ಮೋಟೊರೋಲಾ ಮೋಟೋ ಜಿ6 ,ಜಿ6 ಪ್ಲಸ್: ವಿನ್ಯಾಸ, ಸ್ಪೆಸಿಫಿಕೇಶನ್ ಮತ್ತು ಬೆಲೆ?

ಮೋಟೊರೋಲಾ ಮೋಟೋ ಜಿ6 ಶ್ರೇಣಿಯ ಸಾರ್ಟ್ಫೋನ್ಗಳ ಕುರಿತು ಮಾಹಿತಿ ಸೋರಿಕೆಯಾಗಿದ್ದು, ಅವು 18:9 ಆಸ್ಪೆಕ್ಟ್ ಅನುಪಾತವುಳ್ಳ ಡಿಸ್ಪ್ಲೇ ಹೊಂದಿರಲಿದೆ.

By Tejaswini P G
|

ಈ ವರ್ಷದ ಆರಂಭದಲ್ಲಿ 2018ರಲ್ಲಿ ಬಿಡುಗಡೆಯಾಗಲಿರುವ ಎಲ್ಲಾ ಮೋಟೊರೋಲಾ ಸ್ಮಾರ್ಟ್ಫೋನ್ಗಳ ವಿವರಗಳು ಸೋರಿಕೆಯಾಗಿತ್ತು. ಹಾಗಾಗಿ ಮೋಟೊರೋಲಾ ಸಂಸ್ಥೆಯು ಅದರ ಜಿ ಶ್ರೇಣಿಯಲ್ಲಿ ಮೋಟೋ ಜಿ6, ಮೋಟೋ ಜಿ6 ಪ್ಲಸ್ ಮತ್ತು ಮೋಟೋ ಜಿ6 ಪ್ಲೇ ಎಂಬ ಮೂರು ಹೊಸ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಲಿರುವುದು ನಮಗೆಲ್ಲಾ ತಿಳಿದೇ ಇದೆ. ಇದೀಗ ಬಂದಿರುವ ಮಾಹಿತಿಯ ಅನುಸಾರ ಈ ಎಲ್ಲಾ ಮೊಬೈಲ್ಗಳು ಈಗ ಟ್ರೆಂಡ್ ನಲ್ಲಿರುವ 18:9 ಅನುಪಾತದ ಡಿಸ್ಪ್ಲೇ ಹೊಂದಿರಲಿದೆ.

ಈಗ ಸೋರಿಕೆಗಳಿಗೆ ಖ್ಯಾತನಾದ ಆಂಡ್ರಿ ಯಾತಿಮ್ ಟ್ವಿಟ್ಟರ್ ನಲ್ಲಿ ಮೋಟೋ ಜಿ6 ಮತ್ತು ಮೋಟೋ ಜಿ6 ಪ್ಲಸ್ ನ ಚಿತ್ರಗಳನ್ನು ಹಂಚಿಕೊಂಡಿದ್ದಾನೆ. ಅವುಗಳ ಪೈಕಿ ಮೋಟೋ ಜಿ6 ನ ಚಿತ್ರ ಅದರ ಮುಂಭಾಗ ಮತ್ತು ಹಿಂಭಾಗಗಳೆರಡನ್ನೂ ತೋರಿಸುತ್ತಿದೆ. ಆದರೆ ಮೋಟೋ ಜಿ6 ಪ್ಲಸ್ ನ ಚಿತ್ರದಲ್ಲಿ ಅದರ ಮುಂಭಾಗವನ್ನಷ್ಟೇ ತೋರಿಸಲಾಗಿದೆ. ಈ ಚಿತ್ರಗಳು ಯಾವುದೇ ಅಧಿಕೃತ ಮೂಲದಿಂದ ಬರುತ್ತಿಲ್ಲವಾದರೂ ಅವು ವಿಶ್ವಾಸಾರ್ಹವಾಗಿ ಕಾಣಿಸುತ್ತಿದೆ. ಬರಲಿರುವ ಮೋಟೊರೋಲಾ ಸ್ಮಾರ್ಟ್ಫೋನ್ಗಳು ಇದೇ ವಿನ್ಯಾಸವನ್ನು ಹೊಂದಿದ್ದರೆ ಆಶ್ಚರ್ಯವೇನಿಲ್ಲ.

ಮೋಟೊರೋಲಾ ಮೋಟೋ ಜಿ6 ,ಜಿ6 ಪ್ಲಸ್: ವಿನ್ಯಾಸ, ಸ್ಪೆಸಿಫಿಕೇಶನ್ ಮತ್ತು ಬೆಲೆ?


ಮೋಟೋ ಜಿ6

ಮೇಲಿನ ಚಿತ್ರದಲ್ಲಿ ಕಾಣಿಸುವಂತೆ ಮೋಟೋ ಜಿ6 ಉದ್ದವಾದ ಡಿಸ್ಪ್ಲೇ ಹೊಂದಿದ್ದು 18:9 ಆಸ್ಪೆಕ್ಟ್ ಅನುಪಾತ ಹೊಂದಿರುವಂತೆ ತೋರುತ್ತದೆ. ಹಿಂದಿನ ಫೋನ್ಗಳಿಗಿಂತ ತೆಳುವಾದ ಅಂಚನ್ನು ಹೊಂದಿದ್ದು ಫಿಸಿಕಲ್ ಹೋಮ್ ಬಟನ್ ಕೂಡ ಇದೆ. ಈ ಹೋಮ್ ಬಟನ್ ಫಿಂಗರ್ಪ್ರಿಂಟ್ ಸ್ಕ್ಯಾನರ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತದೆ.

ಮೋಟೋ ಜಿ6 ಡ್ಯುಯಲ್ ರೇರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇಮೇಜ್ ಸೆನ್ಸರ್ಗಳನ್ನು ವೃತ್ತಾಕಾರದ ಹೌಸಿಂಗ್ ನಲ್ಲಿ ಜೋಡಿಸಲಾಗಿದೆ. ಈ ಕ್ಯಾಮೆರಾ ಸೆನ್ಸರ್ಗಳು ಡ್ಯುಯಲ್ LED ಫ್ಲ್ಯಾಶ್ ಕೂಡ ಹೊಂದಿದೆ. ಇನ್ನೂ ಸ್ವಲ್ಪ ಕೆಳಕ್ಕೆ ಸರಿದರೆ ಅದರ ಬ್ರ್ಯಾಂಡ್ ಲೋಗೋ ಅನ್ನು ಕಾಣಬಹುದಾಗಿದೆ.

ಮೋಟೊರೋಲಾ ಮೋಟೋ ಜಿ6 ,ಜಿ6 ಪ್ಲಸ್: ವಿನ್ಯಾಸ, ಸ್ಪೆಸಿಫಿಕೇಶನ್ ಮತ್ತು ಬೆಲೆ?

ಮೋಟೋ ಜಿ6 ಪ್ಲಸ್

ಈಗಾಗಲೇ ತಿಳಿಸಿದಂತೆ ಚಿತ್ರದಲ್ಲಿ ಮೋಟೋ ಜಿ6 ಪ್ಲಸ್ ನ ಮುಂಭಾಗವನ್ನು ಮಾತ್ರ ಕಾಣಬಹುದಾಗಿದೆ. ಈ ಸ್ಮಾರ್ಟ್ಫೋನ್ ಬಹುತೇಕ ಮೋಟೋ ಜಿ6 ನಂತೆಯೇ ಕಾಣುತ್ತದೆ. ಕೆಲವು ಚಿಕ್ಕ ಪುಟ್ಟ ವ್ಯತ್ಯಾಸಗಳಿದ್ದು ಅದು ಸುಲಭವಾಗಿ ಗೋಚರಿಸದು.

ಮೋಟೋ ಜಿ6 ಪ್ಲಸ್ ಕೂಡ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ.

ನಿರೀಕ್ಷಿಸಲಾದ ಸ್ಪೆಸಿಫಿಕೇಶನ್, ಫೀಚರ್ಗಳು ಮತ್ತು ಬೆಲೆ

ಸೋರಿಕೆಯಾಗಿರುವ ಮಾಹಿತಿಗಳ ಅನುಸಾರ ಮೋಟೋ ಜಿ6 ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 450 ಪ್ರಾಸೆಸರ್ ಹೊಂದಿರಲಿದೆ. ಈ NFC-ಎನೇಬಲ್ಡ್ ಸ್ಮಾರ್ಟ್ಫೋನ್ 3000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಅಲ್ಲದೆ ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ನೊಂದಿಗೆ ಬರಲಿರುವ ಮೋಟೋ ಜಿ6 ಓಎಸ್ ನ ಮೇಲೆ ZUK ಸ್ಕಿನ್ ಹೊಂದಿರಲಿದೆ.

ಮೋಟೊರೋಲಾ ಮೋಟೋ ಜಿ6 ,ಜಿ6 ಪ್ಲಸ್: ವಿನ್ಯಾಸ, ಸ್ಪೆಸಿಫಿಕೇಶನ್ ಮತ್ತು ಬೆಲೆ?


ಹಾಗೆಯೇ ಮೋಟೋ ಜಿ6 ಪ್ಲಸ್ ಹಿರಿದಾದ 3250 mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದೆ. ಇದರ ಇತರ ವಿವರಗಳು ಮತ್ತು ಫೀಚರ್ಗಳ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಕೊನೆಯದಾಗಿ, ಮೋಟೊರೋಲಾ ಮೋಟೋ ಜಿ6 ಪ್ಲೇ ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 430 ಪ್ರಾಸೆಸರ್ ಮತ್ತು 4000 mAh ಬ್ಯಾಟರಿ ಹೊಂದಿರಲಿದೆ ಎಂಬ ವದಂತಿಗಳಿವೆ. ಆದರೆ ಪ್ಲೇ ಆವೃತ್ತಿಯು ಪ್ಲಸ್ ಆವೃತ್ತಿಗಿಂತ ಹಿರಿದಾದ ಬ್ಯಾಟರಿ ಹೊಂದಿರಲಿಕ್ಕಿಲ್ಲ ಎಂದು ನಮ್ಮ ಅನಿಸಿಕೆ.

ಮೋಟೊರೋಲಾ ಮೋಟೋ ಜಿ6 ,ಜಿ6 ಪ್ಲಸ್: ವಿನ್ಯಾಸ, ಸ್ಪೆಸಿಫಿಕೇಶನ್ ಮತ್ತು ಬೆಲೆ?
How to find out where you can get your Aadhaar card done (KANNADA)

ಇನ್ನು ಇವುಗಳ ಬೆಲೆ ಕುರಿತು ಹೇಳುವುದಾದರೆ ಮೋಟೋ ಜಿ6 ಮತ್ತು ಮೋಟೋ ಜಿ6 ಪ್ಲಸ್ ನ ಬೆಲೆ ಕ್ರಮವಾಗಿ ರೂ 15,000 ಮತ್ತು ರೂ 17,000 ಇರಲಿದೆ. ಹಾಗೆಯೇ ಮೋಟೋ ಜಿ6 ಪ್ಲೇ ಯ ಬೆಲೆ ರೂ 12,000 ಇರಲಿದೆ ಎನ್ನುತ್ತದೆ ಈ ವದಂತಿಗಳು.


• ಮೋಟೋ ಜಿ6,ಜಿ6 ಪ್ಲಸ್ ಮತ್ತು ಜಿ6 ಪ್ಲೇ ಕುರಿತು ಮಾಹಿತಿ ಸೋರಿಕೆ

• ಇವು 18:9 ಆಸ್ಪೆಕ್ಟ್ ಅನುಪಾತ ಹೊಂದಿರುವ ಡಿಸ್ಪ್ಲೇ ಹೊಂದಿರಲಿದೆ.

• ಮೋಟೋ ಜಿ6 ನಲ್ಲಿ ಹೋಮ್ ಬಟನ್, ಫಿಂಗರ್ಪ್ರಿಂಟ್ ಸ್ಕ್ಯಾನರ್, ಡ್ಯುಯಲ್ ರೇರ್ ಕ್ಯಾಮೆರಾ,ಡ್ಯುಯಲ್ LED ಫ್ಲ್ಯಾಶ್ ಹೊಂದಿರಲಿದೆ

• ಮೋಟೋ ಜಿ6 ಸ್ನ್ಯಾಪ್ಡ್ರ್ಯಾಗನ್ 450 ಪ್ರಾಸೆಸರ್ , 3000 mAh ಬ್ಯಾಟರಿ,ಆಂಡ್ರಾಯ್ಡ್ 8.0 ಓರಿಯೋ ಓಎಸ್ ಹೊಂದಿರಲಿದೆ

• ಬೆಲೆ ಮೋಟೋ ಜಿ6 : 15,000, ಮೋಟೋ ಜಿ6 ಪ್ಲಸ್ : ರೂ 17000 ಮತ್ತು ಮೋಟೋ ಜಿ6 ಪ್ಲೇ ರೂ 12,000 ಸಾಧ್ಯತೆ

Best Mobiles in India

English summary
The Moto G6 series of smartphones are tipped to come with 18:9 displays. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X