಡ್ ಡ್ಯುಯೆಲ್ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ ಅನ್ನು ಹೊಂದಿದ್ದು 200 ಪ್ರೊಸೆಸರ್‌ನೊಂದಿಗೆ Adreno 302 ಜಿಪಿಯು ಈ ಫೋನ್‌ನಲ್ಲಿದೆ ಮತ್ತು 1 ಜಿಬಿ ರ್‌ಯಾಮ್ ಈ ಫೋನ್‌ನ ವಿಶೇಷತೆಯಾಗಿದೆ. ಮೋಟೋ ಇ ಒಂದು ಡ್ಯುಯೆಲ್ ಸಿಮ್ ಫೋನ್ ಆಗಿದ್ದು ಇದು ಮೈಕ್ರೋ ಎಸ್‌ಡಿ ಕಾರ್ಡ್ ಅನ್ನು ಕೂಡ ಬೆಂಬಲಿಸುತ್ತದೆ.

#3

#3

ಮೋಟೋ ಇ ಯ ಇತ್ತೀಚಿನ ಬಜೆಟ್ 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಒದಗಿಸುತ್ತದೆ ಆದರೆ ಲ್ಯೂಮಿಯಾ 630 ಯಂತೆ ಮೋಟೋ ಇ ಕೂಡ ಮುಂಭಾಗ ಕ್ಯಾಮೆರಾವನ್ನು ಹೊಂದಿಲ್ಲ. 4 ಜಿಬಿ ಆಂತರಿಕ ಸಂಗ್ರಹಣೆ ಫೋನ್‌ಗಿದ್ದು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು 32 ಜಿಬಿಗೆ ವಿಸ್ತರಿಸಬಹುದು.

#4

#4

ಮೋಟೋ ಇ 1980mAh ಬ್ಯಾಟರಿ ಸೇವೆಯನ್ನು ನೀಡಲಿದ್ದು 124.8x64.8x12.3 ಡೈಮೆನ್ಶನ್ ಅನ್ನು ಒದಗಿಸಲಿದೆ. ಇದರ ತೂಕ 142 ಗ್ರಾಮ್‌ಗಳಾಗಿದೆ. ಸಂಪರ್ಕ ಸಾಧನಗಳು 3ಜಿ, ವೈ-ಫೈ 802.11 b/g/n, GLONASS ನೊಂದಿಗೆ GPS, ಬ್ಲೂಟೂತ್ 4.0, ಮೈಕ್ರೋ - ಯುಎಸ್‌ಬಿ. ಎಫ್‌ಎಂ ರೇಡಿಯೋ ಹಾಗೂ 3.5 ಎಮ್‌ಎಮ್ ಆಡಿಯೋ ಜಾಕ್ ಸಾಮರ್ಥ್ಯ ಫೋನ್‌ಗಿದೆ.

#5

#5

ಮೋಟೋ ಇ ಹೆಚ್ಚಿನ ಬಣ್ಣಗಳಲ್ಲಿ ಬಂದಿದ್ದು ಕಪ್ಪು, ನಿಂಬೆ ಹಾಗೂ ಟರ್ಕೋಸ್ ಬಣ್ಣಗಳಲ್ಲಿ ಲಭ್ಯವಿದೆ. ಮೋಟೋ ಇ ಯನ್ನು ಮೊದಲು ಪಡೆಯುವಂತಹ ಹೆಗ್ಗಳಿಕೆ ಭಾರತದ ಮಾರುಕಟ್ಟೆಯದಾಗಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಇದು ಕಪ್ಪು ಹಾಗೂ ಬಿಳಿ ಬಣ್ಣದಲ್ಲಿ ದೊರೆಯಲಿದೆ.

#6

#6

ಫೋನ್ ಕೆಲವೊಂದು ಸಾಫ್ಟ್‌ವೇರ್ ವೈಶಿಷ್ಟ್ಯಗಳನ್ನು ಇದರಲ್ಲಿ ಅಳವಡಿಸಿದ್ದು ಮೊಟೋರಾಲಾ ಅಸಿಸ್ಟ್, ಅಲರ್ಟ್ ಹಾಗೂ ಮೈಗ್ರೇಟ್ ಇದರಲ್ಲಿದೆ. 4.4 ಕಿಟ್‌ಕ್ಯಾಟ್ ಆವೃತ್ತಿಯನ್ನು ಇದು ಹೊಂದಿದ್ದು ಬಳಸಲು ಉತ್ತಮವಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X