Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಮೋಟೋ ಜಿ ದರಕಡಿತ ಘೋಷಣೆ

Written By:

ಮೋಟೋರೋಲಾದ ಅತ್ಯುತ್ತಮ ಖರೀದಿಗಳಲ್ಲಿ ಒಂದಾಗಿರುವ ಮೋಟೋ ಜಿ, ಈ ವರ್ಷದ ಮುಂಚೆಯೇ ಲಾಂಚ್ ಮಾಡಿದ್ದ ಫೋನ್ ಇದೀಗ ರೂ 2,000 ಗಳ ಕಡಿತವನ್ನು 8 ಜಿಬಿ ಮತ್ತು 16 ಜಿಬಿ ಫೋನ್‌ಗಳೆರಡರಲ್ಲೂ ಪಡೆದುಕೊಂಡಿದೆ. ಅಂದರೆ ನೀವು 8 ಜಿಬಿ ಫೋನ್ ಅನ್ನು ರೂ 10,499 ಹಾಗೂ 16 ಜಿಬಿ ಫೋನ್ ಅನ್ನು ರೂ 11,999 ಕ್ಕೆ ಖರೀದಿಸಬಹುದಾಗಿದೆ.

ಮೋಟೋರೋಲಾದ ಅಧಿಕೃತ ಇ - ಕಾಮರ್ಸ್ ಪಾಲುದಾರನಾಗಿರುವ ಫ್ಲಿಪ್‌ಕಾರ್ಟ್ ನಿನ್ನೆಯಷ್ಟೇ ಈ ಸುದ್ದಿಯನ್ನು ಬಿತ್ತರಿಸಿದ್ದು, ಹೆಚ್ಚಿನ ಮಧ್ಯಮ ಶ್ರೇಣಿಯ ಫೋನ್ ಮಾರಾಟಕ್ಕೆ ತೊಡಕಾಗಿರುವ ಶಯೋಮಿ Mi 3 ಅನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿದೆ. ಸ್ಟಾಕ್ ಇರುವವರೆಗೆ ಮಾತ್ರವೇ ಈ ಒಪ್ಪಂದವನ್ನು ಇರಿಸುತ್ತಿದ್ದು ಇದು ಸೀಮಿತ ಅವಧಿಯ ಕೊಡುಗೆಯಾಗಿದೆ.

ಮೋಟೋ ಜಿ ಫೋನ್‌ಗಳ ಮೇಲೆ ರೂ 2,000 ದರಕಡಿತ

ಈ ವರ್ಷದ ಏಪ್ರಿಲ್‌ನಲ್ಲಿ, ಮೋಟೋ ಜಿ ಸ್ಮಾರ್ಟ್‌ಫೋನ್ ವಿನಿಮಯ ಕೊಡುಗೆಯಲ್ಲೂ ಫ್ಲಿಪ್‌ಕಾರ್ಟ್ ರೂ 2,000 ಗಳ ದರಕಡಿತವನ್ನು ಯೋಜಿಸಿತ್ತು. ಇದು ಕೂಡ ಸೀಮಿತ ಅವಧಿಯ ಕೊಡುಗೆಯಾಗಿತ್ತು.

ಇನ್ನು ಮೋಟೋ ಜಿ ಫೋನ್ ಕುರಿತ ವಿಶೇಷತೆಗಳನ್ನು ನೋಡುವುದಾದರೆ, 4.5 ಇಂಚಿನ HD (720 x 1280 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜತೆಗೆ 329 ppi ಡೆನ್ಸಿಟಿ ಫೋನ್‌ನಲ್ಲಿದೆ. 1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಫೋನ್‌ನಲ್ಲಿ ಸಂಯೋಜನೆಗೊಂಡಿದ್ದು 1 ಜಿಬಿ RAM ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಫೋನ್‌ನಲ್ಲಿ ಚಾಲನೆಯಾಗುತ್ತಿದ್ದು 5MP ರಿಯರ್ ಕ್ಯಾಮೆರಾ ಮತ್ತು 1.3MP ಫ್ರಂಟ್ ಕ್ಯಾಮೆರಾವನ್ನು ನೀವು ಫೋನ್‌ನಲ್ಲಿ ಪಡೆಯುತ್ತೀರಿ.

ನಿಮಗೆ ಈ ಹ್ಯಾಂಡ್‌ಸೆಟ್‌ನಲ್ಲಿ ವೀಡಿಯೊ ಕರೆಗಳು ಮತ್ತು ಅದ್ಭುತ ಸೆಲ್ಫೀಗಳನ್ನು ಕೂಡ ತೆಗೆಯಬಹುದಾಗಿದೆ. ಇನ್ನು ಸಂಪರ್ಕ ವಿಶಿಷ್ಟತೆಗಳು ಡ್ಯುಯಲ್ ಸಿಮ್ (GSM + GSM), 3G, WiFi, Bluetooth 4.0, GPS ಮತ್ತು ತೆಗೆಯಲು ಸಾಧ್ಯವಾಗದೇ ಇರುವ Li-Ion 2070 mAh ಬ್ಯಾಟರಿಯಾಗಿದೆ. ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯವು 8 ಜಿಬಿ ಮತ್ತು 16 ಜಿಬಿಯಲ್ಲಿ ದೊರೆಯುತ್ತಿದೆ.

English summary
This article tells about Motorola Moto G price reduced in Flip kart on limited period. Motorola reduced Rs 2,000 for its device.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot