ಮೆಕ್ಸಿಕೋದಲ್ಲಿ ಮೊಟೋ ಜಿ ಫೆರಾರಿ ಲಾಂಚ್

Written By:

ಮೋಟೋರೋಲಾ ಮೋಟೋ ಜಿ ಕಳೆದ ವರ್ಷವಷ್ಟೇ ಭಾರತದಲ್ಲಿ ಸ್ಥಾಪನೆಯಾಗಿ ಉತ್ತಮವಾಗಿ ಮಾರಾಟವಾಗುವ ಪೋನ್‌ ಎಂಬ ಖ್ಯಾತಿಗೆ ಭಾಜನವಾಗಿದೆ. ಆದರೆ ಈ ಯಶಸ್ಸು ಭಾರತಕ್ಕೆ ಮಾತ್ರವಲ್ಲದೆ ಮೆಕ್ಸಿಕೋದಲ್ಲಿ ಕೂಡ ಇದರ ಖ್ಯಾತಿ ಹಬ್ಬಿದೆ.

ಕಿಟ್‌ಕ್ಯಾಟ್ ಆವೃತ್ತಿಯ ಮಿತ ದರದ ಫೋನ್ ಅನ್ನು ಬಿಡುಗಡೆ ಮಾಡಿದ್ದ ಮೋಟೋರೋಲಾ ತನ್ನ ಮೋಟೋ ಜಿ ಫೆರಾರಿ ಆವೃತ್ತಿಯನ್ನು ಮೆಕ್ಸಿಕೋದಲ್ಲಿ ಲಾಂಚ್ ಮಾಡಿದೆ. ಆದರೆ ಇದು ಮೆಕ್ಸಿಕೋ ಮಾರುಕಟ್ಟೆಗೆ ಮಾತ್ರ ಲಭ್ಯವಿದ್ದು ಇತರ ಕಡೆಗಳಲ್ಲಿ ಲಭ್ಯವಿರುವುದರ ಕುರಿತು ಯಾವುದೇ ಮಾಹಿತಿಯನ್ನು ಫೋನ್ ಬಹಿರಂಗ ಪಡಿಸಿಲ್ಲ.

ಮೆಕ್ಸಿಕೋದಲ್ಲಿ ಮೊಟೋ ಜಿ ಫೆರಾರಿ ಲಾಂಚ್

ಇದರ ಅಂದಾಜು ಬೆಲೆ ಭಾರತೀಯ ರೂಗಳಲ್ಲಿ ಸುಮಾರು 23,111 ಆಗಿದೆ. ಇದು ಮೂಲ ಮೋಟೋರೋಲಾ ಫೋನ್‌ಗಳಾದ ಮೋಟೋ ಜಿ ಹಾಗೂ ಮೋಟೋ ಎಲ್‌ಟಿಇಗಿಂತ ಹೆಚ್ಚು ದುಬಾರಿಯಾಗಿದೆ. ಫೆರಾರಿಯಾ ಲೋಗೋವನ್ನು ಫೋನ್‌ನ ಮುಂಭಾಗ ಹಾಗೂ ಹಿಂಭಾಗದಲ್ಲಿ ಕಾಣಬಹುದಾಗಿದೆ. ಮೊಟೋರೋಲಾ ಮೋಟೋ ಜಿ ಫೆರಾರಿ ಎಡಿಶನ್ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯೊಂದಿಗೆ ಬಂದಿದೆ. 4.5 ಇಂಚಿನ 720HD ಡಿಸ್‌ಪ್ಲೇ, ಕ್ವಾಡ್ - ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್, 1ಜಿಬಿ ಆಂತರಿಕ ಮೆಮೊರಿ, 16ಜಿಬಿ ಆನ್-ಬೋರ್ಡ್ ಮೆಮೊರಿ, 5ಎಂಪಿ ರಿಯರ್ ಫೇಸಿಂಗ್ ಕ್ಯಾಮೆರಾ, ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಫೋನ್ ಜತೆಗೆ ಬಂದಿದೆ.

ಮೋಟೋ ಜಿ ಫೆರಾರಿ ಆವೃತ್ತಿ ಐಕೋನಿಕ್ ಫೆರಾರಿ ಲೋಗೋವನ್ನು ಕವರ್‌ನಲ್ಲಿ ಸೇರ್ಪಡಿಸಲಿದೆ. ಒಟ್ಟಾರೆ ಕ್ರೀಡಾ ಕಾರ್‌ನ ಲುಕ್ ಅನ್ನು ಫೋನ್‌ಗೆ ನೀಡುವ ಸನ್ನಾಹದಲ್ಲಿದೆ ಮೋಟೋ ಜಿ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot