ಮೊಟೊ ಒನ್ ಪವರ್: ಆಂಡ್ರಾಯ್ಡ್‌ನ ಐಫೋನ್ X ಎನ್ನುವ ಸ್ಮಾರ್ಟ್‌ಫೋನ್...!
ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿರುವ ಮೊಟೊರೊಲಾ ಮತ್ತೊಂದು ಪವರ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ನೋಚ್ ಡಿಸ್ ಪ್ಲೇಯನ್ನು ಹೊಂದಿರುವ ಮೊಟೊ ಒನ್ ಪವರ್ ಸ್ಮಾರ್ಟ್‌ಫೋನ್ ಶೀಘ್ರವೇ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಮೊದಲಿಗೆ ಚೀನಾದಲ್ಲಿ ಮಾರಾಟವಾಗಲಿದ್ದು, ಇದಾದ ನಂತರದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಆಂಡ್ರಾಯ್ಡ್ ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಮೊಟೊ ಒನ್ ಪವರ್ ಸ್ಮಾರ್ಟ್‌ಫೋನ್ ಹೊಸ ಮಾದರಿಯಲ್ಲಿ ಕಾಣಿಸಿಕೊಳ್ಳಲಿದೆ. ದೊಡ್ಡದಾದ ಪರದೆಯೊಂದಿಗೆ ಲಾಂಚ್ ಆಗಲಿರುವ ಈ ಫೋನ್ ಇತರೆ ಮೊಟೊ ಸ್ಮಾರ್ಟ್ಫೋನ್‌ಗಳಿಗಿಂತಲೂ ಭಿನ್ನವಾಗಿ ವಿನ್ಯಾಸವನ್ನು ಹೊಂದಿರಲಿದೆ. ತನ್ನ ವಿನ್ಯಾಸದಿಂದಲೇ ಬಳಕೆದಾರರನ್ನು ಸೆಳೆಯುವ ಕ್ರಮಕ್ಕೆ ಮುಂದಾಗಲಿದೆ.

ಎರಡು ಆವೃತ್ತಿಯಲ್ಲಿ ಲಾಂಚ್:
ಮೊಟೊ ಒನ್ ಪವರ್ ಸ್ಮಾರ್ಟ್‌ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. 3 GB RAM ಮತ್ತು 32 GB ಇಂಟರ್ನಲ್ ಮೆಮೊರಿಯೊಂದಿಗೆ ಒಂದು ಆವೃತ್ತಿಯಲ್ಲಿ ಮತ್ತು 4 GB RAM ಮತ್ತು 64 GB ಇಂಟರ್ನಲ್ ಮೆಮೊರಿಯೊಂದಿಗೆ ಮತ್ತೊಂದು ಆವೃತ್ತಿಯಲ್ಲಿ ದೊರೆಯಲಿದೆ.

ಆಂಡ್ರಾಯ್ಡ್ ಗೋ:
ಇದಲ್ಲದೇ ಮೊಟೊ ಒನ್ ಪವರ್ ಸ್ಮಾರ್ಟ್‌ಫೋನ್ ಸ್ಟಾಕ್ ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಇದು ಮೊಟೊ ಲಾಂಚ್ ಮಾಡಿರುವ ಮೊದಲ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಆಗಲಿದೆ. ಇದಲ್ಲದೇ ಇದು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ.

ಡ್ಯುಯಲ್ ಹಿಂಭಾಗದ ಕ್ಯಾಮೆರಾ:
ಮೊಟೊ ಒನ್ ಪವರ್ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. 16 MP + 5 MP ಕ್ಯಾಮೆರಾಗಳನ್ನು ನೀಡಲಾಗಿದ್ದು, ಬಳಕೆದಾರರಿಗೆ ಉತ್ತಮ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಶಕ್ತವಾಗಿದೆ. ಇದಲ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಸೆಲ್ಪಿಗಾಗಿ ನೀಡಲಾಗಿದೆ. ಅಲ್ಲದೇ ಇದಲ್ಲದೇ ವಿಡಿಯೋ ಕಾಲಿಂಗ್ ಗಾಗಿ ಬಳಕೆ ಮಾಡಬಹುದಾಗಿದೆ.

ದೊಡ್ಡ ಬ್ಯಾಟರಿ:
ಮೊಟೊ ಒನ್ ಪವರ್ ಸ್ಮಾರ್ಟ್‌ಫೋನ್ ಹೆಸರಿಗೆ ತಕ್ಕಂತೆ ಪವರ್ ಫುಲ್ ಆಗಿದೆ. ಇದರಲ್ಲಿ 4850mAh ಬ್ಯಾಟರಿಯನ್ನು ನೀಡಲಾಗಿದ್ದು, ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಬ್ಯಾಕಪ್ ಅನ್ನು ನೀಡಲಿದೆ. ಅಲ್ಲದೇ ಇದು ಫಾಸ್ಟ್ ಚಾರ್ಜಿಂಗ್ ಸಫೋರ್ಟ್ ಮಾಡಲಿದೆ. ಇದರಿಂದಾಗಿ ಎರಡು ದಿನಗಳ ಕಾಲ ಯಾವುದೇ ತೊಂದರೆ ಇಲ್ಲದೇ ಸ್ಮಾರ್ಟ್‌ಫೋನ್ ಅನ್ನು ಬಳಕೆ ಮಾಡಬಹುದಾಗಿದೆ.

ಬೆಸ್ಟ್ ಎನ್ನಿಸಿಕೊಳ್ಳಲಿದೆ:
ಈ ಸ್ಮಾರ್ಟ್‌ಫೋನಿನ್ ವಿನ್ಯಾಸದಿಂದಲೇ ಬೆಸ್ಟ್ ಎನ್ನಿಸಿಕೊಳ್ಳಲಿದ್ದು, ನೋಡಲು ಐಪೋನ್ X ಮಾದರಿಯಲ್ಲಿ ಕಾಣಿಸಿಕೊಂಡಿದೆ. ಬಳಕೆದಾದರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ. ಅದರಲ್ಲಿಯೂ ಮೊಟೊ ಅಭಿಮಾನಿಗಳನ್ನು ಖುಷಿಪಡಿಸಲಿದೆ. ಬೆಲೆಯ ಬಗ್ಗೆ ಹೆಚ್ಚಿನ ಮಾಹಿತಿಯೂ ಲಭ್ಯವಾಗಿಲ್ಲ.


Click it and Unblock the Notifications



