ಶೀಘ್ರವೇ ಬರಲಿದೆ ಮೊಟೊರೊಲಾ MT917 ಮೊಬೈಲ್

ಮೊಟೊರೊಲಾ ಕಂಪನಿ MT917 ಎಂಬ ಮೊಬೈಲನ್ನು ಬಿಡುಗಡೆ ಮಾಡುವತ್ತ ಚಿಂತಿಸುತ್ತಿದೆ. ಇದೇ 2011 ರ ಡಿಸೆಂಬರ್ ನಲ್ಲಿ ಚೈನಾದಲ್ಲಿ ಬಿಡುಗಡೆಗೊಳ್ಳಲಿರುವ ಈ ಮೊಬೈಲ್ ಡ್ರಾಯ್ಡ್ ರೇಝರ್ ಆಯಾಮದ ಮುಂದುವರಿದ ಭಾಗ ಎಂದು ಕೆಲವು ತಂತ್ರಜ್ಞಾನದ ನಿಯತಕಾಲಿಕೆ ತಿಳಿಸಿದೆ.
ಮೊಟೊರೊಲಾ MT917 ಮೊಬೈಲ್ ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಯಾಮದಿಂದ ಕಾರ್ಯ ನಿರ್ವಹಿಸಲಿದ್ದು, 1.2GHz ಡ್ಯೂಯಲ್ ಕೋರ್ ಪ್ರೊಸೆಸರ್ ಮತ್ತು 1ಜಿಬಿ RAM ನಿಂದ ಅತಿ ಹೆಚ್ಚು ಕಾರ್ಯ ಕ್ಷಮತೆ ತೋರಲಿದೆ. 3ಜಿ ಸಂಪರ್ಕದ ವೇಗವೂ ಇದರಲ್ಲಿ ಹೆಚ್ಚಿದೆ ಎನ್ನಲಾಗಿದೆ. ಈ ಮೊಟೊರೊಲಾ MT917 ಮುಂದೆ ಶೀಘ್ರವೇ ಐಸ್ ಕ್ರೀಂ ಸ್ಯಾಂಡ್ ವಿಚ್ ಆಪರೇಟಿಂಗ್ ಸಿಸ್ಟಮ್ ಬಳಸಿಕೊಳ್ಳಲಿದೆ ಎಂಬ ಸುದ್ದಿಯೂ ಇದೆ.
ಮೊಟೊರೊಲಾ ದಿಂದ ಪರಿಚಿತಗೊಂಡಿರುವ ವೆಬ್ ಟಾಪ್ ಅನ್ನು ಕೂಡ ಮೊಬೈಲ್ ಬೆಂಬಲಿಸಲಿದೆ. ಇದು ಇನ್ನಿತರ ಸಾಧನಗಳೊಂದಿಗೆ ಬೇಗನೆ ಸಂಪರ್ಕ ಕಲ್ಪಿಸಲು ಸಹಾಯಕವಾಗಿದೆ. ಅಪ್ಲಿಕೇಶನ್ ಸ್ಟೋರ್ ಮೂಲಕ ತಮ್ಮ ಅಗತ್ಯಕ್ಕೆ ತಕ್ಕಂತೆ ಅಪ್ಲಿಕೇಶನ್ ಗಳನ್ನು ಬಳಸಿಕೊಳ್ಳಬಹುದಾಗಿದೆ.
4.5 ಇಂಚಿನ ಸ್ಕ್ರೀನ್, 1280x720 ಪಿಕ್ಸಲ್ ರೆಸೊಲ್ಯೂಷನ್ ಹೊಂದಿರುವ ಮೊಟೊರೊಲಾ MT917 ಮೊಬೈಲ್ ನಲ್ಲಿ 13 ಮೆಗಾ ಪಿಕ್ಸಲ್ ಕ್ಯಾಮೆರಾ ಇರುವುದು ವಿಶೇಷವಾಗಿದೆ. ಇದು 1080p ವಿಡಿಯೋ ಕ್ಯಾಪ್ಚರ್ ಸಾಮರ್ಥ್ಯ ನೀಡಲಿದೆ.
ಫೋನ್ ಹೆಚ್ಚು ಬಾಳಿಕೆ ಬರುವ ರೀತಿ ಮೊಬೈಲನ್ನು ತಯಾರಿಸಲಾಗಿದೆ. ಪೂರ್ಣ ಮೊಬೈಲಿಗೆ ಕೆಲ್ವಾರ್ ಫೈಬರ್ ನಿಂದ ರಕ್ಷಣೆ ನೀಡಲಾಗಿದೆ. ಝಿಂಕ್ ಫ್ರೇಮ್ ಮತ್ತು ಸ್ಪ್ಲಾಶ್ ಗಾರ್ಡ್ ಕೋಟಿಂಗ್ ಕೂಡ ಇದೆ. ಗೊರಿಲ್ಲಾ ಗ್ಲಾಸ್ ನೊಂದಿಗೆ ಸ್ಕ್ರೀನ್ ಗೂ ಹೊದಿಗೆ ನೀಡಲಾಗಿದೆ. 8.5 ಎಂಎಂ ಅಳತೆಯೊಂದಿಗೆ ಸ್ಲಿಮ್ ಆಗಿ ಕಾಣಲಿರುವ ಮೊಬೈಲ್ ಚೈನಾದಲ್ಲಿ ಬಿಡುಗಡೆಗೊಂಡ ನಂತರ ಭಾರತಕ್ಕೆ ಕಾಲಿಡಲಿದೆ. ಆದರೆ ಕಂಪನಿ ಇದರ ಬೆಲೆಯನ್ನು ಇನ್ನೂ ನಿಗದಿ ಘೋಷಿಸಿಲ್ಲ.


Click it and Unblock the Notifications