Home
ಮೊಬೈಲ್

ಲಾಂಚ್ ಆಯ್ತು ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌: ಶಿಯೋಮಿ ನೋಟ್‌ ಸರಣಿಗೆ ಉಳಿಗಾಲವಿಲ್ಲ..!

By Srinidhi

ಭಾರತೀಯ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಮೊಟೊರೊಲಾ, ಮೊಟೊ G6 ಸರಣಿಯ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಬ್ರೆಜಿಲ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಮಾರಾಟಕ್ಕೂ ಲಭ್ಯವಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗಲಿವೆ. ಈ ಹಿನ್ನಲೆಯಲ್ಲಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡಿರುವ ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಲಾಂಚ್ ಆಯ್ತು ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌: ಶಿಯೋಮಿ ನೋಟ್‌ಗೆ ಉಳಿಗಾಲವಿಲ್ಲ..!

ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಎಲ್ಲಾ ವಿಶೇಷತೆಗಳನ್ನ ಮೊಟೊ G6 ಸರಣಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಬಹುದಾಗಿದೆ. ಈ ಹಿಂದೆ ಒಂದು ಸರಣಿಯಲ್ಲಿ ಎರಡು ಸ್ಮಾರ್ಟ್‌ಪೋನ್ ಲಾಂಚ್ ಮಾಡುತ್ತಿದ್ದ ಮೊಟೊ, ಈ ಬಾರಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದೆ. ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್ ಟಾಪ್ ಎಂಡ್ ಆಗಿದೆ.

ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಬೆಲೆ:

ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಬೆಲೆ:

ಮೊಟೊ G6, ಮೊಟೊ G6 ಪ್ಲಸ್ ಮತ್ತು ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ಗಳು ಇಂದು ಬ್ರೆಜಿಲ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಭಾರತೀಯ ರೂಪಾಯಿಗಳಲ್ಲಿ ಬೆಲೆಗಳನ್ನು ನೋಡುದಾದರೆ ಮೊಟೊ G6 ರೂ. 16,500ಕ್ಕೆ, ಮೊಟೊ G6 ಪ್ಲೇ ರೂ.13000ಕ್ಕೆ ಮತ್ತು ಮೊಟೊ G6 ಪ್ಲಸ್ ರೂ.24,350ಕ್ಕೆ ಲಭ್ಯವಿದೆ. ಆದರೆ ಇದು ಭಾರತೀಯ ಮಾರುಕಟ್ಟೆಯಲ್ಲಿಯೇ ದೊರೆತರೆ ಇನ್ನು ಕಡಿಮೆ ಲಭ್ಯವಾಗುವ ಸಾಧ್ಯತೆ ಇದೆ.

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್‌:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್‌:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ 5.93 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇದು 18:9 ಅನುಪಾತದಲಿದ್ದು, FHD+ ಗುಣಮಟ್ಟದಾಗಿದೆ. ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ಹಿಸುವ ಈ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ ಒರಿಯಾ 8.0ದೊಂದಿಗೆ ಲಭ್ಯವಿದೆ. 2.2GHz ವೇಗದ ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಜೊತೆಗೆ 4GB RAM ಮತ್ತು ಆಡ್ರಿನೋ 508 GPU ಅನ್ನು ನೀಡಲಾಗಿದೆ. 64GB ಇಂಟರ್ನಲ್ ಮೊಮೆರಿಯನ್ನು ಹೊಂದಿದೆ.

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್‌ ವಿಶೇಷತೆ:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್‌ ವಿಶೇಷತೆ:

ಮೊಟೊ G6 ಪ್ಲಸ್ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, 12MP + 5MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಎರಡು ಕಡೆಗಳಲ್ಲಿ LED ಫ್ಲಾಷ್ ಲೈಟ್‌ಗಳನ್ನು ಅಳವಡಿಸಲಾಗಿದೆ. 3200mAh ಬ್ಯಾಟರಿಯನ್ನು ನೀಡಲಾಗಿದೆ.

ಮೊಟೊ G6 ಸ್ಮಾರ್ಟ್‌ಫೋನ್‌:

ಮೊಟೊ G6 ಸ್ಮಾರ್ಟ್‌ಫೋನ್‌:

ಮೊಟೊ G6 ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಇದು 18:9 ಅನುಪಾತದಲಿದ್ದು, FHD+ ಗುಣಮಟ್ಟದಾಗಿದೆ. 1.8GHz ವೇಗದ ಆಕ್ಟಾಕೋರ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ನೊಂದಿಗೆ ಆಡ್ರಿನೋ 506 GPU ಮತ್ತು 3GB RAM ನೊಂದಿಗೆ ಕಾಣಿಸಿಕೊಳ್ಳಲಿದೆ. ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ಹಿಸುವ ಈ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ ಒರಿಯಾ 8.0ದೊಂದಿಗೆ ಲಭ್ಯವಿದೆ. 32 GB ಇಂಟರ್ನಲ್ ಮೊಮೆರಿಯನ್ನು ಹೊಂದಿದೆ.

What is Jio Cricket Gold Pass? How to Buy it
ಮೊಟೊ G6 ಸ್ಮಾರ್ಟ್‌ಫೋನ್‌ ವಿಶೇಷತೆ:

ಮೊಟೊ G6 ಸ್ಮಾರ್ಟ್‌ಫೋನ್‌ ವಿಶೇಷತೆ:

ಮೊಟೊ G6 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, 12MP + 5MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಎರಡು ಕಡೆಗಳಲ್ಲಿ LED ಫ್ಲಾಷ್ ಲೈಟ್‌ಗಳನ್ನು ಅಳವಡಿಸಲಾಗಿದೆ. 3000mAh ಬ್ಯಾಟರಿಯನ್ನು ನೀಡಲಾಗಿದೆ.

ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌:

ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌:

ಮೊಟೊ G6 ಸ್ಮಾರ್ಟ್‌ಫೋನಿನಲ್ಲಿ 5.7 ಇಂಚಿನ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಇದು 18:9 ಅನುಪಾತದಲಿದ್ದು, HD ಗುಣಮಟ್ಟದಾಗಿದೆ. 1.4GHz ವೇಗದ ಆಕ್ಟಾಕೋರ್ ಸ್ನಾಪ್‌ಡ್ರಾಗನ್ 430 ಪ್ರೋಸೆಸರ್ ನೊಂದಿಗೆ ಆಡ್ರಿನೋ 505 GPU ಮತ್ತು 3GB RAM ನೊಂದಿಗೆ ಕಾಣಿಸಿಕೊಳ್ಳಲಿದೆ. ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ಹಿಸುವ ಈ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ ಒರಿಯಾ 8.0ದೊಂದಿಗೆ ಲಭ್ಯವಿದೆ. 32 GB ಇಂಟರ್ನಲ್ ಮೊಮೆರಿಯನ್ನು ಹೊಂದಿದೆ.

ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ ವಿಶೇಷತೆ:

ಮೊಟೊ G6 ಪ್ಲೇ ಸ್ಮಾರ್ಟ್‌ಫೋನ್‌ ವಿಶೇಷತೆ:

ಮೊಟೊ G6 ಪ್ಲೇ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 12 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಎರಡು ಕಡೆಗಳಲ್ಲಿ LED ಫ್ಲಾಷ್ ಲೈಟ್‌ಗಳನ್ನು ಅಳವಡಿಸಲಾಗಿದೆ. 4000mAh ಬ್ಯಾಟರಿಯನ್ನು ನೀಡಲಾಗಿದೆ.

Best Mobiles in India

English summary
Motorola Moto G6, G6 Plus, G6 Play announced: Price, specs, and features. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+