ಸದ್ಯದಲ್ಲೇ ಮೋಟೋರೋಲಾದ ನಿರೀಕ್ಷಿತ ಮೋಟೋ ಜಿ2!!!

Posted By:

ಮೋಟೊರೋಲಾ ತನ್ನ ಮೋಟೋ ಜಿ ಹ್ಯಾಂಡ್‌ಸೆಟ್ ಅನ್ನು ಲಾಂಚ್ ಮಾಡಿದಾಗ, ಬೆಲೆ ವಿಶಿಷ್ಟತೆ ಇವೆಲ್ಲವುಗಳ ಮೂಲಕ ಈ ಫೋನ್ ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನವನ್ನು ಅಲಂಕರಿಸಿತು. ಈಗ ಇದೆ ಕಂಪೆನಿ ಮೋಟೋ ಜಿಯ ಎರಡನೇ ತಲೆಮಾರನ್ನು ಹೊರತರುವ ಆತುರದಲ್ಲಿದೆ.

ಹೌದು ಕೆಲವು ದಿನಗಳಿಂದ ಮೋಟೋ ಜಿ2 ಬಗ್ಗೆ ಹೆಚ್ಚಿನ ಊಹಾಪೋಹಗಳು ಹರಿದಾಡುತ್ತಿವೆ. ಈ ಫೋನ್‌ನ ವಿಶೇಷತೆಗಳು ಫೋನ್ ಪ್ರಿಯರಲ್ಲಿ ಹೆಚ್ಚುವರಿ ಮಹತ್ವಾಕಾಂಕ್ಷೆಯನ್ನು ಉಂಟುಮಾಡಿದ್ದು ಮೋಟೋ ಜಿ2 ಕೂಡ ಹೆಚ್ಚಿನ ಖ್ಯಾತಿಯನ್ನು ಗಳಿಸಬಹುದೆಂಬ ನಂಬಿಕೆ ಕಂಪೆನಿಯಲ್ಲಿ ಉತ್ಪತ್ತಿಯಾಗಿದೆ.

ಮಾರುಕಟ್ಟೆಯಲ್ಲಿ ಮೋಟೋ ಜಿ2 ಗೆಲುವಿನ ಚಮತ್ಕಾರ

ಮೋಟೋ ಜಿ2 ಕುರಿತ ಅತ್ಯಾಧುನಿಕ ವದಂತಿ
ಸಪ್ಟೆಂಬರ್ 10 ರ ಮೊದಲೇ ಮಾರುಕಟ್ಟೆಗೆ ಅಡಿ ಇಡಲಿರುವ ಮೋಟೋ ಜಿ2 GSM ಅರೇನಾ ವರದಿಯ ಪ್ರಕಾರ ಮಾರುಕಟ್ಟೆಯನ್ನು ಶೀಘ್ರವೇ ತಲುಪಲಿದೆ ಎಂದಾಗಿದೆ. ಹೊರತಾಗಿ ರೀಟೈಲ್ ಸಮುದಾಯ ಸಪ್ಟೆಂಬರ್ 10 ಅಥವಾ ಅದಕ್ಕಿಂತ ಮುಂಚೇಯೇ ಫೋನ್ ಕುರಿತ ಮಾಹಿತಿಯನ್ನು ಪಡೆದುಕೊಳ್ಳಲಿದೆ. ಇದೇ ಸಮಯದಲ್ಲಿ ಆಪಲ್ ಕಂಪೆನಿ ಕೂಡ ತನ್ನ ಐಫೋನ್ 6 ಮತ್ತು ಐವಾಚ್‌ನ ಬಿಡುಗಡೆಗೆ ಸಪ್ಟೆಂಬರ್ 9 ಅನ್ನು ನಿಗದಿಪಡಿಸಿದೆ.

ಮೋಟೋ ಜಿ2 ನಲ್ಲಿ ನೀವೇನು ನಿರೀಕ್ಷಿಸಬಹುದು
ಇದು 5 ಇಂಚಿನ 720 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ ಕ್ವಾಡ್ ಕೋರ್ ಪ್ರೊಸೆಸರ್ ಜೊತೆಗೆ ಫೋನ್ 1 ಜಿಬಿ RAM ಅನ್ನು ಕೂಡ ಒಳಗೊಂಡಿದೆ. ಇದರ ಆಂತರಿಕ ಮೆಮೊರಿ ಸಾಮರ್ಥ್ಯ 8 ಜಿಬಿಯಾಗಿದ್ದು ಇದನ್ನು ವಿಸ್ತರಿಬಹುದು ಎಂಬುದು ವದಂತಿಗಳಿಂದ ತಿಳಿಯಪಟ್ಟಿದೆ. ಫೋನ್ 8MP ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು 3MP ಫ್ರಂಟ್ ಫೇಸಿಂಗ್ ಶೂಟರ್ ಸೆಲ್ಫೀಗಳಿಗೆ ಅನುಕೂಲಕರವಾಗಿದೆ. ಫೋನ್ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆ ಮಾಡಲಿದೆ ಎಂಬುದು ಇದುವೆರೆಗೆ ಬಂದ ಸುದ್ದಿಯಾಗಿದೆ.

ಮೋಟೋರೋಲಾ ಮೋಟೋ ಜಿ2 ನಿರೀಕ್ಷಿತ ಬೆಲೆ
ಬ್ರೆಜಿಲ್ ಮತ್ತು ಭಾರತದಂತಹ ದೇಶಗಳಲ್ಲಿ ಮೊಟೋ ಜಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಬರಿಯ ಜನಪ್ರಿಯತೆಯನ್ನು ಆಧರಿಸಿ ಫೋನ್ ಭರ್ಜರಿ ಕಮಾಲನ್ನೇ ಮಾರುಕಟ್ಟೆಯಲ್ಲಿ ಉಂಟುಮಾಡಲಿದ್ದು ಫೋನ್‌ನ ಖ್ಯಾತಿಯನ್ನು ಜನಪ್ರಿಯತೆಯನ್ನು ನೋಡಿಯೇ ಗ್ರಾಹಕರು ಫೋನ್ ಅನ್ನು ಖರೀದಿಸಲಿದ್ದಾರೆ ಬೆಲೆಯನ್ನಲ್ಲ ಎಂಬುದು ಕಂಪೆನಿಯ ವಿಶ್ವಾಸವಾಗಿದೆ. GSM ಅರೇನಾದ ಪ್ರಕಾರ ಫೋನ್ ಬೆಲೆ ರೂ 20,000 ಆಗಿರಬಹುದೆಂದು ಅಂದಾಜಿಸಲಾಗಿದೆ.

English summary
This article tells about Motorola Moto G2 Next-Gen Smartphone Tipped For September 10 Retail Release.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot