ಭಾರತಕ್ಕೆ ಕಾಲಿಟ್ಟ ಬಹುನಿರೀಕ್ಷಿತ ಮೊಟೊರೊಲಾ 'ಒನ್ ವಿಷನ್'!..ಬೆಲೆ ಎಷ್ಟು?

|

ಕಳೆದ ತಿಂಗಳು ಬ್ರೆಜಿಲ್‌ನಲ್ಲಿ ಲಾಂಚ್‌ ಆಗಿದ್ದ ಮೊಟೊರೊಲಾ ಕಂಪನಿಯ ಬಹುನಿರೀಕ್ಷಿತ ಹೈ ಎಂಡ್ ಸ್ಮಾರ್ಟ್‌ಫೋನ್‌ 'ಮೊಟೊರೊಲಾ ಒನ್ ವಿಷನ್' ಭಾರತಕ್ಕೆ ಇಂದು ಎಂಟ್ರಿ ನೀಡಿದೆ. ನವದೆಹಲಿಯಲ್ಲಿ ಇಂದು ಆಯೋಜನೆಯಾಗಿದ್ದ ಮೊಬೈಲ್ ಬಿಡುಗಡೆ ಕಾರ್ಯಕ್ರಮವೊಂದಲ್ಲಿ ತನ್ನ ಹೊಸ 'ಒನ್ ವಿಷನ್' ಸ್ಮಾಟ್‌ಫೋನ್ ಅನ್ನು ಮೊಟೊರೊಲಾ ಇಂಡಿಯಾ ಪ್ರದರ್ಶಿಸಿದೆ.

ಭಾರತಕ್ಕೆ ಕಾಲಿಟ್ಟ ಬಹುನಿರೀಕ್ಷಿತ ಮೊಟೊರೊಲಾ 'ಒನ್ ವಿಷನ್'!..ಬೆಲೆ ಎಷ್ಟು?

48 ಎಂಪಿ ಕ್ಯಾಮೆರಾ, ಪವರ್‌ಫುಲ್ ಪ್ರೊಸೆಸರ್, ಬಿಗ್‌ ಬ್ಯಾಟರಿ ಲೈಫ್ ಒಳಗೊಂಡಂತೆ ಸಂಪೂರ್ಣ ಹೈ ಎಂಡ್ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ ಮೊಟೊರೊಲಾ 'ಒನ್ ವಿಷನ್' ಫೋನ್ ಇಂದು ಬಿಡುಗಡೆಯಾಗುವ ಬಗ್ಗೆ ಮೊದಲೇ ಮಾಹಿತಿಯಿತ್ತು. ಆದರೆ, ಭಾರತದಲ್ಲಿ ಮೊಟೊರೊಲಾ ಒನ್ ವಿಷನ್' ಕೇವಲ 19,999 ರೂ.ಗಳಿಗೆ ಬಿಡುಗಡೆಯಾಗಿ ಆಶ್ಚರ್ಯಮೂಡಿಸಿದೆ.

ಬಹುತೇಕ ಪ್ರೀಮಿಯಂ ಆಯ್ಕೆಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ ಪ್ರೈಸ್‌ಟ್ಯಾಗ್‌ 25,000ರೂ.ಗಳ ಆಸುಪಾಸಿನಲ್ಲಿರಲಿದೆ ಎಂದು ಹೇಳಲಾಗಿತ್ತು. ಆದರೆ, ಅತ್ಯಂತ ಕಡಿಮೆ ಬೆಲೆಯಲ್ಲಿ ದೇಶದಲ್ಲಿ ಫೋನ್ ಬಿಡುಗಡೆಯಾಗಿರುವುದು ಸಿಹಿಸುದ್ದಿ ಎನ್ನಬಹುದು. ಹಾಗಾದರೆ, 'ಒನ್ ವಿಷನ್' ಫೋನಿನ ಫೀಚರ್ಸ್ ಮತ್ತು ವಿಶೇಷತೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಮೊಟೊರೊಲಾ ಒನ್ ವಿಷನ್‌ ಸ್ಮಾರ್ಟ್‌ಫೋನ್‌ 1080 x 2520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇ ಅನುಪಾತವು 21:9 ಅನುಪಾತದಲ್ಲಿದ್ದು, ಸೋನಿಯ ಸಿನಿಮಾ ವಿಷನ್ ಮಾದರಿಯ ಡಿಸ್‌ಪ್ಲೇ ಇದಾಗಿದ್ದು, ಪಂಚ್ ಹೋಲ್‌ ಮಾದರಿಯಲ್ಲಿ ಫೋನಿ ಡಿಸ್‌ಪ್ಲೇಯು ಗಮನಸೆಳೆಯುತ್ತಿದೆ.

ಕೃತಕ ಬುದ್ದಿಮತ್ತೆಯ ಈ Revolt RV 400 ಬೈಕ್ ಬಗ್ಗೆ ಗೊತ್ತಾ?
ಪ್ರೊಸೆಸರ್ ಶಕ್ತಿ ಏನು?

ಪ್ರೊಸೆಸರ್ ಶಕ್ತಿ ಏನು?

ಸ್ಯಾಮ್‌ಸಂಗ್‌ Exynos 9609 ಪ್ರೊಸೆಸರ್ ಅನ್ನು ಹೊಂದಿರುವ ಒನ್ ವಿಷನ್ ಸ್ಮಾರ್ಟ್‌ಫೋನ್‌ 2.2GHz ಗಿಗಾಹರ್ಡ್ಜ ವೇಗವನ್ನು ಕಾರ್ಯನಿರ್ವಹಿಸಲಿದೆ. 4GB RAM ಶಕ್ತಿಯೊಂದಿಗೆ 128GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯವನ್ನು ಫೋನ್ ಒಳಗೊಂಡಿದೆ. ಹಾಗೆಯೇ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹವನ್ನು 512GBವರೆಗೂ ವಿಸ್ತರಿಸುವ ಆಯ್ಕೆಯನ್ನು ಸಹ ನೀಡಲಾಗಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಒನ್ ವಿಷನ್ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾವ ಕ್ವಾಡ್ ಪಿಕ್ಸಲ್ ಮಾದರಿಯ(ಅಪರ್ಚರ್ f/1.7) 48ಎಂಪಿ ಸಾಮರ್ಥ್ಯದಲ್ಲಿದೆ. ಹಾಗೆಯೇ, ಸೆಕೆಂಡರಿ ಡೆಪ್ತ್ ಸೆನ್ಸಾರ್ ಕ್ಯಾಮೆರಾವು (ಅಪರ್ಚರ್f/2.2) 5ಎಂಪಿ ಸಾಮರ್ಥ್ಯದಲ್ಲಿದೆ. ಇನ್ನು 8x ಡಿಜಿಟಲ್‌ ಝೂಮ್‌ , ಯೂಬ್ಯೂಬ್ ಲೈವ್‌ ಮೋಡ್‌, ಸಿನಿಮಾಗ್ರಫ್ ಮೋಡ್‌ ಆಯ್ಕೆಗಳಿವೆ.

ಸೆಲ್ಪೀ ಕ್ಯಾಮೆರಾ

ಸೆಲ್ಪೀ ಕ್ಯಾಮೆರಾ

ಒನ್ ವಿಷನ್ ಸ್ಮಾರ್ಟ್‌ಫೋನಿನಲ್ಲಿ ಸೆಲ್ಫೀಗಾಗಿ ಹೆಚ್ಚು ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಇದರ ಸೆಲ್ಫೀ ಕ್ಯಾಮೆರಾ (ಅಪರ್ಚರ್ ಎಫ್/2.0) 25ಎಂಪಿ ಸಾಮರ್ಥ್ಯವನ್ನು ಹೊಂದಿದ್ದು, 8x ಡಿಜಿಟಲ್‌ ಝೂಮ್‌ , HDR, ಮ್ಯಾನುವಲ್ ಮೋಡ್‌, ಸಿನಿಮಾಗ್ರಫ್ ಮೋಡ್ ಮತ್ತು ಯೂಬ್ಯೂಬ್ ಲೈವ್‌ ಮೋಡ್‌ ಆಯ್ಕೆಗಳನ್ನು ಒಳಗೊಂಡಿರುವ ವಿಶೇಷತೆಯ ಕ್ಯಾಮೆರಾ ಆಗಿದೆ.

ಬ್ಯಾಟರಿ ಶಕ್ತಿ ಎಷ್ಟು

ಬ್ಯಾಟರಿ ಶಕ್ತಿ ಎಷ್ಟು

ಮೊಟೊ ಒನ್ ವಿಷನ್ ಸ್ಮಾರ್ಟ್‌ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 15W ಟರ್ಬೊಪವರ್ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿರುವ ಸ್ಮಾರ್ಟ್‌ಫೋನ್‌ ಅತ್ಯಂತ ವೇಗವಾಗಿ ಚಾರ್ಜ್‌ ಪಡೆದುಕೊಳ್ಳಲಿದೆ. ಇನ್ನು 3.5mm ಆಡಿಯೊ ಜಾಕ್‌, USB Type-C ಪೋರ್ಟ್‌, ರಿಯರ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸೌಲಭ್ಯಗಳು ಎಲ್ಲರ ಗಮನಸೆಳೆಯುತ್ತಿವೆ.

Best Mobiles in India

English summary
Motorola One Vision With Hole-Punch Display, 48-Megapixel Primary Camera Launched in India: Price, Specifications, Launch Offers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X