Home
ಮೊಬೈಲ್

ಭಾರತಕ್ಕಾಗಿಯೇ ಬಂತು ಮೊಟೊರೋಲಾ ಒನ್‌ ಪವರ್‌.! ಆಂಡ್ರಾಯ್ಡ್‌ ಒನ್ ಸ್ಮಾರ್ಟ್‌ಫೋನ್‌..!

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್‌ ಎಂಟ್ರೀ ಕೊಟ್ಟಿದ್ದು, ಮೊಟೊರೋಲಾ ಕಂಪನಿ ಆಂಡ್ರಾಯ್ಡ್‌ ಒನ್ ಬೆಂಬಲಿತ ಮೊಟೊರೋಲಾ ಒನ್ ಪವರ್ ಸ್ಮಾರ್ಟ್‌ಫೋನ್‌ನ್ನು ಭಾರತದಲ್ಲಿ ಇಂದು ಬಿಡುಗಡೆಗೊಳಿಸಿದೆ.

ಬರ್ಲಿನ್‌ನ IFA 2018ರಲ್ಲಿ ಬಿಡುಗಡೆಯಾಗಿದ್ದ ಸ್ಮಾರ್ಟ್‌ಫೋನ್‌ ಇದಾಗಿದ್ದು, ಮೊಟೊರೋಲಾದ 90ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾರತದಲ್ಲಿ ಇಂದು ಮೊಟೊರೋಲಾ ಒನ್‌ ಪವರ್‌ ಸ್ಮಾರ್ಟ್‌ಫೋನ್‌ನ್ನು ಲಾಂಚ್ ಮಾಡಿದೆ. ಪವರ್‌ ಒನ್‌ ಸ್ಮಾರ್ಟ್‌ಫೋನ್‌ ಮೊಟೊರೋಲಾದ ಮೊದಲ ಆಂಡ್ರಾಯ್ಡ್‌ ಒನ್ ಸ್ಮಾರ್ಟ್‌ಫೋನ್‌ ಆಗಿದ್ದು, ಗೂಗಲ್‌ನ ಸಹಯೋಗದೊಂದಿಗೆ ಬಿಡುಗಡೆಯಾಗಿದೆ.

ಭಾರತಕ್ಕಾಗಿಯೇ ಬಂತು ಮೊಟೊರೋಲಾ ಒನ್‌ ಪವರ್‌.! ಆಂಡ್ರಾಯ್ಡ್‌ ಒನ್ ಸ್ಮಾರ್ಟ್‌ಫೋನ್

ಪವರ್ ಒನ್‌ ಸ್ಮಾರ್ಟ್‌ಫೋನ್‌ ಬಿಡುಗಡೆಯೊಂದಿಗೆ ಮೊಟೊರೋಲಾ ತನ್ನ ಚಿತ್ತವನ್ನು ಭಾರತಕ್ಕೆ ಕೇಂದ್ರಿಕರಿಸಿದೆ. ಭಾರತದಲ್ಲಿ ಬಿಡುಗಡೆಯಾಗುವ ಮೊಟೊರೋಲಾ ಉತ್ಪನ್ನಗಳು ಭಾರತದಲ್ಲಿಯೇ ತಯಾರಾಗಿದ್ದು, Made for India ಮತ್ತು Made in India ತತ್ವವನ್ನು ಅನುಸರಿಸಲಾಗುತ್ತಿದೆ ಎಂದು ಪ್ರಶಾಂತ್ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆಗಿದ್ದರೆ, ಮೊಟೊರೋಲಾ ಒನ್ ಪವರ್‌ ಏನೇಲ್ಲಾ ಫೀಚರ್ಸ್‌ ಹೊಂದಿದೆ, ಬೆಲೆ ಎಷ್ಟು, ಯಾವಾಗಿಂದ ನಿಮ್ಮ ಕೈಗೆ ಸಿಗುತ್ತದೆ ಎಂಬುದನ್ನು ನೋಡಿ.

ಭಾರತಕ್ಕಾಗಿ ಸ್ಮಾರ್ಟ್‌ಫೋನ್‌

ಭಾರತಕ್ಕಾಗಿ ಸ್ಮಾರ್ಟ್‌ಫೋನ್‌

ಮೊಟೊರೋಲಾ ಒನ್ ಪವರ್ ಸ್ಮಾರ್ಟ್‌ಫೋನ್‌ನ್ನು ಭಾರತದಲ್ಲಿಯೇ ತಯಾರಿಸಲಾಗಿದ್ದು, ಭಾರತೀಯರ ಆದ್ಯತೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಈ ಸ್ಮಾರ್ಟ್‌ಫೋನ್ ತಯಾರಿಸಲಾಗಿದೆ. ಅದಲ್ಲದೇ ಭಾರತದಲ್ಲಿ ಮಾರಾಟವಾಗುವ ಮೊಟೊರೋಲಾ ಉತ್ಪನ್ನಗಳು ಭಾರತದಲ್ಲಿಯೇ ಉತ್ಪನ್ನವಾಗುತ್ತವೆ ಎಂದು ಪ್ರಶಾಂತ್ ಹೇಳಿದ್ದಾರೆ.

ಒನ್ ಪವರ್ ವಿನ್ಯಾಸ

ಒನ್ ಪವರ್ ವಿನ್ಯಾಸ

ಮೊಟೊರೋಲಾ ಒನ್‌ ಪವರ್ ಸ್ಮಾರ್ಟ್‌ಫೋನ್‌ ಕ್ಯಾರಿ ಆನ್‌ ಸ್ಟೈಲ್‌ ವಿನ್ಯಾಸ ಹೊಂದಿದೆ. ಬಾಟಮ್‌ ಫೈರಿಂಗ್‌ ಸ್ಪೀಕರ್ನ್ನು 84 ಡೆಸಿಬಲ್ ಸಾಮರ್ಥ್ಯದೊಂದಿಗೆ ಡೊಲ್ಬಿ ಆಡಿಯೋ ಸಿಸ್ಟಮ್ ಹೊಂದಿದೆ. ಮೆಟಲಿಕ್ ಬಾಡಿ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

6.2 ಇಂಚಿನ ಡಿಸ್‌ಪ್ಲೇ ಹೊಂದಿರುವ ಒನ್‌ ಪವರ್‌ ನೋಚ್‌ ಜತೆಗೆ ಬಂದಿದೆ. 19:9 ಸ್ಕ್ರೀನ್‌ ಟು ಬಾಡಿ ರೇಷಿಯೋ ಹೊಂದಿದೆ. 450 Nits ಡಿಸ್‌ಪ್ಲೇ ಇದ್ದು, ಸೂರ್ಯನ ನೇರ ಬೆಳಕಿನಲ್ಲೂ ಉತ್ತಮವಾದ ಡಿಸ್‌ಪ್ಲೇ ಅನುಭವವನ್ನು ಆನಂದಿಸಬಹುದು. ಕನಿಷ್ಟ ನೋಚ್‌ನಲ್ಲಿ ಫ್ರಂಟ್‌ ಕ್ಯಾಮೆರಾ, ಸೆನ್ಸಾರ್, ಇಯರ್‌ಸ್ಪೀಕರ್ ಹೊಂದಿರಲಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಮೊಟೊರೋಲಾ ಒನ್‌ ಪವರ್‌ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 636 ಪ್ರೊಸೆಸರ್ ಹೊಂದಿದ್ದು, 1.9 GHz ಕಾರ್ಯನಿರ್ವಹಣೆ ವೇಗ ಹೊಂದಿದೆ. ಆಂಡ್ರಾಯ್ಡ್‌ 9 ಪೈ ಒಎಸ್‌ನೊಂದಿಗೆ ಬರಲಿದೆ. 4GB RAM + 64GB ಮೆಮೊರಿ ಹೊಂದಿದ್ದು, 256GB ವರೆಗೂ SD ಕಾರ್ಡ್‌ ಮೂಲಕ ವಿಸ್ತರಿಸಬಹುದು.

ಕ್ಯಾಮೆರಾ

ಕ್ಯಾಮೆರಾ

ಮೊಟೊರೋಲಾ ಒನ್ ಪವರ್ ಹಿಂಬದಿಯಲ್ಲಿ ಡ್ಯುಯಲ್ ಲೆನ್ಸ್‌ ಕ್ಯಾಮೆರಾ ಹೊಂದಿದ್ದು, 16 MP + 5 MP ಲೆನ್ಸ್‌ ಹೊಂದಿದೆ. ಫ್ರಂಟ್‌ ಕ್ಯಾಮೆರಾ 12 MP ಲೆನ್ಸ್‌ ಹೊಂದಿದ್ದು, 1.25uM pixel size ಹಾಗೂ f 2.0 ಅಪಾರ್ಚರ್ ಹೊಂದಿದೆ. ಫ್ರಂಟ್‌ ಕ್ಯಾಮೆರಾ AI Beauty ಮೋಡ್ ಹೊಂದಿದೆ.

ಗೂಗಲ್‌ ಒನ್‌

ಗೂಗಲ್‌ ಒನ್‌

ಮೊಟೊರೋಲಾ ಒನ್ ಪವರ್‌ ಸ್ಮಾರ್ಟ್‌ಫೋನ್‌ ಗೂಗಲ್‌ ಒನ್‌ನಿಂದ ಬೆಂಬಲಿತವಾಗಿದೆ. ಗೂಗಲ್‌ ಲೆನ್ಸ್‌, ಗೂಗಲ್ ಫೋಟೋಸ್‌, ಗೂಗಲ್‌ ಅಸಿಸ್ಟಂಟ್‌, ಹೊಸ ಒಎಸ್‌ ಆಂಡ್ರಾಯ್ಡ್‌ 9 ಪೈನೊಂದಿಗೆ ಬರಲಿದ್ದು, ಗೂಗಲ್‌ನ ಅನೇಕ ಸೇವೆಗಳನ್ನು ಮೊಟೊರೋಲಾ ಒನ್‌ ಪವರ್ ಹೊಂದಿದೆ.

ಭದ್ರತೆ

ಭದ್ರತೆ

ಮೊಟೊರೋಲಾ ಒನ್‌ ಪವರ್ ಸ್ಮಾರ್ಟ್‌ಫೋನ್‌ ಗೂಗಲ್‌ ಪ್ಲೇ ಪ್ರೋಟೆಕ್ಟ್‌ನೊಂದಿಗೆ ಬಿಡುಗಡೆಯಾಗಿದ್ದು, ಮೂರು ವರ್ಷಗಳವರೆಗೆ ಪ್ರತಿ ತಿಂಗಳು ಅಪ್‌ಡೇಟ್‌ ಆಗಿ ಆಂಟಿ ವೈರಸ್‌ ರೀತಿ ಕಾರ್ಯನಿರ್ವಹಿಸುತ್ತದೆ. ಅದಲ್ಲದೇ ಫಿಂಗರ್‌ಪ್ರಿಂಟ್‌ ಸ್ಕ್ಯಾನರ್‌ ಹೊಂದಿದ್ದು, ಮೊಟೊರೋಲಾ ಲೋಗೋದಲ್ಲಿಯೇ ಫಿಂಗರ್‌ಪ್ರಿಂಟ್‌ ಅಳವಡಿಸಿರುವುದು ವಿಶೇಷ.

ಉತ್ತಮ ಬ್ಯಾಟರಿ

ಉತ್ತಮ ಬ್ಯಾಟರಿ

ಭಾರತೀಯ ಗ್ರಾಹಕರ ಆದ್ಯತೆಗೆ ತಕ್ಕಂತೆ ಮೊಟೊರೋಲಾ ಒನ್ ಪವರ್ ಸ್ಮಾರ್ಟ್‌ಫೋನ್‌ 5000 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಎರಡು ದಿನ ಬಳಸಬಹುದು. ಅದಲ್ಲದೇ ಟರ್ಬೋಪವರ್ ಚಾರ್ಜಿಂಗ್ ಫೀಚರ್ ಹೊಂದಿದ್ದು, 15 ನಿಮಿಷ ಚಾರ್ಜ್‌ ಮಾಡಿ 6 ಗಂಟೆ ಮೊಬೈಲ್ ಬಳಸಬಹುದು.

ಮತ್ತೀತರ ಫೀಚರ್ಸ್‌

ಮತ್ತೀತರ ಫೀಚರ್ಸ್‌

4K ವಿಡಿಯೋ ರೆಕಾರ್ಡಿಂಗ್‌ಗೆ ಮೊಟೊರೋಲಾ ಒನ್‌ ಪವರ್ ಬೆಂಬಲಿಸುತ್ತದೆ. ಅದಲ್ಲದೇ Widevine L1 ಪ್ರಮಾಣ ಪತ್ರ ಹೊಂದಿದ್ದು, ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವಿಡಿಯೋದಂತಹ HD ವಿಡಿಯೋಗಳನ್ನು ನೋಡಬಹುದಾಗಿದೆ. ಸ್ಮಾರ್ಟ್‌ ಗೆಸ್ಚರ್‌ಗಳನ್ನು ಹೊಂದಿದೆ. 4G LTE, ಡ್ಯುಯಲ್ ನ್ಯಾನೋ ಸಿಮ್‌, ಬ್ಲೂಟೂಥ್, ವೈಫೈ , ಪ್ರಾಕ್ಸಿಮಿಟಿ ಸೆನ್ಸಾರ್ ಹೊಂದಿದೆ.

ಬೆಲೆ

ಬೆಲೆ

ಇಷ್ಟೆಲ್ಲಾ ಫೀಚರ್ ಹೊಂದಿರುವ ಮೊಟೊರೋಲಾ ಒನ್‌ ಪವರ್ 15,999 ರೂ.ಗೆ ಲಭ್ಯವಾಗಲಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರಲಿದ್ದು, ಅಕ್ಟೋಬರ್ 5, ಮಧ್ಯಾಹ್ನ 12ರಿಂದ ಮಾರಾಟವಾಗಲಿದೆ.

Best Mobiles in India

English summary
Motorola One Power Launched at Rs. 15,999 in India, Goes on Sale October 5. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+