ಕಡಿಮೆ ಬೆಲೆಯ ಈ ಹೊಸ ಮೋಟೋ ಫೋನಿನಲ್ಲಿ 7,000mAh ಬ್ಯಾಟರಿ!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ತರಲು ಮೋಟೋರೋಲಾ ಸಜ್ಜಾಗಿದೆ.! ಆಕರ್ಷಕ ವಿನ್ಯಾಸ, ಉನ್ನತ ಕಾರ್ಯಕ್ಷಮತೆ ಮತ್ತು ದೀರ್ಘಕಾಲದ ಬ್ಯಾಟರಿಯೊಂದಿಗೆ ಹೊಸ 'ಮೋಟೋ G06 ಪವರ್'(Moto G06 Power) ಸ್ಮಾರ್ಟ್‌ಫೋನ್ ಇದೇ ಅಕ್ಟೋಬರ್ 7 ರಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಬಿಡುಗಡೆ ಆದ ತಕ್ಷಣವೇ, ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಲು ಲಭ್ಯವಾಗಲಿದೆ.
ಈ ಹೊಸ ಮೋಟೋ G06 ಪವರ್ ಫೋನ್‌ನ ಪ್ರಮುಖ ಆಕರ್ಷಣೆ 7,000mAh ಸಾಮರ್ಥ್ಯದ ದೈತ್ಯ ಬ್ಯಾಟರಿ ಮತ್ತು ಕೈಗೆಟುಕುವಂತಹ ಕಡಿಮೆ ಬೆಲೆಯ ನಿರೀಕ್ಷೆ, ಇವುಗಳ ಜೊತೆಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳು ಗಮನಸೆಳೆಯುತ್ತಿವೆ. ಹಾಗಾದರೆ, ಇನ್ನೆರಡು ದಿನಗಳಲ್ಲಿ ಪರಿಚಯಗೊಳ್ಳುತ್ತಿರುವ ಹೊಸ 'ಮೋಟೋ G06 ಪವರ್' ಫೋನಿನ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಬೆಲೆ ಎಷ್ಟಿರಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಮುಂದೆ ಓದಿ ತಿಳಿಯೋಣ ಬನ್ನಿ.
ಡಿಸ್ಪ್ಲೇ ಮತ್ತು ವಿನ್ಯಾಸ
ಮುಂಬರುವ ಹೊಸ ಷಮೋಟೋ G06 ಪವರ್‌ನಲ್ಲಿ 6.88 ಇಂಚಿನ ವಿಶಾಲ ಡಿಸ್ಪ್ಲೇ ಒದಗಿಸಲಾಗಿದ್ದು, ಇದು 120Hz ರಿಫ್ರೆಶ್ ರೇಟ್ ಬೆಂಬಲಿಸುತ್ತದೆ. ಇದರ ಸ್ಮೂತ್ ಸ್ಕ್ರೋಲಿಂಗ್ ಮತ್ತು ಗೇಮಿಂಗ್ ಅನುಭವ ಅತ್ಯಂತ ಮೃದುವಾಗಿರುತ್ತದೆ. ಗೊರಿಲ್ಲಾ ಗ್ಲಾಸ್ 3 ರಕ್ಷಣೆಯು ಸ್ಕ್ರಾಚ್‌ಗಳಿಂದ ಸುರಕ್ಷತೆ ಒದಗಿಸುತ್ತದೆ. ವಿನ್ಯಾಸದ ವಿಷಯದಲ್ಲಿ, ಈ ಫೋನ್ Vegan Leather ಫಿನಿಷ್‌ನೊಂದಿಗೆ ಪ್ರೀಮಿಯಂ ನೋಟ ನೀಡುತ್ತದೆ. ಇದರ ದೇಹವು IP64 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನ ಸಿಂಪಡಣೆಯಿಂದ ರಕ್ಷಿಸುತ್ತದೆ. ಫೋನ್ Laurel Oak ಮತ್ತು Tapestry ಸೇರಿದಂತೆ ಹಲವು ಬಣ್ಣಗಳಲ್ಲಿ ಲಭ್ಯವಾಗಲಿದೆ.
ಪ್ರೊಸೆಸರ್ ಮತ್ತು ಸಾಫ್ಟ್‌ವೇರ್
ಮೋಟೋ G06 ಪವರ್‌ನಲ್ಲಿ MediaTek G81 Extreme ಚಿಪ್‌ಸೆಟ್ ಬಳಸಲಾಗಿದ್ದು, ಇದು ದಿನನಿತ್ಯದ ಕಾರ್ಯಗಳು ಮತ್ತು ಗೇಮಿಂಗ್‌ಗಾಗಿ ಶಕ್ತಿಶಾಲಿ ಕಾರ್ಯಕ್ಷಮತೆಯನ್ನು ನೀಡುತ್ತದೆ. ಇದು 4GB ಮತ್ತು 8GB LPDDR4x RAM ಆಯ್ಕೆಗಳಲ್ಲಿ ಲಭ್ಯವಿದ್ದು, RAM Boost Technology ಮೂಲಕ ಹೆಚ್ಚುವರಿ ವರ್ಚುವಲ್ RAM ವಿಸ್ತರಣೆ ನೀಡುತ್ತದೆ.ಸಾಫ್ಟ್‌ವೇರ್ ವಿಭಾಗದಲ್ಲಿ, ಈ ಫೋನ್ Android 15 OS ನೊಂದಿಗೆ ಬರುತ್ತದೆ, ಇದು ನವೀನ ಮತ್ತು ಸುರಕ್ಷಿತ ಬಳಕೆದಾರ ಅನುಭವವನ್ನು ನೀಡುತ್ತದೆ. ಸಂಗ್ರಹಣಾ ಆಯ್ಕೆಗಳು 64GB, 128GB ಮತ್ತು 256GB ವರೆಗೆ ಲಭ್ಯವಿದ್ದು, 1TB ಮೈಕ್ರೋ SD ಕಾರ್ಡ್ ಮೂಲಕ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ಮತ್ತು ಆಡಿಯೋ
ಫೋಟೋಗ್ರಫಿಗಾಗಿ, ಹಿಂಭಾಗದಲ್ಲಿ 50MP ಕ್ವಾಡ್-ಪಿಕ್ಸೆಲ್ ತಂತ್ರಜ್ಞಾನ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಕಡಿಮೆ ಬೆಳಕಿನಲ್ಲಿಯೂ ಇದು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿ.ಆಡಿಯೋ ವಿಭಾಗದಲ್ಲಿ, ಸ್ಟೀರಿಯೋ ಸ್ಪೀಕರ್‌ಗಳು ಮತ್ತು Dolby Atmos ತಂತ್ರಜ್ಞಾನ ಬೆಂಬಲ ದೊರೆಯುತ್ತದೆ. ಜೊತೆಗೆ, ಇಂದಿಗೂ ಅನೇಕರು ಬಯಸುವ 3.5mm ಹೆಡ್‌ಫೋನ್ ಜ್ಯಾಕ್ ಸಹ ಇದೆ.ಸುರಕ್ಷತೆಯ ದೃಷ್ಟಿಯಿಂದ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದೆ.
ಬ್ಯಾಟರಿ ಮತ್ತು ಸಂಪರ್ಕ ಆಯ್ಕೆಗಳು
ಈ ಫೋನ್‌ನ ಪ್ರಮುಖ ವೈಶಿಷ್ಟ್ಯವಾದ 7,000mAh ಬ್ಯಾಟರಿ ದಿನವಿಡೀ ಚಾರ್ಜಿಂಗ್ ಚಿಂತೆಯಿಂದ ಮುಕ್ತಿ ನೀಡುತ್ತದೆ. ಇದಕ್ಕೆ 18W ವೇಗದ ಚಾರ್ಜಿಂಗ್ ಬೆಂಬಲವೂ ಇದೆ. ಸಂಪರ್ಕ ಆಯ್ಕೆಗಳಲ್ಲಿ USB Type-C ಪೋರ್ಟ್, Bluetooth v5.4, Wi-Fi 5, ಮತ್ತು NFC ಸೇರಿವೆ.
ಬೆಲೆ ಮತ್ತು ಲಭ್ಯತೆ
ಮೋಟೋ G06 ಪವರ್‌ನ ಬೆಲೆ ₹10,000 ರಿಂದ ₹15,000ರ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ. ಕೈಗೆಟುಕುವ ದರದಲ್ಲಿ ಶಕ್ತಿಶಾಲಿ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಆಧುನಿಕ ವಿನ್ಯಾಸವನ್ನು ಬಯಸುವ ಗ್ರಾಹಕರಿಗೆ ಇದು ಆಕರ್ಷಕ ಆಯ್ಕೆಯಾಗಬಹುದು.ನೀವು ಮೋಟೋ G06 ಪವರ್‌ನ ವೈಶಿಷ್ಟ್ಯಗನ್ನು ಉತ್ತಮವಾಗಿವೆ ಎಂಬುದನ್ನು ಒಪ್ಪುತ್ತೀರಾ? ಮತ್ತು ನಿಮ್ಮ ಅಭಿಪ್ರಾಯದಲ್ಲಿ ಈ ಫೋನಿನ ನಿಜವಾದ ಬೆಲೆ ಎಷ್ಟು ಇರಬಹುದು? ಎಂಬುದನ್ನು ಈ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ.


Click it and Unblock the Notifications








