ಮೊಟೋ ಫೋನ್ ಗಳಿಗೆ ಭರ್ಜರಿ ರಿಯಾಯಿತಿ – ಖರೀದಿಗೆ ಬೆಸ್ಟ್ ಟೈಮ್
ಸ್ಮಾರ್ಟ್ ಫೋನ್ ಗಳ ಬೆಲೆ ಇಳಿಕೆ ಇತ್ತೀಚೆಗೆ ದಿನಗಳಲ್ಲಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಯಾಕೆಂದರೆ ಕಂಪೆನಿ ಹೊಸ ಹೊಸ ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದೆ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿರುವ ಫೋನ್ ಗಳ ಮಾಡೆಲ್ ಗಳನ್ನು ಮಾರುವ ಉದ್ದೇಶದಿಂದ ಆಫರ್, ರಿಯಾಯಿತಿ ಅಂತ ಭರ್ಜರಿಯಾಗಿ ಬೆಲೆಯನ್ನು ಇಳಿಕೆ ಮಾಡುತ್ತವೆ.

ವಿವೋ, ಓಪ್ಪೋ, ಸ್ಯಾಮ್ ಸಂಗ್ ಡಿವೈಸ್ ಗಳ ಬೆಲೆ ಇಳಿಕೆಯ ನಂತರ ಇದೀಗ ಮೊಟೋರೊಲಾ ಫೋನ್ ಗಳಿಗೂ ಕೂಡ ಇದೀಗ ಬೆಲೆ ಇಳಿಕೆಯಾಗುತ್ತದೆ.ಮುಂದಿನ ಕೆಲವೇ ದಿನಗಳಲ್ಲಿ ಭಾರತದಲ್ಲಿ ಮೊಟೋರೊಲಾ ಒನ್ ವಿಷನ್ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹಾಗಾಗಿ ಇದೀಗ ನಾಲ್ಕು ಪ್ರಮುಖ ಮೊಟೋ ಫೋನ್ ಗಳ ಬೆಲೆಯಲ್ಲಿ ಇಳಿಕೆಯಾಗಿದೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಿದ್ದ ಎರಡು ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಇಳಿಕೆಯನ್ನು ಮಾಡಲಾಗಿದೆ. ಮೊಟೋರೊಲಾ ಒನ್ ಮತ್ತು ಒನ್ ಪವರ್ ಇದೀಗ ರಿಯಾಯಿತಿಯನ್ನು ಗಳಿಸಿವೆ.ಜೊತೆಗೆ ಮೊಟೋ ಜಿ7 ಮತ್ತು ಜಿ7 ಪವರ್ ಕೂಡ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ. ಈ ಜಿ ಸರಣಿ ಫೋನ್ ಗಳು ಕೆಲವೇ ತಿಂಗಳ ಹಿಂದೆ ಭಾರತದಲ್ಲಿ ಬಿಡುಗಡೆಗೊಂಡು ಇದೀಗ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಈ ನಾಲ್ಕೂ ಫೋನ್ ಗಳಿಗೆ ಭಾರತದಲ್ಲಿ ಸುಮಾರು 3,000 ರುಪಾಯಿವರೆಗೆ ರಿಯಾಯಿತಿ ಲಭ್ಯವಿದೆ.

ಮೊಟೋರೊಲಾ ಒನ್, ಒನ್ ಪವರ್, ಜಿ7 ಸರಣಿ ಫೋನ್ ಗಳ ಬೆಲೆ:
ಮೊಟೋರೊಲಾ ಒನ್ ಪವರ್ ಫೋನ್ ನ್ನು ಭಾರತದಲ್ಲಿ 15,000 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಲಾಗಿತ್ತು ಮತ್ತು ಮೊಟೋರೊಲಾ ಒನ್ ಆಂಡ್ರಾಯ್ಡ್ ಒನ್ ಫೋನ್ ಎಂದು ಕರೆಯಲಾಗಿದ್ದು ಫೋನ್ ನ್ನು 13,999 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಲಾಗಿತ್ತು. ಇನ್ನೊಂದೆಡೆ ಮೊಟೋ ಜಿ7 16,999 ರುಪಾಯಿ ಬೆಲೆಗೆ ಮತ್ತು ಜಿ7 ಪವರ್ ನ್ನು 13,999 ರುಪಾಯಿ ಬೆಲೆಗೆ ಬಿಡುಗಡೆಗೊಳಿಸಲಾಗಿದೆ.

ನಾಲ್ಕು ಮೊಟೋರೊಲಾ ಫೋನ್ ಗಳಿಗೆ ಬೆಲೆ ಇಳಿಕೆ
ಇದೀಗ 3,000 ರುಪಾಯಿವರೆಗಿನ ಬೆಲೆ ಇಳಿಕೆಯ ನಂತರ ಮೊಟೋರೊಲಾ ಸ್ಮಾರ್ಟ್ ಫೋನ್ ಗಳು ಕೈಗೆಟುಕುವ ಬೆಲೆಯ ಫೋನ್ ಗಳಾಗಿ ಪರಿಣಮಿಸಿವೆ. ಮೊಟೋ ಜಿ7 2,000 ರುಪಾಯಿ ಬೆಲೆ ಇಳಿಕೆ ಕಂಡಿದ್ದು 14,999 ರುಪಾಯಿ ಬೆಲೆಗೆ ಸಿಗುತ್ತದೆ ಮತ್ತು ಜಿ7 ಪವರ್ 1,000 ರಿಯಾಯಿತಿಯಲ್ಲಿದ್ದು 12,999 ರುಪಾಯಿ ಬೆಲೆಗೆ ಸಿಗುತ್ತದೆ. ಆಂಡ್ರಾಯ್ಡ್ ಒನ್ ಫೋನ್ ಗಳ ಬಗ್ಗೆ ಮಾತನಾಡುವುದಾದರೆ ಮೊಟೋರೊಲಾ ಒನ್ ಗೆ 1,000 ರುಪಾಯಿ ಬೆಲೆ ಇಳಿಕೆಯಾಗಿದ್ದು 12,999 ರುಪಾಯಿ ಬೆಲೆಗೆ ಸಿಗುತ್ತದೆ. ಒನ್ ಪವರ್ ಗೆ ಅತೀ ಹೆಚ್ಚು ಬೆಲೆ ಇಳಿಕೆಯಾಗಿದ್ದು 3,000 ರುಪಾಯಿ ಅಂದರೆ ಇದೀಗ 12,999 ರುಪಾಯಿ ಬೆಲೆಗೆ ಈ ಫೋನ್ ಖರೀದಿಸುವ ಅವಕಾಶ ನಿಮಗಿದೆ.
ಈ ಮೂರು ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುವ ಸ್ಮಾರ್ಟ್ ಫೋನ್ ಗಳು ಫ್ಲಿಪ್ ಕಾರ್ಟ್ ನಲ್ಲಿ ಖರೀದಿಸಬಹುದಾಗಿದೆ. ಮೊಟೋ ಜಿ7 ಕೂಡ ಕೆಲವೇ ದಿನಗಳಲ್ಲಿ ಬದಲಾದ ಬೆಲೆಯಲ್ಲಿ ಆನ್ ಲೈನ್ ನಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ. ಆಫ್ ಲೈನ್ ಸ್ಟೋರ್ ಗಳಲ್ಲೂ ಕೂಡ ನೀವು ಈ ಬೆಲೆಯನ್ನು ನಿರೀಕ್ಷೆ ಮಾಡಬಹುದು.

ನೀವು ಈ ಯಾವುದಾದರೂ ಫೋನ್ ಖರೀದಿಸಬೇಕಾ?
ಇನ್ನು ನೀವು ಈ ಆಫರ್ ನಲ್ಲಿ ಮೊಟೋ ಡಿವೈಸ್ ಖರೀದಿಸುವುದು ಸೂಕ್ತವೇ ಎಂಬ ಪ್ರಶ್ನೆಗೆ ಉತ್ತರಿಸುವುದೇ ಆದರೆ ಖಂಡಿತ ಪ್ರದರ್ಶನ ಮತ್ತು ಆಗಾಗ ಲಭ್ಯವಾಗುವ ಅಪ್ ಡೇಟ್ ಗಳಿಂದ ಮೊಟೋ ಫೋನ್ ಗಳು ನಿಮಗೆ ನಿರಾಸೆ ಮಾಡಲಾರವು. ಒಂದು ವೇಳೆ ಇದಕ್ಕಿಂತಲೂ ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ಖರೀದಿಸುವ ಸಾಮರ್ಥ್ಯ ನಿಮ್ಮಲ್ಲಿದ್ದಲ್ಲಿ ಮೊಟೋರೊಲಾ ಒನ್ ವಿಷನ್ ಗಾಗಿ ನೀವು ಕಾಯುವುದರಲ್ಲಿ ಅರ್ಥವಿದೆ. ಜೂನ್ 20 ಕ್ಕೆ ಭಾರತದಲ್ಲಿ ಈ ಪೋನ್ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.


Click it and Unblock the Notifications








